ಇಸ್ಲಾಂ ಹಾಗೂ ಭಯೋತ್ಪಾದನೆ

ಇಸ್ಲಾಂ ಹಾಗೂ ಭಯೋತ್ಪಾದನೆ
ಜಿಹಾದ್ ಎಂದರೇನು?
ವಹ್ಹಾಬಿಸಂ ಟೆರರಿಸಂ
ಭಯೋತ್ಪಾದನೆ ಬಗೆಗಿನ ಇಸ್ಲಾಮಿನ ನಿಲುವೇನು?
ಯುದ್ಧಗಳು ಇಸ್ಲಾಮಿನಲ್ಲಿ ಹಾಗೂ ಇತರ ಧರ್ಮಗಳಲ್ಲಿ
ಭಯೋತ್ಪಾದನೆಯ ಕಾರಣಗಳು
ಭಯೋತ್ಪಾದನೆಯ ಕರಿನೆರಳು: ಕೆಲವೊಂದು ನಿದರ್ಶನಗಳು
ಭಯೋತ್ಪಾದನೆ ಧರ್ಮೀಯವೇ?, ಇಸ್ಲಾಮಿನ ಗುತ್ತಿಗೆಯೇ?


ಇಸ್ಲಾಂ ಹಾಗೂ ಭಯೋತ್ಪಾದನೆ
        ಆಧುನಿಕ ಮಾನವ ಹಕ್ಕಿನ ವೀಕ್ಷಣೆಗಳು ಟೊಳ್ಳಾದ ವ್ಯಾಖ್ಯಾನಗಳಿಗೆ ವಿಧೇಯವಾಗುತ್ತಿದೆ. ಇಂದು ಮಾನವನಿಗೆ ತನ್ನ ಹಕ್ಕುಗಳನ್ನು ಗಳಿಸಲಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ನಾವು ಪವಿತ್ರ ಇಸ್ಲಾಮ್ ಪ್ರಸ್ತಾಪಿಸುವ ಮಾನವ ಹಕ್ಕುಗಳನ್ನು ತಿಳಿಯುವುದು ಅನಿವಾರ್ಯ. ಇಸ್ಲಾಮಿನ ಮಾನವ ಹಕ್ಕುಗಳು ಪ್ರಧಾನವಾಗಿ ಎರಡು ಭಾಗಗಳಾಗಿವೆ. 1.ಮಾನವರೆಡೆಯಲ್ಲಿನ ಸಮತ್ವ  2.ಸಂಪೂರ್ಣ ಸ್ವಾತಂತ್ರ್ಯ . ಮಾನವರೆಡೆಯಲ್ಲಿನ ಸಮತ್ವಕ್ಕೆ ಒತ್ತು ನೀಡುವ ಖುರ್‍ಆನಿನ ಸೂಕ್ತವು ಬಹಳ ಗಮನಾರ್ಹ. “ಹೇ ಜನರೇ, ನಿಮ್ಮನ್ನು ನಾವು ಒಂದು ಪುರುಷನಿಂದಲೂ ಸ್ತ್ರೀಯಿಂದಲೂ ಸೃಷ್ಟಿಸಿದ್ದೇವೆ. ನಿಮ್ಮನ್ನು ವಿಭಿನ್ನ ಗೋತ್ರ ಹಾಗೂ ವಂಶಜರನ್ನಾಗಿಸಿದ್ದು ಪರಸ್ಪರ ತಿಳಿಯಲು ಮಾತ್ರವಾಗಿದೆ. ನಮ್ಮಲ್ಲಿ ಅತ್ಯುತ್ತಮನು ಭಕ್ತಿಯುಳ್ಳವನಾಗಿದ್ದಾನೆ. ಒಂದೇ ಮನುಷ್ಯನಿಂದ ಸೃಷ್ಟಿಸಿದ ನಿಮ್ಮನ್ನು ನೀವು ಸೂಕ್ಷಿಸಿರಿ. (49-13). ಮನುಷ್ಯನು ವರ್ಗ,ವರ್ಣ,ಭಾಷೆ,ದೇಶ ಎಂಬೀ ನಾಮಗಳಿಂದ ಬೇರ್ಪ ಟ್ಟರೂ ಎಲ್ಲರೂ ಮನುಷ್ಯ ಕುಟುಂಬದ ಸಹೋದರರೆಂದಾಗಿದೆ ಖುರ್‍ಆನ್ ಈ ಸೂಕ್ತದ ಮೂಲಕ ವಿಶ್ವದಾದ್ಯಂತ ಸಾರುತ್ತಿರುವುದು.ಮನುಷ್ಯರನ್ನು ಪರಸ್ಪರ ತಿಳಿಯಲು ಸೃಷ್ಟಿಕರ್ತನು ನಿರ್ಮಿಸಿದ ಅತ್ಯಾವಶ್ಯಕ ಸಂಗತಿಗಳಾಗಿವೆ ಜಾತಿ-ಮತ ಎಂಬ ವಿಭಿನ್ನ ರೂಪಗಳು.
    ಎರಡನೆಯದಾಗಿ ಇಸ್ಲಾಂ ನೀಡಿದ ಸ್ವಾತಂತ್ರ್ಯ.ಪವಿತ್ರ ಖುರ್‍ಆನ್ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಪ್ರಸ್ತಾವನೆಯನ್ನು ಮಾಡಿದೆ. ಅದೇ ರೀತಿ ಇಲ್ಲಿಯೂ ಖುರ್‍ಆನ್“ಭೂಮಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸದೆ ಹಾಗೂ ಕೊಲೆಯನ್ನು ನಡೆಸದೆ ಇರುವಾಗ ಯಾರಾದರೊಬ್ಬ ಓರ್ವನನ್ನು ವಧಿಸಿದರೆ ಅವನು ಸರ್ವ ಮನುಷ್ಯರನ್ನು ವಧಿಸಿದ್ದಕ್ಕೆ ಸಮನವಾಗಿದೆ. ಹೊರತು ಓರ್ವನನ್ನು ಸಂರಕ್ಷಿಸಿದರೆ ಸರ್ವ ಮನುಷ್ಯರನ್ನು ಸಂರಕ್ಷಿಸಿದಕ್ಕೆ ಸಮಾನನು (5-32). ಮನಪೂರ್ವಕವಾಗಿ ಓರ್ವನು ಕೊಲೆಗೈದರೆ ಅವನಿಗೆ ಸಿಗುವ ಪ್ರತಿಫಲ ಶಾಶ್ವತ ನರಕವಾಗಿದೆ. ಇಸ್ಲಾಮಿನ ಕರ್ಮಶಾಸ್ತ್ರ ವಿಷಯಗಳತ್ತ ಕಣ್ಣು ಹಾಯಿಸುವಾಗ ನಮಗೆ ತಿಳಿಯಬಹುದಾದ ಮನೋಜ್ಞ ಸಂಗತಿಯೆಂದರೆ ಇಸ್ಲಾಮಿನ ಪಂಚ ಸ್ತಂಭಗಳಲ್ಲೊಂದಾದ ನಮಾಝಿನಲ್ಲಿ ಓರ್ವನು ನಿರತನಾಗಿದ್ದರೆ ಅದನ್ನು ಪೂರ್ಣಗೊಳಿಸÀದೆ ಕೈ ಬಿಡುವುದು ನಿಷಿದ್ದವಾಗಿದೆ. ಆದರೆ,ಒಬ್ಬ ನಮಾಝ್ ನಿರ್ವಹಿಸುವಾಗ ಓರ್ವ ವ್ಯಕ್ತಿಯು ಮರಣ ಹೊಂದುವ ಅಪಾಯದಲ್ಲಿದ್ದರೆ ಅವನನ್ನು ರಕ್ಷಿಸಲಿಕ್ಕಾಗಿ ನಮಾಝಿನಿಂದ ವಿಮುಖನಾಗುವುದು ಸಮ್ಮತಾರ್ಹವಾಗಿದೆ. ಅದೇ ರೀತಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹಜ್ಜತುಲ್ ವಿದಾಅïನ ತನ್ನ ವಿದಾಯದ ಭಾಷಣದಲ್ಲಿ ಪ್ರಖ್ಯಾಪಿಸಿದ್ದೇನೆಂದರೆ “ಜನರೇ, ಈ ವಿಶುದ್ಧ ಸ್ಥಳದ ಹಾಗೂ ದಿವಸದ ಹಾಗೂ ತಿಂಗಳಿನ ಪವಿತ್ರತೆಯ ರೀತಿಯಲ್ಲೆ ಅಭಿಮಾನ, ಸಂಪತ್ತು ಹಾಗೂ ರಕ್ತವು ಪರಸ್ಪರ ನಿಷಿದ್ಧವಾಗಿದೆ”. ಇಲ್ಲಿ ಅಭಿಮಾನ ಹಾಗೂ ರಕ್ತವನ್ನು ಸಂರಕ್ಷಿಸಲು ಇಸ್ಲಾಂ ಧರ್ಮವು ಬೋಧಿಸುತ್ತದೆ.
     ಪವಿತ್ರ ಇಸ್ಲಾಂ ಮನುಷ್ಯನಿಗೆ ಮಾತ್ರವಲ್ಲದೆ ಇತರ ಜೀವಿಗಳಿಗೂ ಅದರದೇ ಆದ ಹಲವಾರು ಹಕ್ಕುಗಳನ್ನು ನೀಡಿದೆ. ಇರುವೆಗಳನ್ನು ತನ್ನ ಅನುಚರರು ಬೆಂಕಿಯಿಂದ ಸುಡುವುದನ್ನು ಕಂಡ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದೇನೆಂದರೆ “ಅಗ್ನಿಯನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗಲ್ಲದೆ ಹೊರತು ಬೇರೆ ಯಾರಿಗೂ ಅಗ್ನಿಯಿಂದ ನಾಶ ಪಡಿಸುವ ಅವಕಾಶವಿಲ್ಲ” ಎಂಬ ಉದಾತ್ತವಾದ ಮನುಷ್ಯನೆಂದಲ್ಲ ಇತರ ಜೀವಿಗಳನ್ನು ಕೂಡ ಹಿಂಸಿಸುವುದರಿಂದ ಅಥವಾ ಕಾರಣವಿಲ್ಲದೆ ಕೊಲ್ಲುವುದನ್ನು ಈ ಮೂಲಕ  ವಿರೋಧಿಸುತ್ತಿದೆ. ಇಸ್ಲಾಮಿನಲ್ಲಿ ಗೌರವವನ್ನು ಕಲ್ಪಿಸದ ನಾಯಿಗೆ ದಾಹ ಜಲವನ್ನು ನೀಡಿದ ಕಾರಣಕ್ಕಾಗಿ ಒಬ್ಬ ಸ್ತ್ರೀಗೆ ಅಲ್ಲಾಹನು ಸ್ವರ್ಗ ನೀಡಿದ್ದಾನೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿಸಿದ ಘಟನೆಯು ಇಸ್ಲಾಮಿನ ಮಾದರಿ ಯೋಗ್ಯ ಸಂದೇಶಗಳನ್ನು ತಿಳಿಯಲು ಅನಿವಾರ್ಯ.
    ಕ್ರೈಸ್ತ ಚಿಂತಕನಾದ ಡಾ||ಇದ್ವಾರ್ ಗಾಲಿ “ಮುಸ್ಲಿಂ ಸಮೂಹzಲ್ಲಿÀ ಅವಿಶ್ವಾಸಿಗಳಿಗಿರುವ ಹಕ್ಕುಗಳು” ಎಂಬ ಶೀರ್ಷಿಕೆಯಡಿ ಬರೆದ ಲೇಖನಿಯಲ್ಲಿ “ಸಮೂಹದಲ್ಲಿ ಸಂಪೂರ್ಣ ಸಮತ್ವವನ್ನು ಇಸ್ಲಾಂ ಅಂಗಿಕರಿಸುತ್ತದೆ. ವಿಶ್ವಾಸ, ವರ್ಗ, ವರ್ಣ, ಲಿಂಗ, ಪಂಥ ಎಂಬಿವುಗಳ ಹೆಸರಲ್ಲಿ ಇಸ್ಲಾಂ ಯಾವುದೇ ರೀತಿಯ ಭಿನ್ನತೆಗಳನ್ನು ಸೃಷ್ಟಿಸುವುದಿಲ್ಲ. ಧಾರ್ಮಿಕವಾದ ವಿಶ್ವಾಸಗಳಿಗೆ ಅನುಗುಣವಾಗಿ ಮನುಷ್ಯನಿಗೆ ಸೃಷ್ಟಿಕರ್ತನು ಪಾವಿತ್ರ್ಯತೆಯನ್ನು ನೀಡಿದ್ದಾನೆ. ಭೂಮಿಯಲ್ಲಿ ಮಾನವನನ್ನು ಪ್ರತಿನಿಧಿಯನ್ನಾಗಿಸಿ ಮಹತ್ತರವಾದ ಕರ್ತವ್ಯವನ್ನು ವಹಿಸಿಕೊಟ್ಟಿದ್ದಾನೆ. ಪ್ರಪಂಚದ ಇತರ ಸೃಷ್ಟಿಗಳಿಗಿಂತಲೂ ಮಿಗಿಲಾಗಿ ಸೃಷ್ಟಿಕರ್ತನು ಉನ್ನತವಾದ ಸ್ಥಾನವನ್ನು ನೀಡಿದ್ದಾನೆ. ಕೆಲವರು ಹೊಂದಿರುವ ತಪ್ಪು ಕಲ್ಪನೆಗಳಂತೆ ಇದು ಮುಸ್ಲಿಮರಿಗೆ ಮಾತ್ರವಲ್ಲ. ಆದಂ ಸಂತತಿಗಳೇ, ಮನುಷ್ಯ ಸಮೂಹವೇ, ಜನರೇ ಎಂಬೀ ರೂಪದಲ್ಲಿರುವ ಅಲ್ಲಾಹನ ಕರೆಯಿಂದ ಇದು ಮುಸ್ಲಿಂ ಸಮೂಹಕ್ಕಲ್ಲ ಹೊರತು ಮಾನವರಿಗಿರುವ ಕರೆಯೆಂದು ಗ್ರಹಿಸಲು ಸಾಧ್ಯ. ವಿಶ್ವಾಸಿಗಳನ್ನು ಅಥವಾ ಮುಸ್ಲಿಮರನ್ನು ಮಾತ್ರ ಕರೆಯುವ ವಚನಗಳು ಖುರ್‍ಆನಿನಲ್ಲಿವೆ. ಖುರ್ ಆನಿನ ಭಾಷೆಯಲ್ಲಿ ಮನುಷ್ಯರು ಆದಂ ಸಂತತಿಗಳಾಗಿದ್ದಾರೆ. ಡಾ|| ಇದ್ವಾರ್ ಗಾಲಿ ತನ್ನ ಈ ಲೇಖನದ ಮೂಲಕ ಮಾನವ ಕುಲಕ್ಕೆ ಇಸಲಾಮಿನ ಸಂದೇಶಗಳನ್ನು ಬಹಳ ಸ್ಪಷ್ಟವಗಿ ತೆರೆದಿಟ್ಟಿದ್ದಾರೆ. ಅಲ್ಲಾಹನು ಮಾನವನಿಗೆ ನೀಡಿದ ಗೌರವ, ಅನ್ಯಧರ್ಮೀಯರೊಂದಿಗಿನ ಇಸ್ಲಾಮಿನ ಒಡನಾಟ ಮುಂತಾದ ಹಲವಾರು ಕಾರ್ಯಗಳನ್ನು ಜಗತ್ತಿನ ಮುಂದೆ ಎತ್ತಿಹಿಡಿಯುವ ಪ್ರಯತ್ನವನ್ನು ಇಲ್ಲಿ ಕಾಣಬಹುದು.
    ಮಾನವೀಯತೆಗೆ ಉದಾತ್ತವಾದ, ಮದರಿಯೋಗ್ಯವಾದ ಒಂದು ಘಟನೆ ಉಲ್ಲೇಖಾರ್ಹ. ಪ್ರವಾದಿ (ಸ)ರು ತನ್ನ ಅನುಯಾಯಿಗಳಿಗೆ ವಿದ್ಯೆ ಉಣಬಡಿಸುವ ಸಂದರ್ಭದಲ್ಲಿ ಸಮೀಪದಿಂದ ಜನರು ಶವಮಂಚವನ್ನು ಕೊಂಡುಹೋಗುವುದನ್ನು ಕಂಡ ಪ್ರವಾದಿ ಪೈಗಂಬರರು ಎದ್ದು ನಿಂತರು. ಇದನ್ನು ಕಂಡ ಅನುಯಾಯಿಗಳು ಪ್ರವಾದಿವರ್ಯರೇ, ಅದೋರ್ವ ಅನ್ಯ ಧರ್ಮೀಯನ ಶವವಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ಪ್ರವಾದಿ(ಸ)ರ ಅದೋರ್ವ ಮನುಷ್ಯನಲ್ಲವೇ? ಎಂಬ ಪ್ರತಿಕ್ರಿಯೆಯು ವಿಶ್ವದಲ್ಲಿ ಇಸ್ಲಾಂ ಧರ್ಮವು ಸಾರಿದ ಮಾನವತಾವಾದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವ್ಯತ್ಯಸ್ತವಾದ ಧಾರ್ಮಿಕ ವಿಶ್ವಾಸಗಳನ್ನು ಹೊಂದಿದ, ಧಾರ್ಮಿಕ ಆಚಾರಗಳನ್ನು ಸ್ವೀಕರಿಸಿ ವಾಸಿಸುವ ಈ ವಿಶಾಲವಾದ ಭೂಮಿಯಲ್ಲಿ ಸ್ವೀಕರಿಸಬೇಕಾದ ಒಳ್ಳೆಯ ಮಾನವತಾ ಸಂದೇಶಗಳನ್ನಾಗಿದೆ ಇಸ್ಲಾಂ ವಿಶ್ವಕ್ಕೆ ಸಮರ್ಪಿಸಿರುವುದು.
