ಸಿಂಹಳದಲ್ಲೊಂದು ಯಾತ್ರಾನುಭವ
ನೂರುದ್ದೀನ್ ನೂರಾನಿ
ಅನು: ಎಪಿಎಂ ಶಮೀರ್
ವಿಭಿನ್ನ ಸಾಂಸ್ಕøತಿಕ ಭೌಗೋಳಿಕ ವಾತಾವರಣಗಳಲ್ಲಿ ಇಸ್ಲಾಮಿನ ಹಾಗೂ ಮುಸ್ಲಿಮರ ಜೀವನ ಹೇಗೆ ಎಂಬುದನ್ನರಿಯಲು ರಂಗಕ್ಕಿಳಿದ ಪೂನೂರ್ ಮದೀನತುನ್ನೂರ್‍ನ ಸಂಘದೊಂದಿಗೆ ಮೊದಲ ಬಾರಿ ಶ್ರೀಲಂಕಾ ಪ್ರಯಾಣ ಬೆಳೆಸಿದೆವು. ವಿಭಿನ್ನ ಸಾಮೂಹಿಕ ಸ್ತರಗಳಲ್ಲಿ ಜೀವಿಸುವ ಮುಸ್ಲಿಮರಿಗೆ ತಮ್ಮ ವಿಶ್ವಾಸ ಹಾಗೂ ಪರಂಪರೆಯೊಂದಿಗಿರುವ ಸಾಮೂಹಿಕ ವಹಿವಾಟುಗಳೊಂದಿಗೆ ಅದೆಷ್ಟು ಬೆಸೆದುಕೊಂಡಿದ್ದಾರೆಂಬುದು ಸಂಶೋಧನಾ ವಿಷಯವಾಗಿದೆಯಲ್ಲವೇ?
ಶ್ರೀಲಂಕಾದ ರಾಜಧಾನಿ ಕೊಲಂಬೋದಿಂದ 100 ಮೀಟರ್ ದೂರದಲ್ಲಿ ಬೀರುವಲ ಎಂಬ ಪ್ರದೇಶವಿದೆ. ಅದು ಅಲ್ಲಿನ ಪ್ರಮುಖ ಮುಸ್ಲಿಂ ಜನಸಾಂದ್ರ ಪ್ರದೇಶವಾಗಿದೆ. ದ್ವೀಪರಾಷ್ಟ್ರದ ಪಶ್ಚಿಮ ಪ್ರಾಂತ್ಯದ ಕಾಲಿತ್ರ ಜಿಲ್ಲೆಯ ಬೀರುವಲ ಎಂಬಲ್ಲಿಗೆ ಮೊದಲ ಬಾರಿ 8ನೇ ಶತಮಾನದಲ್ಲಿ ಮುಸ್ಲಿಮರು ಬರುತ್ತಾರೆ. ಅರಬ್ ವರ್ತಕರೊಂದಿಗೆ ಬಂದ ಯಮನಿನ ಹಳರಮೌತಿನ ಸಾದಾತ್ಗಳು ಹಾಗೂ ಸೂಫಿಗಳು ಇಲ್ಲಿ ಇಸ್ಲಾಮಿಕ ಸಂಸ್ಕøತಿಗೆ ಶಿಲಾಸ್ಥಾಪನೆಗೈಯ್ಯುತ್ತಾರೆ. ಬೀರುವಲದ ಕೆಚ್ಚಿಮಲಯಲ್ಲಿ ಅವರು ದ್ವೀಪರಾಷ್ಟ್ರದ ಮೊದಲ ಮಸೀದಿಗೆ ಶಿಲಾಸ್ಥಾಪನಗೈಯ್ಯುತ್ತಾರೆ. ಈ ಮಸೀದಿ ಕೇಂದ್ರವಾಗಿಸಿ ತರುವಾಯ ಪಚ್ಚೆಹರಳಿನ ದ್ವೀಪದಲ್ಲಿ ಇಸ್ಲಾಂ ತ್ವರಿತಗತಿಯಲ್ಲಿ ಬೆಳೆಯಿತು.
ಕರಾವಳಿ ಪ್ರದೇಶವಾಗಿರುವುದರಿಂದ ಬೀರುವಲ ಶ್ರಿಲಂಕಾದ ಪ್ರಧಾನ ವಾಣಿಜ್ಯ ನಗರವಾಗಿದೆ. ಸುಗಂಧ ದ್ರವ್ಯಗಳ ಬಿಟ್ಟರೆ ಮುತ್ತುರತ್ನಗಳು ಇಲ್ಲಿನ ಪ್ರಧಾನ ವ್ಯಾಪಾರ ಸರಕಾಗಿದೆ. ವಿಶ್ವದ ಪ್ರಖ್ಯಾತ ರತ್ನದ ಸಂತೆ ಮಾರುಕಟ್ಟೆ ಪ್ರತೀ ಬುಧವಾರ ಬೀರುವಲದಲ್ಲಿ ತೆರೆದಿರುತ್ತದೆ.
