ಗಾಂಧೀ ಹತ್ಯೆ ಮರು ತನಿಖೆ ಕಪೋಲಕಲ್ಪಿತ ಇತಿಹಾಸ ಸೃಷ್ಠಿಯ ಭಾಗ

ಗಾಂಧೀ ಹತ್ಯೆ ಮರು ತನಿಖೆ ಕಪೋಲಕಲ್ಪಿತ ಇತಿಹಾಸ ಸೃಷ್ಠಿಯ ಭಾಗ
                      _ ಇರ್ಫಾನ್ ಹಸನ್ ಹಲಸೂರು


ಬಲಪಂಥೀಯರು ನೈಜ ಚರಿತ್ರೆಯನ್ನು ತಿರುಚಿ ಅದರ ಬದಲಿಗೆ ತಮ್ಮ ಅನುಕೂಲತೆಗೆ ತಕ್ಕಂತೆ ತಮಗೆ ಬೇಕಾದ ವಿಷಯವನ್ನು ಲೇಖಿಸಲು ಹೊರಟಿದ್ದಾರೆ. ನಾಥ್‍ರೂಂ ಗೋಡ್ಸೆಯ ಮೇಲೆ ಪ್ರಭಾವ ಬೀರಿ ಅವನನ್ನ ಉತ್ತೇಜಿಸಿದ ಈ ಸಿದ್ದಾಂತ ಮತ್ತು ಅದರ ಪ್ರತಿಪಾದಕರು ಗಾಂಧೀಜಿಯ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಶಕ್ತ ಚಳುವಳಿಯಲ್ಲಿ ತೊಡಗಿದ್ದಾರೆ. ಸತತ ಏಳು ದಶಕಗಳಿಂದ ಸುಳ್ಳಿನ ಕಮ್ಮಟವನ್ನು ಭವ್ಯವಾಗಿ ನಿರ್ಮಿಸಿ ಅದನ್ನು ಭಾರತದ ಬಹುದೊಡ್ಡ ಸಮಾಜವು ನಂಬುವಂತೆ ಮಾಡಿದೆ. ಇವರು ಈಗ ಎರಡನೇ ಹಂತದ ನಿರ್ಮಾಣ ಕಾರ್ಯದಲ್ಲಿ ಶ್ರಮವಹಿಸುತ್ತಿದಾರೆ. ಗಾಂಧೀಯ ಹತ್ಯೆಯ ಪ್ರಕರಣದಲ್ಲಿ ಗೊಂದಲ ಸೃಷ್ಟಿಸಲು ಅವರು ಶ್ರಮಿಸುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಗಾಂಧಿ ಹತ್ಯೆಯ ಮರು ತನಿಖೆ ನಡೆಸುವ ಸಲುವಾಗಿ ಮೇಲ್ಮನವಿಯನ್ನು ಈಗಾಗಲೇ ಪುರಸ್ಕರಿಸಿದೆ. ನ್ಯಾಯಾಲಯವು ನ್ಯಾಯಾಲಯದ ಸಲಹೆಗಾರರನ್ನು (ಅಮಿಕಸ್ ಕ್ಯೂರಿ) ನೇಮಿಸಿ ಅಕ್ಟೋಬರ್ 30 ಕ್ಕೆ ವಿಚಾರಣೆಗೆ ದಿನ ನಿಗದಿಪಡಿಸಿತು (ಅದನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲ ಮುಂದೂಡಿದೆ).  ಅಚ್ಚರಿಯ ವಿಷಯವೇನೆಂದರೆನೆಂದರೆ ಇಷ್ಟೊಂದು ಸ್ಪಷ್ಟ ಅವಿವೇಕಿ ಕೋರಿಕೆಯನ್ನು ನ್ಯಾಯಾಲಯವು ವಜಾ ಮಾಡದೆ ಸ್ವೀಕರಿಸಿದ್ದು. ಈ ರೀತಿ ಗೊಂದಲವನ್ನು ಸೃಷ್ಟಿಸಿ ಜನರೆಡೆಯಲ್ಲಿ ತಪ್ಪು ಗ್ರಹಿಕೆಗೆ ಎಡೆಮಾಡಿಕೊಡುತ್ತಿರುವುದು ಇದು ಮೊದಲನೆಯದೇನಲ್ಲ. ಯಾವ ಹಿಂದು ಬಲಪಂಥೀಯ ಸಂಘಟನೆಯು ಗಾಂಧೀ ಹತ್ಯೆ ಗೈದವನಿಗೆ ಸೈದ್ದಾಂತಿಕ ಪ್ರಚೋದನೆ ನೀಡಿತ್ತೋ ಅದೇ ಸಂಘಟನೆಯ ಪೂರ್ವ ಯೋಜಿತ ಕಾರ್ಯವಾಗಿದೆ ಎಂಬುವುದು ಗೋಚರವಾಗುತ್ತದೆ. ಬಾಂಬೆ ಹೈ ಕೋರ್ಟಿನಲ್ಲಿ ಗಾಂಧಿ ಹತ್ಯೆಯ ಮರು ತನಿಖೆಯ ವಿಷಯವನ್ನು ಪ್ರಸ್ತಾಪಿಸಿ ಬಾಂಬೆ ಮೂಲನಾದ ಪಂಕಜ್ ಫಡ್ನಿಸ್ ಎಂಬ ಸಂಶೋಧಕ ಬಂದು ಮೊಕದ್ದಮೆಯನ್ನು ಹೂಡಿದರು. ಅದರಲ್ಲಿ ಗಾಂಧೀ ಹತ್ಯೆಯಲ್ಲಿ ಮತ್ತೋರ್ವ ಬಂದೂಕು ಧಾರಿಯ ಕೈವಾಡ ಮತ್ತು ಘಟನೆಯ ಸ್ಥಳ ಆ ವ್ಯಕ್ತಿಯಿಂದ ಆರಿಸಲ್ಪಟ್ಟ ಗುಂಡುಗಳ ಬಗ್ಗೆ ಉಲ್ಲೇಖಿಸಲಾಗಿತ್ತು.