    ಇಸ್ಲಾಮಿನ ಪುಣ್ಯ ಸ್ಥಳವಾದ ಮಕ್ಕಾ ಹಾಗೂ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾದೇಶ ಮುಂತಾದ ಹಲವಾರು ಸ್ಥಳಗಳಲ್ಲಿ ಮಾತ್ರವಲ್ಲದೆ ಪವಿತ್ರ ಮಾಸವಾದ ರಮಳಾನಿನಲ್ಲೂ ಆತ್ಮಹತ್ಯಾ ಬಾಂಬರ್‍ಗಳನ್ನು ಸಿಡಿಸಿ ಹಲವಾರು ಮುಸ್ಲಿ5ಂ ಜೀವಗಳನ್ನದೆ. ಪ್ಯಾರಿಸ್, ಬ್ರಿಟನ್ ಮುಂತಾದ ಹಲವಾರು ಪ್ರದೇಶಗಳಲ್ಲಿ ಇಸ್ಲಾಂ ಸಾರಿದ ಮಾನವತಾ ಸಂಧೇಶಗಳಿಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿ ಯಾವುದೇ ಕಾರಣಗಳಿಲ್ಲದೆ, ಯಾವುದೇ ಹಿಂಸೆಯನ್ನು ತೋರ್ಪಡಿಸದ ಹಾಗೂ ಜಗತ್ತಿನಲ್ಲಿ ಕಲಹವೇನೆಂದರಿಯದ  ಹಲವಾರು ಮುಗ್ದ ಜೀವಗಳನ್ನು ಬಲಿ ಪಡೆಯುತ್ತಿರುವ ಜಗತ್ತಿನ ಅತಿದೊಡ್ಡ ಪೀಡೆಯಾಗಿದೆ ಭಯೋತ್ಪಾದನೆ.  ಭಯೋತ್ಪಾದನೆ ಅಥವಾ ಉಗ್ರವಾದವನ್ನು ಹೆಗಲಿಗೇರಿಸುತ್ತಿರುವವರ ಆರೋಪಗಳು ಹುರುಳಿಲ್ಲದವು ಎಂಬುವುದನ್ನು ಸಾಮಾನ್ಯ ಬುದ್ದಿಯಿರುವ ಮನುಷ್ಯನಿಗೂ ಗ್ರಹಿಸಬಹುದಾದ ವಾಸ್ತವ. ಕಾರಣ ಮುಸ್ಲಿಂ  ರಾಷ್ಟ್ರಗಳನ್ನು ಹೊರತು ಪಡಿಸದೆ ಹಲವಾರು ಮುಸ್ಲಿಂ ರಾಷ್ಟ್ರಗಳಲ್ಲಿ ಆತ್ಮಹತ್ಯಾ ಬಾಂಬನ್ನು ಸಿಡಿಸಿ ಮುಸ್ಲಿಮರ ಪವಿತ್ರ ತಿಂಗಳಾದ ರಮಳಾನಿನಲ್ಲಿ ಮುಸ್ಲಿಂ ನಾಮದಾರಿಗಳಾದ ಐಸಿಸ್ ಜನ-ಮನಗಳಲ್ಲಿ ಬೀತಿ ಸೃಷ್ಟಿಸಿದೆ. ಐಸಿಸ್ ನಂತಹ ಉಗ್ರ ಸಂಘಟನೆಗಳ  ಈ ನಡೆವಳಿಕೆಯು ಇಸ್ಲಾಂ ಯಾವುದೇ ರೀತಿಯಲ್ಲೂ ಪ್ರೋತ್ಸಾಹಿಸಿದುದಲ್ಲ. ಹೊರತು ಇಸ್ಲಾಂ ಸಂಪೂರ್ಣವಾಗಿ ನಿಷೇಧಿಸಿದ ಕಾರ್ಯಗಳೆಂಬುವುದು ನಮಗೆ ವ್ಯಕ್ತ. ಪವಿತ್ರ ಇಸ್ಲಾಮಿನ ಪವಿತ್ರ ಗ್ರಂಥವದ ಖುರ್‍ಆನ್ ಮಾತ್ರವಲ್ಲದೆ ಇಲ್ಲಿ ಉಲ್ಲೇಖಿಸಿದಂತೆ ಲೋಕೈಕ ಮಾದರಿ ನಾಯಕ ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಯಹೂದಿ ಓರ್ವನ ಶವಮಂಡವನ್ನು ಕಂಡಾಗ ಎದ್ದು ನಿಂತು ಮನುಷ್ಯನೆಂಬ ಗೌರವವನ್ನು ಕಲ್ಪಿಸುವ ಮೂಲಕ ಸಾರಿದ ಮಾನವತಾ ಸಂದೇಶಗಳಲ್ಲದೆ ತನ್ನ ಜೀವನದ ಉದ್ದಗಲಕ್ಕೂ ಸಾರಿದ ಎಲ್ಲಾ ಮಾನವೀಯತೆಯ ಸಂದೇಶಗಳಿಗೆ ಮುಗ್ಧ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವುದು ಹಾಗೂ, ಹೆತ್ತ ತಾಯಿಯು ಮಗುವನ್ನು ಕೇಳಿದಾಗ ಆ ಮಗುವಿನ ಮಾಂಸದಿಮದ ತಯಾರಿಸಿದ ಭಕ್ಷ್ಯ ಪದಾರ್ಥವನ್ನು ನೀಡುವ ಮೂಲಕ ತಮ್ಮ ಮಿತಿ ಮೀರಿದ ಕ್ರೂರತೆಯನ್ನು ತೋರಿಸಿದ ಐಸಿಸ್, ಅಷ್ಕರ್-ಏ-ತ್ವೈಬಾ ಮುಂತಾದ ಉಗ್ರ ಸಂಘಟನೆಗಳು ಇಸ್ಲಾಮಿನ ನಾಮವನ್ನು ತಿಲಕದಲ್ಲಿಟ್ಟು ಇಸ್ಲಾಮಿಗೆ ಘಾಸಿಯನ್ನು ಉಂಟುಮಾಡಿದೆ. ಒಬ್ಬ ವ್ಯಕ್ತಿಯು ಹಿಂಸಿಸಿದರೆ ಅವನಿಗೆ ಕ್ಷಮಿಸಲು ಇಸ್ಲಾಮ್ ಕಲಿಸುತ್ತಿದೆ. ಆದರೆ, ಯಾವುದೇ ಕಾರಣಗಳಿಲ್ಲದೆ ಕೊಲೆಯೇ ತಮ್ಮ ಕಸುಬನ್ನಾಗಿಸುವ ಉಗ್ರ ಸಂಘಟನೆಗಳಿಗೆ ಇಸ್ಲಾಮಿಕ್ ಬಣ್ಣ ಲೇಪಿಸುವುದರ ಹಿಂದೆ ಬುದ್ದಿಯು ಪಾಶ್ಚಾತ್ಯ ರಾಷ್ಟ್ರಗಳದ್ದು ಎಂಬುವುದು ಕಟು ಸತ್ಯ. ಇಸ್ಲಾಂ ತನ್ನ ಪ್ರಥಮ ಕಾಲಘಟ್ಟದಲ್ಲಿ ಹಲವಾರು ತ್ಯಾಗಗಳನ್ನು ಸಹಿಸಿದೆ. ಬಿಲಾಲ್(ರ.ಅ)ರನ್ನು ಮರುಭೂಮಿಯ ಮರಳಲ್ಲಿ ಸುಡು ಬಿಸಿಲಿರುವ ಸಮಯದಲ್ಲಿ ಅಂಗಾತ ಮಲಗಿಸಿ ಎದೆಯ ಮೆಲೆ ಬಂಡೆ ಕಲ್ಲನ್ನು ಇಟ್ಟು  ಹಿಂಸಿಸಿದರಲ್ಲದೇ ಪ್ರವಾದಿವರ್ಯರನ್ನು ಅಲ್ಲಾಹನಿಗೆ ಸಾಷ್ಟಾಂಗವೆರಗಿದಾಗ ಕತ್ತಿಗೆ ಒಂಡೆಯ ಕರುಳನ್ನು ಹಾಕಿದರು. ಆದರೆ,ಆ ಸಮಯಗಳಲ್ಲಿ ಇಸ್ಲಾಂ ಸಂಯಮ ಪಾಲಿಸಿತೇ ವಿನಃ ಯುದ್ಧಕ್ಕೆ ಇಳಿಯಲಿಲ್ಲ. ಇಸ್ಲಾಂ ಅನಿವಾರ್ಯ ಸಮಯಗಳಲ್ಲಿ ಅಲ್ಲದೆ ಯುದ್ಧ ಕೈಗೊಂಡಿಲ್ಲ. ಪ್ರಥಮ ಖಲೀಫ ಅಬೂಬಕ್ಕರ್ ಸಿದ್ದೀಕ್ (ರ.ಅ) ಪ್ರಭೋದನೆಗಾಗಿ ಉಸಾಮ ಬಿನ್ ಝೈದ್ (ರ.ಅ) ಹಾಗೂ ಈ ಸೈನ್ಯವನ್ನು ನಿಯೋಜಿಸಿ  “ನೀವು ಕೊಲೆ ಹಗೂ ದರೋಡೆ ಮಾಡಬರದು,ಸ್ತ್ರೀಗಳನ್ನು ವೃದ್ಧರನ್ನು ಹಗೂ ಮಕ್ಕಳನ್ನು ಕೊಲೆ ಗೈಯ್ಯಬಾರದು, ಮರಗಳನ್ನು ಕಡಿಯಬಾರದು, ಅನಾವಶ್ಯಕವಾಗಿ ಜೀವಿಗಳನ್ನು ವಧಿಸ ಬಾರದೆಂಬ ಉದಾತ್ತ ಸಂದೇಶಗಳನ್ನು ನೀಡಿಯಾಗಿದೆ    ಬೀಳ್ಕೊಟ್ಟಿದ್ದು. ಹೀಗೆ ಪ್ರವಾದಿ (ಸ) ರ ಹಾದಿಯನ್ನು ತುಳಿದ ಎಲ್ಲಾ ಮಹನೀಯರು ಶಾಂತಿಯ ಸಂದೇಶಗಳನ್ನು ಸಾರುವುದರ ಮೂಲಕವಾಗಿದೆ ಇಸ್ಲಾಮನ್ನು ವಿಶ್ವದಲ್ಲಿ ಅಸ್ತಿತ್ವಕ್ಕೆ ತಂದಿರುವುದು.
ಜಿಹಾದ್ ಎಂದರೇನು?
ಒಂದು ಕೈಯ್ಯಲ್ಲಿ ಖುರ್‍ಆನ್ ಹಾಗೂ ಮತ್ತೊಂದು ಕೈಯ್ಯಲ್ಲಿ ಖಡ್ಗ ಹಿಡಿದು ಮುಸ್ಲಿಮರು ನಡೆಸುವ ಧರ್ಮ ಪ್ರಚಾರವಾಗಿದೆ ಜಿಹಾದ್ ಎಂದಾಗಿದೆ ಒಬ್ಬ ಮುಸ್ಲಿಮೇತರ  ಇತಿಹಾಸಕಾರ ಜಿಹಾದಿಗೆ ನೀಡಿದ ವ್ಯಾಖ್ಯೆ. ಪ್ರಸಿದ್ಧ ಬರಹಗಾರನಾದ ಕ್ಲೈನ್ ತನ್ನ “ಡಿeಟigioಟಿ oಜಿ isಟಚಿm” ಎಂಬ ಪುಸ್ತಕದಲ್ಲಿ ಜಿಹಾದಿಗೆ ನೀಡಿದ ವ್ಯಾಖ್ಯೆ “ಅಮುಸ್ಲಿಂಗಳನ್ನು ಮುಸ್ಲಿಮಾಗಲು ಸಮ್ಮತಿಸುವುದಿಲ್ಲವಾದರೆ ಅವರನ್ನು ಸೋಲಿಸಲು  ಯುದ್ಧ ಮಾಡುವುದಾಗಿದೆ ಜಿಹಾದ್” ಎಂದಾಗಿದೆ. ಜಿಹಾದ್ ಎಂದರೆ ಕಠಿಣ ಶ್ರಮ, ಧರ್ಮ ಸಮರ, ಎಂದಾಗಿದೆ. ಇಸ್ಲಾಮಿನ ಯುದ್ಧ ಇತಿಹಾಸ ಹಾಗೂ ಯುದ್ಧ ಕುರಿತಾದ ಖುರಾನೀ ವಚನಗಳನ್ನು, ಕರ್ಮಶಾಸ್ತ್ರ ನಿಯಮಗಳನ್ನು ವ್ಯತ್ಯಸ್ತವಾದ ಆಗ್ರಹಗಳಿಗಾಗಿ ಎರಡು ವಿಭಾಗದವರು ದುರುಪಯೋಗಗೊಳಿಸುತ್ತಿದ್ದಾರೆ. ಆದರೆ ಪವಿತ್ರ ಖುರ್‍ಆನಿನ ಎರಡನೇ ಅಧ್ಯಾಯದ 256ನೇ ಸೂಕ್ತದಲ್ಲಿ ಪರಾಮರ್ಶಿಸುವುದೇನೆಂದರೆ “ಪವಿತ್ರವಾದ ಇಸ್ಲಾಂ ಧರ್ಮದಲ್ಲಿ ಬಲಾತ್ಕಾರವಿಲ್ಲ,”  ಹಾಗೆಯೇ ಬಲಾತ್ಕಾರದಿಂದ  ಇಸ್ಲಾಂ ಸ್ವೀಕರಿಸಿದರೆ ಅದನ್ನು ಇಸ್ಲಾಂ ಸ್ವೀಕಾರವಾಗಿ ಪರಿಗಣಿಸಲ್ಪಡುವುದಿಲ್ಲ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಪ್ರಚಾರ ಕಾಲದಲ್ಲಿ ಯಾವುದೇ ಬಲ ಪ್ರಯೋಗಿಸದೆ ಇಸ್ಲಾಂ ಧರ್ಮವನ್ನು  ಪ್ರಚಾರಗೈದರು.  ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪ್ರವಾದಿವರ್ಯರ  ಬೋಧನೆಯಿಂದ ಇಸ್ಲಾಮಿನ ಪವಿತ್ರ ಸಂದೇಶಗಳತ್ತ ಆಕರ್ಷಿತರಾದ ಜನರನ್ನು ಹಿಂಜರಿಸುವ  ಸಲುವಾಗಿ ಮಕ್ಕಾ  ಕುರೈಶಿಗಳು ಹಲವಾರು ಕ್ರೂರ ಕೃತ್ಯಗಳನ್ನು ಎಸಗಿದರು. ಎಷ್ಟರವರೆಗೆಂದರೆ ಪ್ರಪ್ರಥಮ ಮುಸ್ಲಿಂ ಶಹೀದ್ ವನಿತೆಯಾದಂತಹ ಸುಮಯ್ಯಾ ಬೀವಿ (ರ.ಅ)ರವರನ್ನು ಬಿಸಿ ಮರಳಿನಲ್ಲಿ ಮಲಗಿಸಿ ಖುರೈಶಿ ನೇತಾರರಾದಂತಹ ಅಬೂ ಜಹಲನು ಮರ್ಮಾಂಗಕ್ಕೆ ಕಬ್ಬಿಣವನ್ನು ತುರುಕಿಸಿದಾಗಲೂ,ಸ್ವಂತ ಊರನ್ನು ಬಿಟ್ಟು ಹೋಗ ಬೇಕಾದ ಪರಿಸ್ಥಿತಿ ಎದುರಾದಾಗಲೂ,ಬಿಲಾಲ್(ರ.ಅ)ರು ತನ್ನ ಯಜಮಾನ ಉಮಯ್ಯತ್  ಎದೆಯಲ್ಲಿ ಬಿಸಿ ಬಂಡೆ ಕಲ್ಲನ್ನು ಇಟ್ಟಾಗಲು ಹಿಂಜರಿಯದೆ ಇಸ್ಲಾಮಿನ ಸುಂದರ ಆಶಯಗಳನ್ನು ಒಳಗೊಂಡವರಾಗಿದ್ದಾರೆ.ಅವರ ಮನಸ್ಸಿನಲ್ಲಿ ಬೇರೂರಿದ ಆ ಆಶಯಗಳು ಎಂತಹವು ಎಂಬುವುದು ಚಿಂತಿಸಿದರೆ ನಮಗೆ ತಿಳಿಯಬಹುದು.ಮಾತ್ರವಲ್ಲ ಬಲತ್ಕಾರದಿಂದ ಪ್ರಚಾರ ಗೈದದ್ದಾಗಿದ್ದಾರೆ ಇಂತಹಕ್ರೂರ ಕೃತ್ಯಗಳು ಎಸಗಲ್ಪಟ್ಟವರು ಅಥವಾ ಸಹಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾರು ಹಿಂಜರಿಯದೆ ಇರಬೇಕಾದರೆ ಅವರು ಬಲಾತ್ಕಾರದಿಂದ ಇಸ್ಲಾಂ ಸ್ವೀಕರಿಸಿದವರಲ್ಲಿ ಎಂಬುವುದು ವಾಸ್ತವ.ಇದರಿಂದ ಪ್ರಸಿದ್ಧ ಬರಹಗರನಾದಂತಹ ಕ್ಲೈವ್ ಎಂಬುವವರು ಜಿಹಾದ್‍ಗೆ ನೀಡಿದ ವ್ಯಾಖ್ಯವು ಸಂಪೂರ್ಣವಾಗಿ ಅಸಂಬಂಧ ಎಂಬ ವಿಚಾರ ಗೋಚರವಾಗುತ್ತದೆ.
    ಇಸ್ಲಾಮಿನಲ್ಲಿ ಸಂರಕ್ಷಣೆಯ ಮುಸಲ್ಮಾನನ ಕರ್ತವ್ಯವಾಗಿದೆ.ಜಿಹಾದ್ ಇದರ ಭಾಗವಾಗಿದೆ. ಇಸ್ಲಾಮನ್ನು ಸಂರಕ್ಷಿಸಲಿಕ್ಕಾಗಿ ಒಬ್ಬ ವ್ಯಕ್ತಿ ಶಾರೀರಿಕವಾಗಿಯೂ ಕೈಗೊಳ್ಳುವ ಎಲ್ಲಾ ತ್ಯಾಗವು ಜಿಹಾದಾಗಿದೆ. ಅಲ್ಲಾಹನ ಮಾರ್ಗದಲ್ಲಿ ಮಾತ್ರ ನಡೆಸುವ ಯುದ್ಧಗಳು ಕೂಡಾ ಜಿಹಾದಾಗಿದೆ. ಅಲ್ಲಾಹನ ಮಾರ್ಗವೆಂದರೆ ಇಂದು ಐಸಿಸ್. ಲಿಷ್ಕರ್-ಏ-ತ್ವೈಬಾ ಮುಂತಾದ ಉಗ್ರ ಸಂಘಟನೆಗಳು ನಡೆಸುವ ಯುದ್ಧಗಳಲ್ಲ. ಅಲ್ಲಾಹನು ಮೊದಲನೆಯದಾಗಿ ಮುಸ್ಲಿಮರಿಗೆ ಯುದ್ದ ನಡೆಸಲು ಅನುಮತಿ ಕೊಟ್ಟಾಗ ಯುದ್ಧಕ್ಕೆ ಹೋಗುವವರೊಂದಿಗೆ ಪ್ರವಾದಿವರ್ಯರು ನೀಡಿದ ಉಪದೇಶ ಏನೆಂದರೆ “ನೀವು ಆಕ್ರಮಿಸಿದವರಿಗೆ ಉಪದ್ರವನ್ನು ನೀಡದಿರಿ,ವಯೋ ವೃದ್ಧರನ್ನು,ಸ್ತ್ರೀಗಳನ್ನು ಹಾಗೂ ಮಕ್ಕಳನ್ನು ಹಿಂಸಿಸದಿರಿ,ಹಾಗೂ ಮರಗಳನ್ನು ಕಡೆಯದಿರಿ ಎಂಬ ಉದಾತ್ತ ಸಂದೇಶಗಳಾಗಿತ್ತು. ಹೊರತು ಇಂದು ಉಗ್ರ ಸಂಘಟನೆಗಳು ನಡೆಸುವ ಬಾಂಬ್ ಸ್ಪೋಟಗಳು ಹಾಗೂ ಮುಗ್ಧರನ್ನು ಹತ್ಯೆಗೈಯ್ಯುವುದಕ್ಕೂ ಇಸ್ಲಾಂ ಪ್ರೇರೇಪಿಸುವುದಿಲ್ಲ. ಅಲ್ಲಾಹನ ಮಾರ್ಗವಲ್ಲದೆ ನಡೆಸುವ ಯುದ್ಧಗಳು ಜಿಹಾದಲ್ಲ. ಅದರಿಂದ ಜಿಹಾದಿಗೆ ಯುದ್ಧ ಎಂಬ ವ್ಯಾಖ್ಯೆಯನ್ನು ನೀಡುವುದು ಅನ್ವಯವಲ್ಲ. ಜಿಹಾದ್ ಧರ್ಮ ಪ್ರಚಾರಕ್ಕಿರುವುದಿಲ್ಲ,ಹೊರತು ಧರ್ಮ ಸಂರಕ್ಷಣೆಗೆ ಇರುವುದಾಗಿದೆ.