ಮೊದಲೇ ಸಮಪರ್ಕಿಸಿ ಖಚಿತಪಡಿಸಿಕೊಂಡಂತೆ ಬೀರುವಲದ ಪ್ರಮುಖ ವ್ಯಾಪಾರಿ ಅಬುಲ್ ಖಾಸಿಂ ಹಾಜಿಯವರ ಮನೆಯಲ್ಲಿ 4 ದಿನಗಳ ಕಾಲ ತಂಗಿದೆವು. ಬುಧವಾರ ಸಂತೆ ಇದ್ದುದ್ದರಿಂದ ನಗರದಲ್ಲಿ ಭಾರೀ ಜನಸಂದಣಿ ಸೇರಿತ್ತು. ಅಂದು ಬೆಳ್ಳಂಬೆಳಗ್ಗೆ ವಿಶ್ವದ ವಿವಿಧ ಭಾಗಗಳಿಂದ ರತ್ನ ಕೊಳ್ಳಲು ಹಾಗೂ ಮಾರಲು ಜನರು ಬೀರುವಲ ತಲುಪುತ್ತಾರೆ. ತಡರಾತ್ರಿವರೆಗೂ ಭಾರೀ ಜನಸಂದಣಿ ಇರುತ್ತದೆಂದು ಅಬುಲ್ ಖಾಸಿಂ ಹಾಜಿಯವರ ಪುತ್ರ ಹಾಗೂ ಪ್ರಮುಖ ವರ್ತಕ ಅದ್‍ನಾನ್ ಹಾಜಿ ಹೇಳುತ್ತಾರೆ.
ಸ್ಥಳೀಯರಾದ ತಮಿಳರ ಹೊರತು ಮಧ್ಯಕಾಲದಲ್ಲಿ ಮೆಡಿಟರೇನಿಯನ್ ರಾಷ್ಟ್ರಗಳಾಧ ಸ್ಪೈನ್, ಮೊರೊಕ್ಕೋ, ಪರ್ಷಿಯಾ ಮುಂತಾದ ರಾಷ್ಟ್ರಗಳಿಂದ ವಲಸೆ ಬಂದವರೇ ಬೀರುವಲದ ಮುಸ್ಲಿಮರಲ್ಲಿ ಬಹುಸಂಖ್ಯಾತರು. ಸ್ವಾತಂತ್ರ್ಯೋತ್ತರದ ಅಖಂಡ ಭಾರತದ ಲಾಹೋರ್, ಗುಜರಾತ್ ಮುಂತಾದೆಡೆಯಿಂದ ವಲಸೆ ಬಂದ ಮೆಮನ್‍ಗಳೂ ಅಲ್ಪಸ್ವಲ್ಪವಿದ್ದಾರೆ. ಮೆಡಿಟರೇನಿಯನ್‍ನಿಂದ ವಲಸೆ ಬಂದ ಮುರುಗಳಾಗಿದ್ದಾರೆ ಬೀರುವಲದ ಪ್ರಧಾನ ವರ್ತಕರು ಹಾಗೂ ಇಸ್ಲಾಮೀ ಪ್ರಬೋಧಕರು.
ಪ್ರಯಾಣದ ಆಯಾಸ ತೀರಿಸಲು ಹಾಗೂ ವಿಶ್ರಮಿಸಲು ಅಬುಲ್ ಖಾಸಿಂ ತಮ್ಮ ಮನೆಯ ಪಕ್ಕದಲ್ಲಿರುವ ಬಂಗಲೆಯನ್ನು ಸಿದ್ಧಗೊಳಿಸಿ ಕೊಟ್ಟರು. ಅಲ್ಲಿನ ನಿವಾಸಿ, ಅವರ ನಿಕಟ ಸಂಬಂಧಿಯಾದ ಮಿಅರಾಜ್ ಭಾಯಿ ಹಾಗೂ ಕುಟುಂಬವು ನಮ್ಮನ್ನು ಹೃತ್ಪೂರ್ವಕ ಸತ್ಕರಿಸಿದರು.