ಆದರೆ ಬಾಂಬೆ ಹೈ ಕೋರ್ಟ್ ಈ ಅರ್ಥ ಹೀನವಾದ ಈ ಮನವಿಯನ್ನು ತಡೆಹಿಡಿದು ಅದನ್ನು ಕಸದ ಬುಟ್ಟಿಗೆಸೆದು ಮೂಲೆ ಗುಂಪಾಗಿಸಿತು.
ಈ ಮನವಿಯನ್ನ ಸಲ್ಲಿಸಿದ್ದವರು ವೀರ ಸಾವರ್ಕರ್‍ನ ಕಟ್ಟಾ ಭಕ್ತನಾಗಿದ್ದು, ಇವರ ನೈಜ ಉದ್ದೇಶ ವೀರ ಸಾವರ್ಕರ್ ಹೆಸರಿಗೆ ಬಂದಿರುವ ಕಳಂಕವನ್ನು ನೀಗಿಸುವುದಾಗಿದೆ. 1969 ರಲ್ಲಿ ನ್ಯಾ. ಕಪೂರ್ ಆಯೋಗ  ಹೊರಡಿಸಿದ ತನಿಖಾ ವರದಿಯನ್ನು ಅನೂರ್ಜಿತಗೊಳಿಸಿ ಗಾಂಧಿ ಹತ್ಯೆಯ ಬಗೆ ಹೊಸ ಪರಿಶೀಲನೆ ನಡೆಸಬೇಕೆಂಬುವುದು ಇವರ ಗುರಿಯಾಗಿದೆ. ಆದರೆ, ಈಗ ಈ ಸರ್ವೋಚ್ಚ ನ್ಯಾಯಾಲಯವು ಪಡ್ನೀಸ್ ಸಲ್ಲಿಸಿದ್ದ ಮನವಿಯನ್ನು ಪರಸ್ಕರಿಸುವುದು ನಿಜಕ್ಕೂ ಖೇದಕರವೇ ಸರಿ.
ಇಲ್ಲಿ ಗಮನಾರ್ಹ ವಿಷಯವೇನೆಂದರೆ ಕಪೂರ್ ಕಮೀಷನ್‍ನ ಸಂಶೋಧನಾ ವರದಿಯು, ಗಾಂಧಿ ಹತ್ಯೆಯ  ಪಿತೂರಿಯಲ್ಲಿ ಸಾಕ್ಷಿ ಸಮೇತ  ಸಾವರ್ಕರ್ ಪಾತ್ರ ಮತ್ತು ಆರೆಸ್ಸೆಸ್‍ನ ಕೈವಾಡವನ್ನು ಬಯಲಿಗೆಳೆದು  ಅಂದಿನಿಂದ ಸಾವರ್ಕರ್‍ನ ಕೃತ್ಯ ನಿಸ್ಸಂದೇಹವೆಂಬಂತೆ  ರುಜುವಾತಾಗಿದ್ದು  ಆತನ ಅನುಯಾಯಿಗಳಿಗೆ ಹಾಗೂ ಸಂಘಪರಿವಾರದ ಪಡೆಗಳಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸಿದೆ. ಬಾಂಬೆ ಹೈ ಕೋರ್ಟ್  ಇವರ ಈ ಮನವಿಯನ್ನು ತಿರಸ್ಕರಿಸಿ ಮತ್ತು ಸುಪ್ರೀಂ ಕೋರ್ಟ್ ಒಪ್ಪಿಕೊಂಡು ವಿಚಾರಣೆಗೆ ಒಳಪಡಿಸುತ್ತಿರುವುದು ಇವರ ಪೂರ್ವ ಯೋಜಿತ ಭಾಗವಾಗಿದೆ. ಸಮಕಾಲೀನ ಚರಿತ್ರೆಯನ್ನು ವ್ಯಾಜಗೊಳಿಸಿ ಅವರಿಗೆ ಇಷ್ಟ ಬಂದ ಕಥೆಯನ್ನು ಇತಿಹಾಸವೆಂದು ಬಿಂಬಿಸುವುದು ಇವರ ಚಾಳಿ. ಎರಡನೇ  ಬಂದೂಕು ಧಾರಿಯ ಹಾಜರಿಯನ್ನು ಕಲ್ಪಿಸಿ, ಅವನಿಂದ  ಬಂದ 4ನೇ ಗುಂಡಿನಿಂದ 1948 ರಂದು ನಡೆದ ಗುಂಡಿನ ದಾಳಿಯಲ್ಲಿ ಗಾಂಧೀ ಅಸ್ತಂಗತರಾದರು ಎಂಬುದು ಇವರ ವಾದ. ಇವರ ಆರೋಪವು ಸೂಚಿಸುವುದೇನೆಂದರೆ ನಾಥೂರಾಂ ಗೋಡ್ಸೆ 9 ಮಿ.ಮಿ ಬಂದೂಕಿನ ಬಳಿಯಿಂದ 2.5 ಅಡಿ ದೂರದಲ್ಲಿ ಗಾಂಧಿಯವರಿಗೆ ಗುರಿ ಮಾಡಿದ್ದನು ಎಂದಾಗಿದೆ.