        ಮುಸ್ಲಿಮರಿಗೆ ಯುದ್ಧಕ್ಕೆ ಅನುಮತಿ ಲಭಿಸಿರುವುದು ಹಿಜಿರಾದ ನಂತರವಾಗಿದೆ. ಬದ್ರ್ ಯುದ್ಧಕ್ಕೆ ಅನುಮತಿ ಲಭಿಸಿರುವುದು ಅವಿಶ್ವಾಸಿಗಳ ನಡುವೆ ನಡೆದ ಮೊದಲ ಸಮರ. ಆದರೆ,ಇದಕ್ಕೆ ಮುಂಚೆಯೇ “ಜಿಹಾದ್”ಎಂಬ ಪದ ಖುರ್‍ಆನಿನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರವಾದಿವರ್ಯರ 59ನೇ ವರ್ಷ ಅಥವಾ ಪ್ರಭೋದನೆಯ ಆರನೇ ವರ್ಷ ಅವತÀರಿಸಲ್ಪಟ್ಟ “ಅನ್ ಕಬೂತ್” ಎಂಬ ಅಧ್ಯಾಯದಲ್ಲಿ ಸಾಮಥ್ರ್ಯ ಅಧೀನಗೊಳಿಸುವುದೆಂಬ ಅರ್ಥದಲ್ಲಿ ಈ ಪದ ಪ್ರಯೋಗಸಲಾಗಿದೆ. ತದ ನಂತರ ಮುಸ್ಲಿಮರು ಮದೀನಾಕ್ಕೆ ಬಂದ ನಂತರ ಸ್ವ ರಕ್ಷಣೆಗಾಗಿ ಯುದ್ಧಕ್ಕೆ ಅನುಮತಿ ನೀಡಿದಾಗಲೂ ಜಿಹಾದ್ ಎಂಬ ಪದವನ್ನು ಪ್ರಯೋಗಿಸಲಾಗಿದೆ. ಸ್ವ ರಕ್ಷಣೆಗಾಗಿ ಧರ್ಮ ಯುದ್ಧ ನಡೆಸುವುದು ಧರ್ಮದ ಜವಾಬ್ದಾರಿಯಾಗಿದೆ. ಸ್ವಂತ ಸಹೋದರರಾದ ಕೌರವರೊಂದಿಗೆ ಯುದ್ಧವನ್ನು ನಡೆಸಲು ಅರ್ಜುನನು ಹಿಂಜರಿದಾಗ ಅವನನ್ನು ಪ್ರೇರೇಪಿಸುವ ಭಗವದ್ಗೀತೆ ಧರ್ಮ ಯುದ್ಧಕ್ಕೆ ಬೆಂಬಲ ಸಾರುತ್ತದೆ.
        “ಯದೃವಯೂ ಚೋಪಪಣಂ
            ಸ್ವರ್ಗದ್ವಾರಮ ಪಾವೃತಂ”(2-320)
    ಅವಿಶ್ವಸನೀಯವಾಗಿ ನಡೆಯ ಬೇಕಾಗಿ ಬಂದ ಈ ಯುದ್ಧದಲ್ಲಿ ಭಾಗ ವಹಿಸುವವರ ಮುಂದೆ ಸ್ವರ್ಗ ಕವಾಟವು ತೆರೆಯಲ್ಪಟ್ಟಿದೆ.
        “ಅಥಚೇಂಚಯಿಮಂ ಧಮ್ರ್ಯ
         ಸಂಗ್ರಾಮಂ ನಗರಿಶ್ಯಸಿ
         ತತಃ ಸ್ವಧರ್ಮಂ ಕೀರ್ತಿಚೆ
         ಹಿತ್ವಾ ಪಾಪಮ ವಾಪ್ಪ ಸ್ಯಸಿ”(2/35).
    ಅಲ್ಲ ನೀನು ಧಾರ್ಮಿಕವಾದ ಈ ಯುದ್ಧ ಮಾಡುವುದಿಲ್ಲವಾದರೆ ಕರ್ತವ್ಯ ನೆರವೇರಿಸದ ಕಾರಣದಿಂದ ನಿನಗೆ ಪಾಪ ಲಬ್ದಿಯಾಗುವುದು ಹಾಗೂ ಯುದ್ಧ ವೀರನೆಯ ಹೆಸರು ನಷ್ಟವಾಗುವುದು.
    ಯುದ್ದಕ್ಕೆ ಅಣಿಯಾಗಬೇಕು (ಯುದ್ದಾಯ ಯೂಜ್ಯಸ್ವ 2/8)ಎಂದು ದೇವರು ಕಲಿಸಿದಾಗ ಅರ್ಜುನನು ಯುದ್ಧಕ್ಕೆ ಅಣಿಯಾದನು. ಕುರು ಕ್ಷೇತ್ರ,ಧರ್ಮ ಕ್ಷೇತ್ರ,ಕೌರವರ ಅತಿಕ್ರಮಕ್ಕೆದುರಾಗಿತ್ತು ಪಾಂಡವರು ನಡೆಸಿದ್ದು. ಕೌರವರು ಸಹೋದರರಾಗಿದ್ದು ಕೂಡಾ ಧರ್ಮದ ವಿಷಯದಲ್ಲಿ ಯಾವುದೇ ಕ್ಷಮೆಯನ್ನು ದೇವರು ನೀಡಲಿಲ್ಲ. ಬದ್ರ್ ಯುದ್ಧವು ಮುಸ್ಲಿಂಗಳ ಸಹೋದರರಾದ ಕುರೈಶಿಗಳೊಂದಿಗೆ ಕೈಗೊಂಡದ್ದು. ಅದೇ ರೀತಿ ಪಾಂಡವರು ಕೌರವರೊಂದಿಗೆ ಯುದ್ದ ನಡೆಸಿದ್ದು. ಈ ಮೂಲಕ ಖುರ್‍ಆನ್ ಹಾಗೂ ಭಗವದ್ಗೀತೆ ಧರ್ಮ ಯುದ್ದಗಳನ್ನು ಸಾರಿ ಹೇಳುತ್ತದೆ.
    ವಹ್ಹಾಬಿಸಂ ಟೆರರಿಸಂ
    ಧರ್ಮವು ಐಸಿಸನ್ನು ನಾಶದ ಹಾದಿಯಲ್ಲಿ ಕೊಂಡೊಯ್ಯುವುದಾದರೆ ಆ ಧರ್ಮ ಇಸ್ಲಾಮಲ್ಲ,ಹೊರತು ಉಗ್ರಮತೀಯ ಚಿಂತನೆಗಳಾಗಿವೆ. ಹಲವಾರು ಚರಿತ್ರೆ ಸ್ಮಾರಕಗಳು ಇಂದು ಐಸಿಸ್‍ನ ರೌದ್ರ ತಾಂಡವಕ್ಕೆ ಧರಾಶಾಹಿಯಗಿದೆ.ಮುಸ್ಲಿಂ ನಾಗರಿಕತೆಯು ಎಂದೂ ಚರಿತ್ರಾ ಸ್ಮಾರಕ ನಾಮಾವಶೇಷಗೊಳಿಸಲಿಲ್ಲ.ಅದಕ್ಕೆ ಸಾಕ್ಷಿಯಾಗಿದೆ ಐಸಿಸ್ ಭಯೋತ್ಪಾದಕರಿಂದ ನಾಮಾವಶೇಷಗೊಂಡ ಫಲ್ಮೆರಾ ಎಂಬ ಸಿರಿಯನ್ ಪುರಾತನ ನಗರ.ರೋಮ್ ಸಾಮ್ರಾಜ್ಯದ ಭಾಗವಾಗಿದ್ದ ಫಲ್ಮೇರಾ ಕ್ರಿ.ಶ 7ನೇ ಶತಮಾನದ ಕಾಲದಲ್ಲೇ  ಮುಸ್ಲಿಂ ಅಧಿನಕ್ಕೆ ಬಂತು. ಖುಲಫಾಉರ್ರಾಶಿದ್ ಗಳು,ಉಮಯ್ಯದ್,ಅಬ್ಬಾಸಿದ್,ಖಿಲಾಫತ್ ನಾಡಳಿತ ಕಾಲದಲ್ಲಿ ಫಲ್ಮೇರಾ ಸುಸ್ಥಿರವಾಗಿತ್ತು. ಪೌರಾಣಿಕ ಚರಿತ್ರೆ ಸ್ಮಾರಕಗಳು ಸಾವಿರಕ್ಕೂ ಮಿಕ್ಕ ವರ್ಷಗಳ ಕಾಲ ಮುಸ್ಲಿಂ ರಾಜರ ಆಡಳಿತದಲ್ಲಿ ಸುರಕ್ಷಿತವಾಗಿತ್ತು. ಅನ್ಯ ಧರ್ಮಗಳ ಸ್ಮಾರಕಗಳನ್ನು ನಾಮಾವಶೇಷಗೊಳಿಸಲು ಇಸ್ಲಾಂ ಪ್ರೋತ್ಸಾಹಿಸುವುದಿಲ್ಲ. ಆದರೆ ಇಂದು ಐಸಿಸ್ ಎಂಬ ವಿದ್ವಂಸಕ ಸಂಘಟನೆಯು ಪುರಾತನ ದೇವಾಲಯಗಳನ್ನು ದ್ವಂಸಗೊಳಿಸಿರುವುದು ಇಸ್ಲಾಮಿನ ಆಶಯಗಳ ಪಾಲನೆಗಾಗಿಯಲ್ಲ.ತೌಹೀದಿನ ರಕ್ಷಣೆಗಾಗಿ ಖಬ್‍ರ್‍ಗಳು ಚರಿತ್ರೆ ಸ್ಮಾರಕಗಳನ್ನು ನಾಮಾವಶೇಷಗೊಳಿಸಲು ಐಸಿಸ್ ನಂತಹ ಒಂದು ಸಂಘಟನೆಗೆ 18ನೇ ಶತಮಾನದಿಂದಲೂ ಪ್ರೋತ್ಸಾಹ ಲಭಿಸಿರುವುದು ವಹ್ಹಾಬಿ ಸಲಫಿಸಂನ ಆಶಯಗಳಾಗಿವೆ. ಸಲಫಿಸಂನ ವಿಚಾರಧಾರೆಗಳು ಮುಸ್ಲಿಂ ಚರಿತ್ರಾ ಸ್ಮಾರಕಗಳೊಂದಿಗೆ ಪರಿಷ್ಕರಣಾ ವಾದಿಗಳು ತೋರಿಸಿದ ಹೀನ ಕೃತ್ಯಗಳಿಗೆ ಪ್ರೇರಣೆ ನೀಡಿರುವುದು ರಾಜಕೀಯವಾಗಿ ಅವರನ್ನು ಉಪಯೋಗಿಸಲೆತ್ನಿಸುವ ಸಾಮ್ರಾಜ್ಯತ್ವ ರಾಷ್ಟ್ರಗಳಿಂದಾಗಿದೆ.
    ವಹ್ಹಾಬಿಸಂನ ಆಶಯಗಳೊಂದಿಗೆ ಯೋಜಿಸದವರನ್ನು ಧರ್ಮದಿಂದ ಹೊರಗೆ ಹೋದವರು ಎಂದು ಹೆಸರಿಸಿ ಅವರನ್ನು ಸರಣಿ ಹತ್ಯೆಗೆ ಒಳಪಡಿಸುತ್ತಿದ್ದರು. ಮಾತ್ರವಲ್ಲ ಮುಸ್ಲಿಂ ಚರಿತ್ರಾ ಸ್ಮಾರಕಗಳನ್ನು ಕೆಡವಿದರು. ಸೌದಿ ಸ್ಥಾಪಕ ಇಬ್‍ನ್ ಸುಊದ್ ಹಾಗೂ ವಹ್ಹಾಬಿ ನೇತಾರ ಮುಹಮ್ಮದ್ ಬ್‍ನ್ ಅನ್ದುಲ್ ವಹ್ಹಾಬ್ 1490ರಲ್ಲಿ  ರೂಪಿಸಿದ ಸಂಘವು ಮಕ್ಕಾ ಮದೀನಾ ಸಿರಿಯಾ,ಇರಾಖ್,ಮುಂತಾದ ರಾಷ್ಟ್ರಗಳನ್ನು ಅಕ್ರಮಿಸಿ ಅವರ ವಿಚಾರ ಧಾರೆಯೊಂದಿಗೆ ಯೋಜಿಸದವರನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಿ ಹತ್ಯೆ ಗೈಯ್ಯುತ್ತಿದ್ದರು.
    ಇತಿಹಾಸದಲ್ಲಿ ಅತೀ ಹೆಚ್ಚು ಲೂಟಿ ನಡೆದದ್ದು ಭಾರತದಲ್ಲಿ. ಕೊಹಿನೂರ್ ವಜ್ರ,ದರಿಯಾ ನೂರ್ ಇವುಗಳು ಹೇಗೆ ಭಾರತದಿಂದ ಬ್ರಿಟನ್ನಿಗೆ ತಲುಪಿತು ಎಂದು ನಾವು ಅನ್ವೇಷಿಸಿದರೆ ನಮಗೆ ಸಿಗುವ ವ್ಯಕ್ತವಾದ ಉತ್ತರ ಸಂಪನ್ಭರಿತವಾದ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿಟ್ಟು ಕೊಂಡು ಆವಶ್ಯ ಇರುವುದನ್ನು ವಶಪಡಿಸಿ ಉಳಿದವುಗಳನ್ನು ನಾಶ ಪಡಿಸುವ ಪಾಶ್ಚಾತ್ಯ ನೀತಿಯಾಗಿದೆ. ವಹ್ಹಾಬಿಸಂನ ಆಶಯಗಳನ್ನೊಳಗೊಮಡ ಐಸಿಸ್ ತನ್ನ ದಾರಿಯುದ್ದಕ್ಕೂ ಪ್ರಯೋಗಿಸಿರುವುದು.
        ಕರ್ಬಲದಿಂದ  ನಾಂದಿ ಹಾಡಲ್ಪಟ್ಟ ಇವರ ಕ್ರೂರತೆಯು ಕೊನೆಗಾಣುವುದು ವಿಶುದ್ಧ ಮಕ್ಕ ಹಾಗೂ ಮದೀನಾದಲ್ಲಾಗಿದೆ. ಕರ್ಬಲದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪೌತ್ರನಾದ ಹುಸೈನ್(ರ.ಅ) ರವರ ಖಬ್‍ರನ್ನು ದ್ವಂಸ ಗೊಳಿಸಿದರಲ್ಲದೆ ಅದನ್ನು ವಿರೋಧಿಸಿದ ಸಾವಿರದಷ್ಟು ಜನರನ್ನು ವಧಿಸಿದರು. ಇವರ ಕ್ರೂರತೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಲೆಫ್ರಿನೆಂಟ್ ಫ್ರಾನ್ಸಿಸ್ ವಾರ್ಡನ್ ಉಲ್ಲೇಖಿಸಿದ್ದೇನೆಂದರೆ “ಅವರು ಕರ್ಬಲ ಸಂಪೂರ್ಣವಾಗಿ ಕೊಳ್ಳೆ ಹೊಡೆದು ಹುಸೈನ್ ರಳಿಯಲ್ಲಾಹು ಅನ್‍ಹು ರವರಖಬ್ ರನ್ನು ದ್ವಂಸಗೊಳಿಸಿದರಲ್ಲದೆ ಅಪೂರ್ವವಾದ ಕ್ರೂರತೆಯಿಂದ ಸಾವಿರಕ್ಕಿಂತಲೂ ಮಿಕ್ಕ ಪ್ರದೇಶ ನಿವಾಸಿಗಳನ್ನು ಹತ್ಯೆಗೈದು ಅಲ್ಲಿಂದ ನೇರವಾಗಿ ಮಕ್ಕಾಕ್ಕೆ ಹೊರಟರು. 1803ರಲ್ಲಿ ಸುಊದ್ ಆಡಳಿತಗಾರ ಅಬ್ದುಲ್ ಅಝೀಝ್ ವಿಶುದ್ಧ ಮಕ್ಕಾಕ್ಕೆ ಪ್ರವೇಶಿಸಿ ಮಸ್ಜಿದುಲ್ ಹರಮಿನ ಸುತ್ತ ಮುತ್ತಲಿರುವ ಸ್ಮಾರಕಗಳನ್ನು ಹೊಡೆದುರುಳಿಸಿದನು. ಪ್ರವಾದಿ ಸಲ್ಲಲ್ಲಹು ಅಲೈಹಿ ವಸಲ್ಲಮರ ಪ್ರಿಯ ಮಡದಿ ಖದೀಜಾ ರಳಿಯಲ್ಲಾಹು ಅನ್‍ಹಾರವರ ಸಮಾಧಿಯನ್ನು ದ್ವಂಸಗೊಳಿಸಿದರು. ಕೊನೆಗೆ ಮದೀನಾದಲ್ಲಿ ರೌಲಾ ಶರೀಫನ್ನು ಕೆಡವಬಹದೆಂದು ಊಹಿಸಿದ ತುರ್ಕಿಯ ಉಸ್ಮಾನಿಯ ಖಲೀಫ 1812ರಲ್ಲಿ ಸೈನ್ಯವನ್ನು ಕಳುಹಿಸಿದರು.
    ಇಂತಹ ಹಲವಾರು ಕ್ರೂರವಾದ ಕೃತ್ಯಗಳು ಇಂದು ಕೂಡಾ ಐಸಿಸ್ ಸಾಕ್ಷಾತ್ ವಹ್ಹಾಬಿಸಂ ಪುನರಾವರ್ತಿಸುತ್ತಿದೆ ಎಂಬುವುದಕ್ಕೆ ನಾವು ಇಂದಿಗೂ ಮೂಕ ಸಾಕ್ಷಿಗಳಾಗಿದ್ದೇವೆ.ಇಸ್ಲಾಂ ಎಂದಿಗೂ ಇಂತಹ ಕ್ರೂರತೆಗೂ,ಕ್ರೂರಿಗಳಿಗೂ ಪ್ರೋತ್ಸಾಹ ನೀಡಲಿಲ್ಲ. ಹೊರತು ತಮ್ಮ ಸ್ವಾರ್ಥಕ್ಕೋಸ್ಕರ ಇಸ್ಲಾಮಿಕ್ ರಾಷ್ಟ್ರ ಎಂಬ ವ್ಯತಿ ಚಲಿಸಿದ ಚಿಂತನೆಯು ಅಥವಾ ಇಸ್ಲಾಮಿನ ಪರಿಷ್ಕರಣ ವಾದಿಗಳು ಎಂದು ಬಿಂಬಿಸಲ್ಪಡುವ ಇಬ್‍ನ್ ಅಬ್ದುಲ್ ವಹ್ಹಾಬಿನ ಸಂಗಡಿಗರ ಹೀನ ಕೃತ್ಯವಾಗಿದೆ.