ವಿಪುಲವಾಗಿ ತಯಾರಿಸಲಾದ ಇಫ್ತಾರ್‍ಗಾಗಿ ಬೀರುವಲ ಎಂಬ ಊರಿನ ಉದಾರ ಭಾವನೆಯ ರೀತಿ ಕಾಣಲು ಸಾಧ್ಯವಾಯಿತು. ಭಾರತೀಯರಾಗಿರುವುದರಿಂದ ನಮಗಾಗಿ ಪ್ರತ್ಯೇಕ ಸೌತ್ ಇಂಡಿಯನ್ ಚಿಕನ್ ಫ್ರೈ ಹಾಗೂ ಪರ್ಷಿಯನ್ ಪುಡಿಂಗ್, ಯುರೋಪಿಯನ್ ಡಸ್ಟ ಮೇಜಿನ ಮೇಲೆ ವಿರಾಜಿಸಿತ್ತು. ಸಿಂಹಳೀಯರ ಇಫ್ತಾರ್‍ನಲ್ಲಿ ಗಂಜಿಯು ಪ್ರಧಾನ ಬಗೆಯಾಗಿದೆ. ಶ್ರೀಲಂಕಾದ ದೊಡ್ಡ ಪಾರ್ಟಿಗಳಲ್ಲಿಯೂ ಗಂಜಿಗೆ ವಿಶೇó ಸ್ಥಾನವಿದೆ. ಅಕ್ಕಿ ಅಥವಾ ಗೋಧಿ ಉಪಯೋಗಿಸಿ ಪಾಕ ಮಾಡಲ್ಪಡುವ ಗಂಜಿಯಲ್ಲಿ ಮಟನ್, ಚಿಕನ್, ಬೀಫ್, ತರಕಾರಿ ಹೀಗೆ ಬದಲು ಬದಲಾಗಿ ಪರೀಕ್ಷೆಗೆ ಒಡ್ಡುತ್ತಾರೆ. ಪ್ರತೀ ಊರವರಿಗೂ ಅವರದ್ದೇ ಆದ ಪರಂಪರಾಗತ ಗಂಜಿಯ ವಿಧಗಳಿವೆ ಎಂದು ಮನೆಯ ಯಜಮಾನ ಮಿಅರಾಜ್ ಭಾಯಿ ಹೇಳುತ್ತಾರೆ.
ಮೊದಲ ದಿನದ ತರಾವೀಹ್ ನಮಾಝ್ ನಿರ್ವಹಿಸಿದ್ದು ಬೀರುವಲದ ಪ್ರಧಾನ ಮುಸ್ಲಿಂ ಕೇಂದ್ರವಾದ ಚೈನಫೋರ್ಡ್ ಮಸೀದಿಯಲ್ಲಾಗಿತ್ತು. ಆಟೋಮನ್ ವಾಸ್ತುಶಿಲ್ಪಕಲೆಯಲ್ಲಿ ನಿರ್ಮಿಸಿದ ಗುಮ್ಮಟ ಹಾಗೂ ಮಿನಾರಗಳಿರುವ ಮಸೀದಿಯ ಮುಂಭಾಗದಲ್ಲಿ ವಿಶಾಲವಾದ ಹಾಗೂ ರಮ್ಯವಾದ ಹೂದೋಟವಿದೆ. ಸಾವಿರಾರು ಜನರಿಗೆ ಏಕಕಾಲದಲ್ಲಿ ನಮಾಝ್ ನಿರ್ವಹಿಸಲು ಸಾಧ್ಯವಿರುವ ಆ ಮಸೀದಿಯಲ್ಲಿ ಮಗ್‍ರಿಬ್, ಇಶಾ, ತರಾವೀಹ್‍ಗಳಿಗೆ ಭಾರೀ ಜನಸಂದಣಿ ಸೇರಿರುತ್ತದೆ. ಸಂಪನ್ನರು ಹಾಗೂ ವರ್ತಕರು ತುಂಬಾ ವಾಸವಿರುವ ಒಂದು ಪಟ್ಟಣದ ಜನಬಾಹುಳ್ಯದ ಬಗ್ಗೆ ಅನ್ವೇಷಿಸಿದಾಗ ವಿಸ್ಮಯಕಾರಿ ಸತ್ಯವು ಬಯಲಾಯಿತು. ಬೀರುವಲದ ಜನರಿಗೆ ರತ್ನ ವ್ಯಾಪಾರವು ಕುಲಕಸುಬಾಗಿದೆ. ದೊಡ್ಡ ಉದ್ಯೋಗಿಗಳಿಗೂ ವಿದ್ವಾಂಸರಿಗೂ ರತ್ನ ವ್ಯಾಪಾರವು ಬಿಡಲಾಗದ ಚಟವಾಗಿದೆ. ಉಳಿದ ದಿವಸಗಳಲ್ಲಿ ಪುರುಷರು ರತ್ನ ಮಾರಲು ಹಾಗೂ ಕೊಳ್ಳಲು ವಿವಿಧ ಆಫ್ರಿಕನ್, ಲ್ಯಾಟೀನ್, ಅಮೆರಿಕಾ, ಹಾಂಕಾಂಗ್, ಚೈನ, ಭಾರತ ಮುಂತಾದ ಪ್ರದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. ಬುಧವಾರ ಸಂತೆಗೆ ಮರಳುತ್ತಾರೆ. ಆದರೆ ರಮಳಾನ್‍ನಲ್ಲಿ ಎಲ್ಲಾ ವ್ಯಾಪಾರ-ವಹಿವಾಟುಗಳನ್ನು ಬದಿಗಿರಿಸಿ ಅಧಿಕ ಸಮಯಗಳಲ್ಲೂ ಆರಾಧನೆಯಲ್ಲಿ ಸಕ್ರಿಯರಾಗುತ್ತಾರೆ. ವ್ಯಾಪಾರ ಮಾತ್ರವಲ್ಲ, ತಮ್ಮ ಪೂರ್ವಿಕರಾದ ಸೂಫಿ ಸಂತರು ನೀಡಿದ ಆಧ್ಯಾತ್ಮಿಕ ಚೈತನ್ಯವನ್ನು ಬೀರುವಲದವರು ರತ್ನಕ್ಕಿಂತಲೂ ಪವಿತ್ರÀವಾಗಿ ಕಾಣುತ್ತಾರೆ.