ಅಪ್ರತ್ಯಕ್ಷ ವ್ಯಕ್ತಿ
ಸುಪ್ರೀಂ ಕೋರ್ಟ್ ಪುರಸ್ಕರಿಸಿದ ಮನವಿ ಪತ್ರದಲ್ಲಿ ಅಪ್ರತ್ಯಕ್ಷ ಹಾಜರಿ ಮತ್ತು 1948 ರಲ್ಲಿ ಜನವರಿ 30 ರಂದು ಬಿರ್ಲಾ ಹೌಸಿನಲ್ಲಿ  ನಡೆದ ಗುಂಡಿನ ದಾಳಿಯಲ್ಲಿ ಅದೃಶ್ಯ ವ್ಯಕ್ತಿಯ  ಬಂದೂಕಿನಿಂದ ಹಾರಿದ ಗೋಲಿಯು ಗಾಂಧಿ ಹತ್ಯೆಗೆ ಕಾರಣ ಎಂದು ಆರೋಪಿಸಲಾಗಿದೆ. ಈ ಆರೋಪದ ಮೂಲಕ ಸಾಬೀತು ಪಡಿಸಲು ಹೊರಟಿರುವುದೇನೆಂದರೆ ನಾಥೂರಾಂ ಗೋಡ್ಸೆಯು ತಾನು 2.5 ಅಡಿ ಅಂತರದಿಂದ ತನ್ನ 9 ಮಿ.ಮಿ ಬಂದೂಕಿನಿಂದ ಗಾಂಧೀಜಿಯ ಎದೆಗೆ ಹಾರಿಸಿದಾಗ ಗಾಂಧಿ ಎದೆಯ ನಾಭಿ ರೇಖೆಯ 3 ಅಂಗುಲದಷ್ಟು ಬಿದ್ದ ಗುಂಡುಗಳು ಗಾಂಧಿಯನ್ನ ಬಲಿ ತೆಗಿಯಲೇ ಇಲ್ಲ.  ಜನವರಿ 30 ರಂದು ಸಂಜೆ ಬಿರ್ಲಾ ಹೌಸಿನ ಆವರಣದಲ್ಲಿ ಹತ್ಯೆ ನಡೆಯುವಂತಹ ಸಂದರ್ಭದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಅವರೆಡೆಯಲ್ಲಿ ಇವರು ಆರೋಪಿಸುವಂತಹ ಎರಡನೇ ಬಂದೂಕುದಾರ ಯಾರ ಗಮನಕ್ಕೂ ಸಿಲುಕದಂತೆ ಗಾಂಧಿಯೆಡೆಗೆ ಗುಂಡುಹಾರಿಸಿದಲ್ಲದೆ ಘಟನಾ ನಂತರ ಯಾರ ಶ್ರದ್ಧೆಗೂ ಬಾರದಂತೆ ಯಶಸ್ವಿಯಾಗಿ ಪರಾರಿಯಾಗಿದ್ದ ಎಂಬುದೇ ಸತ್ಯವಾದರೇ ಅವನು ನಿಜಕ್ಕೂ ಅದೃಷ್ಟ ಮನುಷ್ಯನೇ ಆಗಿರಲಿಕ್ಕೆ ಸಾಧ್ಯ. ಸರಿ, ಹತ್ಯೆಯ ನಂತರ ಗೋಡ್ಸೆಯ ಜೊತೆಗಿದ್ದ ನಾರಾಯಣ ಆಪ್ಟೆ ಮತ್ತು ವಿಷ್ಣು ರಾಮಕೃಷ್ಣ ಕರ್ಕರೆ ಘಟನಾ ಸ್ಥಳದಿಂದ ಕಾಲುಕಿತ್ತಿದ್ದೂ ನಿಜ. ಇವರು ಗೋಡ್ಸೆಯ ಜೊತೆಗಿದ್ದ ನಿರಾಯುಧ ಭಂಟರಾಗಿದ್ದರು. ಮತ್ತು ಅವರು ಅಲ್ಲಿರಲು ಕಾರಣ, ಗೋಡ್ಸೆಯ ಈ ಯೋಜಿತ ಕಾರ್ಯಕ್ಕೆ ಯಾರು ಅಡ್ಡಿ ಪಡಿಸದಂತೆ ಖಚಿತಪಡಿಸಿಕೊಳ್ಳಲು ಹಾಗೂ ಸಾಧ್ಯವಾದರೆ, ಕೃತ್ಯವೆಸಗಿದ ನಂತರ ಸ್ಥಳದಿಂದ ಮೆಲ್ಲನೆ ನುಣುಚಿಕೊಳ್ಳುವ ಯೋಜನೆಯಾಗಿತ್ತು.
ಆದರೆ ಇವರ ಎಲ್ಲಾ ಯೋಜನೆಗಳು ಉಲ್ಟಾ ಹೊಡೆದವು. ಇವರುಗಳನ್ನು ಬಿರ್ಲಾ ಹೌಸಿನ ರಘುಮಾಲಿ ಹಿಡಿದಿಟ್ಟು ಗೋಡ್ಸೆಯನ್ನು ನಿರಾಯುಧನನ್ನಾಗಿಸಿದನು. ನಂತರ ಭುಗಿಲೆದ್ದ ಗೊಂದಲದ ಪರಿಸ್ಥಿತಿಯಲ್ಲಿ  ಆಪ್ಟೆ ಮತ್ತು ಕರ್ಕರೆ ಅಲ್ಲಿಂದ ತಪ್ಪಿಸಿಕೊಂಡರು. ಯಾವೊಬ್ಬನು ಎರಡನೇ ಬಂದೂಕುದಾರನನ್ನು ಕಾಣಲೂ ಇಲ್ಲ, ಕೇಳಲು ಇಲ್ಲ. ಕಾರಣ, ಅಂತಹ ವ್ಯಕ್ತಿ ಇರಲೇ ಇಲ್ಲ.
