ಸಂಘಿಗಳ ‘ರಾಮರಾಜ್ಯ’ ಸೋಬಾನೆಯೂ ಗಾಂಧೀ ಪ್ರಣೀತ ರಾಮ ರಾಜ್ಯವೂ

@apms17    ಸಂಘಿಗಳ  ‘ರಾಮರಾಜ್ಯ’ ಸೋಬಾನೆಯೂ
                ಗಾಂಧೀ ಪ್ರಣೀತ ರಾಮ ರಾಜ್ಯವೂ
                        -ಎ.ಪಿ.ಎಂ ಶಮೀರ್, ಮರ್ಕಿನ್ಸ್ ಬೆಂಗಳೂರು
    ಸಹಿಷ್ಣುತೆ ಹಾಗೂ ವಿವಿಧತೆಯಲ್ಲಿ ಅಪಾರ ವಿಶ್ವಾಸ ಹೊಂದಿದ್ದರಿಂದ ಮಹಾತ್ಮ ಗಾಂಧೀಜಿಯವರು ಭಾರತವು ರಾಮರಾಜ್ಯವಾಗುವುದನ್ನು ಬಯಸಿದ್ದರು. ಅವರು ರಾಮರಾಜ್ಯದ ಕಲ್ಪನೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ‘ರಾಜಧರ್ಮ’ ಎಂಬುವುದು ರಾಮರಾಜ್ಯದ ಸೋಪಾನವಾಗಿತ್ತು. ಸಹಿಷ್ಣುತೆ, ಭ್ರಾತೃತ್ವ, ನ್ಯಾಯ, ನೀತಿ, ಸದಾಚಾರ ಮೌಲ್ಯಗಳು ಎಂದಿಗೂ ರಾಮರಾಜ್ಯದಲ್ಲಿ ವಿಜೃಂಭಿಸಿತ್ತು. ‘ಯಥಾ ರಾಜ ತಥಾ ಪ್ರಜಾ’ ಎಂಬ ಧ್ಯೇಯದ ಮೂರ್ತರೂಪವಾಗಿದ್ದ ರಾಜರಾಜ್ಯದ ಕಲ್ಪನೆಯನ್ನು ಛತ್ರಪತಿ ಶಿವಾಜಿ, ವಿಜಯನಗರದ ದೇವರಾಯ,  ಟಿಪ್ಪೂವಿನಂತಹ ರಾಜರು ಭರತ ಖಂಡದಲ್ಲಿ ಸಾಕಾರಗೊಳಿಸಿದ್ದು ಐತಿಹ್ಯಗಳ ಪುಸ್ತಕಗಳಲ್ಲಿ ಶಿಲಾ ಕೆತ್ತನೆಯಂತೆ ಕಾಣಬಹುದು. ಪರಧರ್ಮ ಸಹಿಷ್ಣುತೆ ಹಾಗೂ ಇತರ ಧರ್ಮಗಳಿಗಿದ್ದ ಮುಕ್ತ ಧಾರ್ಮಿಕ ಸ್ವಾತಂತ್ರ್ಯವನ್ನು ಇಲ್ಲಿನ ಹಿಂದು- ಮುಸ್ಲಿಂ ರಾಜರು ಅಂಗೀಕರಿಸಿದ್ದರು. ಆದರೆ ಇಂದು ಸಂಘ ಪರಿವಾರದವರು ಉದ್ಗಾರವೆತ್ತುವ ‘ರಾಮರಾಜ್ಯ’ವು ಗಾಂಧೀ ಪ್ರಣೀತ ರಾಮರಾಜ್ಯವಲ್ಲ, ಹೊರತು ಬ್ರಿಟಿಷರು ಇಲ್ಲಿ ಕೋಮು ಕಾಂಡಕ್ಕಾಗಿ ಬಿತ್ತಿದ ‘ಸಾವರ್ಕರ್ ಪ್ರಣೀತ’ ರಾಮರಾಜ್ಯವಾಗಿದೆ ಎಂಬುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
    ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿ, ಅದು 1947ರಲ್ಲಿ ತಾರ್ಕಿಕ ಅಂತ್ಯ ಪಡೆಯುವವರೆಗೂ ‘ಆರೆಸ್ಸೆಸ್’ ಹಾಗೂ ಪರಿವಾರಗಳು ಹೇಡಿಗಳಂತೆ ರಣರಂಗಕ್ಕೆ ಹಿಮ್ಮುಖವಾಗಿಯೇ ಕುಳಿತಿತ್ತು. 