ಭಾವನೆ ಮತ್ತು ವಿಚಾರಗಳ ಮೇಲಿನ ಹತೋಟಿ ಖಂಡನಾರ್ಹ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾವನೆ ಮತ್ತು ವಿಚಾರಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಅದೂ ಕೂಡಾ ಪ್ರಜಾಪ್ರಭುತ್ವದ ಆಡುಂಬೊಲವಾದ ಭಾರತದಲ್ಲಿ ಎಂಬುವುದು ವಿಪರ್ಯಾಸ. ಭಾವನೆ ಮತ್ತು ವಿಚಾರಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ ಗೌರಿ ಲಂಕೇಶರು ತಮ್ಮ ಜೀವ ಕಳೆದು ಕೊಂಡಿದ್ದು ಅವರ ತಾಜಾ ನಿದರ್ಶನವಾಗಿದೆ.. ಗೌರಿಯವರಿಗೂ ಮುನ್ನ ಹಲವಾರು ವಿಚಾರವಂತರೂ ಪ್ರಾಣ ಕಳೆದು ಕೊಂಡಿದ್ದರು. ಬಲ ಪಂಥೀಯತೆ, ಕೋಮುವಾದ ಮತ್ತು ಧರ್ಮಾಂದತೆಯ ಮಂಪರು ವಿಚಾರವಂತರ ಜೀವನಕ್ಕೆ ಕಂಟಕವಾಗುತ್ತಿರುವುದು ದುರಂತವೇ ಸರಿ. ಸಿದ್ಧಾಂತಗಳನ್ನು ಸಿದ್ಧಾಂತಗಳ ಮೂಲಕ ಎದುರಿಸಲಾಗದ ರಣ ಹೇಡಿಗಳು ಓರ್ವ ಮಹಿಳೆಯನ್ನು ಕೊಂದು ಮುಗಿಸಿದ್ದು ಇತಿಹಾಸದಲ್ಲೇ ಮೊದಲಿರಬೇಕು. ಪೆನ್-ಟು-ಪೆನ್ ಸಂಸ್ಕøತಿ ಪೆನ್-ಟು-ಪೆನ್ ಆಗಿ ಬದಲಾಗಿದ್ದು ವಿಪರ್ಯಾಸ.
ಕರುನಾಡಿನಲ್ಲಿ ನಿರ್ಭೀತ ಪತ್ರಿಕೋದ್ಯಮಕ್ಕೆ ರೂಪು-ರೇಷೆ ಕೊಟ್ಟ, ಆಳುವ ವರ್ಗಗಳನ್ನು ತೀವ್ರವಾಗಿ ವಿಮರ್ಷಿಸುತ್ತಿದ್ದ, ದಮನಿತ ದೀನ-ದಲಿತರ ದನಿಯಾಗಿದ್ದ ಲಂಕೇಶರ ಹಾದಿಯಲ್ಲೇ ಅವರ ಪುತ್ರಿ ಗೌರಿಯವರು ಸಾಗಿದ್ದರು. ಯಾವುದೇ ಸಂದಿಗ್ಧ ಪರಿಸ್ಥಿತಿಗಳಲ್ಲೂ ತಾವು ನಂಬಿ ಬಂದ ಸಿದ್ಧಾಂತಗಳ ವಿಷಯದಲ್ಲಿ ರಾಜಿಯಾಗÀದೆ ಮುಂದಡಿಯಿಟ್ಟ ಕೀರ್ತಿ ಗೌರಿಯವರಿಗೆ ಸಲ್ಲಬೇಕು. ಎದೆಗಾರಿಕೆಯಿಂದ ಕೋಮುವಾದಿಗಳನ್ನು ಲೇಖನಿ ಮೂಲಕ ಬೆಂಡೆತ್ತುತ್ತಿದ್ದ ಅವರು ಅಲ್ಪ ಸಂಖ್ಯಾತ-ದಲಿತ-ಶ್ರಮಿಕರ ದನಿಯಾಗಿದ್ದರು. ಹಲವಾರು ಬರಹಗಾರರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರಿಗೆ ತಾಯಿ, ಅಕ್ಕ, ಮಾರ್ಗದರ್ಶಿ, ಶಿಕ್ಷಕಿಯಾಗಿದ್ದ ಗೌರಿಯವರು ತಮ್ಮ ದಿಟ್ಟ ತನದಿಂದಲೇ ಪತ್ರಿಕೋದ್ಯಮಕ್ಕೆ ಮೆರುಗನ್ನು ನೀಡಿದ್ದರು.
ತಮ್ಮ ಭಾವನೆ ಮತ್ತು ವಿಚಾರಗಳನ್ನು ಯಾವುದೇ ಅಂಜು-ಅಳುಕು-ಮುಲಾಜಿಲ್ಲದೆ ಬರೆಯುತ್ತಿದ್ದ, ಪ್ರತಿಪಾದಿಸುತ್ತಿದ್ದ ಗೌರಿಯವರ ಕೊಲೆಯು ಪ್ರಜ್ಞಾವಂತರ ಮನಕಲಕುವಂತೆ ಮಾಡಿದೆ. ಭಾರತವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಫ್ಯಾಸಿಸ್ಟ್ ಶಕ್ತಿಗಳ ಭಾವನೆ ಮತ್ತು ವಿಚಾರಗಳನ್ನು ಹತ್ತಿಕ್ಕಲು ಕೊಲೆಯಂಥ ಹೀನ ಕೃತ್ಯಗಳಿಗೆ ಕ್ರಮೇಣ ಇಳಿಯುತ್ತಿದ್ದಾರೆ. ಸೈದ್ಧಾಂತಿಕ ಕಾರಣಕ್ಕಾಗಿ ಗಾಂಧೀಜಿಯವರು ಬಲಿಯಾಗಿದ್ದರು. ಇದೀಗ ದಾಬೋಲ್ಕರ್, ಪಾನ್ಸರೆ, ಕಲ್ಬುರ್ಗಿ, ಅಖ್ಲಾಕ್, ವೇಮುಲಾರಂಥವರು ಕೂಡಾ ಫ್ಯಾಸಿಸ್ಟ್ ಶಕ್ತಿಗಳ ಮರಣ ಮೃದಂಗಕ್ಕೆ ಬಲಿಯಾಗಿ ರೂಪಕವಾಗಿರುವರು. ಜರ್ಮನಿ, ಇಟಲಿ ಸೋವಿಯತ್ ರಾಷ್ಟ್ರಗಳಲ್ಲಿ ಹಿಂದೆ ಭಾವನೆ ಮತ್ತು ವಿಚಾರ ವ್ಯಕ್ತಪಡಿಸಿದ ಕಾರಣ ಅನೇಕ ವಿಚಾರವಂತರು ಬಲಿಯಾಗಿದ್ದರು. ಅವರ ಸಾಲಿಗೆ ಗೌರಿಯವರು ಕೂಡಾ ಸೇರಿ ಅಜರಾಮರಾಗಿದ್ದಾರೆ.

Comments
Post a Comment