ಒಂದು ಕಾಲ್ಪನಿಕ ಗುಂಡು
ಮನವಿಗಾರನ ಆರೋಪದಂತೆ ನಾಲ್ಕನೇ ಗುಂಡು ಎರಡನೇ ವ್ಯಕ್ತಿಯಿಂದ ಹಾರಿಸಿದ್ದಾಗಿದೆ. ವಾಸ್ತವವಾಗಿ ಗಾಂಧಿ ಹತ್ಯೆಗೆ ಕಾರಣ, ಈ ಗುಂಡಾಗಿದೆ. (ಒಂದು ಪತ್ರಿಕಾ ವರದಿಯಲ್ಲಿ ಓದಿದಂತೆ) ಅರ್ಜಿದಾರ ತನ್ನ ಮನವಿಯಲ್ಲಿ ಸಾಕ್ಷಿಯಾಗಿ ಒಬ್ಬ ಪ್ರತ್ಯಕ್ಷದರ್ಶಿಯಾದ ಮನುಬೆನ್ ಬರೆದಂತೆ ಗಾಂಧೀಜಿಯ ಮೃತ ದೇಹ ಬಿರ್ಲಾ ಹೌಸಿನೊಳಗೆ ಕೊಂಡು ಹೋದ ನಂತರ ಮೃತ ದೇಹವನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಗಾಂಧಿಜಿಯ ನಡು ಮೈಗೆ ತೂಗು ಹಾಕುತ್ತಿದ್ದ ಶಾಲಿನ ಪದರದೊಳಗೆ ಒಂದು ಗುಂಡು ಸಿಲುಕಿಕೊಂಡಿರುತ್ತದೆ. ಮನವಿಗಾರನ ಪ್ರಕಾರ ಇದಾಗಿದೆ ಆ ನಿಗೂಢ ವ್ಯಕ್ತಿಯ 4ನೇ ಗುಂಡು.
ಗಾಂಧಿ ಹತ್ಯೆಯ ತನಿಖೆಯು ದೃಢಪಡಿಸಿದೇನೆಂದರೆ ಗೋಡ್ಸೆಯು ಹಾರಿಸಿದ 3 ಗುಂಡುಗಳು ಗಾಂಧಿ ಎದೆಯನ್ನು ಸೀಳಿ ಒಳ ಹೊಕ್ಕಿದ್ದು ಅದರ 3 ಗಾಯದ ಗುರುತುಗಳು ಗೋಚರವಾಗುತ್ತಿತ್ತು. ಮತ್ತು ಅದರಲ್ಲಿದ್ದ ಎರಡು ಗುಂಡುಗಳು ಗಾಂಧೀಜಿಯ ಶರೀರವನ್ನು ಛೇದಿಸಿ ಹೊರ ಚೆಲ್ಲಿದ್ದು, ಅದರ ತೂತು ಬೆನ್ನಿನ ಹಿಂಬದಿಯಲ್ಲಿದ್ದವು. ಗಾಂಧಿಗೆ ಹಾರಿಸಿದ ಮೂರು ಗುಂಡುಗಳಲ್ಲಿ ಒಂದು ಸುಮಾರು ಗಾಂಧಿಯಿಂದ 10 ಅಡಿ ಅಂತರದಲ್ಲಿ ಹಿಂದಕ್ಕೆ ಹಾರಿತು. ಅದನ್ನು ಪೋಲಿಸರು ಬಿರ್ಲಾ ಹೌಸಿನ ಹುಲ್ಲು ಮೈದಾನದ ಹಿಂದಿರುವ ಹೂದೋಟದ ಅಂಚಿನಲ್ಲಿ ಪತ್ತೆ ಹಚ್ಚಿದರು. ಬಾಪುವಿನ ದೇಹದಲ್ಲಿ ಉಳಿದಿದ್ದ ಮತ್ತೊಂದು ಗುಂಡು ರಾಜ್‍ಘಾಟ್‍ನಲ್ಲಿ ಅಂತ್ಯ ಸಂಸ್ಕಾರದ ನಂತರ ಚಿತಾ ಭಸ್ಮವನ್ನು ಶೇಖರಿಸುವಾಗ ದ್ರವಿಸಿದ ಸೀಸದ ಮುದ್ದೆಯ ರೂಪದಲ್ಲಿತ್ತು.