ವಹ್ಹಾಬಿಸಂನ ನೇತಾರನಾದ ಇಬ್‍ನು ಅಬ್ದುಲ್ ವಹ್ಹಾಬ್ ಮುಸ್ಲಿಂ ಜಗತ್ತಿಗೆ ಒಂದು ದುರಂತವೇ ಸರಿ. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಎಲ್ಲಾ ಮುಸ್ಲಿಂ ರಾಷ್ಟ್ರಗಳಿಗೆ ಪ್ರಾರ್ಥನೆ ನಡೆಸಿದರು. ಆದರೆ,ನಜ್‍ದಿಗೆ ಪ್ರಾರ್ಥಸದೇ ಇದ್ದಿರುವುದನ್ನು ಕಂಡ ಪ್ರವಾದಿ ಸಲ್ಲಲಾಹು ಅಲೈಹಿ ವಸಲ್ಲಮರು ಹೇಳಿದ್ದೇನೆಂದರೆ: ಅಲ್ಲಿಂದಾಗಿದೆ ಇಸ್ಲಾಮಿನಲ್ಲಿ ಫಿತ್‍ನ ಸೃಷ್ಟಿಸುವ ಸಂಘವೂ ಬರುವುದು. ಇಬ್‍ನ್ ಅಬ್ದುಲ್ ವಹ್ಹಾಬ್ ಜನಿಸಿದ್ದೇ ಒಂದು ಅಪಶಕುನ ಎಂದು ಅತನ ಚರಿತ್ರೆಯಿಂದ ತಿಳಿಯಬಹುದು. ಚಿಕ್ಕಂದಿನಿಂದಲೇ ಹಲವಾರು ಹೊಸ ಹೊಸ ವಾದಗಳನ್ನು ಸೃಷ್ಟಿಸಿದನು. ಇಸ್ಲಾಮಿನ ಹಲವಾರು ವಾದಗಳನ್ನು ತಳ್ಳಿ ತನ್ನದೇ ಆದ ಹೊಸ ಚಿಂತನೆಗಳಿಗೆ ರೂಪು ಕೊಟ್ಟು ಸೌದಿ ಅರೇಬಿಯಾದಲ್ಲಿ ತನ್ನ ಕುತಂತ್ರದಿಂದ ಆಡಳಿತದ ಚುಕ್ಕಾಣಿ ಹಿಡಿದು ಅದಕ್ಕೆ ನೀರುಣಿಸಿ ಪೋಷಿಸಿದನು. ಹಲವಾರು ಸುನ್ನೀ ವಿದ್ವಂಸರನ್ನು ಆಚಾರ ವಿಚಾರಗಳೊಂದಿಗೆ ಯೋಜಿಸದ ಹಲವಾರು ವ್ಯಕ್ತಿಗಳನ್ನು ಯಾವುದೇ ಕರುಣೆಯೂ,ದಯೆಯೂ ಇಲ್ಲದೆ ನಿಷ್ಟೂರವಾಗಿ ಕೊಂದವರು ಮುಸ್ಲಿಮರಾಗಲು ಅಸಾಧ್ಯ.
    ಸ್ವತಃ ಹಲವಾರು ಆತ್ಮಾಹುತಿ ಧಾಳಿಗಳನ್ನು ನಡೆಸುತ್ತಿರುವ ಇಂತಹ ಬುದ್ದಿ ಹೀನ ವಹ್ಹಾಬಿಸಂಗೆ ಕುಮ್ಮಕ್ಕು ನೀಡಿರುವುದು ಇಸ್ಲಾಮಲ್ಲ. ಇಲ್ಲಿ ಉಲ್ಲೇಖಿಸಿದಂತೆ ಬೇರೆಯವರನ್ನು ಹತ್ಯೆ ಗೈಯ್ಯುವುದು,ಸ್ವತಃ ಆತ್ಮಹತ್ಯೆ ಗೈಯ್ಯುವುದೂ ಮಹಾ ಪಾಪವಾಗಿದೆ. ಮಾತ್ರವಲ್ಲ,ಪವಿತ್ರ ಇಸ್ಲಾಮಿನ ವಿಚಾರಧಾರೆಗಳು ಪ್ರವಾದಿವರ್ಯರೂ ಹಾಗೂ ಅನುಯಾಯಿಗಳಾದ ಸ್ವಹಾಬತ್ ತೋರಿಸಿದ  ಸತ್ಪಥವಾಗಿದೆ.ಆ ಸತ್ಪಥದಲ್ಲಿ ಜೀವನವ್ನು  ನಡೆಸಿದ ಸರ್ವ ವಿದ್ವಾಂಸರ ಒಮ್ಮತಾಭಿಪ್ರಾಯ ವಹ್ಹಾಬಿಗಳು ಇಸ್ಲಾಮಿನಿಂದ ಹೊರ ಹೋದವರು ಎಂಬುವುದಾಗಿದೆ.

   






ಭಯೋತ್ಪಾದನೆ ಬಗೆಗಿನ ಇಸ್ಲಾಮಿನ ನಿಲುವೇನು?

           ಧರ್ಮ!ಒಬ್ಬ ವ್ಯಕ್ತಿ ತನ್ನ ಜೀವನ ಶೈಲಿಯನ್ನು ರೂಪಿಸುವುದು ಅವನು ಅನುಸರಿಸುವ ಧರ್ಮದ ಮೂಲಕವಾಗಿದೆ. ಆದ್ದರಿಂದಲೇ ಧರ್ಮವೆಂಬುವುದು ಮಾನವನಿಗೆ ಜೀವನ ನಡೆಸಲಿರುವ ಮಾರ್ಗದರ್ಶಕವೇ ಹೊರತು ತನ್ನ ಐಚ್ಛಿಕ ಆಸೆಗಳಿಗೆ ಒಳಗಾಗಿ ತಮಗೆ ಬೇಕಾದುದನ್ನು ಪಡೆಯಲಿಕ್ಕಾಗಿ ಅಕ್ರಮಗಳಿಗೆ ನಾಂದಿ ಹಾಡಲಿರುವ ಪ್ರೇರಣೆಯಲ್ಲ. ಆದ್ದರಿಂದಲೇ ಪ್ರವಾದಿ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಜೀವನದ ಮೂಲಕ ಉಗ್ರವಾದಗಳಿಗೆ ಪ್ರೋತ್ಸಾಹವನ್ನು ನೀಡದೆ ಪೂರ್ಣವಾಗಿ ಅದನ್ನು ವಿರೋಧಿಸಿ ವಿಶ್ವದಲ್ಲಿ ಶಾಂತಿಯ ಸಂದೇಶವನ್ನು ಸಾರಿರುವುದು.ಆದರೆ ಇಂದು ಇಸ್ಲಾಮಿನ ಅಧಪತನದ ಹಗಲು ಕನಸು ಕಾಣುತ್ತಿರುವ ಕೆಲ ಶತ್ರುಗಳು ಇಸ್ಲಾಂ ಭಯೋತ್ಪಾದನೆಯನ್ನು ಪೋಷಿಸಿ ಬೆಳೆಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಸ್ಲಾಂ ಭಯೋತ್ಪಾದನೆಯನ್ನು ಪ್ರೇರೇಪಿಸುತ್ತಿದೆಯೇ? ಇಲ್ಲವೋ? ಎಂಬ ವಾಸ್ತವವನ್ನು ಕಂಡುಕೊಳ್ಳುವುದು ಅನಿವಾರ್ಯ.
             
                     ಈ ವಿಶ್ವದಲ್ಲಿ ಹಲವಾರು ಧರ್ಮಗಳಿವೆ. ಆಯಾ ಧರ್ಮಗಳಿಗೆ ಅದರದ್ದೇ ಆದ ಆಶಯಗಳಿವೆ,ಆದರ್ಶಗಳಿವೆ. ಆದರೆ ಯಾವುದೇ ಧರ್ಮವು ಭಯೋತ್ಪಾದನೆಗೆ ಅಥವಾ ಉಗ್ರವಾದಕ್ಕೆ ಪ್ರೋತ್ಸಾಹ ನೀಡುವುದಿಲ್ಲ ಎಂಬುವುದು ವಾಸ್ತವ. ಆದರೆ ವಿಶ್ವದ ಯಾವುದೇ ಪ್ರದೇಶದಲ್ಲಿ ಭಯೋತ್ಪಾದಕ ಕೃತ್ಯ ನಡೆದು ಅದರಲ್ಲಿ ಒಬ್ಬ ಮುಸ್ಲಿಂ ನಾಮಧಾರಿಯಿದ್ದರೆ ಅದಕ್ಕೆ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಶೀರ್ಷಿಕೆ ಕೊಟ್ಟು ಇಸ್ಲಾಮನ್ನು ಜಗತ್ತಿನ ಮುಂದೆ ಅಪರಾಧಿಯಾಗಿ ಬಿಂಬಿಸುವುದು ಇಂದಿನ ಮಾಧ್ಯಮಗಳಿಗೆ ಚಾಳಿಯಾಗಿಬಿಟ್ಟಿದೆ.ಒಬ್ಬನ ಬಳಿ ನಮಾಝಿಗಾಗಿ ಅಂಗಸ್ನಾನ ಮಾಡಲು ಸ್ವಲ್ಪ ನೀರಿದ್ದು, ಅದೇ ಸಮಯದಲ್ಲಿ ಸ್ಪರ್ಶಿಸಿದರೆ 7ಸಲ ತೊಳೆಯಬೇಕೆಂದು ಇಸ್ಲಾಂ ಆದೇಶಿಸುವ ನಾಯಿಯು ದಾಹದಿಂದ ಬಳಲುತ್ತಿದ್ದರೆ, ಆ ನೀರಿನಿಂದ ಕಡ್ಡಾಯ ಕರ್ಮವಾದ ವುಝೂ ನಿರ್ವಹಿಸುವುದರ ಬದಲಾಗಿ ಆನೀರನ್ನು ದಾಹದಿಂದ ಬಳಲಿದ ನಾಯಿಗೆ ಕೊಡಲು ಇಸ್ಲಾಂ ಆಜ್ಞಾಪಿಸುತ್ತದೆ. ಆದರೆ ಇಸ್ಲಾಮಿನ ಸುಂದರವಾದ ಆಶಯಗಳತ್ತ  ಕಣ್ಣು ಹಾಯಿಸುವುದರ ಬದಲು ಇಸ್ಲಾಮಿನ ಅಧಪತನಕ್ಕಾಗಿ ನ್ಯೂನತೆಗಳನ್ನು ಹುಡುಕುವ ಮೂಲಕ ಇಸ್ಲಾಮಿನ ಭಯಾವತಾರ ರೂಪಿಸುವುದು ಶತ್ರುಗಳ ಕುತ್ಸಿತ ಕೃತ್ಯಗಳ ಭಾಗವಾಗಿದೆ. ಇಂದು ಹಲವಾರು ಮುಸ್ಲಿಂ ನಾಮಧಾರಿಗಳು ಭಯೋತ್ಪಾದನಾ ಚಟುವಟಿಕೆಗಳು ನಡೆಸುತ್ತಿದ್ದಾರೆ ಎಂಬುವುದು ವಾಸ್ತವ. ಆದರೆ ಕೇವಲ ಮುಸ್ಲಿಂ ನಾಮಧಾರಿ ಎಂಬ ಮಾತ್ರಕ್ಕೆ ಮುಸ್ಲಿಂ ಆಗಲು ಸಾಧ್ಯವಿಲ್ಲ. ಕಾರಣ ಒಬ್ಬ ಮುಸ್ಲಿಮನೆಂದರೆ ಇಸ್ಲಾಂ ಕಲಿಸಿದ ನೀತಿ ನಿಯಮಗಳನ್ನು ಮನಗಂಡು ತನ್ನ ಜೀವನದಲ್ಲಿ ಅಳವಡಿಸಿ ಜೀವಿಸುವವನು. ಇಸ್ಲಾಂ ಭಯೋತ್ಪಾದನೆಯ ಹಾದಿ ತುಳಿದಿಲ್ಲ. ಹೊರತು ಸಮಾಧಾನ ಹಾಗೂ ಶಾಂತಿಯ ಆಶಯಗಳನ್ನು ಬೋಧಿಸಿದೆ.
      ಉಗ್ರವಾದಿಗಳಾಗಿ ರಂಗಪ್ರವೇಶ ಮಾಡಿದ ಐಸಿಸ್‍ನಂತಹ ಉಗ್ರ ಸಂಘಟನೆಗಳು ಇಸ್ಲಾಮಿನ ಆಧಾರವಾದ ಖುರ್‍ಆನ್ ಹಾಗೂ ವಚನಗಳನ್ನು ದುರ್ವಾಖ್ಯಾನಿಸುವ ಮೂಲಕ ಇಸ್ಲಾಮನ್ನು ಅಧೋಗತಿಗೆ ತಳ್ಳುತ್ತಿದ್ದಾರೆಯೇ ಹೊರತು ಇಸ್ಲಾಂ ಆ ಮೂಲಕ ನೆಲೆ ನಿಲ್ಲಲಾರದು. ಇಸ್ಲಾಮಿನ ಸಂರಕ್ಷಣೆಯ ಹೊಣೆಯನ್ನು ಅಂತ್ಯ ದಿನದವರೆಗೆ ಸೃಷ್ಟಿಕರ್ತನಾದ ಅಲ್ಲಾಹನು ಕೈಗೆತ್ತಿಕೊಂಡಿರುವಾಗ ಇವರ ಅಗತ್ಯವಿಲ್ಲ ಎಂಬುವುದು ವಾಸ್ತವದ ಸಂಗತಿ.ಇಸ್ಲಾಮಿನ ಆಶಯಗಳನ್ನು ತಿರುಚುವ ಮೂಲಕ ಇಸ್ಲಾಮನ್ನು ಉಗ್ರವಾಗಿ ಮಂಡಿಸುವ ಉಗ್ರವಾದಿಗಳು ಎಂದಿಗೂ ಇಸ್ಲಾಮಿನ ಆಧಾರವಾಗಲಾರರು.ಪವಿತ್ರ ಖುರ್‍ಆನ್ ಹಾಗೂ ಪ್ರವಾದಿ ಜೀವನದ ಮೂಲಕ ಇಸ್ಲಾಮನ್ನು ತಿಳಿಯಬಹುದಾಗಿದೆ.
1.ಪವಿತ್ರ ಖುರ್‍ಆನ್:
        ಪವಿತ್ರ ಖುರ್‍ಆನ್ ಲೋಕೈಕ ಗುರು ಪ್ರವಾದಿ ಶೃಂಖಲೆಯ ಕೊನೆಯ ಕೊಂಡಿ ಪ್ರವಾದಿ(ಸ.ಅ)ರಿಗೆ ಅವತೀರ್ಣಗೊಂಡ ವಿಶ್ವಸ್ಥ ಜನರ ಮಾರ್ಗದರ್ಶಿಯಾದ ಗ್ರಂಥ. ಪ್ರವಾದಿ ಜೀವನದ ಹೃಸ್ವವಾದ ಇಪ್ಪತ್ತ  ಮೂರು ವರ್ಷಗಳಲ್ಲಿ ಪವಿತ್ರ ಖುರ್‍ಆನ್ ಅವತೀರ್ಣಗೊಂಡಿತು.ದೈವಿಕ ಗ್ರಂಥಗಳು ಓದುವಾಗ ಮಾನಸಿಕ ಶುದ್ದಿ ಹಾಗೂ ಶಾರೀರಿಕ ಶುದ್ಧಿ ಅನಿವಾರ್ಯವಾಗಿದೆ. ಮಾತ್ರವಲ್ಲದೆ ಪವಿತ್ರ ಗ್ರಂಥಗಳ ಬಾಹ್ಯವಾದ ಅರ್ಥಗಳಿಗೆ ಪ್ರಾಶಸ್ತ್ಯ ನೀಡುವುದಕ್ಕಿಂತ ಅದರಲ್ಲಿ ಅಡಕವಾಗಿರುವ ಒಳಾರ್ಥಗಳಿಗೆ ಮಹತ್ವವನ್ನು ನೀಡಬೇಕು. ಖುರ್‍ಆನಿನ ಸಾರಾಂಶಗಳಿಗೆ ಮಹತ್ವವನ್ನು ನೀಡದೆ ಇರುವುದರ ಫಲವಾಗಿದೆ ಖುರ್‍ಆನಿನಲ್ಲಿ ಪರಾಮರ್ಶಿಸಲ್ಪಟ್ಟ ಜಿಹಾದ್ ಎಂಬ ಪದಗಳಿಗೆ ಬರಿಯ ಯುದ್ಧ  ಎಂಬ ಅರ್ಥವನ್ನು ಹಲವಾರು ಮಂದಿ ನೀಡುವುದು.
    “ಇಸ್ಲಾಂ ಭೀಕರತೆಯಲ್ಲ” ಎಂಬ ಪುಸ್ತಕವನ್ನು ಬರೆದಿದ್ದರು ಸ್ವಾಮಿ ಲಕ್ಷ್ಮಿ ಶಂಕರಾಚಾರ್ಯರು.ಹಿಂದೆ “ಇಸ್ಲಾಮಿಕ್ ಭೀಕರವಾದದ ಚರಿತ್ರೆ” ಎಂದು ಇಸ್ಲಾಮನ್ನು ಕೀಳಾಗಿ ಚಿತ್ರೀಕರಿಸಿದ ಪುಸ್ತಕವನ್ನು ಬರೆದಿದ್ದು ದೈನಿಕ ಜಾಗರಣೆ ಎಂಬ ಪತ್ರಿಕೆಯಲ್ಲಿ “ಕೋಮುವಾದಕ್ಕೆ ಕಾರಣ” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಖುರ್‍ಆನ್ ಮುಸ್ಲಿಮೇತರರೊಂದಿಗೆ ಯುದ್ಧ ಮಾಡಲು ಪ್ರೇರೇಪಿಸುತ್ತಿದೆ ಎಂಬ ಪ್ರಸ್ತಾವನೆಯಿಂದ ಪ್ರೇರೇಪಿತರಾಗಿ ಖುರ್‍ಆನಿನ ಹಿಂದೀ ಭಾಷಾಂತರವನ್ನು ಓದುವ ಮೂಲಕ ಇಸ್ಲಾಮಿನ ಕುರಿತು ಉಂಟಾದ ತಪ್ಪುಧಾರಣೆಯ ಕಾರಣವಾಗಿತ್ತು. ಆದರೆ ಮುಸ್ಲಿಂ ವಿದ್ವಾಂಸರು ಇಸ್ಲಾಮಿಗೆ ಹಾಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲ, ಇಸ್ಲಾಂ ಶಾಂತಿ ಸಮಾಧಾನದ ಧರ್ಮ ನಿರಪರಾಧಿಗಳನ್ನು ವಧಿಸುವುದು ಇಸ್ಲಾಮಿನ ಭೋದನೆಗೆ ವಿರುದ್ಧ ಎಂಬ ಪ್ರಸ್ತಾವನೆಯನ್ನು ನೀಡಿ ಭಯೋತ್ಪಾದನೆ ವಿರುದ್ಧ ಫತ್ವಾ ಹೊರಡಿಸಿದರು.ಇದರಿಂದ ಪ್ರಭಾವಿತರಾದ ಸ್ವಾಮೀಜಿಯವರು ಖುರ್‍ಆನಿನ ಜಿಹಾದ್ ಪರಾಮರ್ಶಿತ ಸೂಕ್ತಗಳ ವಾಸ್ತವವನ್ನು ತಿಳಿಯಲು ಮುಸ್ಲಿಂ ವಿದ್ವಾಂಸರನ್ನು ಸಮೀಪಿಸಿದರು. “ಖುರ್‍ಆನ್ ಪ್ರವಾದಿವರ್ಯರ ಜೀವನದ ವಿವಿಧ ಸಂದರ್ಭಗಳಲ್ಲಿ ಅವತೀರ್ಣವಾದುದು, ಕೇವಲ ಬಾಹ್ಯ ಅರ್ಥವನ್ನು ಗ್ರಹಿಸುವುದರ ಬದಲು ಅದರ ಒಳಾರ್ಥವನ್ನು ಹಾಗೂ ಅವತೀರ್ಣಗೊಂಡ ಸಂದರ್ಭ, ಕಾರಣ ಎಂಬಿತ್ಯಾದಿ ಕಾರ್ಯಗಳನ್ನು ತಿಳಿಯುವುದು ಅನಿವಾರ್ಯ” ಎಂದು ವಿದ್ವಾಂಸರು ತಿಳಿ ಹೇಳಿದರು. ವಿದ್ವಾಂಸರ ಹೇಳಿಕೆಯಿಂದ ಸ್ವಾಮೀಜಿಯವರು ಪ್ರವಾದಿ(ಸ.ಅ)ರ ಜೀವನವನ್ನು ಕಲಿತು ಬಳಿಕ ಖುರ್‍ಆನನ್ನು ಶುಭ್ರ ಮನಸ್ಸಿನೊಂದಿಗೆ ಓದಿದಾಗ ಖುರ್‍ಆನಿನ ಸತ್ಯಾಂಶಗಳನ್ನು ಗ್ರಹಿಸಿ “ ‘ಇಸ್ಲಾಮಿಕ್ ಭೀಕರವಾದದ ಚರಿತ್ರೆ’ ಎಂಬ ಪುಸ್ತಕದಲ್ಲಿ ನಾನು ವಾಸ್ತವ ವಿರುದ್ಧವಾಗಿ ಬರೆದಿರುವುದನ್ನು ಹಿಂಪಡೆದಿದ್ದೇನೆ”ಎಂದು ಬಹಿರಂಗವಾಗಿ ಹೇಳಿ ಕ್ಷಮೆಯಾಚಿಸಿದರು.
    ಖುರ್‍ಆನ್ ಎಂಬ ಪವಿತ್ರ ಗ್ರಂಥವು ಆಧ್ಯಾತ್ಮಿಕತೆ,ವಿಜ್ಞಾನ,ಇತಿಹಾಸ,ಸಾಮಾಜಿಕ ಕಳಕಳಿ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮiÁಡಿಸಿದೆ.ಒಬ್ಬ ವಿಜ್ಞಾನಿಯು ಜೇನು ನೊಣದ ಕುರಿತು ಅಧ್ಯಯನ  ನಡೆಸಿದರು.ಎಲ್ಲಿಯೂ ಅದರ ಕುರಿತು ವ್ಯಕ್ತವಾದ ವಿವರಗಳು ಲಭಿಸದ ಆತನಿಗೆ ಖುರ್‍ಆನ್ ನೋಡಿದಾಗ ಜೇನು ನೊಣದ ಕುರಿತು ಪಾಠ ಲಭಿಸಿತು!.
    ಒಂದು ಕೈಯ್ಯಲ್ಲಿ ಖುರ್‍ಆನ್ ಹಾಗೂ ಮತ್ತೊಂದು ಕೈಯ್ಯಲ್ಲಿ ಖಡ್ಗ ಹಿಡಿದು ಖುರ್‍ಆನನ್ನು ಹಾಗೂ ಇಸ್ಲಾಮನ್ನು ದುವ್ರ್ಯಾಖ್ಯಾನ ಮಾಡಿದ, ಮುಸ್ಲಿಮರನ್ನು ಭಯೋತ್ಪದಕರನ್ನಾಗಿ ಚಿತ್ರೀಕರಿಸುವ ನಿಟ್ಟಿನಲ್ಲಿ ರಚಿಸಲ್ಪಟ್ಟ  ವ್ಯಂಗ್ಯ ಚಿತ್ರಗಳು ಮುಗ್ಧರಾದ ಇಸ್ಲಾಮಿನ ಕುರಿತು ತಿಳುವಳಿಕೆ ಇಲ್ಲದವರ ಮನಸ್ಸಿನಲ್ಲಿ ಇಸ್ಲಾಮನ್ನು ಅಪರಾಧಿಯನ್ನಾಗಿಸಿತು. ಇಸ್ಲಾಮನ್ನು ತಲೆತಗ್ಗುವಂತೆ ಮಾಡುವಲ್ಲಿ ಮಾಧ್ಯಮಗಳು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಶತ್ರುಗಳ ಅಕ್ರಮದಿಂದ ಬೇಸತ್ತ ಮುಸ್ಲಿಮರಿಗೆ ಸ್ವರಕ್ಷಣೆಗಾಗಿ ಯುದ್ಧ ಮಾಡಲು ಅನುಮತಿಯನ್ನು ನೀಡಿದಾಗಲು ಅಲ್ಲಾಹನು ಪವಿತ್ರ ಖುರ್‍ಆನಿನ ಮೂಲಕ ಹೇಳಿರುವುದೇನೆಂದರೆ “ನಿಮಗೆ ಎದುರಾಗಿ ಯುದ್ಧ ಮಾಡುವವರೊಂದಿಗೆ ದೇವ ಮಾರ್ಗದಲ್ಲಿ ನೀವು ಯುದ್ದ ಮಾಡಿರಿ. ಆದರೆ, ನಿಯಮಗಳನ್ನು ಉಲ್ಲಂಘಿಸಬಾರದು.ಅಲ್ಲಾಹನು ಅಕ್ರಮಗಳನ್ನು ಇಷ್ಟ ಪಡುವವನಲ” ್ಲ(2:190). ಪ್ರವಾದಿವರ್ಯರ ಜೀವನವು ಖುರ್‍ಆನ್ ಕಲಿಸಿಕೊಟ್ಟ ಮಾರ್ಗದಲ್ಲಾಗಿತ್ತು.ಒಬ್ಬ ವ್ಯಕ್ತಿಯನ್ನು ಸುಸಂಸ್ಕೃತನನಾಗಿಸುವಲ್ಲಿ ಖುರ್‍ಆನ್ ಮಹತ್ವದ ಪಾತ್ರ ವಹಿಸುತ್ತದೆ.
2.ಪ್ರವಾದಿ ಜೀವನ
    ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನವು ವಿಶ್ವದಲ್ಲಿ ಹಾದು ಹೋದ ಸರ್ವ ನಯಕರುಗಳಿಗಿಂತ ಮಿಗಿಲದುದು.ಆದುದರಿಂದಲೇ ಡಾ:ಮೈಕಲ್ ಹೆಚ್.ಹಾರ್ಟ್ ರವರು ತನ್ನ ಣhe huಟಿಜಡಿeಜ ಎಂಬ ಪುಸ್ತಕದಲ್ಲಿ ನಾಯಕರುಗಳಲ್ಲಿ ಮೊದಲ ಸ್ಥಾನವನ್ನು ನೀಡಿರುವುದು ವಿಶ್ವದ ಅತೀ ಹೆಚ್ಚು ವ್ಯಕ್ತಿಗಳನ್ನು ಆಕರ್ಶಿಸಿದ ಅತ್ಯಧಿಕ ವ್ಯಕ್ತಿಗಳಿಂದ ವರ್ಣಿಸಲ್ಪಟ್ಟ ವ್ಯಕ್ತಿತ್ವವು ಪ್ರವಾದಿವರ್ಯರದ್ದಾಗಿತ್ತು. ಕತ್ತಲೆ ಯುಗ (ಜಚಿಡಿಞ ಚಿge ) ಎಂದು ವಿಶೇಷಿಸಲ್ಪಟ್ಟ ಅನಾಚಾರಗಳು ಮಿತಿ ಮೀರಿದ ಕಾಲದಲ್ಲಿ ವಾಸವಾಗಿದ್ದ ಜನರೆಡೆಯಲ್ಲಿ ಪವಿತ್ರ ಸಂದೇಶವನ್ನು ಸಾರಿ ವಿಶ್ವದಾದ್ಯಂತ ಧರ್ಮ ಪ್ರಚಾರವಾಗಲು ಬಲು ದೊಡ್ಡವಾಗಲು ಕಾರಣ    ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲವiರ ಜೀವನ ಶೈಲಿ ಎಂದರೆ ಉತ್ಪ್ರೇಕ್ಷೆಯಾಗಲಾರದು.
    ಪ್ರವಾದಿತ್ವ ಲಬ್ದಿಗೂ ಮುನ್ನವೇ ತನ್ನ ಜೀವನದ ಮೂಲಕ ಖುರೈಶಿಗಳ ಜನ ಮನವನ್ನು ಗೆದ್ದವರಾಗಿದ್ದರು ಪ್ರವಾದಿವರ್ಯರು.ಪ್ರವಾದಿವರ್ಯರ ಪ್ರಾಮಾಣಿಕತೆಯ ಕಾರಣದಿಂದ ಖುರೈಶಿಗಳು ಪ್ರವಾದಿಯವರನ್ನು ವೀಶ್ವಸ್ತನೂ,ಅಲ್ ಅಮೀನ್ ಎಂದು ಕರೆಯುತ್ತಿದ್ದರು.ಒಮ್ಮೆ ಭೂಮಿಯಲ್ಲಿರುವ ಅಲ್ಲಹನ ಪ್ರಥಮ ಆರಾಧನಾಲಯ ಕಅಬಾದಲ್ಲಿ ಹಜರುಲ್ ಅಸ್ವದ್ ಪ್ರತಿಷ್ಟಾಪಿಸುವ ವಿಷಯದಲ್ಲಿ ಗೋತ್ರ ನೇತಾರರ ಬಳಿ ಚರ್ಚೆಯಾಗಿ ಪರಿಹಾರಕ್ಕಾಗಿ ದಾರಿಯಾಗಿ ಯಾರು ಮೊದಲು ಬರುವರೋ ಅವರು ಕೋರು ತೀರ್ಪು ಕೊನೆಯೆಂದು ತೀರ್ಮಾನಿಸಲಯುಇರತು.ಆಗ ಖುರೈಶಿಅಗಳ ಎಡೆಯಲ್ಲಿ ಅಲ್-ಅಮೀನ್ ಖಾತಿ ವೆತ್ತ ಪ್ರವಾದಿ ವರ್ಯರು ಬಂದಾಗ ಸರ್ವ ಗೋತ್ರ ನೇತಾರರು ನ್ಯಾಯ ಸಿಗುತ್ತದೆ ಎಂದು ಭರವಸೆ ಉಂಟಾಯಿತು.ಕರಣ,ಅರಬರೆಡೆಯಲ್ಲಿ ವಿಶ್ವಾಸರ್ಹರಾದ ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಂ ಚರ್ಚೆಗೆ ತೆರೆ ಎಳೆಯುವರು ಎಂಬ ಪೂರ್ಣ ವಿಶ್ವಾಸವಿತ್ತು.ಅಂತೆಯೇ ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ಬಟ್ಟೆಯನ್ನು ಹಾಸಿ ಅದರ ಮೇಲೆ ಪವಿತ್ರ ಹಜರುಲ್ ಅಸ್ವದ್ ಕಲ್ಲನ್ನಿಟ್ಟು ಎಲ್ಲಾ ಗೋತ್ರ ನೇತಾರರೊಂದಿಗೆ ಬಟ್ಟೆಯ ಒಂದೊಂದು ಭಾಗವನ್ನು ಹಿಟಿದು ಪ್ರತಿಷ್ಟಾಪಿಸುವ ಮೂಲಕ ಎಲ್ಲರಿಗೂ ಸಮಾನವಾದ ನ್ಯಾಯವನ್ನು ಒದಗಿಸಿಕೊಟ್ಟರು. ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರಿಯ ಪತ್ನಿ ಖದೀಜಾ ಬೀವಿಯವತರು ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ತನ್ನ ಸತಿಯನ್ನಾಗಿಸಲು ಮುಂದಾಗಿದ್ದು ಪ್ರವದಿವರ್ಯರು ತನ್ನ ವ್ಯಾಪಾರದಲ್ಲಿ ಪಾಲಿಸಿದ ಪ್ರಾಮಾಣಿಕತೆ ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲ,ಮರ ಸಂಶುದ್ಧವಾದ ಜೀವನ ಶೈಲಿಯಿಂದಾಗಿತ್ತು.
    ಆದರೆ,ಪವಿತ್ರ ಇಸ್ಲಮಿನ ಸುಂದರ ಸಂದೇಶವನ್ನು ಖುರೈಶರೆಡೆಯಲ್ಲಿ ಭೋಧಿಸಿದಾಗ ಪರಂಪರಿಕವಾಗಿ ಖುರೈಶರು ಆರಾಧಿಸುತ್ತಿದ್ದ ಲಾತಿ,ಉಝ್ಝ ಮುಂತಾದ ದೇವತೆಗಳನ್ನು ನಿರಾಕರಿಸಿದಾಗ ಅಲ್-ಅಮೀನ್ ಅಥವಾ ವಿಶ್ವಸ್ತನು ಎಂದು ಕರೆಯಿಉತ್ತಿದ್ದವರು ಹುಚ್ಚ,ಕೋಮ ಮಬಗಾರ ,ಸುಳ್ಳನೆಂದು ಕರೆಯತೊಡಗಿದರು ಎಂಬುವುದು ವಾಸ್ತವ. ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನದಿಂದ ಆಕರ್ಶಿತರಾದ ಹಲವಾರು ಖುರೈಶಿಗಳು ಇಸ್ಲಾಂ ಎಂಬ ಸತ್ಯ ಸಂದೇಶ ಹಾದಿಯತ್ತ ಬಂದರು.ತನ್ನ ವಿರುದ್ಧ ಹಗೂ ಇಸ್ಲಾಂ ಸ್ವೀಕರಿಸಿದ ಅನುಯಾಯಿಗಳಿಗೆ ಅಕ್ರಮವನ್ನು ಛೂ ಬಿಟ್ಟು ಅವರನ್ನು ಮತಾಂತರಗೊಳಿಸಲು ಶ್ರಮಿಸಿದಾಗ ಯಾವುದೇ ಒಬ್ಬ ಪ್ರವಾದಿ ಅನುಯಾಯಿಯು ಇಸ್ಲಾಮಿನಿಂದ ಹಿಂಜರಿಯಲಿಲ್ಲ.ಕರಣ,ಕರಿಯ ಬಿಳಿಯ ಗುಲಾಮ-ಒಡೆಯ ಎಂಬ ಯಾವುದೇ ಹಸ್ತ ಕ್ಷೇಪವಿಲ್ಲದ ಇಸ್ಲಮಿನ ಸಂದೇಶವಾಗಿತ್ತು ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದು. ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶತ್ರಗಳೊಂದಿಗೆ ದ್ವೇಷ ಸಾಧಿಸಲು ಅವಕಶ ಸಿಗದವರಲ್ಲ.ಆದರೆ,ಪ್ರವದಿವರ್ಯರ ಮನವೀಯ ಗುಣ ಹೃದಯ ವಿಶಾಲತೆ ಯಾವುದೇ ಮನ ಪರಿವರ್ತಿಸುತ್ತಿತ್ತೇ ಹೊರತು ಅವರ ವಿರುದ್ಧ ಅಕ್ರಮ ಛೂ ಬಿಡಲು ಪ್ರವದಿವರ್ಯರ ಮನಸ್ಸಾಕ್ಷಿ ಒಪ್ಪುತ್ತಿರಲಿಲ್ಲ.
    ಯುದ್ದದಲ್ಲಿ ಶತ್ರುಗಳ ಸೆರೆಯಾಳುಗಳಾಗಿ ಕಾರಾಗೃಹದಲ್ಲಿದ್ದಾಗ ರಾತ್ರಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನಿದ್ದೆ ಮಾಡದೆ ಬಹಳ ಮನೋವೇದನೆಯಿಂದ ಇರುವುದನ್ನು ಕಂಡ ಒಬ್ಬ ಅನುಯಾಯಿಯು “ಪ್ರವಾದಿವರ್ಯರೇ, ಇಂದು ಯುದ್ದದಲ್ಲಿ ವಿಜಯವನ್ನು ಪಡೆದ ನಮಗೆ ಸಂತೋಷದ ದಿನ ಆದುದರಿಂದಲೇ ನಮಗಿಂದು ಶತ್ರುಗಳ ಕಾಟವಿಲ್ಲದೆ ಸುಖ ನಿದ್ರೆ ಮಾಡಬಹುದು” ಎಂದು ಹೇಳಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರತಿಕ್ರಿಯೆಯು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್‍ರ ಮಾನವೀಯತೆಗೆ ಸಾಕ್ಷಿ.ಅದೇನೆಂದರೆ “ನಮ್ಮಂತೆ ಮನುಷ್ಯರಾದ ಇವರು ಜೈಲಿನಲ್ಲಿ ಮಲಗಲು ಸಾಧ್ಯವಾಗದೆ ಅಸಾಧ್ಯ ವೇದನೆಯನ್ನು ಅನುಭವಿಸುತ್ತಿರುವಾಗ ನಾವಿಲ್ಲಿ ಸುಖ ನಿದ್ರೆಗೆ ಜಾರುವುದನ್ನು ನನ್ನ ಅಂತರಾಳ ಬಯಸಲಾರದು” ಎಂದಾಗಿತ್ತು. ಇಂತಹ ಮಾದರಿಯೋಗ್ಯ ಜೀವನವನ್ನು ಸವೆಸಿದ ಪ್ರವಾದಿವರ್ಯರನ್ನು ಖಡ್ಗದ ಮೂಲಕ ಇಸ್ಲಾಂ ಧರ್ಮವನ್ನು ಪ್ರಚುರಪಡಿಸಿದರು ಎಂದು ಅಪಪ್ರಚಾರ ಮಾಡಿ ಆ ಮೂಲಕ ಪವಿತ್ರ ಇಸ್ಲಾಮನ್ನು ಭಯೋತ್ಪಾದನೆಯ ಧ್ಯೋತಕವೆಂದು ಜಗತ್ತಿನ ಮುಂದೆ  ಇಸ್ಲಾಮನ್ನು ಚಿತ್ರೀಕರಿಸುವವರು ಚಿಂತಿಸಬೇಕಾದ ಸಂಗತಿ ಇಂತಹ ಹಲವಾರು ಸತ್ಯ ಸಂದೇಶವನ್ನು ಸಾರುವ ಜೀವನವನ್ನು ಕಂಡು ಇಸ್ಲಾಮಿನತ್ತ ಮರುಳಾಗದವರು ಯಾರು? ಎಂದಾಗಿದೆ. ಹೊರತು ಇಸ್ಲಾಂ ಖಡ್ಗದಿಂದ ಪ್ರಚಾರಗೈದದಲ್ಲ ಎಂಬ ನೈಜತೆಯನ್ನಾಗಿದೆ.ಇದಕ್ಕೆ ಸಾಕ್ಷಿಯಾಗಿದೆ ಪ್ರವಾದಿವರ್ಯರು ತನ್ನ ನಲ್ವತ್ತನೇ ವಯಸ್ಸಿನಲ್ಲಿ ಪ್ರಭೋದನೆ ಎಂಬ ಬಹುದೊಡ್ಡ ಕರ್ತವ್ಯವನ್ನು ಕೈಗೆತ್ತಿಕೊಂಡಾಗ ಇಸ್ಲಾಮಿನ ಜನಸಂಖ್ಯೆ ಶೂನ್ಯವಾಗಿತ್ತು. ಆದರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮರಣ ವೇಳೆಯಲ್ಲಿ 63ನೇ ವಯಸ್ಸಿನಲ್ಲಿ ಬರೀ ಇಪ್ಪತ್ತಮೂರು ವರ್ಷಗಳಲ್ಲಿ ಲಕ್ಷಕ್ಕೂ ಮಿಕ್ಕ ಅನಿಯಾಯಿಗಳನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಗಳಿಸಿದ್ದು ಇಸ್ಲಾಮಿನ ಉದಾತ್ತ ಸಂದೇಶಗಳನ್ನು ತನ್ನ ಜೀವನದಲ್ಲಿ ಅಳವಡಿಸುವ ಮೂಲಕ ಜನಮನಗೆದ್ದು ಇಸ್ಲಾಮಿನ ಆಶಯವನ್ನು ಅವರ ಮನಗಳಲ್ಲಿ ಬಿತ್ತುವ ಮೂಲಕವಾಗಿತ್ತು.