ಬೀರುವಲದ ಬಹುಸಂಖ್ಯಾತ ವಿಶ್ವಾಸಿಗಳು ಶಾದುಲೀ ತರೀಖತ್‍ನ ಸೂಫಿ ಸರಣಿಯನ್ನು ಹಿಂಬಾಲಿಸುವವರಾಗಿದ್ದಾರೆ. ಖಾದಿರಿಯ್ಯ, ಖಾದಿರಿಯ್ಯತುನ್ನಬವೀ, ನಕ್ಷಬಂದಿಯ್ಯ, ಸುಹ್ರವರ್ದಿಯ್ಯ ಮುಂತಾದ ಸೂಫಿ ಸರಣಿಗಳನ್ನು ಹಿಂಬಾಲಿಸುವವರೂ ಇದ್ದಾರೆ. ಸಿಂಹಳದ ಮಧ್ಯ ಪ್ರಾಂತ್ಯಗಳಲ್ಲಿ ಖಾದಿರೀಗಳು ಹಾಗೂ ದಕ್ಷಿಣ ಪ್ರಾಂತ್ಯದಲ್ಲಿ ನಕ್ಷಬಂದಿಗಳೂ ಅಧಿಕವಿದ್ದಾರೆ. ತರಾವೀಹ್ ನಮಾಝ್ ಬಳಿಕ ಬೀರುವಲದ ಸಮೀಪ ಪ್ರದೇಶದ ಎಲ್ಲಾ ಮಸೀದಿಗಳಲ್ಲೂ ಶಾದ್ಸುಲೀ ರಾತೀಬ್ ಇರುತ್ತದೆ. ನಿತ್ಯವೂ ಅರ್ಧಗಂಟೆ ರಾತೀಬ್ ಹೇಳಿ ಎಲ್ಲರೂ ಪರಸ್ಪರ ಸಲಾಂ ಹೇಳಿ ಹಸ್ತದಾನ ಮಾಡಿದ ಬಳಿಕವೇ ಮನೆಗೆ ಮರಳುತ್ತಾರೆ. ಪರಸ್ಪರ ಕೈಜೋಡಿಸಿ ಒಂದೇ ಸ್ವರ ಹಾಗೂ ಪ್ರತ್ಯೇಕ ರಾಗದಲ್ಲಿ ಹೇಳುವ ಪ್ರಾರ್ಥನೆಗಳು, ಬಳಿಕ ನಡೆಯುವ ಹಸ್ತದಾನವು ಪಾವನ ಸೂಫಿ ಶ್ರೇಷ್ಠರಿಂದ ಎರವಲಾಗಿ ಬಂದ ಸ್ನೇಹ ವಿನಿಮಯದ ದ್ಯೋತಕವಾಗಿದೆ. ಮಸೀದಿಯಲ್ಲಿದ್ದ ಎಲ್ಲರಿಗೂ ಹಸ್ತದಾನ ಮಾಡಿ ನಾವು ತಂಗಿದ್ದ ಬಂಗಲೆಗೆ ಮರಳಿ ಹೋಗುವ ದಾರಿಯಲ್ಲಿ ಊರವರಲ್ಲಿ ಕೆಲವರು ನಮ್ಮ ಬಳಿ ಬಂದು ಸುಖ ಕ್ಷೇಮ ವಿಚಾರಿಸಿ, ಯಾತ್ರೆಯ ಲಕ್ಷ್ಯದ ಬಗ್ಗೆ ಕೇಳಿ ತಿಳಿದುಕೊಂಡರು. ಮರಳಿ ಬಂಗಲೆಗೆ ತಲುಪಿದಾಗ ಮುಂದಿನ ದಿನಗಳ ಇಫ್ತಾರ್ ಕರೆಯೋಲೆಗಳ ಬಹುದೊಡ್ಡ ಪಟ್ಟಿಯೇ ನಮ್ಮ ಮುಂದೆ ತಯಾರಿಯಾಗಿತ್ತು!.