ಗಾಂಧೀಜಿಯ ಶಾಲಿನ ನೆರಿಗೆಯೊಳಗೆ ಪತ್ತೆಹಚ್ಚಿದ ಗುಂಡಿನ ಬಗ್ಗೆ ಮತ್ತೊಂದು ಕುತೂಹಲಕಾರಿ ಕಥೆಯಿದೆ. ಪ್ರಕರಣದ ಅಂದು ಸಂಜೆ ಕಿರಿಯ ಮಗನಾದ ದೇವದಾಸ್ ಗಾಂಧಿ ಆ ಗುಂಡಿನ ಮೊಕದ್ದಮೆ ದಾಖಲಾದ ತುಘಲಕ್ ರೋಡ್ ಪೋಲಿಸ್ ಠಾಣೆಗೆ ಕೊಂಡೊಯ್ದನು. ಅದೇ ಜೈಲಿನಲ್ಲಿ ಗೋಡ್ಸೆಯು ಬಂಧಿತನಾಗಿದ್ದನು. ಆ ಜೈಲಿನ ರಚನೆ ಹೇಗಿತ್ತೆಂದರೆ ಜೈಲಿನಲ್ಲಿ ಬಂಧಿತರಾಗಿದ್ದ ಖೈದಿಗಳು ಜೈಲಿಗೆ ಬರುವವರು ಮತ್ತು ಹೊರಹೋಗುವವರನ್ನು ಕಾಣಬಹುದಾಗಿತ್ತು. ವಿಷೇಶವೆಂದರೆ 1948 ರಲ್ಲಿ ಇದ್ದಂತಹ ಸ್ಥಿತಿಯಲ್ಲೇ ಈಗಲೂ ಕೂಡಾ ಇದೆ. ನನ್ನ “ಐeಣ us ಞiಟಟ ಉಚಿಟಿಜhi” ಪುಸ್ತಕದ ಸಂಶೋಧನೆ ಯ ಅಗತ್ಯಕ್ಕಾಗಿ ಒಮ್ಮೆ ಕಾಣಲೂ ಹೋಗಿದ್ದೆ. ಹಾಗೆಯೇ ತುಘಲಕ್ ರೋಡ್‍ನ ಆ ಪೋಲಿಸ್ ಠಾಣೆಯನ್ನ ಸಮೀಪಿಸುತ್ತಿದ್ದಂತೆ ಗೋಡ್ಸೆಯು ಇವರನ್ನು ಕಂಡು ಒಮ್ಮೆ ಭೇಟಿಯಾಗಿ ಮಾತನಾಡಬೇಕೆಂಬ ಇಂಗಿತ ವ್ಯಕ್ತಪಡಿಸುತ್ತಾನೆ ಮ್ತತು ಅದಕ್ಕೆ ಅನುಮತಿ ದೊರಕದೆ ಇದ್ದಾಗ ವಿವಾದ ಉಂಟುಮಾಡಲು ಪ್ರಯತ್ನಿಸುವ ಒಂದು ಸಂಭವವಿದೆ.
ಈ ವಿವಾದಾತ್ಮಕ ನಾಲ್ಕನೇ ಗುಂಡು ಗೋಡ್ಸೆ ಹಾರಿಸಿದ ಗುಂಡಿನಲ್ಲಿ 2ನೆಯದ್ದೋ ಅಥವಾ 3ನೆಯದ್ದೋ ಆಗಿರುವ ಸಾಧ್ಯತೆ ಇದೆ ಎಂಬುದಾಗಿದೆ ವಾಸ್ತವ.  3 ಗುಂಡುಗಳು ಅಥವಾ ಇವುಗಳಲ್ಲಿ ಯಾವುದೋ ಒಂದು ಗುಂಡು ಗಾಂಧಿಯ ಸಾವಿಗೆ ಕಾರಣವಾಗಿರಬಹುದು. ಹಾರಿಸಲ್ಪಟ್ಟ 3 ಗುಂಡುಗಳ ಪಾತ್ರವಿದೆ ಎಂಬುವುದು ನಿಸ್ಸಂಶಯ. 4ನೇ ಗುಂಡಿನ ಬಗ್ಗೆ ಯಾವುದೇ ರೀತಿಯ ಸುಳಿವೋ, ಸಾಕ್ಷಿಯೋ ಅಲಭ್ಯ ಏಕೆಂದರೆ ಆ ರೀತಿಯ ಒಂದು ಗುಂಡು ಇರಲೇ ಇಲ್ಲ. ಹತ್ಯೆಯ ನಂತರದ ಸಂಶೋಧನೆಯಲ್ಲಿ ಒಂದು ಗುಂಡು ಗ್ವಾಲಿಯರ್‍ನ ಪ್ರಚಾರ ವಾಡ ಎಂಬ ಸ್ಥಳದಲ್ಲಿ ಪತ್ತೆ ಹಚ್ಚಲಾಗಿದೆ. ಅದೇನಾದರೂ ಗೋಡ್ಸೆಯು ಬಳಸಿದ ಅದೇ ಬಂದೂಕಿನಿಂದ ಆಗಿರಬಹುದೇ ಎಂಬ ಸಂಶಯದಿಂದ ಈoಡಿeಟಿsiಛಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಗೋಡ್ಸೆ ಉಪಯೋಗಿಸಿದ 9ಮಿ.ಮಿ    ಬಂದೂಕಿನ ಗುಂಡಲ್ಲವೆಂದು ಸಾಬೀತಾಗುತ್ತದೆ.
9 ಮಿ.ಮಿ. ಃeಡಿಡಿeಣಣಚಿ  ಬಂದೂಕಿನ ಕಥೆ
ಅರ್ಜಿದಾರರ ಆರೋಪ ಕೂಟದಲ್ಲಿ ಮತ್ತೊಂದು ಆರೋಪವೆಂದರೆ ಸಾಮ್ಯ ಸರಣಿ ಸಂಖ್ಯೆಗಳನ್ನು ಹೊಂದಿರುವ ಎರಡು ಃeಡಿಡಿeಣಣಚಿ    ಬಂದೂಕುಗಳಿವೆ ಎಂಬುವುದು. ಹೌದು ಈ ರೀತಿಯ ಎರಡು ಸ್ವಾಮ್ಯ ಸಂಖ್ಯೆಗಳನ್ನು ಹೊಂದಿರುವ ಬಂದೂಕುಗಳಿರುವುದು ವಾಸ್ತವ. ಅವೆರಡು ಈಗ ರಾಜಘಾಟ್‍ನ ಓಚಿಣioಟಿಚಿಟ ಉಚಿಟಿಜhi ಒuseum ನಲ್ಲಿವೆ. ಅದರಲ್ಲಿ ಒಂದು ಕೊಲೆಗಾರನಿಂದ ವಶಪಡಿಸಿಕೊಂಡ ಅಸಲಿ ಅಸ್ತ್ರ ಬಳಿಕ ಅದರ ಜೊತೆಗೆ ಕೆಲ ಅವಶೇಷಗಳನ್ನು ಅಂದು ಗಾಂಧಿ ಸ್ಮಾರಕ ನಿಧಿಗೆ ಒಪ್ಪಿಸಲಾಗಿತ್ತು. ಕಾಲಾಂತರದಲ್ಲಿ ಇದನ್ನು ಓಚಿಣioಟಿಚಿಟ ಉಚಿಟಿಜhi ಒuseum ಗೆ ಮಾರ್ಪಡಿಸಲಾಯಿತು. ಮತ್ತೊಂದು ಸಾಮ್ಯ ಬಂದೂಕು ಅದು ಕೊಲೆಗಾರ ಬಳಸಿದ ಅಸ್ತ್ರದ ನಕಲಿ ರೂಪವಾಗಿದೆ. ಇದನ್ನು ಆ ಮ್ಯೂಸಿಯಂನಲ್ಲಿ ಕಾಲಕಾಲಕ್ಕೆ ಪ್ರದರ್ಶನಕ್ಕಿಡಲಾಗುತ್ತದೆ. ಇದಲ್ಲದೇ ಒಂದೇ ಸಾಮ್ಯರ್ಶರೇಣೀ ಸಂಖ್ಯೆಯನ್ನು ಹೊಂದಿರುವ ಬೇರೆ ಬೆರೆಟ್ಟಾ ಬಂದೂಕು ಇಲ್ಲ.