1942ರ ‘ಚಲೇ ಜಾವ್’ ಚಳುವಳಿಯ ರೂವಾರಿಗಳ ಸುಳಿವನ್ನು ಬ್ರಿಟೀಷರಿಗೆ ಅಂದಿನ ಆರೆಸ್ಸೆಸ್‍ನ ಕಾರ್ಯ ಕರ್ತರು ಬಿಟ್ಟು ಕೊಟ್ಟಿದ್ದರಂತೆ…!.  ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡುವುದನ್ನು ಬಿಡಿ, ಕನಿಷ್ಠ ಪಕ್ಷ ಬ್ರಿಟೀಷರನ್ನು ಟೀಕಿಸುವುದನ್ನು ಅವರು ರೂಡಿಸಿಕೊಂಡಿರಲಿಲ್ಲ. ಇಂದು ರಾಷ್ಟ್ರೀಯತೆ ಮತ್ತು ರಾಷ್ಟ್ರ ಪ್ರೇಮದ ಪಾಠ ಬೋಧಿಸುವ ಸಂಘಿಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ತಮ್ಮ ಪಾತ್ರ ಸಾಬೀತು ಪಡಿಸಿರಲಿಲ್ಲ.  ಅವರದ್ದೇನಿದ್ದರೂ ‘ಮನು’ ಪ್ರಣೀತ ಬ್ರಾಹ್ಮಣ ಶಾಹಿ ಹಿಂದೂ ರಾಷ್ಟ್ರದ ಉಗಮದ ಬಗೆಗಿನ ಹಗಲುಗನಸುಗಳು ಮಾತ್ರವಾಗಿದ್ದವು.  ಬ್ರಿಟೀಷರು ನೀಡುವ ಪುಕ್ಕಟೆ ಆಮಿಷಗಳಿಗೆ ಕೊರಳೊಡ್ಡಿ ರಾಷ್ಟ್ರ ವಿರೋಧಿ ಅಭಿಯಾನವನ್ನು ಆರೆಸ್ಸೆಸ್ ಅಘೋಷಿತವಾಗಿ ಆರಂಭಿಸಿತ್ತು.
    ಸಂಘಿಗಳ ಮೊದಲ ಶತ್ರುಗಳು ಬ್ರಿಟೀಷ್ ವಿರೋಧಿಗಳಾಗಿದ್ದ ರಾಷ್ಟ್ರ ನಾಯಕರುಗಳಾಗಿದ್ದರು. ಬ್ರಾಹ್ಮಣ್ಯದ ಕಡು ವಿರೋಧಿಗಳಾಗಿದ್ದ ಮುಸ್ಲಿಮರು ಮತ್ತು ದಲಿತರನ್ನು ಸಂಘಿಗಳಿಗೆ ಕಂಡರಾಗದು. ಆದ್ದರಿಂದಲೇ ದಲಿತರು ಹಾಗೂ ಮುಸ್ಲಿಮರು ಇಂದಿನ ಭಾರತದಲ್ಲಿ ಬ್ರಾಹ್ಮಣದ ದಾಳಿಗಳ ಸಂತ್ರಸ್ತರಾಗುತ್ತಿದ್ದಾರೆ. ಜಾತಿವಾದವು ಆರಂಭಗೊಂಡಂದಿನಿಂದ ಇಂದಿನವರೆಗೂ ದಲಿತರು ತುಳಿಯಲ್ಪಡುತ್ತಿದ್ದರೆ,  ಒಂದು ಕಾಲದಲ್ಲಿ ಅಧಿಕಾರ ಅನುಭವಿಸಿದ್ದ,  ತರುವಾಯ ಸ್ವಾತಂತ್ರ್ಯಕ್ಕಾಗಿ ಬಸವಳಿದ ಮುಸ್ಲಿಮರು ಇಂದಿಗೂ ಹೀನ ಜೀವನ ನಡೆಸುತ್ತಿದ್ದಾರೆ. ಗೋ ಸಾಗಾಟ, ಹತ್ಯೆ ನೆಪದಲ್ಲಿ ಈ ಎರಡು ಜನಾಂಗಗಳು ಸಂಘದ ಮರಣ ಮೃದಂಗದ ತಾಂಡವದಲ್ಲಿ ನರಕಯಾತನೆಯ ‘ಮಜಾ’ವನ್ನು ಅನುಭವಿಸುತ್ತಿದೆ. ಊನಾದ ದಲಿತರ ಮೇಲೆ ದಾಳಿ, ಅಖ್ಲಾಕ್ ಖಾನ್, ಪೆಹ್ಲು ಖಾನ್ ಮುಂತಾದವರ ಹತ್ಯೆಯು ಇದಕ್ಕಿರುವ ಕೇವಲ ಕೆಲವೇ ನಿದರ್ಶನಗಳಷ್ಟೆ. ಅದು ನಡೆಯುತ್ತಿರುವುದು ಸಂಘ ಪರಿವಾರವು ಬೊಗಳೆ ಬಿಡುತ್ತಿರುವ ರಾಮ(?)ರಾಜ್ಯವು ನೀರೋನ ರೋಮರಾಜ್ಯಕ್ಕಿಂತ ಹೀನವಾಗಿದೆ.
