ಫರೋಹ, ಯೋಹಾನ ಹಾಗೂ ಖುರ್‍ಆನಿನ ಚರಿತ್ರಾ ಪರಾಮರ್ಶೆಗಳು
ಜುನೈದ್ ಖಲೀಲ್ ನೂರಾನಿ
ಅನು: ಎಪಿಎಂ ಶಮೀರ್, ಮರ್ಕಿನ್ಸ್ ಬೆಂಗಳೂರು
ಪವಿತ್ರ ಖುರ್‍ಆನಿನಲ್ಲಿ ಪರಾಮರ್ಶಿಸಲ್ಪಡುವ ಐತಿಹ್ಯಗಳು ವಸ್ತುನಿಷ್ಠವಲ್ಲವೆಂದು ಆಧುನಿಕ ಕಾಲದ ಕ್ರೈಸ್ತರು ಆರೋಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಖುರ್‍ಆನ್ ಮತ್ತು ಬೈಬಲ್‍ನ ಎರಡು ಚರಿತ್ರೆ ಪರಾಮರ್ಶೆಗಳನ್ನು ಚರ್ಚಿಸೋಣ.
ಮಹಾಭವನ ಎಂಬರ್ಥವನ್ನು ಹೊಂದಿರುವ ಪೇರ್-ಆ ಎಂಬ ಪದದಿಂದ ಫರೋಹ ಅಥವಾ ಫರವೋ ಎಂಬ ಪದವು ನಿಷ್ಪನ್ನವಾಗುತ್ತದೆ. ಇದು ಈಜಿಪ್ಟ್ ಸಾಮ್ರಾಟರನ್ನು ಆದರಪೂರ್ವಕವಾಗಿ ಕರೆಯುತ್ತಿದ್ದ ನಾಮವಗಿತ್ತು.ಈಜಿಪ್ಟ್‍ನ ಎಲ್ಲಾ ರಾಜರನ್ನು ಫರೋಹ ಎಂದು ಸಂಬೋಧಿಸಿದ್ದಾಗಿ ಕಾಣಬಹುದು. ಅಬ್ರಾಹಮನ ಕಾಲದ ಈಜಿಪ್ಟ್ ರಾಜರನ್ನು ಆರು ಬಾರಿ ಹಾಗೂ ಯೋಸೇಫನ ಕಾಲದ ರಾಜರನ್ನು 90 ಬಾರಿ ಹಳೆಯ ಒಡಂಬಡಿಕೆಯ ಮೊದಲ ಪುಸ್ತಕ ಆದಿಕಾಂಡದಲ್ಲಿ ಆ ರೀತಿ ಪ್ರಯೋಗಿಸಲಾಗಿದೆ. ಅದೇ ರೀತಿ ಮೋಸೆಯ ಕಾಲದ ರಾಜರ ಕುರಿತು 121 ಬಾರಿ ವಿಮೋಚನಾ ಕಾಂಡದಲ್ಲಿ ಫರೋಹ ಎಂದು ಪ್ರಯೋಗಿಸಲಾಗಿದೆ.
ಖುರ್‍ಆನಿನಲ್ಲೂ ಫರೋಹ ಎಂಬ ಪದಕ್ಕೆ ಸಮನಾದ ಫಿರ್‍ಔನ್ ಎಂಬ ನಾಮವನ್ನು ಉಪಯೋಗಿಸಲಾಗಿದೆಯಾದರೂ ಮೂಸಾ(ಅ) ರವರ ಕಾಲದ ರಾಜರನ್ನು ಮಾತ್ರ ಈ ರೀತಿ ಸಂಬೋಧಿಸಲಾಗಿದೆ.ಅದಕ್ಕೂ ಮುಂಚಿನ ರಾಜರ ಕುರಿತು ಕೇವಲ ರಾಜ (ಮಲಿಕ್) ಎಂದು ಪ್ರಯೋಗಿಸಲ್ಪಟ್ಟಿದೆ.
ಈಜಿಪ್ಟ್‍ನ ಇತಿಹಾಸ ಪುಟಗಳನ್ನು ತಿರುವಿದಾಗ ಬೈಬಲ್‍ನಲ್ಲಿರುವ ಫರೋವ ಎಂಬ ಪ್ರಯೋಗವು ಇತಿಹಾಸ ವಿರುದ್ದವೆಂದೂ, ಖುರ್‍ಆನಿನ ಫಿರ್‍ಔನ್ ಎಂಬ ಪ್ರಯೋಗವು ಚರಿತ್ರಾರ್ಹ ಹಾಗೂ ವಸ್ತುನಿಷ್ಠ ಎಂಬುದನ್ನು ಗ್ರಹಿಸಬಹುದು.