ಈ ಅಸ್ತ್ರವು ಗೋಡ್ಸೆಯ ಕೈಗೆ ಹೇಗೆ ತಲುಪಿತು? ಎಂಬ ವಿಚಾರ ಕುತೂಹಲಕಾರಿ 1948 ಜನವರಿ 28 ರವರೆಗೂ ಗೋಡ್ಸೆ ಮತ್ತು ಆಪ್ಟೆ ಬಳಗಕ್ಕೆ ತಮ್ಮ ಯೋಜನೆಯನ್ನು ಸಾಕ್ಷಾತ್ಕಾರ ಗೊಳಿಸುವಂತಹ ಯಾವುದೇ ಆಯುಧಗಳು ಭರವಸೆ ಇಡತಕ್ಕ ರೀತಿಯಲ್ಲಿ ಲಭ್ಯವಿರಲಿಲ್ಲ.
ಜನವರಿ 20 ರಂದು ಗಾಂಧಿಯನ್ನು ಕೊಲ್ಲಲು ಎಲ್ಲಾ ಪೂರ್ವ ಸಿದ್ದತೆಗಳು ನಡೆದಿದ್ದವು. ಅದಕ್ಕಾಗಿ ಅವರ ಬಳಿ 3 ರಿವಾಲ್ವರುಗಳಿದ್ದವು. ಅವುಗಳು ಯಾವುದೇ ಕಾರ್ಯಕ್ಷಮತೆ ಹೊಂದಿಲ್ಲದಿದ್ದರಿಂದ ಅವರ ಪ್ರಯತ್ನವು ಫಲಕಾರಿಯಾಗಲಲ್ಲ. ಅವರಲ್ಲಿದ್ದ 2 ಬಂದೂಕುಗಳು ನಿಷ್ಪ್ರಯೋಜಕ ತೋಟಾಗಳನ್ನು ಹೊಂದಿದ್ದವು. ಮತ್ತೊಂದು ಗೋಪಾಲ ಗೋಡ್ಸೆÉ್ಸಯ ಬಳಿಯಿದ್ದಂತಹ ಸೇನಾ ಬಂದೂಕು ಉಪಯೋಗಿಸದೇ ಇದ್ದುದ್ದರಿಂದ ಅದರ ತೋಟಾ ನಿಷ್ಕ್ರಿಯವಾಗಿತ್ತು.
ಜನವರಿ 21-28 ರವರೆಗೆ ಒಂದು ಯೋಗ, ಆಯುಧಕ್ಕೋಸ್ಕರ ಗೋಡ್ಸೆ ಮತ್ತು ಭಂಟರು ಹಲವು ಮೂಲಗಳನ್ನು ಜಾಲಾಡುತ್ತಾರೆ. ಕೊನೆಯ ಪ್ರಯತ್ನವೆಂಬಂತೆ ಗೋಡ್ಸೆಯು ಗ್ವಾಲಿಯರ್‍ಗೆ ತೆರಳುತ್ತಾನೆ. ಅಂದಿನ ಕಾಲದಲ್ಲಿ ಗ್ವಾಲಿಯರ್ ಎಂಬುವುದು ಅಕ್ರಮ ಶಸ್ತ್ರಾಸ್ತ್ರಗಳ ದಂಧೆಯಲ್ಲಿ ಪ್ರಸಿದ್ದಿ ಹೊಂದಿತ್ತು. ದತ್ತಾತ್ರೇಯ ಪ್ರಚೂರ ವೃತ್ತಿಯಲ್ಲಿ ವೈದ್ಯನಾಗಿದ್ದ. ಅಖಿಲ ಭಾರತೀಯ ಹಿಂದೂ ಮಹಾ ಸಭಾ ಸಂಘದ ಓರ್ವ ಸದಸ್ಯ ಹಾಗೂ ಸಾವರ್ಕರ್‍ನ ಕಟ್ಟಾ ಅನುಯಾಯಿಗಳಲ್ಲೊಬ್ಬನಾಗಿದ್ದ. ಗೋಡ್ಸೆ ಮತ್ತು ಆಪ್ಟೆಗೆ ಇವನು ಆಪ್ತನಾಗಿದ್ದರಿಂದ ಬಂದೂಕು ಲಭ್ಯವಿರುವ ಮಾಹಿತಿ ಮೇರೆಗೆ ಜನವರಿ 28 ರಂದು ಬೆಳಗ್ಗೆ ಪ್ರಚೂರನ ಬಳಿ ಇವರಿಗೆ ಅಗತ್ಯವಿರುವ ಸಹಾಯವನ್ನು ಪಡೆಯಲು ತೆರಳುತ್ತಾರೆ. ಆರಂಭದಲ್ಲಿ ಪ್ರಚೂರನು ನಿರಾಕರಿಸಿದನು. ಸಾವರ್ಕರ್ ಅನುಯಾಯಿ ಎಂಬ ಕಾರಣಕ್ಕೆ ತನ್ನ ನೌಕರನಾದ ಗಂಗಾಧರ ದಂಡಾವಟೆಗೆ ಈ ಕೆಲಸವನ್ನು ವಹಿಸಿಕೊಟ್ಟು ಗೋಡ್ಸೆ ಮತ್ತು ಆಪ್ಟೆಗೆ ಸಹಾಯ ಮಾಡುವಂತೆ ಹೇಳುತ್ತಾನೆ. (ಗೋಡ್ಸೆಗೆ ಆಯುಧ ಒದಗಿಸಿಕೊಟ್ಟ ಅಪರಾಧ ಇವನ ಮೇಲಿದೆ.) ಅದೇ ದಿನ ಸಂಜೆ ಹೊತ್ತಿಗೆ ದಂಡಾವಟೆ ಒಂದು ಸೂಕ್ತ ಆಯುಧದ ಲಭ್ಯತೆಯ ಮಾಹಿತಿಯನ್ನು ನೀಡಿ ಅದನ್ನು ತನಗೆ ಪರಿಚಯವಿರುವ ಒಬ್ಬ ಡೀಲರ್ (ಜಗದೀಶ್ ಪ್ರಸಾದ್ ಗೋಯಲ್) ಮುಖಾಂತರ ಪಡೆಯಲು ಸೂಚಿಸುತ್ತಾನೆ. ಈ ಮಾಹಿತಿಯನ್ನು ಆಧರಿಸಿತಡಮಾಡದೆ ಗೋಡ್ಸೆ ಆಪ್ಟೆ ಡೀಲರ್‍ನ ಬಳಿ 500 ರೂಗೆ ವ್ಯಾಪಾರವನ್ನು ಕುದುರಿಸುತ್ತಾರೆ. ರಿವಾಲ್ವರ್ ಉಪಯೋಗದ ಕನಿಷ್ಟ ಮಟ್ಟದ ಅರಿವು ಕೂಡಾ ಇಲ್ಲದ ಕಾರಣ, ಅದನ್ನು ಉಪಯೋಗಸುವ ಕುರಿತು ಗ್ವಾಲಿಯರ್‍ನ ವಾಟಾದ ಹಿಂಬದಿಯಲ್ಲಿ ಒಂದು ಗುಂಡನ್ನು ಹಾರಿಸುತ್ತಾನೆ. ಈ ಗುಂಡಾಗಿತ್ತು ಗಾಂಧಿ ಹತ್ಯೆಯ ನಂತರ ಪೋಲಿಸರಿಗೆ ದೊರಕಿದ್ದು. ಇದು ಗೋಡ್ಸೆ ಅಥವಾ ಆಪ್ಟೆಯ ಕೈಯಿಂದ ಹಾರಿದ್ದಲ್ಲ.
ಃeಡಿಡಿeಣಣಚಿ  9 ಮಿ.ಮಿ Semi ಚಿuಣomಚಿಣiಛಿ (ಅರೆ ಸ್ವಯಂಚಾಲಿತ ಸರಣಿ ಸಂಖ್ಯೆ 606824) ಹೆಸರುಳ್ಳ ಜಗತ್ತಿನಲ್ಲೇ ಕೊಲೆ ಪಾತಕಿಯರು ಮತ್ತು ಗೌಪ್ಯ ಕಾರ್ಯ ಸಾಧಕರ ಅಭಿರುಚಿಗೆ ತಕ್ಕಂತೆ ಇರುವ ಆಯುಧಗಳಲ್ಲಿ ಒಂದಾಗಿದೆ. ಈ ಆಯುಧವನ್ನು ಬೆರೆಟ್ಟಾ  ಎಂಬ ಕಂಪೆನಿ ವಿಷೇಶ ತಂತ್ರಜ್ಞಾನವನ್ನು ಬಳಸಿ ತಯಾರಿಸುತ್ತಾರೆ. ನಿರ್ದಿಷ್ಟ ಆವೃತ್ತಿಯ ಬಂದೂಕು ಇದಾಗಿದ್ದು, ಮುಸಲೋನಿಯ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಬೇಡಿಕೆಗನುಸಾರವಾಗಿ ರವಾನಿಸಲಾಗುತ್ತಿತ್ತು. ಆದ್ದರಿಂದಲೇ ಇಂದಿಗೂ ಇದನ್ನು “ಫ್ಯಾಸಿಸಂ ಸ್ಪೆಷಲ್” ಎಂದು ಕರೆಯಲಾಗುತ್ತದೆ. ಮುಸಲೋನಿಯ ಸೈನ್ಯ ಉತ್ತರ ಆಫ್ರಿಕಾದ ಅಬ್‍ಸೀನಿಯಾದ ಮೇಲೆ ದಾಳಿ ನಡೆಸಿದಾಗ ಸೈನ್ಯದಲ್ಲಿದ್ದ ಒಬ್ಬ ಹಿರಿಯ ಅಧಿಕಾರಿ ರವಾನಿಸುತ್ತಿದ್ದನು. ಆ ಯುದ್ಧದಲ್ಲಿ ಮುಸಲೋನಿಯ ಸೈನ್ಯವನ್ನು ಶತ್ರು ಸೇನೆಯು ಸೋಲಿಸಿತು. ಈ ವೇಳೆ ಶತ್ರು ಸೇನೆಯ ಲಫ್ಟಿನೆಂಟ್ ಅಡ್ಮಿರಲ್ ಆಗಿದ್ದ ಗ್ವಾಲಿಯರ್‍ನ ವಿ.