    ರಾಮರಾಜ್ಯದ ಸ್ಥಾಪನೆ ಮಡುತ್ತೇವೆ ಎನ್ನುವ ಮೋದಿ ಬಳಗ ಕಮ್ ಬಿ.ಜೆ.ಪಿಯು ಆರೆಸ್ಸೆಸ್‍ನ ರಾಜಕೀಯ ಮುಖ ಎಂಬುವುದು ವಾಸ್ತವ. ಆ ರಾಮರಾಜ್ಯ ಎಂತಹದ್ದು ಎಂಬುವುದನ್ನು ನಾವು ಅರಿಯಬೇಕಿದೆ. ‘ಮನುಸ್ಮøತಿ’ ಹಾಗೂ ಇತರ ವೈದಿಕ ಗ್ರಂಥಗಳಲ್ಲಿರುವ ಬ್ರಾಹ್ಮಣ ಶಾಹಿತ್ವ ಹಾಗೂ ಬ್ರಾಹ್ಮಣ ಮುಂದಾಳತ್ವದ ರಾಷ್ಟ್ರನಿರ್ಮಾಣವು ಆರೆಸ್ಸೆಸ್‍ನ ಮಹಾನ್ ಧ್ಯೇಯವಾಗಿದೆ. ಒಂದು ವೇಳೆ ಬ್ರಾಹ್ಮಣ್ಯದ ಭದ್ರಬುನಾದಿ ಮೇಲೆ ರಾಷ್ಟ್ರ ನಿರ್ಮಾಣ ಸಾಧ್ಯವಾದರೆ, ಇಲ್ಲಿ ದಲಿತರಿಗೂ ಮುಸ್ಲಿಮರಿಗೂ ಉಳಿಗಾಲವಿರದು. ಹಿಂದುಳಿದ ವರ್ಗದವರಿಗೆ ರಾಷ್ಟ್ರದ ಮುಂದಾಳತ್ವ ಸಿಗಲಾರದು. ಮಹಿಳೆಯರ ಭದ್ರತೆಯು ಡೋಲಾಯಮಾನವಾಗಬಹುದು. ಏಕೆಂದರೆ ‘ಮನು’ ಶೂದ್ರರನ್ನು ಹಾಗೂ ಮಹಿಳೆಯರನ್ನು ಹಂದಿಗಿಂತಲೂ ಕೀಳಾಗಿ ಕಂಡಿದ್ದನು.
    ಹಿಂದು ಎಂಬುವುದು ಕೇವಲ ಒಂದು ಸಂಸ್ಕøತಿಯಾಗಿತ್ತು. ಅಖಂಡ ಭಾರತದಲ್ಲಿದ್ದವರನ್ನು ಹಿಂದೂ ಎಂದೇ ಕರೆಯಲಾಗಿತ್ತು. ಆದರೆ  30ರ ದಶಕಗಳಲ್ಲಿ ‘ಹಿಂದುತ್ವ’ ಎಂಬ ಸಿದ್ದಾಂತವನ್ನು ವಿ. ಡಿ. ಸಾವರ್ಕರ್ ಮುಂದಿಟ್ಟರು. ಕೇವಲ ಸಾಂಸ್ಕøತಿಕವಾದ ಹಿಂದುತ್ವ ಸಿದ್ದಾಂತವನ್ನು ಸಾವರ್ಕರ್ ಮುಂದಿಟ್ಟರೆ, ಅದನ್ನು ಅವರ ಹಿಂಬಾಲಕರು ರಾಜಕೀಯ, ರಾಷ್ಟ್ರೀಯ, ಧಾರ್ಮಿಕ ಹಿಂದುತ್ವ ಹೀಗೆ ದುರುಪಯೋಗಪಡಿಸಿಕೊಂಡರು. ಬ್ರಿಟೀಷರೊಂದಿಗೆ ಒಳ ಒಪ್ಪಂದ ಮಡಿಕೊಂಡಿದ್ದ ಸಾವರ್ಕರ್ ಮತ್ತು ಕಂಪೆನಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ಮಾತ್ರವಲ್ಲದೆ, ಸ್ವಾತಂತ್ರ್ಯ ಹೋರಾಟಗಾರರ ನಿಷ್ಕಳಂತ ಹೋರಾಟಕ್ಕೂ ವಿಘ್ನರಾಗಿದ್ದರು. ‘ಮನುಸ್ಮøತಿ’ ಆಧರಿಸಿ ಒಂದು ‘ರಾಷ್ಟ್ರ’ ಕಟ್ಟುವುದನ್ನು ಮಾತ್ರ ಬಯಸಿದ್ದ ಸಂಘ ಪರಿವಾರದ ಸ್ಥಾಪನೆ ಹಾಗೂ ಧ್ಯೇಯದ ಬಗ್ಗೆ ತಿಳಿದಿರಬೇಕು.