ಈಜಿಪ್ಟ್ ರಾಜರನ್ನು ಎಂದಿನಿಂದ ಫರೋಹ ಅಥವಾ ಫಿರ್‍ಔನ್ ಎಂದು ಕರೆಯಲಾಯಿತು? ಎಂಬುದನ್ನು ತಿಳಿಯೋಣ. ಬೈಬಲ್ ವಿದ್ವಾಂಸ ಡಿ.ಬಾಬು ಪೌಲ್ ಹೇಳುತ್ತಾರೆ “ಫರವೋ ಈಜಿಪ್ಟ್‍ನ ರಾಜ, ಮಹಾಭವನ ಎಂಬರ್ಥವನ್ನು ನೀಡುವ ಒಂದು ಪದದಿಂದ ಉದಿಸಿದ ಅಂಕಿತನಾಮವಾಗಿದೆ. ಕ್ರಿ.ಪೂ ಮೂರನೇ ಸಹಸ್ರಮಾನಕಾಲದಿಂದ ಚಾಲ್ತಿಯಲ್ಲಿದೆಯಾದರೂ ಕ್ರಿ.ಪೂ 1500 ರವರೆಗೆ ರಾಜರನ್ನು ಆ ಹೆಸರಿನಿಂದ ಕರೆಯುತ್ತಿರಲಿಲ್ಲ.ಅರಮನೆ, ದರ್ಬಾರ್ ಅಥವಾ ರಾಜನ ಆಸ್ಥಾನ ಎಂದಾಗಿತ್ತು ಹಿಂದಿನ ಅರ್ಥ. ವ್ಯಕ್ತಿ ನಾಮದೊಂದಿಗೆ ಫರವೋ (ಉದಾ: ಫರವೋ ಹೋಕೋ, ಫರವೋ ಹೋಫ್‍ರ) ಎಂದು ಸೇರಿಸಿ ಕರೆಯುವ ಸಂಪ್ರದಾಯ ಕ್ರಿ.ಪೂ 945ರಿಂದ ಪ್ರಾರಂಭವಾಯಿತು.
(ವೇದ ಶಬ್ಧ ರತ್ನಾಕರಂ,ಬೈಬಲ್ ನಿಘಂಟು: ಪು: 439)
ಇನ್ನೋರ್ವ ಬೈಬಲ್ ವಿದ್ವಾಂಸ ಹಾರ್ಪರ್ ಹೀಗೆ ಹೇಳುತ್ತಾರೆ: ಹದಿನೆಂಟನೇ ರಾಜವಂಶದ ಮುಮ್ಮಡಿ ತುಕ್ಮೋಸ್ (ಕ್ರಿ.ಪೂ.1504-1450) ಕಾಲದಿಂದ ಪೇರ್_ಆ ಎಂಬುದು ರಾಜನನ್ನು ಮಾತ್ರ ಕರೆಯುವ ರೂಢಿಯಾಗಿಬಿಟ್ಟಿತು. 22ನೆಯ ರಾಜವಂಶದ ಮೊದಲನೇ ಶೋಶೆನೆಕ್ ಕಾಲದಿಂದ ರಾಜನ ನಾಮದೊಂದಿಗೆ, ಬೈಬಲ್‍ನಲ್ಲಿ ಕಾಣುವ ರೀತಿ ಫರವೋ ಎಂದು ಸೇರಿಸಿ ಕರೆಯುವ ಸಂಪ್ರದಾಯ ಬೆಳೆಯಿತು.(ಉದಾ:ಫರವೋ ಶೊಶೆನ್‍ಕ್). (ಹಾರ್ಪರ್‍ನ ಬೈಬಲ್ ಡಿಕ್ಷನರಿ,ಪುಟ 781)
ಏಸುವಿನ ಜನನಕ್ಕೆ 15 ಶತಮಾನಗಳ ಹಿಂದಿನ ರಾಜರನ್ನು ಫರವೋ ಎಂದು ಕರೆದಿರಲಿಲ್ಲ ಎಂಬುದು ಇನ್ನೂ ಅನೇಕ ಅಧಿಕೃತ ಗ್ರಂಥಗಳಲ್ಲಿ ವ್ಯಕ್ತವಾಗಿದೆ.
ಈಜಿಪ್ಟ್ ಸಾಮ್ರಾಜ್ಯವನ್ನು ಮೂರು ಹಂತಗಳಾಗಿ ಚರಿತ್ರೆಗಾರರು ವಿಭಾಗಿಸಿದ್ದಾರೆ.ಮೊದಲನೇ ವಿಭಾಗ ಪುರಾತನ ರಾಜ್ಯ(ಕ್ರಿ.ಪೂ.2700-2200), ಎರಡನೆಯದು ನಡುಗಾಲದ ರಾಜ್ಯ (ಕ್ರಿ.ಪೂ.2040-1674), ಮೂರನೆಯದು ನೂತನ ರಾಜ್ಯ(ಕ್ರಿ.ಪೂ1552-1069). ಇವುಗಳಲ್ಲಿ ಕೇವಲ ನೂತನ ರಾಜ್ಯದ ರಾಜರನ್ನು ಕುರಿತು ಫರೋವ ಅಥವಾ ಫರವೋ ಎಂಬ ಪದವನ್ನು ಪ್ರಯೋಗಿಸಲಾಯಿತು ಎಂದು ಃಡಿiಣish museum,ಜiಛಿಣioಟಿಚಿಡಿಥಿ oಜಿ ಚಿಟಿಛಿieಟಿಣ ಇgಥಿಠಿಣ(ಪುಟ 222)ಎಂಬ ಗ್ರಂಥದಲ್ಲಿ ಉದ್ಧರಿಸಲಾಗಿದೆ.