ಅತಿಥಿಗಳನ್ನು ಪ್ರತ್ಯೇಕವಾಗಿ ಆಮಂತ್ರಿಸಿ, ಮನೆಯಲ್ಲಿ ಕೂರಿಸಿ ಭೂರಿಭೋಜನವನ್ನು ನೀಡುವುದು ಸಿಂಹಳೀಯ ಮುಸ್ಲಿಮರ ಉದಾತ್ತ ಗುಣವಾಗಿದೆ. ಬೀರುವಲದ ಮುಸ್ಲಿಮರು ಆ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಎಂದೇ ಹೇಳಬಹುದು. ನಮ್ಮ ಊರಲ್ಲಿರುವಂತೆ ರಮಳಾನ್‍ನಲ್ಲಿ ಮಸೀದಿಗಳಿಗೆ ಪ್ರಭಾóಷಣ ನೀಡಲು ಬರುವವರು ಹಾಗೂ ಬಡಬಗ್ಗರನ್ನು ಮನೆಗೆ ಕರೆದುಕೊಂಡು ಹೋಗಿ ಇಫ್ತಾರ್ ನೀಡುವುದರಲ್ಲಿ ಅಲ್ಲಿನವರ ಮಧ್ಯೆ ಸ್ಪರ್ದೆಯೇ ನಡೆಯುತ್ತದೆ ಎಂದು ಮಂಗಳೂರಿನ ಒಬ್ಬ ಸನ್ಮಿತ್ರರು ಹೇಳಿದ್ದರು. ಮಂಗಳೂರಿನಿಂದ ಎರಡು ದಿನಗಳ ಯಾತ್ರೆಗಾಗಿ ಶ್ರೀಲಂಕಾ ಭೇಟಿ ನೀಡಿದ ಮುಹಮ್ಮದ್ ರಿಫಾಈ ಮಿತ್ರ ಇಂತಹ ಅನುಭವಗಳನ್ನು ಶ್ರೀಲಂಕಾ ಹೋಗುವ ಮುಂಚೆ ಹೇಳಿ ನಮ್ಮನ್ನು ಪ್ರಚೋದಿಸಿದ್ದರು.
ತಖ್ಯಾಗಳು ಹಾಗೂ ಸೂಫಿಮಜ್ಲಿಸ್‍ಗಳು
ಒಂದು ದಿನ ರಾತ್ರಿ ತರಾವೀಹ್ ಬಳಿಕ ಬೀರುವಲದ ಇತರ ಮಸೀದಿಗಳು ಹಾಗೂ ಸೂಫಿ ಮಝಾರ್ಗಳನ್ನು ಸಂದರ್ಶಿಸಲು ತೀರ್ಮಾನಿಸಿದೆವು. ಎಲ್ಲಾ ತರೀಖತ್‍ನವರಿಗೂ ಅಲ್ಲಿ ತಖ್ಯಾಗಳಿವೆ. ತಮ್ಮ ಆದ್ಯಾತ್ಮಿಕ ಸರಣಿಯ ಪ್ರತ್ಯೇಕ ಪ್ರಾರ್ಥನೆಗಳು ಹಾಗೂ ಸವಿಶೇಷವಾದ ಒಂದುಗೂಡುವಿಕೆಯು ತಖ್ಯಾಗಳಲ್ಲಿ ನಡೆಯುತ್ತದೆ. ಆಟೋಮನ್ ಆಡಳಿತ ಕಾಲದಲ್ಲಿ ಟರ್ಕಿ, ಪರ್ಷಿಯ, ಸಮರ್ಖಂದಿನಲ್ಲೂ ತಖ್ಯಾಗಳು ಎಂಬ ಸೂಫಿ ಕೇಂದ್ರಗಳು ಹೇರಳವಾಗಿದ್ದವು ಎಂದು ಪ್ರಶಸ್ತ ಇತಿಹಾಸಗಾರ ಇರ-ಎಂ-ಲಾಪಿಡನ್ ಹೇಳುತ್ತಾರೆ. ಉತ್ತರ ಭಾರತದಲ್ಲಿ ಇದನ್ನು ಖಾನ್‍ಖಾಉಗಳೆನ್ನುತ್ತೇವೆ. ನಮ್ಮೂರಿನ ತಕ್ಯಾವುಗಳು (ಸಿರಾಂಬಿ) ತಖ್ಯಾದ ಇನ್ನೊಂದು ರೂಪವಾಗಿದೆ ಎಂದು ಗುರು ಡಾ. ಅಬ್ದುಲ್ ಹಕೀಂ ಅಝ್‍ಹರೀ ಒಮ್ಮೆ ಕ್ಲಾಸಿನಲ್ಲಿ ಹೇಳಿದ್ದರು.