ವಿ ಜೋಶಿ ಮುಸಲೋನಿಯ ಸೇನೆಯನ್ನು ಸೋಲಿಸಿದ್ದಕ್ಕಾಗಿ ಪಾರಿ ತೋಷಕವಾಗಿ ಈ ಬಂದೂಕನ್ನು ಪಡೆದು ಕೊಳ್ಳುತ್ತಾನೆ. ಯುದ್ಧನಂತರ ಆಯುಧದೊಂದಿಗೆ ಗ್ವಾಲಿಯರ್‍ಗೆ ಮರಳಿದ ಜೋಶಿಯನ್ನು ಅಲ್ಲಿನ ದೊರೆ ವಕೀಲನಾಗಿ ನೇಮಿಸುತ್ತಾನೆ. ಹೀಗೆ ಗ್ವಾಲಿಯರ್‍ನ ಒಬ್ಬ ಹಿರಿಯ ಅಧಿಕಾರಿಗೆ ಪಾರಿತೋಷಕವಾಗಿ ದೊರಕಿದ ಈ ಆಯುಧವು ಹೇಗೆ ಅಕ್ರಮ ಡೀಲರ್‍ನ ಸರಕಾಗುತ್ತದೆ ಮತ್ತು ಈ ಮೂಲಕ ಗಾಂಧಿ ಹಂತಕರ ಕೈ ಸೇರುತ್ತದೆ ಎಂಬುವುದು ಇನ್ನೂ ಕೂಡಾ ಬಿಚ್ಚಿಡದ ಸತ್ಯವಾಗಿದೆ. ಗಾಂಧೀಜಿಯ ಹತ್ಯೆಯಲ್ಲಿ ಪ್ರಚೂರಿ ಸಹ ಒಬ್ಬ ಸಹಪರಾಧಿ. ಇವನು ತನ್ನ ಅಪರಾಧವನ್ನು ಒಪ್ಪಿಕೊಂಡದ್ದು ಮಾತ್ರವಲ್ಲದೇ ನಿರಾಕರಿಸಲಾಗದ ಸಾಕ್ಷಿಗಳು ಅದಕ್ಕೆ ಪೂರಕವಾಗಿದ್ದರೂ ನ್ಯಾಯಾಲಯವು ಯಾವುದೇ ಕ್ರಮವನ್ನು ಕೈಗೊಳ್ಳಲಾಗಲಿಲ್ಲ. ಅದಕ್ಕೆ ಕಾರಣ ಪ್ರಚೂರಿ ಮೂಲತಃ ಬ್ರಿಟೀಷನಾಗಿದ್ದ ಬಂಧನ ಸಂದರ್ಭದಲ್ಲಿ ನ್ಯಾಯಾಲಯವು ಇxಣಡಿಚಿ ಂಜಜissioಟಿ ಕ್ರಮ ಕೈಗೊಳ್ಳದೆ ವಿಚಾರಣೆಗೆ ಒಳಪಡಿಸುವುದು ಕಾನೂನು ಬಾಹಿರವೆಂದು ಘೋಷಿಸಿ ಪಂಜಾಬ್ ಉಚ್ಚ ನ್ಯಾಯಾಲಯವು ಇವನನ್ನು ಬಿಡುಗಡೆಗೊಳಿಸಿತು. ಇವುಗಳಾಗಿದೆ ಗಾಂಧಿ ಹತ್ಯೆಯ ಹಿಂದೆ ನಡೆದ ನೈಜ ವಿದ್ಯಮಾನಗಳು. ವಂಚಕರಿಗೆ ಇದು ಉಣ್ಣಲಾಗದ ತುತ್ತಾಗಿದೆ. ಸಾವiಥ್ರ್ಯ ಮತ್ತು ಅಧಿಕಾರವನ್ನು ಉಪಯೋಗಿಸಿಕೊಂಡು ಇತಿಹಾಸವನ್ನು ತಲೆಕೆಳಗಾಗಿಸುವ ಭಾವನೆ ಮತ್ತು ಅದಕ್ಕೋಸ್ಕರ ಇವರ ಅವಿರತ ಪರಿಶ್ರಮಿಸುತ್ತಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ನೈಜ ಘಟನೆಯನ್ನು ಬದಲಿಸಬಹುದು ಎಂದುಕೊಂಡಿದ್ದಾರೆ. ಈ ವಂಚಕರು ಈಗಾಗಲೇ ಪ್ರಾಚೀನ ಇತಿಹಾಸವನ್ನು ಕೆದಕಿ ಅದಕ್ಕೆ ಅವರ ಪಾಲನ್ನು ಸೇರಿಸಲಾಗುತ್ತಿದೆ. ಈಗ ಸಮಕಾಲೀನ ಇತಿಹಾ¸ವನ್ನುÀ ಕ್ಷುಲ್ಲಕಗೊಳಿಸಿ, ಮನ ಬಂದಂತೆ ಇತಿಹಾಸ ನಿರೂಪಿಸುತ್ತಾ ಸತ್ಯವನ್ನು ದಫನ ಮಾಡುವ ಏರ್ಪಾಡು ನಡೆಯುತ್ತಿದೆ.



  ಕೃಪೆ: ದಿ ವೈರ್

Comments