ಇನ್ನು ಅಬ್ರಾಮ ಹಾಗೂ ಯೋಸೇಫರ ಕಾಲವನ್ನು ಪರಿಶೋಧಿಸೋಣ. ಅಬ್ರಾಮನ ಕಾಲದ ಕುರಿತು ವಿದ್ವಾಂಸರು ವಿವಿಧ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಆದರೆ ಕ್ರಿ. ಪೂ 1850 ನಲ್ಲಾಗಿತ್ತು ಅಬ್ರಾಮನ ಆಗಮನ ಎಂಬುದೇ ಮಿಕ್ಕ ಬೈಬಲ್ ವಿದ್ವಾಂಸರ ಅಭಿಪ್ರಾಯವಾಗಿದೆ. ಆiಛಿಣioಟಿಚಿಡಿಥಿ oಜಿ ಠಿಡಿoಠಿeಡಿ ಟಿಚಿmes ಚಿಟಿಜ ಠಿಟಚಿಛಿes iಟಿ ಣhe bibಟe ಮುಂತಾದ ಅನೇಕ ಅಧಿಕೃತ ಗ್ರಂಥಗಳಲ್ಲೂ ಈ ಅಭಿಪ್ರಾಯವನ್ನು ಕಾಣಬಹುದಾಗಿದೆ. ಆದರೆ ಆಧುನಿಕ ಪರಿಗಣನೀಯವಾದ ರೇಖೆಗಳಲ್ಲಿ ಅಬ್ರಾಮನ ಕಾಲ ಕ್ರಿ.ಪೂ 2300 ರ ಅಸುಪಾಸಾಗಿತ್ತು ಎಂಬುದನ್ನು ಕಂಡುಹಿಡಿಯಲಾಗಿದೆ. ಈ ಎರಡೂ ಅಭಿಪ್ರಾಯಗಳ ಪ್ರಕಾರ ಅಬ್ರಾಮನು ಪುರಾತನ ರಾಜ್ಯ ಅಥವಾ ನಡುಗಾಲದ ರಾಜ್ಯದಲ್ಲಿ ಜೀವಿಸಿದ್ದನು ಎಂಬುದು ತಿಳಿದು ಬರುತ್ತಿದೆ. ಆದರೆ ಈ ಎರಡು ಕಾಲದ ರಾಜರನ್ನು ಫರೋಹ ಎಂದು ಸಂಬೋಧಿಸಿದ್ದು ಚರಿತ್ರಾರ್ಹವಾಗಿ ಎಲ್ಲೂ ದಾಖಲಾಗಿಲ್ಲ. ಹೀಗಿರುವಾಗ ಹಳೆಯ ಒಡಂಬಡಿಕೆಯ ಮೊದಲಪುಸ್ತಕವಾದ ಆದಿಕಾಂಡದ 12ನೇ ಅಧ್ಯಾಯದಲ್ಲಿ ಅಬ್ರಾಮನ ಕಾಲದ ರಾಜರ ಕುರಿತು ಆರು ಬಾರಿ ಸತ್ಯವೇದ (ಃSI ಪ್ರಕಟಿತ)ದಲ್ಲೂ, 7ಬಾರಿ ಕೇರಳ ಕಾಥೋಲಿಕ್ (ಞಛಿbಛಿ) ಪ್ರಕಟಿತ ಬೈಬಲ್‍ನಲ್ಲೂ, ಫರೋಹ ಎಂಬ ಪ್ರಯೋಗವು ಇತಿಹಾಸ ವಿರುದ್ಧ ಎಂಬುವುದು ಹಗಲಿನಂತೆ ವ್ಯಕ್ತವಾಗುತ್ತದೆ.
ಯೋಸೇಫ್ (ಯೂಸುಫ್ ನೆಬಿ) ಈಜಿಪ್ಟ್‍ಗೆ ಆಗಮಿಸಿದ್ದು ಹಿಕ್ಸೋಸ್ ವಂಶದವರ ಆಡಳಿತ ಸಮಯದಲ್ಲಾಗಿದೆ ಎಂಬುದು ಬೈಬಲ್ ಪಂಡಿತರ ಅಭಿಪ್ರಾಯವಾಗಿದೆ. ಖಿhe ರಿeತಿish eಟಿಛಿಥಿಛಿಟoಠಿeಜiಚಿ (ಪುಟ 252) ಮುಂತಾದ ಗ್ರಂಥಗಳಲ್ಲಿ ಈ ವಿಷಯವನ್ನು ಪ್ರತಿಪಾದಿಸಲಾಗಿದೆ. ಹಿಕ್ಸೋಸ್ ವಂಶವು ಯಾವ ಕಾಲದಲ್ಲಿ ಈಜಿಪ್ಟನ್ನು ಆಳಿತು ಎಂಬುದನ್ನು ಬೈಬಲ್ ವಿದ್ವಾಂಸ ಬಾಬುಪೌಲ್ ಹೇಳುತ್ತಾರೆ. “ಕ್ರಿ.ಪೂ.1720-1550ರ ಕಾಲದಲ್ಲಿ ಈಜಿಪ್ಟನ್ನು ಆಳಿದ್ದು ಹಿಕ್ಸೋಸ್ ವಂಶದ ಫರೋಹಗಳಾಗಿದ್ದರು”. ಇವರು ಏಷ್ಯಾ ಖಂಡದಿಂದ ವಲಸೆ ಬಂದು ಕಾಲಕ್ರಮೇಣ ಆಡಳಿತಗಾರರಾಗಿ ಬದಲಾದರು(ವೇದ ಶಬ್ಧರತ್ನಾಕರಂ,ಬೈಬಲ್ ನಿಘಂಟು 269).ಇದು ಈಜಿಪ್ಟ್‍ನ ನಡುಗಾಲದ ರಾಜ್ಯದ ಆಳ್ವಿಕೆಯ ಕಾಲವಾಗಿತ್ತು. ಅಂದು ರಾಜರನ್ನು ಫರೋಹಾ ಎಂದು ಕರೆಯುವ ವಾಡಿಕೆ ಇರಲಿಲ್ಲ ಎಂಬುದನ್ನು ನಾವು ಈಗ ತಾನೆ ಅರ್ಥೈಸಿಕೊಂಡಿದ್ದೇವೆ. ಯೋಸೇಫ್£ ಚರಿತ್ರೆಯನ್ನು ವಿವರಿಸುವ ಆದಿ ಕಾಂಡದ 37ನೇ ಅಧ್ಯಾಯದಿಂದ 50ನೆ ಅಧ್ಯಾಯದವರೆಗಿನ ಭಾಗಗಳಲ್ಲಿ ಹಲವು ಬಾರಿ ರಾಜರನ್ನು ಫರೋಹಾ ಎಂದು ಚರಿತ್ರೆಗೆ ವಿರುದ್ಧವಾಗಿ ಪ್ರಯೋಗಿಸಿದ್ದನ್ನು ಕಾಣಬಹುದು.