ಖಾದಿರಿಯ್ಯತುನ್ನಬವಿಯ್ಯ ಸರಣಿಯ ಬುಖಾರಿ ತಖ್ಯಾ ಸಿಲೋನಿನ ಪ್ರಧಾನ ತಖ್ಯಾ ಆಗಿದೆ. ಇದು ಬೀರುವಲದ ಚೈನಫೋರ್ಟ್‍ನಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಗೇಟ್‍ನ ಬಳಿ ಇದ್ದ ವಾಚ್‍ಮನ್‍ನೊಂದಿಗೆ ಒಳಗೆ ಪ್ರವೇಶಿಸಲು ಸಮ್ಮತಿ ಕೇಳಿದೆವು. ಒಳಗೆ ಖಸೀದ ವಿತ್ರಿಯ್ಯ (ಪ್ರವಾದಿ(ಸ) ಬಗ್ಗೆ ಅಬ್ದುಲ್ ರಶೀದ್ ಬಗ್ದಾದಿ (ರ) ರಚಿಸಿದ ಪ್ರಖ್ಯಾತ ಕಾವ್ಯ) ಪಾರಾಯಣ ನಡೆಯುತ್ತಿರುವುದರಿಂದ ಸ್ವಲ್ಪ ಕಾಯಬೇಕಾಗಬಹುದೆಂದು ಅವರು ಹೇಳಿದರು. ರಮಳಾನ್ ಪೂರ್ತಿ ತರಾವೀಹ್ ಬಳಿಕ ವಿತ್ರಿಯ್ಯ ಪಾರಾಯಣ ನಡೆಯುತ್ತದೆಯಂತೆ!. ತರೀಖತ್‍ನ ಸದಸ್ಯರಿಗೆ ಮಾತ್ರ ಒಳ ಪ್ರವೇಶಿಸಲು ಅವಕಾಶ. ಕೇರಳದಿಂದ ಪ್ರಭೋಧನೆ ಹಾಗೂ ಅಧ್ಯಯನಕ್ಕಾಗಿ ಬಂದವರೆಂದು ತಿಳಿಸಿದಾಗ ಕಾವಲುಗಾರನು ಸಂತೋಷದಿಂದ ಒಳಹೋಗಲು ಸಮ್ಮತಿಸಿದರು.
ವಿಶಾಲವಾದ ಮೈದಾನದ ನಡುವೆ ತಖ್ಯಾವನ್ನು ನಿರ್ಮಿಸಲಾಗಿದೆ. ಅತಿಮನೋಹರವಾದ ಪಷ್ರ್ಯನ್ ಚಿತ್ರಕಲೆ ಮತ್ತು ಉಸ್ಮಾನೀ ವಾಸ್ತುಶಿಲ್ಪದಿಂದ ಕಟ್ಟಡವನ್ನು ಆಕರ್ಷಣೀಯವಾಗಿ ವೈಭವೀಕರಿಸಲಾಗಿತ್ತು. ಒಳಗೋಡೆಯಲ್ಲಿ ಪೂರ್ತಿ ಪವಿತ್ರ ಖುರಾನ್ ಹಾಗೂ ಪಾವನ ವಚನಗಳಿಂದ ನಯನಮನೋಹರವಾದ ಕ್ಯಾಲಿಗ್ರಫಿಗಳನ್ನು ಕೆತ್ತಿದ್ದರು. ಪಾದರಕ್ಷೆ ಕಳಚಿ ಮೊದಲೇ ನಿರ್ದೇಶಿಸಿದಂತೆ ಮೌನವಾಗಿ ಒಳಪ್ರವೇಶಿಸಿದೆವು. ನೂರಾರು ಜನ ವೃತ್ತಾಕಾರದಲ್ಲಿ ನಿಶಬ್ದರಾಗಿ ಕುಳಿತಿದ್ದಾರೆ. ಇವರ ಮುಂದೆ ನಾಲ್ಕು ಜನರಿಗೆ ಸೇವಿಸಲು ಒಂದು ಪಾತ್ರೆಯಲ್ಲಿ ಊಟ, ಮಾಂಸ ಹಾಗೂ ಒಂದು ಕಪ್ ನೀರು ಇಡಲಾಗಿತ್ತು. ತಖ್ಯಾದ ಒಂದು ಕಡೆ ನಮ್ಮನ್ನು ಕುಳ್ಳಿರಿಸಿದರು. ಎಲ್ಲರೂ ಕುಳಿತಿದ್ದಾರೆ ಎಂಬ ಖಚಿತತೆ ಬಳಿಕ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಜೋರಾಗಿ ಬಿಸ್ಮಿ ಹೇಳಿ ಕೊಟ್ಟರು. ನಂತರ ಎಲ್ಲರೂ ಆಹಾರ ಸೇವಿಸಲು ತೊಡಗಿದರು. ಅಲ್ಪ ಸಮಯದ ಬಳಿಕ ಎಲ್ಲರೂ ಭಕ್ಷಿಸಿ ಕೂಟವಾಗಿ ಪ್ರಾರ್ಥಿಸಿ ಪಾತ್ರೆಯೊಂದಿಗೆ ಮರಳಿ ಹೋದರು. ಬಳಿಕ ನಾವು ತಖ್ಯಾದ ಎಲ್ಲಾ ಭಾಗಗಳನ್ನು ಕಣ್ಣಾರೆ ನೋಡಿದೆವು. ಒಳಗೆ ಮನೋಹರವಾದ ಕ್ಯಾಲಿಗ್ರಫಿಯಲ್ಲಿ ಬರೆದಿಟ್ಟಿದ್ದ ವಚನಗಳು ಮನೋಹರವಾಗಿತ್ತು. ಖಾದಿರಿಯ್ಯತುನ್ನಬವಿಯ್ಯಾದ ಪ್ರಸ್ತುತ ಶೈಖ್ ಸಯ್ಯಿದ್ ಅಹ್ಮದ್ ಬುಖಾರಿ ಆಗಿದ್ದಾರೆ. ಸಯ್ಯಿದ್ ಪರಂಪರೆಯ ಈಗಿನ ತರೀಖತ್‍ನ ಎಲ್ಲಾ ಇಜಾಝತ್(ದೀಕ್ಷೆ)ಗಳು ಶೈಖ್ ಅಹ್ಮದರ ಬಳಿ ಇದೆ. ತಖ್ಯಾದ ಬಳಿ ಇರುವ ಶೈಖರ ನಿವಾಸಕ್ಕೆ ತೆರಳಿ ಅವರನ್ನು ಸಂದರ್ಶಿಸಿ ಅವರ ಕೃಪಾಶೀರ್ವಾದ ಬೇಡಿ ಬಂಗಲೆಗೆ ಮರಳಿದಾಗ ಸಮಯ ತುಂಬಾ ದೀರ್ಘವಾಗಿತ್ತು.
ಧಾರ್ಮಿಕ ಪಾಠಶಾಲೆಗಳು ಹಾಗೂ ಸುಜ್ಞಾನ ವಿನಿಮಯ
ಬೀರುವಲದ ಪ್ರಶಸ್ತ ಧಾರ್ಮಿಕ ವಿದ್ಯಾಕೇಂದ್ರವಾದ ಮದ್ರಸತು ಫಾಸಿಯತು ಶಾದುಲಿಯ್ಯ ಚೈನಾಫೋರ್ಟ್ ಮಸೀದಿಯ ಬಳಿಯೇ ಇದೆ. ಮೊದಲ ದಿನವೇ ಸಂಸ್ಥೆಯ ರಕ್ಷಾಧಿಕಾರಿ ಹಾಗೂ ಪ್ರಿನ್ಸಿಪಾಲರಾದ ಮೌಲಾನಾ ಅಸ್ಮಿ ಖಾನ್ ಮಹ್‍ಳರಿ, ನಮ್ಮನ್ನು ಸಂಸ್ಥೆಗೆ ಆಹ್ವಾನಿಸಿದ್ದರು. ಕೇರಳಕ್ಕೆ ಸಮಾನವಾದ ದರ್‍ಸೇ ನಿಝಾಮಿ ಸಿಲೆಬಸ್ ಹಾಗೂ ಬಹುತೇಕ ಸಮಾನವಾದ ಗ್ರಂಥಗಳು ಅಲ್ಲಿ ಅಧ್ಯಾಪನೆ ನಡೆಸಲಾಗುತ್ತಿದೆ. ಶ್ರೀಲಂಕಾದಲ್ಲಿ ದಕ್ಷಿಣ ಏಷ್ಯಾದಿಂದ ವಲಸೆ ಬಂದ ಮೆಮನ್‍ಗಳ ಹೊರತು ಮಿಕ್ಕ ಬಹುತೇಕ ಜನರು ಶಾಫೀ ಮದ್ಸ್‍ಹಬ್ನವರಾಗಿದ್ದಾರೆ. ಮೆಮನ್‍ಗಳು ಬಹುತೇಕ ಹನಫಿಗಳಾಗಿದ್ದಾರೆ.