    1907ರಲ್ಲಿ ಮುಸ್ಲಿಂ ಲೀಗ್‍ಗೆ ಪ್ರತಿಯಾಗಿ ಹಿಂದೂ ಮಹಾ ಸಭಾ ಬಂಗಾಳದಲ್ಲಿ ಅಸ್ತಿತ್ವಕ್ಕೆ ಬಂದಿತು. ದೇಶದ ಹಿಂದೂಗಳನ್ನು ಒಗ್ಗೂಡಿಸುವುದು, ಅವರಿಗೆ ಕುಸ್ತಿ ಅಖಾಡಗಳನ್ನು ಸ್ಥಾಪಿಸುವುದು ಹೀಗೆ ಹಲವಾರು ಗುರಿಗಳನ್ನು ಹೊಂದಿದ್ದ ಹಿಂದೂ ಮಹಾ ಸಭಾ ಮೊದಲ ಬಾರಿ ಕೋಮುವಾದದ ವಿಷ ಬೀಜ  ಮೆಲ್ಲ ಮೆಲ್ಲನೆ ಬಿತ್ತಿತು . ‘ಅಭಿನವ ಭಾರತ’ ಎಂಬ ಸಂಘಟನೆ ರೂಪ[ಇಕರಿಸಿದ್ದ ಸಾವರ್ಕರ್ , ಹಿಂದುತ್ವ ಸಿದ್ದಾಂತಕ್ಕೆ ಅಡಿಪಾಯ ಹಾಕಿದರು.
    1920ರ ದಶಕದಲ್ಲಿ ಡಾ|| ಕೇಶವ ಬಲಿರಾಮ ಹೆಡ್ಗೆವಾರ್, ಮತ್ತು ಡಾ|| ಮೂಂಜೆ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಬ್ರಾಹ್ಮಣರ ಪ್ರಾರಮ್ಯವೇ ಅವರ ಧ್ಯೇಯವಾಗಿತ್ತು. ಜಾತಿ ಭೇದವಿಲ್ಲದ ಒಂದು ಧರ್ಮವು ಆರೆಸ್ಸೆಸ್‍ನವರ ತರ್ಕಕ್ಕೂ ನಿಲುಕದ್ದಾಗಿದೆ. ಜಾತಿ ಭೇದವಿದ್ದರೆ ಮಾತ್ರ ಒಂದು ಧರ್ಮ ಇಲ್ಲಿ ನೆಲೆ ನಿಲ್ಲಬಹುದು. ಎಂಬುವುದನ್ನು ಆರೆಸ್ಸೆಸ್ ಗರಡಿಯಲ್ಲಿ ಗುರೂಜಿ ಎಂದೇ ಖ್ಯಾತರಾಗಿದ್ದ ಮಾಧವ ಸದಾಶಿವ ಗೋಲ್ವಾಲ್ಕರ್ ಹೇಳುತ್ತಾರೆ. ಭೌದ್ಧ ಧರ್ಮವು ಜಾತಿರಹಿತ ವ್ಯವಸ್ಥೆಯನ್ನು ಪ್ರೋತ್ಸಾಹಿಸಿದ್ದರ ಪರಿಣಾಮ ಅದು ಕ್ಷೀಣವಾಯಿತು ಎಂಬುವುದು ಅವರ ಅಂಬೋಣ. ಜಾತಿನಾಶವನ್ನು ಎತ್ತಿಕಟ್ಟಿ, ಜಾತಿ ಭೇದಗಳನ್ನು ಜೀವಂತವಾಗಿರಿಸಿ, ಬ್ರಾಹ್ಮಣರ ಪಾರುಪತ್ಯ ಉಳಿಸುವುದೇ ಆರೆಸ್ಸೆಸ್‍ನ ನಿಜವಾದ ಅಜೆಂಡಾ.