 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನವು ಬರೀ ವ್ಯಕ್ತಿಗಳಿಗೆ ಕರುಣೆ ತೋರಿದ್ದು ಮಾತ್ರವಲ್ಲ. ಬುದ್ದಿಯಿಲ್ಲದ ಜೀವಿಗಳಿಗೂ ಕರುಣೆ ತೋರಿದ್ದಾರೆ. ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹಾಗೂ ಅನುಯಾಯಿಗಳು ನಡೆದು ಹೋಗುವಾಗ ಚೇಳು ನೀರಿಗೆ ಬಿದ್ದಿರುವುದನ್ನು ಕಂಡ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅದನ್ನು ನೀರಿನಿಂದ ತೆಗೆಯಲು ಪ್ರಯತ್ನಿಸಿದಾಗ ಅದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕೈಗೆ ಕಚ್ಚಿತು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತೊಮ್ಮೆ ಅದನ್ನು ರಕ್ಷಿಸಲು ಪ್ರಯತ್ನಿಸಿದಾಗ ಅದು ಮತ್ತೊಮ್ಮೆ ತನ್ನ ಗುಣವನ್ನು ತೋರ್ಪಡಿಸಿತು.ಆಗ ಅನುಯಾಯಿಗಳು ಹೇಳಿದರು “ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರೇ, ಅದನ್ನು ಬಿಡಿ ಎಂದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದೇನೆಂದರೆ “ಕಚ್ಚುವ ಗುಣ ಅದರದ್ದಾದರೆ ರಕ್ಷಿಸುವ ಸ್ವಭಾವ ನಮ್ಮದು ಎಂಬ ಉದಾತ್ತವಾದ ಸಂದೇಶವಾಗಿತ್ತು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿಗೆ ಒಬ್ಬ ರಾಜನು ಬಂದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅಂಗಸ್ನಾನ (ವುಝೂ)ಮಾಡುತ್ತಿದ್ದ ನೀರು ನೆಲವನ್ನು ಸ್ಪರ್ಶಿಸದಂತೆ ಅನುಯಾಯಿಗಳು ನೀರಿಗಾಗಿ ಪರಸ್ಪರ ಗಲಾಟೆ ಮಾಡಿದರು.ಇದನ್ನು ಕಂಡ ರಾಜನು ಒಬ್ಬ ನೇತಾರನನ್ನು ಇಷ್ಟಕ್ಕೂ ಪ್ರೀತಿಸುವ ಅನುಯಾಯಿಗಳಿದ್ದಾರೆಯೇ? ಸ್ವತಃ ತನ್ನ ಅನುಯಾಯಿಗಳು ತನ್ನನ್ನು ಪ್ರೀತಿಸುತ್ತಿದ್ದಾರೆಯೇ?ಎಂದು ಚಿಂತಿಸಿದನು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಅಷ್ಟಕ್ಕೂ ಪ್ರೀತಿಸಲು ಕಾರಣ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸತ್ಯ ಸಂದೇಶಗಳನ್ನು ಒಳಗೊಂಡ ಅನುಯಾಯಿಯೊಂದಿಗಿನ ಸ್ನೇಹ ಪೂರ್ವಕವಾದ ಸಂಬಂಧವಾಗಿತ್ತು.
            ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನದಲ್ಲೆಲ್ಲೂ ಭಯೋತ್ಪಾದನೆ ಪ್ರಚೋದಿತ ಚಟುವಟಿಕೆಗಳೋ, ಮಾತುಗಳೋ ನಮಗೆ ಕಾಣಲು ಅಸಾಧ್ಯ. ಆದರೆ ಇಂತಹ ಪರಿಶುದ್ದ ಜೀವನಕ್ಕೆ ಇಸ್ಲಾಮನ್ನು ನಿರ್ನಾಮ ಮಾಡಲು ಮಸಿ ಬಳಿಯುವುದು ಖೇದಕರ. ಆಧುನಿಕ ಮುಸ್ಲಿಮರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನಾಥರ ಪರಿಪಾಲನೆ, ಮಕ್ಕಳೊಂದಿಗಿರುವ ನಡತೆ, ಬಾಳಸಂಗಾತಿಯೊಂದಿಗಿನ ಜೀವನ ಶೈಲಿ, ಮನೆಯಿಂದ ಹೊರಗೆ ಹಾಗೂ ಒಳಗಿನ ಜೀವನ ಮುಂತಾದ ಪ್ರವಾದಿ ಜೀವನ ಶೈಲಿಯನ್ನು ಅಳವಡಿಸುವುದು ಅನಿವಾರ್ಯ. ನೀತಿ ನಿಯಮಗಳಲ್ಲಿ,ಆಡಳಿತಗಾರಿಕೆ ಮಾದರಿ ಜೀವನವಾಗಿತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರದ್ದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜೀವನವು ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಿತ್ತು. ಮಾದರೀ ಪ್ರಭೋದಕ, ಉತ್ತಮ ಆಡಳಿತಗಾರ, ಪತ್ನಿಯರಿಗೆ ಉತ್ತಮ ಪತಿ, ಮಕ್ಕಳಿಗೆ ಸಂತೋಷವನ್ನು ನೀಡುವ ಮಾದರೀ ಪಿತಾಮಹ, ಅನುಯಾಯಿಗಳಿಗೆ ಉತ್ತಮ ನೇತಾರ ಹೀಗೆ ಸರ್ವ ಕ್ಷೇತ್ರಗಳಲ್ಲೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪರಿಪೂರ್ಣದ ಪರ್ಯಾಯವಾಗಿದ್ದರು. ಆದ್ದರಿಂದಲೇ ಫ್ರೆಂಚ್ ಇತಿಹಾಸಕಾರನಾದ ಮಾರ್ಟಿನ್ “ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಭಾಷಣಗಾರ, ಪ್ರವಾದಿ, ಪ್ರಭೋದಕ, ಯೋಧ, ವಿಗ್ರಹವಿಲ್ಲದ ಧರ್ಮದ ಪುನರುದ್ಧಾರಕ, ಉತ್ತಮ ಆಡಳಿಗಾರ ಮುಂತಾದ ಮಾನವನ ಸರ್ವ ಮಹತ್ವಗಳೆಲ್ಲವೂ ಸಮ್ಮೇಳಿಸುವ ಮಹಾ ಮನುಷ್ಯರಾಗಿದ್ದಾರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ .
            ಜೀವನದಲ್ಲಿ ಮಾನವನು ಹಾದು ಹೋಗುವ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಜೀವನ ನಡೆಸಲು ಮಾದರಿಯಾದ ಜೀವನ ನಡೆಸಿದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಜೀವನದ ಮೂಲಕ ಉಗ್ರವಾದಕ್ಕೆ ಪ್ರೇರೇಪಿಸಲಿಲ್ಲ ಎಂಬುವುದು ವ್ಯಕ್ತ.
ಯುದ್ಧಗಳು ಇಸ್ಲಾಮಿನಲ್ಲಿ ಹಾಗೂ ಇತರ ಧರ್ಮಗಳಲ್ಲಿ
        ಇಸ್ಲಾಂ ವಿನಾಕಾರಣ ಅಥವಾ ಇಸ್ಲಾಮಿನ ಪ್ರಚಾರಕ್ಕಾಗಿ ಯುದ್ಧವನ್ನು ಕೈಗೊಂಡಿಲ್ಲ. ಬದ್ರ್ ಯುದ್ಧ  ವಿಶ್ವಾಸಿಗಳು ಹಾಗೂ ಅವಿಶ್ವಾಸಿಗಳೆಡೆಯಲ್ಲಿನ ಪ್ರಥಮ ಯುದ್ಧ. ಕೆಲ ಇಸ್ಲಾಂ ವಿರೋಧಿಗಳ ಆರೋಪದಂತೆ ಇಸ್ಲಾಂ ಪ್ರಚಾರಕ್ಕೆ ಕೈಗೊಂಡ ಯುದ್ಧವಲ್ಲ ಬದ್ರ್. ಜನ್ಮ ನಾಡಾದ ಮಕ್ಕಾದಲ್ಲಿ ಹಲವಾರು ತ್ಯಾಗಗಳನ್ನು ಸಹಿಸಿ ಕೊನೆಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹಾಗೂ ಅನುಯಾಯಿಗಳು ಮದೀನಾಕ್ಕೆ ಪಲಾಯನಗೈದ ಮುಸ್ಲಿಮರಿಗೆ ಜೀವಿಸಲು ಯಾವುದೇ ಹಕ್ಕು ಇಲ್ಲದಂತಾದಾಗ ಮಾತ್ರವಲ್ಲದೆ ಮುಸ್ಲಿಮರ ಸಂಪತ್ತನ್ನು ಖುರೈಶರು ಕಳ್ಳತನ ಮಾಡಿದರು. ಮೊದಲಾದ ಕ್ರೂರತೆಗಳಗೆ ಕಡಿವಾಣ ಹಾಕಲು ಯುದ್ಧ ಅನಿವಾರ್ಯವಾಯಿತು.ಬದ್ರ್ ಯುದ್ಧ ಕುರಿತು ಈಜಿಪ್ಟ್ ಇತಿಹಸ ಕಾರನಾ ಮುಹಮ್ಮದ್ ಹುಸೈನ್ ಹೈಕಲ್ ಬರೆದಿದ್ದೇನೆಂದರೆ.ಬದ್ರ್ ಯುದ್ಧ ಅರೇಬಿಯನ್ ಉಪ ದ್ವೀಪಗಳಲ್ಲಿ ಇಸ್ಲಮಿನ ಶಕ್ತಿ ವೃದ್ಧಿಸಿತು.ಬದ್ರ್ ವಿಜಯವು ವಿಶ್ವಕ್ಕೆ ಉದಾತ್ತವದ ಸಂಸ್ಕøತಿಯ ಹಾದಿಯನ್ನು ತೆರೆದಿಟ್ಟಿತು. ಇತರ ಧರ್ಮಗಳಲ್ಲೂ ಅನುವದನೀಯವಾಗಿರುವುದು ಕಾಣಬಹುದು.
            ಭಗವದ್ಗೀತೆ ಧರ್ಮ ಯುದ್ಧವನ್ನು ನಡೆಸಲು ಪ್ರೇರಣೆ ನೀಡುತ್ತಿದೆ. 18 ದಿನಗಳ ಕಾಲ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಧರ್ಮರಾಯ ಅಥವಾ ಯುಧಿಷ್ಠಿರನೊಂದಿಗೆ ಹುಸಿಯನ್ನು ನುಡಿಯಲು ಹೇಳಿ ಆ ಮೂಲಕ ಕುತಂತ್ರದೊಂದಿಗೆ ಕೌರವರನ್ನು ಕೊಲ್ಲಿಸಿದ್ದು ಧರ್ಮಯುದ್ದದಲ್ಲಾಗಿತ್ತು. ಸಹೋದರರಾದ ಕೌರವರೊಂದಿಗೆ ಯುದ್ಧ ಮಾಡಲು ಹಿಂಜರಿದ ಯುದ್ಧ ವೀರನಾದ ಅರ್ಜುನನನ್ನು ಯುದ್ಧಕ್ಕೆ ಪ್ರೇರೇಪಿಸಿದ್ದು ಸ್ವತಃ ದೇವರಾದ ಅರ್ಜುನನ ವಾಹನದ ವಾಹಕನಾದ ಕೃಷ್ಣನಾಗಿದ್ದನು. ಅರ್ಜುನನು ತನ್ನ ತಾಯಿಯ ಗರ್ಭದಿಂದಲೇ ಜನಿಸಿದ ಸೂರ್ಯದೇವರ ಮಗನಾದ ಕರ್ಣನನ್ನು ಕುತಂತ್ರದಿಂದ ವಧಿಸಿದ್ದು ಕೌರವರು ಪಾಂಡವರಿಗೆ ಬಗೆದ ದ್ರೋಹದ ಪ್ರತೀಕಾರವಾಗಿತ್ತು. ಪವಿತ್ರ ಇಸ್ಲಾಂ ನಡೆಸಿದ ಯುದ್ಧಗಳಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರವಾಗಿದೆ ಜೀವವನ್ನು ಕಳೆದು ಕೊಂಡಿರುವುದು. ಆದರೆ ಕುರುಕ್ಷೇತ್ರ ಯುದ್ಧದಲ್ಲಿ   ಲಕ್ಷದಷ್ಟು ಜನರು ಹತ್ಯೆಗೈಯ್ಯಲ್ಪಟ್ಟಿರುವುದು ಇಸ್ಲಾಮಿನ ಧರ್ಮ ಸಮರ ಹಾಗೂ ಹಿಂದೂ ಧರ್ಮ ಸಮರದ ನಡುವಿನ ವ್ಯತ್ಯಾಸವಾಗಿದೆ.
            ಇಸ್ಲಾಮಿನ ಎರಡನೇ ಖಲೀಫಾ ಉಮರ್(ರ.ಅ) ಕಾಲದಲ್ಲಿ ಮುಸ್ಲಿಮರು ಜೆರುಸಲೇಮನ್ನು ಅಧೀನಗೊಳಿಸಿ ಜೆರುಸಲೇಮಿಗೆ ಪ್ರವೇಶಿಸಿದ ಉಮರ್(ರ.ಅ)ರವರು ಒಡಂಬಡಿಕೆಗೆ ಸಹಿ ಹಾಕಿದರು.ಆ ಒಡಂಬಡಿಕೆಯು ಈ ರೀತಿ ಇತ್ತು “ಜೆರುಸೆಲೆಂನ ಜನರ ರಕ್ಷಣೆ ಸೊತ್ತುಗಳು,ಚರ್ಚುಗಳು,ಅವರ ಮಕ್ಕಳು ಮುಂತಾದವುಗಳಿಗೆಲ್ಲಾ ರಕ್ಷಣೆ ನೀಡಲಾಗುವುದು. ಅವರ ಚರ್ಚ್‍ಗಳನ್ನು ನಾಶ ಮಾಡುವುದು ಅಪಮಾನಿಸುವುದು ಇಲ್ಲ.ಇಲ್ಲಿ ಮುಸ್ಲಿಮರಿಗೆ ಜೆರುಸೆಲೆಂ ಅಧೀನಗೊಳಿಸಿ ಚರ್ಚ್‍ಗಳನ್ನು ನಾಶ ಪಡಿಸಿ ಇಸ್ಲಾಮಿಕ್ ರಾಜ್ಯವನ್ನು ಸೃಷ್ಟಿಸಬಹುದಿತ್ತು. ಆದರೆ,ಇಸ್ಲಾಂ ತನ್ನ ಪರಧರ್ಮ ಸಹಿಷ್ಣುತೆಯನ್ನು ಇಲ್ಲಿ ತೋರಿಸಿದೆ.
            ಮುಸ್ಲಿಮರ ವಿರುದ್ದ ಕ್ರೈಸ್ತರ ಧವರ್i ಯುದ್ಧ ಎಂದೇ ಕರೆಯಲ್ಪಡುವ ಶಿಲುಬೆ ಯುದ್ದವು ಕ್ರೈಸ್ತರು ಇಸ್ಲಾಮಿನ ನಿರ್ನಾಮಕ್ಕೆ ಮಾಡಿದ ಯುದ್ಧವೇ ಹೊರತು ಧರ್ಮ ಯುದ್ಧ ಅಲ್ಲ. ಜೆರುಸೆಲೆಂ ಯಹೂದಿಯರಿಗೂ,ಮುಸ್ಲಿಮರಿಗೂ ಪವಿತ್ರವಾದ ಸ್ಥಳವಾಗಿದೆ. ಇಸ್ಲಾಂ ಸಾಮ್ರಾಜ್ಯ ಸ್ಥಾಪನೆಯಾದದ್ದಿನಿಂದ ಯಹೂದಿಯರು,ಕ್ರೈಸ್ತರು ಮುಸ್ಲಿಮರ ಅತ್ಯಂತ ಪರಧರ್ಮ ಸಹಿಷ್ಣುತೆಯ ಸುಖನುಭವವನ್ನು ಪಡೆದರು.ಎಲ್ಲಾ ಪೌರ ಹಕ್ಕುಗಳು ಸೌಲಭ್ಯಗಳು ಇಸ್ಲಮಿಕ ಸಾಮಾಜ್ಯದಲ್ಲಿ ಕ್ರೈಸ್ತರಿಗೆ ದೊರೆಯುತ್ತಿತ್ತು. ಕ್ರೈಸ್ತರಲ್ಲಿದ್ದ ಅನೇಕ ಉಪ ಪಂಗಡಗಳ ಸಂಘರ್ಷಣೆಯನ್ನು ತಪ್ಪಿಸಿ ಒಡೆದು ಹೋಗದ ಹಾಗೆ ಮುಸ್ಲಿಮರೇ ನೋಡಿಕೊಂಡರು.ಇಷ್ಟೆಲ್ಲಾ ಅನುಕುಲತೆಗಳನ್ನು ಒದಗಿಸಿದು ಕೂಡಾ ಕ್ರೈಸ್ತರು ಮುಸ್ಲಿಮರನ್ನು ಜಿಗುಪ್ಸೆ ತಾತ್ಸಾರದಿಂದಲೇ ಕಣುತ್ತಿದ್ದರು.ವೈಪರೀತ್ಯ ತದನಂತರ ಫೆಲೆಸ್ತೀನ್ ತುರುಕರ ಅಧೀನಕ್ಕೆ ಬಂತು.ಆದರೂ ಯಾತ್ರಾರ್ಥಿಗಳಲ್ಲಿ ಸರಿಯಗಿ ನಡೆದು ಕೊಳ್ಳಲಿಲ್ಲ. ಮುಸ್ಲಿಂ ಯಾತ್ರಾರ್ಥಿಗಳನ್ನು ಕೂಡಾ ಹಿಂಸಿಸುತ್ತಿದ್ದರು. ಇದರಿಂದ ಮುಸ್ಲಿಮರೊಂದಿಗೆ ಮೊದಲೇ ವೈರುತ್ವ ಇದ್ದ ಫ್ರಾಂಕುಗಳು ಶುದ್ಧರಾದರು. ಆಗಿನ ಪೋಪರಾದ ಪೋಪ್ ಅರ್ಬನ್ 11 ಒಂದು ಸಭೆ ತೆರೆದು ಚರ್ಚಿಸಿ ಕ್ರಿ.ಶ 1095ರಲ್ಲಿ ತಾನೇ ಮೊಟ್ಟ ಮೊದಲು ಶಿಲುಭೆ ಯುದ್ಧ ನೇತೃತ್ವ ವಹಿಸಿದರು.ಶಿಲುಬೆ ಯುದ್ದದಲ್ಲಿ ಕ್ರೈಸ್ತರ ಕ್ರೂರತೆಯು ಎಷ್ಟರ ವರೆಗೆ ಎಂದರೆ ಕ್ರೂರತೆಯನ್ನು ಕಣ್ಣಾರೆ ಕಣಡ ರೈಮಂಡ್ ಅಗಿಲೆಸ್ ಹೇಳುತ್ತಾನೆ:ಮಸೀದಿಯ ಮೊಗಸಾಲೆಯಲ್ಲಿ ಮೊಣಕಲಿನವರೆಗೆ ರಕ್ತ ಗೋಚರಿಸುತ್ತಿತ್ತು.ಯುದ್ಧಕ್ಕೆ ವಿರಾಮ ಹಾಕಲ್ಪಟ್ಟದ್ದು ಅವರು ಅಭಿನಂದನ ಪ್ರಾರ್ಥನೆಗಗಿ ತೆರಳಿದಾಗ ಮಾತ್ರವಾಗಿತ್ತು. ಸುಮಾರು ಎರಡು ಲಕ್ಷಕ್ಕೂ ಮಿಕ್ಕ ಜನರನ್ನು ಕೊಂದ ಹೀಗೆ ನಡೆದ. ಶಿಲುಬೆ ಯುದ್ಧಗಳು ಕ್ರೈಸ್ತರ ಧರ್ಮ ಪಾಲಕರಾಗಿ ಪರಿಗಣಿಸಲ್ಪಡುವ ಫೋಪ್‍ರಿಂದಾಗಿದೆ.