ಶಾಫಿಈ ಕರ್ಮಶಾಸ್ತ್ರದ ಉಂದ, ಫತ್ಹುಲ್ ಮುಈನ್, ಮಹಲ್ಲಿ ಹಾಗೂ ವ್ಯಾಕರಣದಲ್ಲಿ ಖತ್‍ರುನ್ನದಾ, ಅಲ್‍ಫಿಯ್ಯತುಬ್ನ್ ಮಾಲಿಕ್ ಆಗಿದೆ ಅಲ್ಲಿನ ಪ್ರಧಾನ ವಿಷಯಗಳು. ಸಿಂಹಳದ ಇಸ್ಲಾಮಿಕ ಜ್ಞಾನಧಾರೆಯ ವೃಕ್ಷವು ಹಳರಮೌತ್ ಹಾಗೂ ತಮಿಳ್ನಾಡಿನ ಕಾಯಲ್‍ಪಟ್ಟಣಕ್ಕೆ ಸೇರುತ್ತದೆ. ಉನ್ನತ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಅಲ್ಲಿನ ವಿದ್ಯಾರ್ಥಿಗಳು ಕೈರೋದ ಅಲ್ ಅಝ್‍ಹರ್, ಕಾರಂದೂರು ಮರ್ಕಝ್ ಹಾಗೂ ಕಾಯಲ್‍ಪಟ್ಟಣದ ಮಹ್‍ಳರತುಲ್ ಖಾದಿರಿಯ್ಯಗಳಿಗೆ ತೆರಳುತ್ತಾರೆ ಎಂದು ಮೌಲಾನಾ ಅಸ್ಮಿ ಹೇಳುತ್ತಾರೆ.
ಕೇರಳದ ಧಾರ್ಮಿಕ ಜ್ಞಾನ ವಿಷಯಗಳಿಗಿಂತ ವಿಭಿನ್ನವಾಗಿ ಶ್ರೀಲಂಕಾದಲ್ಲಿ ಮದ್ರಸಗಳ ಪಠ್ಯಪದ್ಧತಿಯಲ್ಲಿ ವಿಶೇಷವಾಗಿ ಕಂಡಿದ್ದು ಇತಿಹಾಸ ಅಧ್ಯಯನವಾಗಿದೆ. ಮೊದಲ ವರ್ಷದಿಂದ ಕೊನೆ ವರ್ಷದವರೆಗೆ ಕರ್ಮಶಾಸ್ತ್ರ ಹಾಗೂ ವಿಶ್ವಾಸಶಾಸ್ತ್ರದ ಜೊತೆ ಇತಿಹಾಸವನ್ನೂ ಬೋಧಿಸಲಾಗುತ್ತದೆ.
ರಮಳಾನ್‍ನಲ್ಲಿ ಪ್ರತ್ಯೇಕವಾಗಿ ಮದ್ರಸತು ಶಾದುಲಿಯ್ಯದಲ್ಲಿ ಖುರಾನ್ ಪಾರಾಯಣ ಹಾಗೂ ಮನನ. ರಿಯಾಳುಸ್ವಾಲಿಹೀನ್, ಅಲ್ಫಿಯ್ಯ ಕಂಠಪಾಠ ತರಗತಿಗಳು ನಡೆಯುತ್ತದೆ. ಸಂಜೆ ಇಫ್ತಾರ್ ಸಮಯದವರೆಗೂ ಮದ್ರಸಾ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಊರವರು ಸೇರಿ ಬುರ್ದಾ ಪೂರ್ತಿಯಾಗಿ ಪಾರಾಯಣನಡೆಸುವರು.
ಅಲ್ಲಿನ ಆಧ್ಯಾತ್ಮಿಕ ವಾತಾವರಣವು ಪಚ್ಚೆಹರಳಿನಿಂದಾವೃತವಾದ ದ್ವೀಪದ ರತ್ನ ವೈಢೂರ್ಯಗಳಿಗಿಂತಲೂ ಅಮೂಲ್ಯವಾಗಿದೆ. ಕಿರಿಯರು, ಹಿರಿಯರು ಒಂದುಗೂಡಿ ಪ್ರಾರ್ಥನೆ ನಡೆಸುವ ಆಧ್ಯಾತ್ಮಿಕ ಮಜ್ಲಿಸ್‍ಗಳು ಹಾಗೂ ಸವಿಶೇಷವಾದ ಇಫ್ತಾರ್ ಮತ್ತು ಅತಿಥಿ ಸತ್ಕಾರವನ್ನು ಆಸ್ವಾದಿಸಿ, ಕೇರಳಕ್ಕೆ ವಿಮಾನ ಹತ್ತುವಾಗ ಆ ನಾಡಿನ ಒಳ್ಳೆಯ ಶೀಲಗಳು ಹೃದಯಾಂತರಾಳದಲ್ಲಿ ಮುದ್ರೆಯೊತ್ತಿತ್ತು.

Comments
Post a Comment