    ಆರೆಸ್ಸೆಸ್‍ನ ಸಿದ್ದಾಂತ ವಾಹಕನಾಗಿದ್ದ ಗೋಲ್ವಾಲ್ಕರ್  ‘ಗುರೂಜಿಯೋ, ಸನ್ಯಾಸಿಯೋ ಅಥವಾ ವೈದಿಕ ವಿದ್ವಾಂಸನೋ’ ಆಗಿರಲಿಲ್ಲ. ಕೇವಲ ವಿಜ್ಞಾನದ  ಅಧ್ಯಾಪಕರಾಗಿದ್ದರು. ಗಡ್ಡ ಹಾಗೂ ಕೂದಲು ಇಳಿ ಬಿಟ್ಟ ಕಾರಣ ಅವರನ್ನು ಆದರದಿಂದ ಗುರೂಜಿ ಎಂದೇ ಕರೆಯಲಾಯಿತಂತೆ. We ouಡಿ ಟಿಚಿಣioಟಿhooಜ ಜeಜಿiಟಿeಜ ಎಂಬ ಅವರ ಗ್ರಂಥದಲ್ಲಿ ಕೋಮು ಚಿಂತನೆಗಳು ಹಾಗೂ ದ್ವೇಷಪೂರಿತ ಚಿಂತನೆಗಳನ್ನು ಕಾಣಬಹುದು. ಈ ಗ್ರಂಥವನ್ನು  ಆರೆಸ್ಸೆಸ್‍ನ ಸಂವಿಧಾನ ಎಂದು ಕರೆದರೂ ತಪ್ಪಾಗಲಾರದು.
        ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಅಂಡಮಾನ್‍ನ ಸೆಲ್ಯುಲರ್ ಜೈಲಿನಲ್ಲಿ ಬಂಧಿಯಾಗಿದ್ದ ವಿನಾಯಕ ದಾಮೋದರ ಸಾವರ್ಕರರು ‘ಹಿಂದುತ್ವ’ ಎಂಬ ಟ್ರಂಪ್ ಕಾರ್ಡಿನೊಂದಿಗೆ ರಂಗಕ್ಕಿಳಿಯುತ್ತಾರೆ. ಬ್ರಿಟೀಷರಿಗೆ ಮುಚ್ಚಳಿಕೆ ಬರೆದ ಕಾರಣ ಅವರು ಜೈಲಿನಿಂದ ಬಿಡುಗಡೆ ಹೊಂದುತ್ತಾರೆ. ಮುಸ್ಲಿಂ-ಹಿಂದೂ ವಿಭಜನೆಗೆ ಬ್ರಿಟೀಷರು ಅವರನ್ನು ಯಶಸ್ವಿಯಾಗಿ ಬಳಸುತ್ತಾರೆ. ಸಾವರ್ಕರರ ಚಿಂತನೆಯ ಆಧಾರದಲ್ಲಿ ಗೋಲ್ವಾಳ್ಕರ್ ಆ ಪುಸ್ತಕವನ್ನು ಬರೆಯುತ್ತಾರೆ. 1937 ರಿಂದ 1973 ರವರೆಗೆ ಸಂಘದ ಸಂಚಾಲಕರಾಗಿದ್ದ ಗೋಲ್ವಾಳ್ಕರ್ ಈ ಪುಸ್ತಕವು ಅವರ ಸಂಚಾಲಕತ್ವದ ಅವಧಿಯಲ್ಲೇ ಪ್ರಕಾಶನಗೊಂಡಿತ್ತು (1938) . ಆರೆಸ್ಸೆಸ್ ಅವರ ಕೃತಿಯ ವಿರುದ್ಧ ಕೇವಲ ಕಾಟಾಚಾರಕ್ಕಾಗಿ  ಮಾತ್ರ ಆಕ್ಷೇಪಿಸಿತ್ತು. ಈ ಪುಸ್ತಕ ಅವರದ್ದಲ್ಲ ಎಂದೇ ವಾದಿಸಿತ್ತು. ಹಿಂದುತ್ವದ ಶಾಖೆಗಳಲ್ಲಿ ಹಾಗೂ ಕವಾಯತುಗಳಲ್ಲಿ ಈ ಪುಸ್ತಕದ ಪಾಠಗಳನ್ನು  ಭೋಧಿಸಲಾಗುತ್ತಿದೆ. ಹಿಂದೂ ರಾಷ್ಟ್ರದ ಸಂಕಲ್ಪವು ಆ ಪುಸ್ತಕದಲ್ಲಿಡೀ ಅಡಕವಾಗಿರುವುದರಿಂದ ಸಶಕ್ತ ಹಿಂದೂ  ರಾಷ್ಟ್ರ ನಿರ್ಮಾಪಕರ ನಿರ್ಮಾಣಕ್ಕಾಗಿ ಅದನ್ನು ಬಳಸಲಾಗುತ್ತಿದೆ.