ಭಯೋತ್ಪಾದನೆಯ ಕಾರಣಗಳು
1. ಬಡತನ
‘ಹಸಿದವನಿಗೆ ಅನ್ನ ನೀಡುವವನು ದೇವರಂತೆ ಕಾಣುವನು’ ಎಂಬ ಗಾಂಧೀಜಿಯವರ ನುಡಿ ಅಕ್ಷರಶಃ ಸತ್ಯ. ಭಯೋತ್ಪಾದನೆಯಲ್ಲಿ ನಿರತರಾದವರನ್ನು ಕೂಲಂಕಶವಾಗಿ ಅಧ್ಯಯನ ಮಾಡಿದಾಗ ನಿಜಕ್ಕೂ ಇದು ಬೆಳಕಿಗೆ ಬಂದಿದೆ.
2. ನಿರುದ್ಯೋಗ
ಕೆಲಸವಿಲ್ಲದವರೇ ಇಂತಹ ಕುಕೃತ್ಯಗಳಿಗೆ ಕೈಹಾಕುತ್ತಿದ್ದಾರೆಂಬುದು ನೂರಕ್ಕೆ ನೂರು ಸತ್ಯ. 
3. ಧರ್ಮಾಂಧತೆ
ಧರ್ಮಾಂಧತೆಯು ಭಯೋತ್ಪಾದನೆಯ ಪ್ರಮುಖ ಕಾರಣವಾಗಿದೆ. ಬಲಪಂಥೀಯ ಮೂಲಭೂತವಾದಿ ಸಂಘಟನೆಗಳು ಭಯೋತ್ಪಾದನೆಯ ವಾಹಕಗಳಾಗಿದ್ದಾರೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿದ್ದರೂ ಅದರ ಪ್ರಮುಖ ಕಾರಣ ಧರ್ಮವಲ್ಲ. ಧರ್ಮದ ಸಾರವನ್ನರಿಯದ ಧರ್ಮಾಂಧರು ಭಯೋತ್ಪಾದನಾ ಕೃತ್ಯಗಳ ರೂವಾರಿಗಳಾಗಿದ್ದಾರೆ. ಧರ್ಮಾಂಧ ಭಯೋತ್ಪಾದಕ ಸಂಘಟನೆಗಳಿಗೆ ಕೆಲವು ಉದಾಹರಣೆ: ಅಲ್ ಖಾಯಿದಾ, ಲಷ್ಕರ್, ಮೊಸ್ಸಾದ್, ಹಾಗೂ ಭಾರತದ ಹಿಂದೂ ಬಲಪಂಥೀಯ ಸಂಘಟನೆಗಳು
4. ಪ್ರಾಂತೀಯತೆ
ತಾವು ವಾಸಿಸುವ ಪ್ರದೇಶದ ಬಗ್ಗೆ ಇರುವ ಅಂಧವಾದ ಅಭಿಮಾನವು ಭಯೋತ್ಪಾದನೆಗೆ ದಾರಿ ತೋರಿದೆ. ಶ್ರೀಲಂಕಾದ ಎಲ್‍ಟಿಟಿಇಯ ರೌದ್ರನರ್ತನವು ಇದಕ್ಕೆ ಪ್ರಮುಖ ಉದಾಹರಣೆ.
5. ಅತಿ ರಾಷ್ಟ್ರೀಯತೆ
ನಾಝಿಯಂತಹ ವಿನಾಶಕಾರಿ ಸಂಘಟನೆಗಳು ಅತಿರಾಷ್ಟ್ರೀಯತೆಯ ಕಾರಣ ಹಲವಾರು ಜೀವವನ್ನು ತೆಗೆದಿರುವುದು 20ನೇ ಶತಮಾನದ ಚರಿತ್ರಾ ಪುಸ್ತಕಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
6. ಭಾಷಾ ಪ್ರೇಮ
ಅಸ್ಸಾಂನ ಉಲ್ಫಾ ಉಗ್ರರು ಭಾಷಾ ಪ್ರೇಮದ ಆಧಾರದಲ್ಲಿ ಹಿಂದಿ ಭಾಷಿಕರ ಮೇಲೆ ನಡೆಸುತ್ತಿರುವ ಧಾಳಿ ಇದಕ್ಕಿರುವ ಜ್ವಲಂತ ನಿದರ್ಶನವಾಗಿದೆ.
7. ಧಾರ್ಮಿಕ ಗ್ರಂಥಗಳ ದುವ್ರ್ಯಾಖ್ಯಾನ
ಧರ್ಮದ ನಿಜವಾದ ಸಾರವನ್ನು ತಿರುಚಿದ ಜಮಾಅತೇ ಇಸ್ಲಾಮಿಯಂತಹ ಸಂಘಟನೆಗಳು ಭಯೋತ್ಪಾದನೆಗೆ ಭಾರೀ ಉತ್ತೇಜನ ನೀಡಿದೆ
ಭಯೋತ್ಪಾದನೆಯ ಕರಿನೆರಳು: ಕೆಲವೊಂದು ನಿದರ್ಶನಗಳು
ಭಯೋತ್ಪಾದನಾ ಕೃತ್ಯಗಳು ಜಗತ್ತಿನ ನಾನಾ ಕಡೆಗಳಲ್ಲೂ ದಾಖಲಾಗಿದೆ. ಅಮೆರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಧಾಳಿ, ಸಿಂಹಳೀಯರ ಮೇಲಿನ ತಮಿಳು ಹುಲಿಗಳ ಕ್ರೌರ್ಯ, ಫೆಲೆಸ್ತೀನ್‍ನಲ್ಲಿ ಅಮಾಯಕ ಮುಸ್ಲಿಮರ ಮೇಲಿನ ಯಹೂದಿಗಳ ದಬ್ಬಾಳಿಕೆ, ಇರಾಖ್, ಅಫ್ಘನ್‍ನಲ್ಲಿ ಅಮೆರಿಕಾ ನೇತೃತ್ವದ ಪಡೆಗಳ ಮಾರಣಹೋಮ, ಭಾರತದಲ್ಲಿ ಕೇಸರಿ ಭಯೋತ್ಪಾದನೆ ಹಾಗೂ ಗೋ ಭಯೋತ್ಪಾದನೆ (ದೇವನೂರ ಮಹದೇವರು ಹೇಳಿದಂತೆ), ಮಧ್ಯಪ್ರಾಚ್ಯದಲ್ಲಿ ಅಲ್ ಖಾಯಿದಾ, ಐಸಿಸ್ ರೌದ್ರ ತಾಂಡವಗಳು ಭಯೋತ್ಪಾದನೆಯ ಕೆಲವು ನಿದರ್ಶನಗಳಾಗಿವೆ.
ಭಯೋತ್ಪಾದನೆ ಧರ್ಮೀಯವೇ?, ಇಸ್ಲಾಮಿನ ಗುತ್ತಿಗೆಯೇ?
ಭಯೋತ್ಪಾದನೆಯು ಜಾಗತಿಕವಾದ ಮಾನವ ಪೀಡೆಗಳಲ್ಲೊಂದಾಗಿದೆ. ಅದನ್ನು ಮಟ್ಟ ಹಾಕಲು ಸಾಧ್ಯವಿಲ್ಲವೆನ್ನುವ ಮಟ್ಟಿಗೆ ಅದು ಬೆಳೆದು ನಿಂತಿದೆ. ಮತೀಯತೆ, ಪ್ರಾಂತೀಯತೆ, ವಂಶೀಯ ದುರಭಿಮಾನ, ಅತಿರಾಷ್ಟ್ರೀಯತೆ, ಭಾಷಾಪ್ರೇಮಗಳು ಭಯೋತ್ಪಾದನೆಯ ಪ್ರಮುಖ ಕಾರಣಗಳಾಗಿವೆ. ಆದರೆ ಆಧುನಿಕ ಯುಗದಲ್ಲಿ ಭಯೋತ್ಪದನೆಯನ್ನು ಒಂದು ಧರ್ಮದ ಗುತ್ತಿಗೆಯಾಗಿ ಬಿಂಬಿಸುತ್ತಿರುವುದನ್ನು ಕಾಣಬಹುದು. ನಿಜಕ್ಕೂ ಭಯೋತ್ಪದನೆಗೆ ಧರ್ಮವಿದೆಯೇ?. ಧರ್ಮಗಳು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆಯೇ?. ಧರ್ಮಗಳ ನಿಜವಾದ ಸಾರವು ಭಯೋತ್ಪಾದನೆಯಾಗಿರಬಹುದೇ? ಎಂಬುದನ್ನು ನಾವು ಕೂಲಂಕಷವಾಗಿ ವಿಶ್ಲೇಷಿಸಬೇಕಾಗಿದೆ.
        ವಾಸ್ತವದಲ್ಲಿ ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಅಥವಾ ಅದು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಂಡಿಲ್ಲ. ಅಥವಾ ಯಾವುದೇ ಧರ್ಮಾನುಯಾಯಿಗಳನ್ನು ಅದು ಗುರಿ ಮಾಡಿಕೊಂಡಿಲ್ಲ. ಮತೀಯ ಭಯೋತ್ಪದನೆಗಳು ಮಾತ್ರ (ಅದು ಆಯಾ ಧರ್ಮದ ಸಾರವಾಗಿರದಿದ್ದರೂ) ಇನ್ನೊಂದು ಧರ್ಮವನ್ನು, ಅ ಧರ್ಮದ ಅನುಯಯಿಗಳನ್ನು ಗುರಿ ಮಾಡಿಕೊಂಡಿದೆ ಎನ್ನಬಹುದು. ಭಯೋತ್ಪದನೆಗೆ ಧರ್ಮವಿಲ್ಲ, ಅದು ಅನ್ಯ ಧರ್ಮಗಳನ್ನು ಗುರಿ ಮಾಡಿಕೊಂಡಿಲ್ಲ ಎನ್ನಲು ಕಾರಣ, ಧರ್ಮವೆಂದರೆ ಜೀವನದಲ್ಲಿ ಅತ್ಯುತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಶಾಂತಿಯುತವಾಗಿ ಜೀವಿಸುವುದು ಎಂದಾಗಿದೆ. ಸದಾಚಾರ ಮೌಲ್ಯಗಳೇ ಧರ್ಮದ ಸಾರ. ಇದಕ್ಕೆ ತದ್ವಿರುದ್ಧವಾದ ಜೀವನವು ಅಧರ್ಮವಾಗುತ್ತದೆ. ಭಯೋತ್ಪಾದನೆ ಹಾಗೂ ಧರ್ಮ ಎಂಬ ಎರಡು ಶಬ್ದಗಳಿಗೆ ವಾಸ್ತವದಲ್ಲಿ ಯಾವುದೇ ಸಂಬಂಧವಿರದಿದ್ದರೂ ಕೆಲವು ವಿಕೃತ ಮತಾಂಧರ ತಿಕ್ಕಲುತನದ ಕಾರಣದಿಂದ ಇವೆರಡು ಶಬ್ದಗಳು ಪರಸ್ಪರ ಪರ್ಯಾಯ ಪದಗಳಾಗಿ ರೂಪುಗೊಂಡಿರುವುದು ಆತಂಕಕಾರಿಯಾಗಿದೆ. ಪ್ರಖರ ಮತಾಂಧvಯು ಇದರ ಪ್ರಮುಖ ಕಾರಣವಾಗಿದೆÉ. ಸ್ವಾಮೀ ವಿವೇಕಾನಂದರು ಮೌಢ್ಯ ಶ್ರದ್ಧೆಗಳು ಹಾಗೂ ಪ್ರಖರ ಮತಾಂಧತೆಯ ಕುರಿತು ಎಚ್ಚರಿಕೆ ನೀಡಿದ್ದರು.
    ಪ್ರತಿಯೊಂದು ಧರ್ಮವೂ ಆ ಧರ್ಮದ ಅನುಯಾಯಿಗಳನ್ನು ಗೌರವಿಸುವಂತೆಯೇ ಅನ್ಯಧರ್ಮಗಳ ಅನುಯಾಯಿಗಳನ್ನು ಗೌರವಿಸಲು ಕರೆ ನೀಡುತ್ತದೆ. ಎಲ್ಲಾ ಧರ್ಮಗಳೂ ಸಹಿಷ್ಣುತೆಯನ್ನು ಬೋಧಿಸುತ್ತದೆ. ಅಸಹಿಷ್ಣುತೆಯನ್ನು ಯಾವುದೇ ಧರ್ಮವೂ ಪ್ರೋತ್ಸಾಹಿಸುವುದಿಲ್ಲ. ಹಾಗಿದ್ದರೂ ಭಯೋತ್ಪಾದನೆಗೆ ಧರ್ಮದ ಬಣ್ಣ ಬಳಿಯುತ್ತಿರುವುದು ದುಃಖಕರವಾಗಿದೆ. ಭಾರತದಂತಹ ದೇಶದಲ್ಲೂ ಕೋಮು ಭಾವನೆಗಳು ಮತೀಯ ಭಯೋತ್ಪಾದನೆಯನ್ನು ಹುಟ್ಟು ಹಾಕುತ್ತಿದೆ. ಭಾಷಾ ಪ್ರೇಮ, ಪ್ರಾಂತಿಯತೆಯ ಭಯೋತ್ಪಾದನೆಗಳು ಭಾರತವನ್ನು ಬೆಂಬಿಡದೆ ಕಾಡುತ್ತಿದೆ. ಎಲ್ಲಾ ಧರ್ಮಗಳೂ ಸಹಿಷ್ಣುತೆಯಿಂದ ಬಾಳಿ ಬದುಕಬೇಕಾಗಿದ್ದ ಭಾರತದಲ್ಲಿ ಮತೀಯ ಘರ್ಷಣೆಗಳು ಹಾಗೂ ಭಯೋತ್ಪಾದನೆಗಳು ಖಂಡಿತವಾಗಿಯೂ ಮಹಾ ಅಪರಾಧ ಎಂದರೆ ಅತಿಶಯೋಕ್ತಿಯಾಗಲಾರದು. ಕೆಲವು ಬಲಪಂಥೀಯ ಹಿಂದೂ, ಕ್ರೈಸ್ತ ಸಂಘಟನೆಗಳು, ಮುಸ್ಲಿಂ ಮೂಲಭೂತವಾದಿಗಳು (ವಹ್ಹಾಬಿಸಂ) ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಧರ್ಮಗಳ ಮೇಲೆ ಗೂಬೆ ಕೂರಿಸಿಕೊಳ್ಳುತ್ತಿವೆ.
        ಧರ್ಮಗಳೇನು ಸಾರುತ್ತವೆ?