ದೈವಿಕ ಗ್ರಂಥವಾದ ಪವಿತ್ರ ಖುರ್‍ಆನ್ ಮೂಸಾನೆಬಿ(ಅ.ಸ)ರ ಕಾಲದ ಈಜಿಪ್ಟ್‍ನ ರಾಜರ ಕುರಿತು ಫಿರ್‍ಔನ್ ಎಂದು ವಸ್ತುನಿಷ್ಟವಾಗಿ ಪರಾಮರ್ಶಿಸಿದ್ದರೆ, ಇಬ್ರಾಹಿಂ(ಅ.ಸ) ಮತ್ತು ಯೂಸುಫ್ (ಅ.ಸ.)ರ ಚರಿತ್ರೆಯನ್ನು ವಿವರಿಸುವಾಗ ಅಂದಿನ ರಾಜರ ಕುರಿತು ಫಿರ್‍ಔನ್ ಎಂದು ಹೇಳಿಲ್ಲ. ಬದಲಾಗಿ,ಮಲಿಕ್ ಅಥವಾ ರಾಜ ಎಂದು ಮಾತ್ರ ಖುರ್‍ಆನ್‍ನಲ್ಲಿ ಪ್ರಯೋಗಿಸಲಾಗಿದೆ.
“ಒಂದು ದಿನ ಅರಸನು, ನಾನು ಸ್ವಪ್ನದಲ್ಲಿ ಏಳು ಕೊಬ್ಬಿದ ಹಸುಗಳನ್ನು ಏಳು ಬಡಕಲು ಹಸುಗಳು ತಿನ್ನುತ್ತಿರುವುದಾಗಿ ಸ್ವಪ್ನ ಕಂಡಿರುತ್ತೇನೆ(ಸೂರಾ ಯೂಸುಫ್ 43). “ರಾಜ ಹೇಳುತ್ತಾನೆ ನೀವು ಆತನನ್ನು ನನ್ನ ಬಳಿ ಕರೆಯಿರಿ(ಯೂಸುಫ್ 50)”.ಸೂರಾ ಯೂಸುಫ್‍ನ 54,72,76 ಎಂಬ ಈ ಸೂಕ್ತಗಳಲ್ಲಿ ರಾಜ (ಮಲಿಕ್) ಎಂಬ ಪ್ರಯೋಗಗಳನ್ನು ಕಾಣಬಹುದು. ಆದರೆ,ಮೂಸಾ ನೆಬಿ(ಅ.ಸ)ರವರ ಕಾಲದಲ್ಲಿದ್ದ ರಾಜರ ಕುರಿತು ಫಿರ್‍ಔನ್ ಎಂದು ಸ್ಪಷ್ಟವಾಗಿ ಖುರ್‍ಆನ್‍ನಲ್ಲಿ ಪ್ರಯೋಗಿಸÀಲಾಗಿದೆ. “ಆ ಜನಾಂಗಗಳ ತರುವಾಯ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳ ಸಹಿತ ಫಿರ್‍ಔನ್ ಮತ್ತು ಆತನ ಜನಾಂಗದ ಸರದಾರರ ಬಳಿ ಕಳುಹಿಸಿದೆವು”(ಸೂರಾ ಅ-ರಾಫ್ 103). ಅದೇ ಅಧ್ಯಾಯದ 109,113,123,127,130,137,141,ಸೂರಾ-ಅನ್‍ಫಾಲ್ ನ 52,54 ಹಾಗೂ ಸೂರಾ ಯೂನುಸ್‍ನ 75,79,83,88,90 ಮುಂತಾದ ಸೂಕ್ತಗಳಲ್ಲಿ ಮೂಸಾ(ಅ.ಸ.)ರವರ ಕಾಲದ ರಾಜರ ಬಗ್ಗೆ ಫಿರ್‍ಔನ್ ಎಂದು ಪ್ರಯೋಗಿಸಲಾಗಿದೆ. ಕ್ರಿ.ಪೂ 13ನೇ ಶತಮಾನದ ಮೊದಲಾರ್ಧದಲ್ಲಿ ಮೋಶೆ(ಮೂಸಾ ಪ್ರವಾದಿ) ಜನ್ಮ ತಾಳಿದ್ದರೆಂದು ವಿದ್ವಾಂಸರ ಆಭಿಪ್ರಾಯವಾಗಿದೆ.ಇದು ನೂತನ ರಾಜ್ಯದ ಕಾಲವಾಗಿದೆ.ಈ ಕಾಲದಲ್ಲಾಗಿತ್ತು ಈಜಿಪ್ಟ್‍ನ ರಾಜರ ಕುರಿತು ಫರೋಹಾ ಅಥವಾ ಫಿರ್‍ಔನ್ ಎಂದು ಕರೆಯಲು ಆರಂಭಿಸಿದ್ದು ಎಂಬುವುದನ್ನು ನಾವು ತಿಳಿದುಕೊಂಡೆವು.
ಮೋಶೆಯ ಕಾಲದ ಬಳಿಕ ಅನೇಕ ವರ್ಷಗಳ ತರುವಾಯ ಬೈಬಲ್‍ನ ಮೊದಲ ಪುಸ್ತಕ ಆದಿಕಾಂಡ ರಚಿಸಲ್ಪಟ್ಟಿತು. ಮೋಶೆಯ ಕಾಲ ಮುಗಿದ ಸುಮಾರು ಮೂರು ಶತಮಾನದ ಬಳಿಕ ಈ ಗ್ರಂಥದ ಮೊದಲ ಭಾಗಗಳು ರಚಿಸಲ್ಪಟ್ಟಿದ್ದಾಗಿರಬಹುದು. ಆದರಿಂದ ಮೋಶೆ ಬರೆದ ಯಾವುದೋ ಒಂದು ಹಸ್ತ ಪ್ರತಿಯಲ್ಲಿ ಬೈಬಲ್‍ನ ಆರಂಭ ಎಂಬುವುದು ಬುದ್ದಿ ಪರವಲ್ಲ (ವೇದ ಶಬ್ಧ ರತ್ನಾಕರಂ 127).
ಮೋಶೆಯ ಕಾಲದಲ್ಲಿದ್ದ ಈಜಿಪ್ಟ್ ರಾಜರನ್ನು ಫರೋವಾ ಎಂದು ಕರೆಯಲು ಆರಂಭವಾಯಿತು. ಆದ ಕಾರಣ, ಮೋಶೆಯ ಬಳಿಕ ಅನೇಕ ವರ್ಷಗಳ ನಂತರ ಹೇಳಿ-ಕೇಳಿಕೆಗಳ ಆಧಾರದಲ್ಲಿ ಗ್ರಂಥ ರಚನೆ ಮಾಡಿದ ಸುವಾರ್ತೆಗಾರರು,ಎಲ್ಲಾ ಕಾಲದ ಈಜಿಪ್ಟ್ ರಾಜರನ್ನು ಫರೋವಾ ಎಂದು ಕರೆಯಲಾಗುತ್ತಿತ್ತು ಎಂದು ತಪ್ಪಾಗಿ ತಿಳಿದು ಅಬ್ರಾಮ ಹಾಗೂ ಯೋಸೇಫನ ಕಾಲದ ರಾಜರನ್ನು ಕೂಡ ಫರೋಹ ಎಂದು ಗ್ರಂಥಗಳಲ್ಲಿ ಬರೆದಿಟ್ಟರು.
ದೈವಿಕ ಗ್ರಂಥವಾದ ಖುರ್‍ಆನ್, ಬೈಬಲ್‍ನ ನಕಲು ಪ್ರತಿಯಾಗಿದೆ ಎಂಬ ಕ್ರೈಸ್ತರ ವಾದವು ಖುರ್‍ಆನಿನ ಫಿರ್‍ಔನ್ ಎಂಬ ಚರಿತ್ರಾರ್ಹ ಪ್ರಯೋಗದ ಮುಂದೆ ಮಂಡಿಯೂರುತ್ತದೆ. ಇನ್ನು ಯಹ್ಯಾ ಪ್ರಯೋಗದ ಕುರಿತು ವಿಶ್ಲೇಷಣೆ ನಡೆಸೋಣ. ಫರೋಹಾ ಪ್ರಯೋಗದ ಮುಜುಗರವನ್ನು ಮರೆಮಾಚಲು ಕ್ರೈಸ್ತ ವಿದ್ವಾಂಸರು ವ್ಯಾಪಕವಾಗಿ ಈ ಪ್ರಯೋಗವನ್ನು ಗುರಾಣಿಯಾಗಿ ಬಳಸುತ್ತಾರೆ.