    ಬಹಿರಂಗವಾಗಿ ಒಮ್ಮೆ ಗುರೂಜಿ ಹಾಗೂ ಅವರ ಪುಸ್ತಕವನ್ನು  ಅಲ್ಲಗಳೆದಿದ್ದರಿಂದ ಗುರೂಜಿ ಹಾಗೂ ಆ ಪುಸ್ತಕ ಆರೆಸ್ಸೆಸ್ ಸಂಬಂಧಿತವಲ್ಲ ಎಂಬ ವಾದವು ಕ್ಷುಲ್ಲಕವಾಗಿದೆ. ಸಂಘವು ಅವರನ್ನು ಕೇವಲ ಕಣ್ಕಟ್ಟಿಗೋಸ್ಕರ ಆಕ್ಷೇಪಿಸಿತ್ತು. (ಇಂದು ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್ ಮತ್ತು ಗಾಂಧೀಜಿಯವರನ್ನು ಹೈಜಾಕ್ ಮಾಡುತ್ತಿದ್ದಾರೆ. ಗಾಂಧೀ ಹತ್ಯೆಯ ದಿನ ಸಿಹಿ ತಿಂಡಿ ವಿತರಿಸಿ ಆನಂದಿಸಿದ್ದ , ಅಂಬೇಡ್ಕರ್‍ರನ್ನು ಸೈತಾನ್ ಎಂದು ಹೇಳಿದ್ದವರು ಇಂದು ಅವರಿಬ್ಬರನ್ನು  ಹೊಗಳಿ ಅಟ್ಟಕ್ಕೇರಿಸುತ್ತಿರುವುದು ವಿಪರ್ಯಾಸವೇ ಸರಿ).
    ಸಂಸ್ಕøತಿ ರಕ್ಷಣೆಯ ಸೋಗಿನಲ್ಲಿ ಪ್ರಗತಿಪರ ಮುಖವಾಡ ಧರಿಸಿ ಭಾರತೀಯತೆಯನ್ನು ಕೊಳ್ಳೆ ಹೊಡೆಯುತ್ತಿದ್ದ ಆರೆಸ್ಸೆಸ್‍ಗೆ  ಒಂದು ರಾಜಕೀಯ ಮುಖವನ್ನು ಹೊಂದುವ ಇರಾದೆಯಿತ್ತು. ಅದಕ್ಕಾಗಿ ನೆಹರೂ ಸಂಪುಟದಲ್ಲಿ ಸಚಿವರಾಗಿದ್ದಾಗ ಡಾ|| ಶಾಮ ಪ್ರಸಾದ್ ಮುಖರ್ಜಿ  ನೇತೃತ್ವದಲ್ಲಿ ಭಾರತೀಯ ಜನ ಸಂಘವನ್ನು ರೂಪಿಸಲಾಯಿತು. ಎ.ಬಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಬಲರಾಜ್ ಮಧೋಕ್‍ರಂತಹ ಘಟಾನುಘಟಿ ನಾಯಕರನ್ನು ಹೊಂದಿದ್ದ ಜನಸಂಘದ ಪ್ರಾರಂಭ ಕಾಲದಲ್ಲಿ ಕಳೆಗುಂದಿದ ಸಾಧನೆಯಾಗಿತ್ತು. ಬಳಿಕ ಎ.ಬಿ ವಾಜಪೇಯಿ ಎಂಬ ಅದ್ಭುತ ವಾಗ್ಮಿಯು ಮಿಂಚಿನ ಸಂಚಾರ  ಕೈಗೊಂಡು ಪಕ್ಷವನ್ನು ತೀವ್ರವಾಗಿ ಪ್ರಚಾರ ಮಾಡಿದರು. 