ಇಂದು ಭಯೋತ್ಪಾದನೆಯ ವಿಚಾರದಲ್ಲಿ ಜಾಗತಿಕವಾಗಿ ಇಸ್ಲಾಂ ಧರ್ಮವು ಅಪರಾಧಿ ಸ್ಥಾನದಲ್ಲಿ ನಿಂತಿದೆ. ಅಮೆರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಧಾಳಿ ಬಳಿಕ ಇಸ್ಲಾಮನ್ನು ಭಯೋತ್ಪಾದನೆಯ ವಿಚಾರದಲ್ಲಿ ತೀವ್ರವಾಗಿ ವಿಚಾರಣೆಗೈಯ್ಯಲಾಗುತ್ತಿದೆ. ಒಸಾಮಾ ಬಿನ್ ಲಾಡೆನ್‍ನಂತಹ ನಾಮಧಾರಿ ಮುಸ್ಲಿಂ ಮತಾಂಧರ ತಿಕ್ಕಲುತನವು ಇಸ್ಲಾಮನ್ನು ತಲೆತಗ್ಗಿಸುವಂತೆ ಮಾಡಿದೆ. ನಿಜಕ್ಕೂ ಇಸ್ಲಾ ಧರ್ಮವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆಯೇ? ಇಸ್ಲಾಂ ಅಸಹಿಷ್ಣುತೆಯ ಧರ್ಮವೇ? ಎಂಬುದನ್ನು ನಾವು ತಿಳಿದಿರಬೇಕು. ಪ್ರವಾದಿ ಮೊಹಮ್ಮದರು “ನಿನ್ನ ನೆರೆಹೊರೆಯವನು ಯಾವೂದೇ ಧರ್ಮೀಯನಾಗಿರಲಿ, ನೀನು ಆತನನ್ನು ಗೌರವಿಸು” ಎಮದು ತಮ್ಮ ಅನುಯಯಿಗಳಿಗೆ ಕರೆ ನೀಡುತ್ತಾರೆ. “ನೀವು ಭೂಮಿಯಲ್ಲಿರುವವರಿಗೆ ದಯೆ ತೋರಿದರೆ ಪರಮಾತ್ಮನು ನಿಮಗೆ ದಯೆ ತೋರುವನು” ಎಂದು ಅವರು ಹೇಳುತ್ತಾರೆ. ಪ್ರವಾದಿ ಮೊಹಮ್ಮದರಾಗಲೀ, ಖುರಾನ್ ಗ್ರಂಥವಾಗಲೀ ಅಶಾಂತಿ, ಹಿಂಸೆ, ಅಕ್ರಮಗಳನ್ನು ಪ್ರೋತ್ಸಾಹಿಸಿಲ್ಲ. ಇಂದು ಜಿಹಾದ್ ಎಂಬ ಪದವು ದುವ್ರ್ಯಾಖ್ಯಾನಕ್ಕೊಳಗಾಗಿರುವುದರಿಂದ ಇಸ್ಲಾಂ ಅಶಾಂತಿಯ ಧರ್ಮವೆಂದೇ ಅಪಖ್ಯಾತಿಗೊಳಗಾಗಿದೆ. ಅನ್ಯ ಧರ್ಮಗಳ ಮೇಲಿನ ಯುದ್ಧವನ್ನು ಜಿಹಾದ್ ಎನ್ನಲಾಗದು. ಕೆಡುಕಿನ ವಿರುದ್ಧ ಯುಧ್ಧ ಸಾರುವುದನ್ನು ಜಿಹಾದ್ ಎನ್ನಬಹುದು.  ಜಿಹಾದ್ ಎಂದರೆ ಅನ್ಯ ಧರ್ಮಗಳ ಮೇಲಿನ ಯುದ್ಧ ಎಂದು (ಖುರಾನ್ ದುವ್ರ್ಯಾಖ್ಯಾನ ಮಾಡಿ) ಘಂಟಾಘೋಷವಾಗಿ ಸಾರುವ ವಹ್ಹಾಬಿ ಅಥವಾ ಸಲಫೀ ಮೂಲಭೂತವಾದಿಗಳು ಇಸ್ಲಾಮಿನ ಹೆಸರನ್ನು ಕೆಡಿಸಿದ್ದಾರೆ. ಜಾಗತಿಕವಾಗಿ ಸುನ್ನೀ-ಶಯಾ ಎಂಬೀ ಎರಡು ವಿಭಾಗಗಳಾಗಿ ಇಸ್ಲಾಮನ್ನು ವರ್ಗೀಕರಿಸಲಾಗುತ್ತಿದೆ. ಶಿಯಾಯೇತರರು ಸುನ್ನಿಗಳೆಂದೇ ಗುರ್ತಿಸಿಕೊಳ್ಳುತ್ತಿರುವುದರಿಂದ ವಹ್ಹಾಬಿಗಳನ್ನೂ ಸುನ್ನೀಗಳೆಂದೇ ಪರಿಚಯಿಸಲಾಗುತ್ತಿದೆ. ನೈಜ ಸುನ್ನಿಗಳಾದ ಸೂಫಿ ಪಂಥದವರು ಶಾಂತಿಯನ್ನು ಬಯಸುವವರೂ ಸಹಿಷ್ಣುಗಳೂ ಆಗಿದ್ದಾರೆ. ಸೂಫಿಸಂ ಇಸ್ಲಾಮಿನ ನೈಜ ಆದರ್ಶವೂ ಆಗಿದೆ. ಆದರೆ ವಿಕೃತ ಚಿಂತನೆಗಳ ಸಂಗಮವಾದ ವಹ್ಹಾಬಿಸಂ (ಜಮಾಅತೇ ಇಸ್ಲಾಮಿ, ಮುಸ್ಲಿಂ ಬ್ರದರ್‍ಹುಡ್, ಅಲ್ ಖಾಯಿದಾ ಹಾಗೂ ಎಲ್ಲಾ ಉಗ್ರ ಸಂಘಟನೆಗಳು ವಹ್ಹಾಬಿಸಂನ ಶಾಖೆಗಳಾಗಿವೆ) ಮತಾಂಧರ ಗೂಡಾಗಿದೆ. ಖುರಾನನ್ನು ದುವ್ರ್ಯಾಖ್ಯಾನ ಮಾಡಿದ ಈ ಚಿಂತನೆಗಳು ಲೋಕದೆಲ್ಲೆಡೆ ಅಶಾಂತಿಗೆ ಕಾರಣವಾಗುತ್ತಿದೆ. ಸಹೃದಯಿಗಳಾದ ಕಾಶ್ಮೀರಿ ಯುವಕರನ್ನು ಉಗ್ರವಾದಿಗಳಾಗಿ ಮಾಡುವಲ್ಲಿ ಈ ಚಿಂತನೆಗಳು ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಇತ್ತೀಚೆಗೆ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದಾಗÀ ಅರ್ಥೈಸಿಕೊಂಡೆನು. ಪ್ರತ್ಯೇಕತಾವಾದಿಗಳಾದ ಸೈಯದ್ ಅಲೀಶಾ ಗೀಲಾನಿ, ಯಾಸೀನ್‍ಮಲಿಕ್ ಮುಂತಾದವರು ವಹ್ಹಾಬಿಗಳಾಗಿದ್ದಾರೆ. ಇಂಡೋ ಪಾಕ್ ವಿಭಜನೆ ಹಾಗೂ ತರುವಾಯ ನಡೆದ ಕೋಮು ಘರ್ಷಣೆಗಳಲ್ಲೂ ಈ ಚಿಂತನೆಗಳು ಬಹುದೊಡ್ಡ ಪತ್ರ ವಹಿಸಿದೆ. ಭಾರತದಲ್ಲಿ ಹಿಂದೂ ಮುಸ್ಲಿಂ ಅನೈಕ್ಯತೆಗಾಗಿ ಬ್ರಿಟಿಷರು ಸೌದಿಯಲ್ಲಿ ಜನ್ಮ ತಾಳಿದ ವಹ್ಹಾಬಿಸಂನ್ನು ಬಳಸಿಕೊಂಡಿದ್ದರು. ವಾಸ್ತವದಲ್ಲಿ ಇಸ್ಲಾಮಿನ ಪ್ರಚಾರವು ಖಾಜಾ ಮೊಯಿನುದ್ದೀನರಂತಹ ಸೂಫಿ ಸಂತರ ಶಾಂತಿಮಂತ್ರದಿಂದ ಸಾಧ್ಯವಾಗಿತ್ತೇ ಹೊರತು ವಹ್ಹಾಬಿಗಳ ಭೀಭತ್ಸ ಕೃತ್ಯಗಳಿಂದಲ್ಲ.
    ಇನ್ನು ಹಿಂದೂ ಧರ್ಮವು ಉತ್ಕøಷ್ಟವಾದ ಸಹಿಷ್ಣುತೆಯನ್ನು ಪ್ರೋತ್ಸಾಹಿಸುತ್ತದೆ. ಪರಧರ್ಮ ಸಹಿಷ್ಣುತೆಯು ಹಿಂದೂ ಧರ್ಮದ ಪ್ರಧಾನ ಸಾರವಾಗಿದೆ. ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಇದನ್ನು ಸಾರಿದ್ದರು. ಹಿಂದೂ ಧರ್ಮದಲ್ಲಿ ಧರ್ಮಗಳ ನಡುವಿನ ಯುದ್ದವು ಸಮ್ಮತಾರ್ಹವಲ್ಲ. ಕೆಡುಕಿನ ವಿರುದ್ಧ ಯುದ್ದವನ್ನು ಪಾರ್ಥ ಅರ್ಜುನನಿಗೆ ಪಾರ್ಥಸಾರಥಿ ಕೃಷ್ಣನು ಕಲಿಸಿಕೊಡುವುದು ಮಹಾಭಾರತದ ಶ್ಲೋಕಗಳಲ್ಲಿ ವ್ಯಕ್ತವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಭರತಖಂಡಕ್ಕೆ ಯಾವುದೇ ಮತೀಯನು ಬಂದಾಗಲೂ ಇಲ್ಲಿನ ಹಿಂದೂಗಳು ಅವರನ್ನು ಪ್ರೀತ್ಯಾದರಗಳಿಂದ ಬರಮಾಡಿಕೊಂಡಿದ್ದರು. ಪ್ರವಾಸಿಗಳಾದ ಹ್ಯುಯೆನ್ ತ್ಸಾಂಗ್, ಸುಲೇಮಾನ್, ಅಬ್ದುರಝಾಕ್‍ರಂತಹ ಅನ್ಯಧರ್ಮೀಯರು ಹಿಂದುಗಳ ಆತಿಥ್ಯವನ್ನು ಅನುಭವಿಸಿದವರಾಗಿದ್ದರು. 7ನೆ ಶತಮಾನದಲ್ಲಿ ಅರಬ್ ನಾಡಿನಂದ ಕೇರಳಕ್ಕೆ ಬಂದ ಮುಸ್ಲಿಮರನ್ನು ಅಲ್ಲಿನ ಹಿಂದುಗಳು ಸಿಯಾಳ ನೀಡಿ ಸತ್ಕರಿಸಿ ತಮ್ಮ ಮನೆ ಮಠಗಳನ್ನು ಅವರಿಗೆ ಬಿಟ್ಟು ಕೊಟ್ಟದ್ದಾಗಿ ಮಲಬಾರ್‍ನ ಐತಿಹ್ಯ ಗ್ರಂಥಗಳಲ್ಲಿ ಉಲ್ಲೇಖಗಳಿವೆ. 19ನೇ ಶತಮಾನದವರೆಗೂ ಭಾರತದಲ್ಲಿ ಹಿಂದು ಮುಸ್ಲಿಮರು ಪರಸ್ಪರ ಐಕ್ಯತೆಯಿಂದ ಜೀವನ ಸವೆಸಿದ್ದರು. ಇಲ್ಲಿನ ಹಿಂದೂ ರಾಜರು ಹಾಗೂ ಮುಸ್ಲಿಂ ಬಾದಶಹರ ನಡುವಿನ ಯುದ್ಧಗಳು ಸಾಮ್ರಾಜ್ಯಶಾಹಿತ್ವದ ಭಾಗವಾಗಿತ್ತೇ ಹೊರತು ಅವು ಧರ್ಮಯುದ್ಧಗಳಾಗಿರಲಿಲ್ಲ. ಆದರೆ ಕೆಲವು ಬ್ರಿಟಿಷ್ ಪ್ರಭಾವಿತ ಇತಿಹಾಸಕಾರರು ಅದನ್ನು ಹಿಂದು ಮುಸ್ಲಿಂ ಯುದ್ದಗಳಾಗಿ ಚಿತ್ರೀಕರಿಸಿ ಇತಿಹಾಸದ ವಸ್ತುನಿಷ್ಠೆಗೆ ಅಪಚಾರವೆಸಗಿದರು. ಮುಸ್ಲಿಂ ರಾಜರ ಆಸ್ಥಾನ ಹಾಗೂ ಸಾಮ್ರಾಜ್ಯಗಳಲ್ಲಿ ಹಿಂದೂಗಳು ಸುಭಿಕ್ಷೆಯಿಂದ ಜೀವಿಸಿದ್ದರು. ಹಿಂದು ರಾಜರ ಆಸ್ಥಾನ ಹಾಗು ಸಾಮ್ರಾಜ್ಯಗಳಲ್ಲಿ ಮುಸ್ಲಿಮರ ಸ್ಥಿತಿಯು ತಥೈವವಾಗಿತ್ತು. ಶಿವಾಜಿ, ಅಕ್ಬರ್, ಇಬ್ರಾಹಿಂ ಆದಿಲ್ ಶಾರಂತಹ ರಾಜರ ಆಸ್ಥಾನದಲ್ಲಿದ್ದ ಧಾರ್ಮಿಕ ಸೌಹಾರ್ದತೆಯು ಪ್ರಶಂಸನೀಯವಾಗಿದೆ. ತದನಂತರ ಭಾರತಕ್ಕೆ ಬಂದ ಬ್ರಿಟಿಷರು ಇಲ್ಲಿ ಧರ್ಮಗಳ ನಡುವೆ ಕಂದಕಗಳನ್ನು ಸೃಷ್ಟಿಸಿದರು. 20ನೇ ಶತಮಾನದಲ್ಲಿ ಸಾವರ್ಕರರ ಪ್ರಖರ ಹಿಮದುತ್ವ ಚಿಂತನೆಗಳು ತೀವ್ರವಾಗತೊಡಗಿ ಹಿಂದೂ ಮುಸ್ಲಿಂ ಐಕ್ಯತೆಯು ಹುಳಿ ಹಿಂಡಲ್ಪಡತೊಡಗಿತು. ಏಕೋದರ ಸಹೋದರರಂತಿದ್ದ ಹಿಂದೂ ಮುಸ್ಲಿಮರು ಪರಸ್ಪರ ಕಚ್ಚಾಡತೊಡಗಿದರು. ಇನ್ನು ಮುಸ್ಲಿಂ ಲೀಗ್‍ನ ಅತ್ಯುಗ್ರ ನಾಯಕ ಜಿನ್ನಾ ಮುಂದಿರಿಸಿದ ಇಂಡೋ ಪಾಕ್ ವಿಭಜನೆಯು ಕೋಮುಕಾಂಡಕ್ಕೆ ವೇದಿಕೆಯೊದಗಿಸಿತು. ಬ್ರಿಟೀಷರು ಹಿಂದು ಮುಸ್ಲಿಂ ಅನೈಕ್ಯತೆಗಾಗಿ ಭಾರತ ಪಾಕ್ ವಿಭಜನೆಯನ್ನು ದಾಳವಾಗಿ ಬಳಸಿದರು.
    ಇನ್ನು ಕ್ರೈಸ್ತ ಧರ್ಮವು ಶಾಂತಿಯ ಧರ್ಮವಾಗಿದೆ. ಜೀಸಸ್ ಓರ್ವ ಶಾಂತಿಮಂತ್ರ ವಾಹಕರಾಗಿದ್ದರು. ಅವರು ಶಾಂತಿಗಾಗಿ ಸದಾಕಾಲ ಬೋಧನೆಯನ್ನು ನಡೆಸಿದರು. ಅಹಿಂಸೆ ಶಾಂತಿಯು ಅವರ ಪ್ರಭೋದನೆಯ ಪ್ರಧಾನ ಅಂಶವಾಗಿತ್ತು. ಕ್ರೈಸ್ತ ಧರ್ಮವು ಭಯೋತ್ಪಾದನೆಯನ್ನು ಎಂದಿಗೂ ಪ್ರೋತ್ಸಾಹಿಸಿಲ್ಲ. ಹಾಗಿದ್ದರೂ ಕ್ರೈಸ್ತರು ಅನ್ಯಧರ್ಮೀಯರ ವಿರುದ್ದ ಕೆಂಡಕಾರಲು ಪ್ರಮುಕ ಕಾರಣವೇನೇಂದರೆ, ಯುರೋಪ್ ರಾಜರನ್ನು ಬರೀ ಕೈಸನ್ನೆಗಳ ಮೂಲಕವೇ ಆಳುತ್ತಿದ್ದ ಮತಾಂಧ ಕ್ರೈಸ್ತ ಧರ್ಮ ಗುರುಗಳಾಗಿದ್ದರು. ಕ್ರೈಸ್ತ ಪುರೋಹಿತರ ಕುಮ್ಮಕ್ಕಿನ ಮೇರೆಗೆ ಸುಮಾರು 10 ಬಾರಿ ಕ್ರೈಸ್ತ ರಾಜರು ಮಧ್ಯಪ್ರಾಚ್ಯದಲ್ಲಿ ಧರ್ಮಯುದ್ಧವನ್ನೇ (ಛಿಡಿusಚಿಜes)ನಡೆಸಿದ್ದರು. ಕಾನ್ಸ್ಟಾಂಟಿನೋಪಲ್‍ನ ಆಕ್ರಮಣ ಬಳಿಕ ವಿಶ್ವದ ವಿವಿಧ ಭಾಗಗಳಿಗೆ ತೆರಳಿದ ಐರೋಪ್ಯರು ತಮ್ಮ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಅಲ್ಲೆಲ್ಲಾ ಕ್ರೈಸ್ತರ ಮತಾಂಧ ಗುಂಪುಗಳು ಕಾಲಿಟ್ಟವು. ಭಾರತದಂತಹ ರಾಷ್ಟ್ರಗಳನ್ನು ಸುಲಭವಾಗಿ ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ಅಲ್ಲಿ ಕೋಮುಕಾಂಡವನ್ನು ಸೃಷ್ಟಿಸಬೇಕೆಂಬುದನ್ನರಿತು ಕ್ರೈಸ್ತರು ಹಿಂದೂ ಮುಸ್ಲಿಂ ಅನೈಕ್ಯತೆಗೆ ನಾಂದಿ ಹಾಡಿದರು.
    ಬೌದ್ಧ ಹಾಗೂ ಜೈನ ಧರ್ಮಗಳು ಕೂಡಾ ಶಾಂತಿಯ ಧರ್ಮಗಳಾಗಿವೆ. ಬುದ್ಧ ಮಹಾವೀರರು ಒಂದು ಹುಳವನ್ನೂ ಹಿಂಸಿಸದ ವ್ಯಕ್ತಿಗಳಾಗಿದ್ದರು. ಬೌದ್ಧ ಧರ್ಮದ ಶಾಂತಿಮಂತ್ರದಿಂದ ಪ್ರೇರಿತನಾಗಿ ಅಶೋಕ ಚಕ್ರವರ್ತಿಯು ಆ ಧರ್ಮದ ಅನುಯಾಯಿಯಾಗಿಬಿಟ್ಟನು. ಆದರೆ ಇಂದು ಮಯನ್ಮಾರ್‍ನಲ್ಲಿ ಬಲಪಂಥೀಯ ಬೌದ್ಧರು ಅನ್ಯಧರ್ಮೀಯರ ಮೇಲೆ ಕ್ರೂರವಾಗಿ ಎರಗುವುದನ್ನು ಕಾಣಬಹುದು. ಗುರುನಾನಕರ ಧರ್ಮವು ಅಪಾರ ಸಹಿಷ್ಣುತಾ ಭಾವವನ್ನು ಹೊಂದಿದೆ. ಎಲ್ಲಾ ಧರ್ಮಗಳನ್ನೂ ಅವರ ಧರ್ಮಾನುಯಾಯಿಗಳು ಒಂದೇ ಕಣ್ಣಿನಿಂದ ಕಾಣುತ್ತಿದ್ದಾರೆ. ಬಾಬಾ ಫರೀದ್, ಮೀರ್ ಮಿಯಾರಂತಹ ಮುಸ್ಲಿಂ ಸಂತರೂ ಕೂಡಾ ಸಿಖ್ ಧರ್ಮಗುರುಗಳೊಂದಿಗೆ ನಿಕಟ ಸಂಬಂಧವನ್ನಿಟ್ಟುಕೊಂಡಿದ್ದರು. ಈಗಲೂ ಸಿಖ್ ಆರಾಧನಾಲಯಗಳಿಗೆ ಯಾವುದೇ ಧರ್ಮೀಯನಿಗೂ ಮುಕ್ತ ಪ್ರವೇಶಗಳನ್ನು ಕಲ್ಪಿಸಲಾಗುತ್ತಿದೆ. ಧರ್ಮದ ವಿಚಾರದಲ್ಲಿ ಅವರು ಭೇದಭಾವ ತೋರುತ್ತಿಲ್ಲ.
    ಮತ-ಧರ್ಮಗಳು ಸದಾಚಾರ ಮೌಲ್ಯಗಳಿಗೇ ಒತ್ತು ನೀಡಿದೆ. ಆಧರೆ ವೇದಗ್ರಂಥಗಳನ್ನು ದುವ್ರ್ಯಾಖ್ಯಾನ ಮಾಡಿದ ಹಾಗೂ ಅದರ ಸಾರವನ್ನು ತಿರುಚಿದ ಫಲವಾಗಿ ಇಂದು ಮಾನವರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ. ಧರ್ಮವೇನೆಂದರಿಯದ ಜನ ಧರ್ಮವನ್ನು ಕೈಗೆತ್ತಿಕೊಂಡರೆ ಇಂತಹ ದುಷ್ಪರಿಣಾಮಗಳು ಸಂಭವಿಸುತ್ತದೆ. ಧರ್ಮಗಳು ಕಚ್ಚಾಟದ ವಸ್ತುವಾಗಬಾರದು. ಧರ್ಮದ ಹೆಸರನ್ನು ಮುಂದಿರಿಸಿ ಧರ್ಮವನ್ನು ಕೀಳಾಗಿ ಚಿತ್ರೀಕರಿಸುವವರ ವಿರುದ್ಧ ನಾವು ಜಿಹಾದ್ ನಡೆಸಬೇಕಾಗಿದೆ. ಧರ್ಮಗಳ ನಿಜವಾದ ಸಾರವನ್ನು ಜನಮನ ಮುಟ್ಟಿಸುವ ಕರ್ತವ್ಯ ಪ್ರಜ್ಞಾವಂತರ ಮೇಲಿದೆ. ಕೆಟ್ಟವರ ಕೆಟ್ಟ ಕೃತ್ಯಗಳು ಇಲ್ಲಿ ತಾಂಡವವಾಡದಂತೆ ತಡೆಯುವುದು ನಮ್ಮ ಕರ್ತವ್ಯವಾಗಿದೆ.

Comments

Post a Comment