ಯಹ್ಯಾ - ಯೋಹಾನ
"ಓ, ಝಕರಿಯ್ಯಾ ನಾವು ನಿಮಗೆ ಓರ್ವ ಗಂಡು ಮಗುವಿನ ಬಗ್ಗೆ ಸುವಾರ್ತೆ ನೀಡುತ್ತೇವೆ. ಅವನ ಹೆಸರು ಯಹ್ಯಾ ಎಂದಾಗಿದ್ದು ನಾವು ಇದಕ್ಕೆ ಮುಂಚೆ ಈ ಹೆಸರಿನಿಂದ ಬೇರೆ ಯಾರನ್ನೂ ಕರೆದಿಲ್ಲ.(ಖುರ್‍ಆನ್ 19/7)
ಮುಪ್ಪಿನವರೆಗೆ ಸಂತಾನ ಭಾಗ್ಯ ಲಭಿಸಿದ ಝಕರಿಯ್ಯಾ ನೆಬಿ(ಅ.ಸ)ರವರಿಗೆ ಯಹ್ಯಾ ಎಂಬ ಹೆಸರಿರುವ ಓರ್ವ ಪುತ್ರನನ್ನು ನೀಡುವುದಾಗಿ ಅಲ್ಲಾಹನು ಈ ಸೂಕ್ತದಲ್ಲಿ ಸುವಾರ್ತೆ ನೀಡುತ್ತಾನೆ.
ಯಹ್ಯಾ ನೆಬಿ(ಅ.ಸ)ರವರ ಕುರಿತು ಬೈಬಲ್ ನಲ್ಲಿ ಪರಾಮರ್ಶಿಸುವುದು ಸ್ನಾನಿಕ ಯೋಹಾನ ಎಂದಾಗಿದೆ. ಆದ್ದರಿಂದಲೇ ಸೂರಾ ಮರ್ಯಮ್‍ನ ಈ ವಚನದಲ್ಲಿ ಹಿಂದೆ ಯಾರನ್ನು ಆ ಹೆಸರಿನಿಂz ಕರೆದಿಲ್ಲ ಎಂಬ ಉದ್ಧರಣೆಯು ವಸ್ತುನಿಷ್ಠವಲ್ಲವೆಂದು ಆಧುನಿಕ ಕ್ರೈಸ್ತರು ಹಲುಬುತ್ತಾರೆ. ಅವರ ವಾದದ ಕಾರಣ ಈ ಪರಾಮರ್ಶಿಯನುಸಾರ ಸ್ನಾನಿಕ ಯೋಹಾನನಿಗೆ ಮುಂಚೆ ಯೋಹಾನ ಎಂಬ ಹೆಸರಿರುವ ಓರ್ವನೂ ಇರಲಿಲ್ಲ ಎಂದಾಗಬೇಕು.ಆದರೆ ಜೆಕರ್ಯಾನ ಮಗನಾದ ಸ್ನಾನಿಕ ಯೋಹಾನನಿಗಿಂತ ಮುಂಚೆ ಜೀವಿಸಿದ್ದ ಅನೇಕ ಯೋಹಾನರ ಬಗ್ಗೆ ಬೈಬಲ್‍ನ ಹಳೆಯ ಒಡಂಬಡಿಕೆಯಲ್ಲಿ ಪರಾಮರ್ಶಿಸಲ್ಪಡುತ್ತಿದೆ. ಕಾರೇಹನ ಮಗ ಯೋಹಾನ(2,ಅರಸುಗಳು.25/23), ಯೋಶೀಯನ ಮಗ ಯೋಹಾನ(ಪೂರ್ವ ಕಾಲ ವೃತ್ತಾಂತ 3/15), ಎಲೈ ಗೋನೈನ ಪುತ್ರ ಯೋಹಾನ್(ಪೂರ್ವ ಕಾಲ ವೃತ್ತಾಂತ 3/24), ಆಜ್ಗಾದನ್ವರಲ್ಲಿ ಹಕ್ಕಾಚಾನನ ಮಗನಾದ ಯೋಹಾನ್(ಎಜ್ರನು 8/12) ಮುಂತಾದ ಅನೇಕ ಯೋಹಾನನ ಕುರಿತು ಬೈಬಲ್‍ನಲ್ಲಿ ಕಾಣಬಹುದು. ಯೋಹಾನ್ ಎಂಬ ಹಿಬ್ರೂ ಪದಕ್ಕೆ ಸಮನಾದ ಅರಬೀ ಪದವಾಗಿದೆ ಯಹ್ಯಾ ಎಂಬುವುದು ಎಂಬ ತಪ್ಪುಧಾರಣೆಯಿಂದ ಈ ವಿಮರ್ಶೆಗಳು ಉದ್ಭವಿಸುತ್ತದೆ.
ವಾಸ್ತವದಲ್ಲಿ ಯಹ್ಯಾ-ಯೋಹಾನ ಎಂಬುವುದು ವ್ಯತ್ತಸ್ಥ ಹೆಸರುಗಳಾಗಿವೆ. ಯೋಹಾನ ಎಂಬ ಹಿಬ್ರೂ ಪದವೂ ಯು,ಹನ್ನಾ ಎಂಬ ಎರಡು ಪದಗಳ ಏಕೀಕೃತ ಬರಹವಾಗಿದೆ.ಹನ್ನಾ ಎಂಬ ಪದದ ಅರ್ಥ ಅನುಕಂಪ,ಕಾರುಣ್ಯ ಎಂದಾಗಿದೆ.ಆಗ ಯೋಹಾನ ಎಂಬ ಪದದ ಅರ್ಥ ಯೆಹೋವನ ಕಾರುಣ್ಯ,ಯೆಹೋವನ ಅನುಕಂಪ ಎಂದಾಗಬಹುದು.ಆದರೆ,ಯಹ್ಯಾ ಪದದ ಅರ್ಥ ಜೀವಿಸು,ಲಜ್ಜಿಸು ಎಂದಾಗಿದೆ.ಈ ಎರಡು ಪದಗಳ ಅರ್ಥಗಳು ಕೂಡಾ ಬೇರೆ-ಬೇರೆ ಆಗಿದೆ.