1977 ರಲ್ಲಿ ಇಂದಿರಾ ವಿರೋಧಿ ಆಂದೋಲನ ರೂವಾರಿ ಲೋಕನಾಯಕ ಜಯಪ್ರಕಾಶ್ ನಾರಾಯಣರ ಕರೆಗೆ ಓಗೊಟ್ಟು ರೂಪಿತವಾದ ಅನೇಕ ಪಕ್ಷಗಳ ವೇದಿಕೆಯಾದ ಜನತಾ ಪಕ್ಷದಲ್ಲಿ ಜನ ಸಂಘವು ಸೇರಿಕೊಂಡಿತ್ತು. ವಾಜಪೇಯಿ ಹಾಗೂ ಅಡ್ವಾಣಿ ಮೊರಾರ್ಜಿ ಸಂಪುಟದಲ್ಲಿ ಮಂತ್ರಿಗಿರಿಯನಗನು ಪಡೆದಿದ್ದರು. ಬಳಿಕ ಮಧುಲಿಮಯೆ ಹಾಗೂ ರಾಜ್ ನಾರಾಯಣ್‍ರಂತಹ ಸಮಾಜವಾದಿ ನಾಯಕರ ಜನಸಂಘದ ದ್ವಿ ಸದಸ್ಯತ್ವ (ಆರೆಸ್ಸೆಸ್ ಹಾಗೂ ಜನತಾ ಪಕ್ಷ)ವನ್ನು ಪ್ರಶ್ನಿಸಿದಾಗ ಜನತಾ ಪಕ್ಷದಿಂದ ಹೊರ ಬಂದ  ಜನಸಂಘವು ಭಾರತೀಯ ಜನತಾ ಪಕ್ಷ ಎಂಬ ಹೆಸರಿನಲ್ಲಿ ಕಾರ್ಯಾರಂಭಕ್ಕಿಳಿಯಿತು. 1980 ಹಾಗೂ ಇಂದಿರಾ ನಿಧನದ ಬಳಿಕ ನಡೆದ 1984ರ ಚುನವಣೆಯಲ್ಲಿ ಎರಡಂಕಿಯನ್ನು  ದಾಟಿದ ಬಿ.ಜೆ.ಪಿ (ಅಂದು ಅಟಲ್ ಕೂಡಾ ಸೋತಿದ್ದರು.) ಕ್ರಮೇಣ ಬೆಳವಣಿಗೆಯನ್ನು ಕಾಣತೊಡಗಿತು. ಬಾಬರಿ ಮಸೀದಿ-ಅಯೋಧ್ಯೆಯ ರಾಮಜನ್ಮಭೂಮಿ ವಿವದವನ್ನು ರಾಜಕೀಯವಾಗಿ ಬಳಸಿ ಬಿ.ಜೆ.ಪಿ.ಯು ಉಟ್ರಾಯ ಸ್ಥಿತಿಗೆ ತಲುಪಿತು. 1992 ಡಿಸೆಂಬರ್ 6ರ ಬಾಬರಿ ಮಸೀದಿ ಧ್ವಂಸದ ಬಳಿಕ ಬಿ.ಜೆ.ಪಿ.ಯು ಶಕ್ತವಾಗಿ ಬೇರೂರಿ ನಂತರ 1996, 1998, 1999-2004ರ ಅವಧಿಯಲ್ಲಿ ಮೂರು ಬಾರಿ ಅಟಲ್ ನೇತೃತ್ವದಲ್ಲಿ  ಸಮ್ಮಿಶ್ರ ಸರ್ಕಾರವನ್ನು ರಚಿಸಿತು. ಆ ಅವಧಿಯಲ್ಲಿ ನಡೆದ ಗುಜರಾತ್ ಗಲಭೆಯು ನರೇಂದ್ರ ಮೋದಿ ಎಂಬ ಬಲಿಷ್ಠ ನಾಯಕನನ್ನು ರೂಪಿಸಿತ್ತು.