ಯೋಹಾನ ಎಂಬ ಹಿಬ್ರೂ ಪದವು ಯಹ್ಯಾ ಎಂಬ ಅರಬೀ ಪದಕ್ಕೆ ಪರ್ಯಾಯ ಅಲ್ಲವೆಂದು ವೇಧ್ಯವಾಗುತ್ತದೆ.ಅದ್ದರಿಂದಲೇ ಅರಬ್ಬೀ ಭಾಷೆಯ ಬೈಬಲ್‍ಗಳಲ್ಲಿ ಯೋಹಾನನ್ನು ಪರಾಮರ್ಶಿಸುವ ಸ್ಥಳಗಳಲ್ಲಿ ಯಹ್ಯಾ ಎಂಬ ಅರಬ್ಬೀ ಪದಕ್ಕೆ ಬದಲಾಗಿ ಯುಹನ್ನಾ ಎಂದು ಉಪಯೋಗಿಸಿದ್ದನ್ನು ಕಾಣಬಹುದು. ಯೋಹಾನನ ಸುವಾರ್ತೆಗಳ ಕುರಿತು ಅರಬ್ಬೀ ಬೈಬಲ್‍ಗಳಲ್ಲಿ ಇಂಜೀಲು ಯಹನ್ನಾ, ಬಿಶಾರತು ಯುಹನ್ನಾ ಎಂದೂ, ಯೋಹಾನನ ಪತ್ರಗಳ ಕುರಿತು ರಿಸಾಲತು ಯುಹನ್ನಾ ಎಂದು ಪ್ರಯೋಗಿಸಿದ್ದನ್ನು ಕಾಣಬಹುದು. ಇನ್ನೂ ಸ್ನಾನಿಕ ಯೋಹಾನನ ಮುಂಚೆ ಜೀವಿಸಿದ್ದ ಯೋಹಾನರ ಕುರಿತು ಪರಾಮರ್ಶಿಸುವ ಕಡೆಗಳಲ್ಲಿ ಅರಬೀ ಭಾಷೆಯಲ್ಲಿರುವ ಹಳೆಯ ಒಡಂಬಡಿಕೆಯಲ್ಲಿ ಯುಹನ್ನಾ ಎಂದು ಬಳಸಿರುವುದು ಕಾಣಬಹುದಾಗಿದೆ.
ದೈವಿಕ ವಚನದಲ್ಲಿರುವ ಮಗುವಿನ ಕುರಿತು `ಯಹ್ಯಾ` ಎಂದು ಖುರ್‍ಆನ್ ಪರಾಮರ್ಶಿಸುತ್ತದೆ.ಹಾಗೂ ಬೈಬಲ್‍ನಲ್ಲಿ ಯೋಹಾನ್ ಅಂತಲೂ ಕಾಣಬಹುದು.ನಿಜವಾದ ನಾಮವೇನು? ಖುರ್ ಆನಿನ ಪರಾಮರ್ಶಿಯೋ? ಅಥವಾ ಬೈಬಲ್ ನಲ್ಲಿ ಹೇಳಿದ್ದೊ?ನಮಗೆ ಪರಿಶೋಧಿಸಬಹುದು.
ಸ್ನಾನಿಕ ಯೋಹಾನನನ್ನು ಅಂತ್ಯ ಪ್ರವಾದಿಯೆಂದು ವಿಶ್ವಾಸ ತಾಳಿರುವ ಮಾಂಡಿಯರು ಅಥವಾ ಮಂಡಾಯಿ ಎಂಬ ಒಂದು ವಿಭಾಗ ಇರಾನ್,ಇರಾಕ್‍ನ ಕೆಲ ಸ್ಥಳಗಳಲ್ಲಿ ಜೀವಿಸುತ್ತಿದ್ದಾರೆ. ಇವರು ಜ್ಞಾನ ಸ್ನಾನ(ಃಚಿಠಿಣism)ಕ್ಕೆ ತುಂಬಾ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಗಿನ್‍ಸ ರಾಬ, ದ್ರಾಷ ಇದ್ ಯಹ್ಯಾ, ಅಸ್ಫಾನ್ ಮನ್ ಪಾಷ ಸಿದ್‍ಗ ಇದ್ ನಿಷ್ಮತ, ತಫ್ಸೀರ್ ಪಗ್ರ, ಗೋನ್‍ಸದ ಅಲ್ಫ್ ತ್ರಿಸರ್ ಫಿಯಾಲ ಎಂಬುವುದು ಇವರ ಧರ್ಮ ಗ್ರಂಥಗಳಾಗಿವೆ. ಸೆಮಿಟೆಕ್ ಭಾಷೆಯ ಉಪ ಭಾಷೆಯಾದ ಅರಮಾಯಿಕ್‍ನೊಂದಿಗೆ ಸಾಮ್ಯತೆ ಇರುವ ಮಾಂಡಿಯೆಕ್ ಭಾಷೆಯಲ್ಲಿ ಹಲವಾರು ಗ್ರಂಥಗಳಿವೆ.