ಕಾಂಗ್ರೇಸ್‍ನ ನಿಷ್ಕ್ರಿಯತೆ ಹಾಗೂ ಸಮಾಜವಾದಿಗಳಾಗಿದ್ದ ಜನತಾ ಪರಿವಾರದ ನಾಯಕರ ಆಂತರಿಕ ಬೇಗುದಿ, ಕಚ್ಚಾಟಗಳು 2014 ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿ.ಜೆ.ಪಿ.ಯು ಬಹುಮತದೊಂದಿಗೆ ಸರ್ಕಾರ ರಚಿಸಲು ಕಾರಣವಾಯಿತು. ಅಸಾಂವಿಧಾನಿಕ ಹಾಗೂ ವ್ಯಾವಹಾರಿಕವಾಗಿ ದೊಡ್ಡ ದೊಡ್ಡ ರಾಜ್ಯಗಳನ್ನು ತವi್ಮ ಬಗಲಿಗೆ ಹಾಕತೊಡಗಿದ ಬಿ.ಜೆ.ಪಿ. ಯು ವಿರೋಧ ಪಕ್ಚ ಮುಕ್ತ ರಾಷ್ಟ್ರವನ್ನು ಕನವರಿಯುತ್ತಿದೆ. ಕೇಂದ್ರದಲ್ಲಿ ಬಿ.ಜೆ.ಪಿ. ಯು ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿ-ದಲಿತರ ಮೇಲಿನ ಹತ್ಯೆ, ಏಕ ರೂಪ ನಾಗರಿಕ ಸಂಹಿತೆ, ಗೋ ಹತ್ಯಾ ನಿಷೇಧ, ಪಠ್ಯ ಕ್ರಮ ಬದಲಾವಣೆ, ಶಿಕ್ಷಣದ ಕೇಸರೀಕರಣವು ಅವ್ಯಾಹತವಾಗತೊಡಗಿದೆ. ಸಂವಿಧಾನಕ್ಕೆ ಕಿಂಚಿತ್ತೂ ಗೌರವ ಕೊಡದ , ಭಾರತದ ಘನ ಸಂವಿಧಾನವನ್ನು ಹಿಂದೂ ವಿರೋಧಿ- ಭಾರತ ವಿರೋಧಿ ಎಂದು ಕರೆದಿದ್ದವರು ಭಾರತದಂತ ಸಂವಿಧಾನಬದ್ದ ದೇಶದಲ್ಲಿ ಅಸಾಂವಿಧಾನಿಕವಾದ ಕೆಲವು ಹೆಜ್ಜೆಗಳನ್ನಿಡುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಇನ್ನಿಲ್ಲದಂತೆ ಬಸವಳಿಯುವ ಆರೆಸ್ಸೆಸ್ ಹಾಗೂ ಬಿ.ಜೆ.ಪಿ. ಯು ತಾವು ರಾಮರಾಜ್ಯವನ್ನು ಸಾಕ್ಷಾತ್ಕಾರ ಮಾಡುತ್ತೇವೆ ಎಂದು ಬೊಗಳೆ ಬಿಡುತ್ತಿದೆ.
    ನಿಜಕ್ಕೂ ಇವರು ಹೇಳುವ ರಾಮರಾಜ್ಯಕ್ಕೂ , ಗಾಂಧೀ ಪ್ರಣೀತ ರಾಮರಾಜ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ.  ಸಂಘಿಗಳ ಜಾತೀಯತೆಯನ್ನು ಎತ್ತಿಹಿಡಿಯುವ ಬ್ರಾಹ್ಮಣ ವಾದಕ್ಕೆ ಹಾಗೂ ಮನುಷ್ಯ ವಿರೋಧಿ ಮನುವಾದಕ್ಕೆ ಕಿಮ್ಮತ್ತಿರುವಂತಹ ರಾಮ ರಾಜ್ಯವಾದರೆ, ಗಾಂಧೀಜಿಯವರುÀ ಜಾತಿ ರಹಿತ, ಸಮಾನತೆಯ ರೂಪಕವಾದ ದಾಸ್ಯ ಧೋರಣೆಗೆ ಅವಕಾಶವಿಲ್ಲದ ರಾಮರಾಜ್ಯವನ್ನು ಬಯಸುತ್ತಾರೆ. ವಿದ್ಯಾವಂತರಾದ ಗಾಂಧೀಜಿಯವರ ಫೇಬಿಯನ್ ಹಾಗೂ ಮಾಕ್ರ್ಸ್ ಮಾದರಿ ರಾಷ್ಟ್ರಕ್ಕಿಂತಲೂ ಹೆಚ್ಚಾಗಿ ರಾಮರಾಜ್ಯದ ಬಗ್ಗೆ ಉತ್ಸುಕತೆ ತೋರಲು ಕಾರಣ ಅದು ಜಾತ್ಯಾತೀತತೆಯ ಆಗರ ಎಂಬುದಾಗಿದೆ.



Comments