ಮಾಂಡಿಯರು ತಮ್ಮ ಪ್ರವಾದಿಯನ್ನು ಯಹ್ಯಾಯುಹನ್ನಾ ಎಂದು ಕರೆಯುತ್ತಿದ್ದರು.ಮಾಂಡಿಯರು ಸಾಮಾನ್ಯವಾಗಿ ಎರೆಡೆರಡು ಹೆಸರುಗಳನ್ನು ಹೊಂದಿರುತ್ತಾರೆ. ಒಂದನೇ ಹೆಸರಿಗೆ ಮಲ್‍ವಾಷಾ ನಾಮವೆಂದೂ,ಎರಡನೆಯೆದು ಲಖಬ್ ಎಂದೂ ಅರಿಯಲ್ಪಡುತ್ತದೆ. ಇದನುಸಾರ ಯಹ್ಯಾಯುಹನ್ನಾ ಎರಡು ಎರಡು ಹೆಸರುಗಳಲ್ಲಿ ಯಹ್ಯಾ ಎಂಬುವುದು ಮಲ್‍ವಾಷಾ ನಾಮ ಹಾಗೂ ಯುಹನ್ನಾ ಎಂಬುವುದು ಲಖಬ್ ಆಗಿದೆ. ಇದರ ಬಗ್ಗೆ ಇS ಜಡಿoತಿeಡಿ,ಖ mಚಿಛಿuಛಿh ಎಂಬವರು ರಚಿಸಿದ ಒಚಿಟಿಜiಚಿಛಿ ಜiಛಿಣioಟಿಚಿಡಿಥಿ ಎಂಬ ಗ್ರಂಥದಲ್ಲಿ ಸೂಚಿಸಲಾಗಿದೆ(185,190).
ಮಲ್‍ವಾಷಾ ನಾಮ ಎಂದರೆ ನಿಜನಾಮ ಹಾಗೂ ಲಖಬ್ ಎಂಬುವುದು ಉಪನಾಮವಾಗಿದೆ. ಮಾಂಡಿಯರು ಸಾಮಾನ್ಯವಾಗಿ ಲಖಬ್ ನಾಮವನ್ನು ಉಪಯೋಗಿಸುತ್ತಾರೆ. ಆದ್ದರಿಂದಲೇ ಅದು ಜನರಿಗೆ ಚಿರ ಪರಿಚಿತವಾಗಿರುವುದು.ಆಗ, ಯೋಹಾನ ಎಂಬ ಲಖಬ್ ಜನರಿಗೆ ಪರಿಚಿತವಾದ ನಾಮವಾಗಿರುತ್ತದೆ. ಆದರೆ, ನಿಜನಾಮ ಯಹ್ಯಾ ಎಂದಾಗಿದೆ.
ಪವಿತ್ರ ಖುರ್‍ಆನ್ ನಿಜ ನಾಮವಾದ ಯಹ್ಯಾ ಎಂಬ ನಾಮವನ್ನು ಪ್ರಯೋಗಿಸಿದೆ. ಅಂತಹ ಹೆಸರನ್ನು ಹೊಂದಿದ್ದ ಯಾವೊಬ್ಬನೂ ಹಿಂದೆ ಜನಿಸಿರಲಿಲ್ಲ. ಆದರೆ,ಹೇಳಿ ಕೇಳಿಕೆಗಳ ಆಧಾರದಲ್ಲಿ ಗ್ರಂಥ ರಚಿಸಿದ ಸುವಾರ್ತೆಗಾರರು ,ಜನರು ಸಾಮಾನ್ಯವಾಗಿ ಕರೆಯುತ್ತಿದ್ದ ಲಖಬ್‍ನ ಬಗ್ಗೆ ಮಾತ್ರ ವಿವರ ಹೊಂದಿದ್ದರು. ಆದ್ದರಿಂದಲೇ ಅವರು ಯೋಹಾನ ಎಂಬ ಪದವನ್ನುಪಯೋಗಿಸುತ್ತಿದ್ದರು.
ಖುರ್‍ಆನ್ ಬೈಬಲ್‍ನ ನಕಲು ಪ್ರತಿಯಾಗಿದ್ದರೆ ಪ್ರವಾದಿ ಮುಹಮ್ಮದ್(ಸ.ಅ)ರ ಕಾಲದಲ್ಲೂ ಅದಕ್ಕೂ ಮುಂಚೆಯೂ ಪ್ರಸಿದ್ಧವಾಗಿದ್ದ ಯೋಹಾನ್ ಎಂಬ ಪ್ರಯೋಗವು ಖುರ್‍ಆನ್‍ನಲ್ಲಿ ಕಾಣಬೇಕಾಗಿತ್ತು. ಆದರೆ, ಇದು ಮನುಷ್ಯರ ರಚನೆಯಲ್ಲ. ಲೋಕ ರಕ್ಷಕನಾದ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥÀವಾಗಿದೆ. ಆದ್ದರಿಂದಲೇ, ಪವಿತ್ರ ವೇದ ವಚನಗಳು ಚರಿತ್ರಾರ್ಹವಾಗಿಯೂ ವಸ್ತು ನಿಷ್ಟವಾಗಿಯೂ ದಾಖಲಾಗಿದೆ.

Comments
Post a Comment