ಅಸಂಬದ್ಧ ತ್ರಿತ್ವದ ಪ್ರಲಾಪವು ಖುರ್‍ಆನಿನಲ್ಲೇಕಿಲ್ಲ...?
ಜುನೈದ್ ಖಲೀಲ್ ನೂರಾನಿ
ಅನು: ಎಪಿಎಂ ಶಮೀರ್, ಮರ್ಕಿನ್ಸ್ ಬೆಂಗಳೂರು
ಬಿಬ್ಲಿಯ (ಪುಸ್ತಕಗಳು) ಎಂಬ ಗ್ರೀಕ್ ಪದದಿಂದ ಬೈಬಲ್ ಎಂಬ ಇಂಗ್ಲಿಷ್ ನಾಮವು ಉತ್ಪತ್ತಿಯಾಗುತ್ತದೆ. 5ನೇ ಶತಮಾನದಲ್ಲಿ ಪವಿತ್ರ ಪುಸ್ತಕಗಳ ಸಂಕಲನ ಹಾಗೂ ದೈವಿಕ ಬೋಧೋದಯಗಳ ಗ್ರಂಥಾಲಯ ಎಂಬರ್ಥದಲ್ಲಿ ಬೈಬಲ್ ಎಂಬ ಪದವನ್ನು ಉಪಯೋಗಿಸಲಾಯಿತು.
ಬೈಬಲ್ ಸಂಕಲನವು ಮೂಸಾ (ಅ)ರಿಗೆ ನೀಡಲ್ಪಟ್ಟ ತೌರಾತ್ (ತೋರ), ಈಸಾ (ಅ)ರಿಗೆ ನೀಡಲ್ಪಟ್ಟ ಇಂಜೀಲ್ (ಸುವಾರ್ತೆಗಳು), ದಾವೂದ್ (ಅ)ರಿಗೆ ಅವತೀರ್ಣಗೊಳಿಸಲ್ಪಟ್ಟ ಝಬೂರ್ (ಕೀರ್ತನೆಗಳು) ಗಳ ಸಂಕಲನಗಳಾಗಿವೆ ಎಂದು ಆಧುನಿಕ ಕ್ರೈಸ್ತ ಮಿಶನರಿಗಳು ವಾದಿಸುತ್ತಾರೆ. ಇದನ್ನು ಅವಲೋಕಿಸುವುದಕ್ಕಿಂತ ಮೊದಲು ಬೈಬಲ್ ಬಗ್ಗೆ ವಿದ್ವಾಂಸರು ಉಲ್ಲೇಖಿಸುವ ವಾಸ್ತವಿಕತೆಯ ಜಾಡನ್ನು ಪರಿಶೋಧೀಸೋಣ.
ಕೇರಳ ಕ್ಯಾಥೊಲಿಕ್ ಬೈಬಲ್ ಸೊಸೈಟಿ (ಞಛಿbಛಿ) ಪ್ರಕಟಿಸಿದ ಬೈಬಲ್‍ನ ಮುನ್ನುಡಿಯಲ್ಲಿ ಈ ರೀತಿ ಕಾಣಬಹುದು.
“ಬೃಹತ್ತಾದ ಈ ಗ್ರಂಥ ಸಂಕಲನವು ಸಾವಿರ ವರ್ಷಗಳಲ್ಲಿ (ಕ್ರಿ.ಪೂ.1200-ಕ್ರಿ.ಶ.100) ರಚಿತವಾಯಿತು. ಇದರ ಸಿಂಹಭಾಗ ಹಿಂದೆ ವಾಚನ ಪರಂಪರೆಯಾಗಿ ಸಮೂಹದಲ್ಲಿ ಸಂರಕ್ಷಿಸಲ್ಪಟ್ಟಿತ್ತು. ಬಳಿಕ ಇದನ್ನು ಗ್ರಂಥರೂಪಕ್ಕೆ ಮಾರ್ಪಡಿಸಲಾಯಿತು. ಉದಾಹರಣೆಗೆ, ಪಂಚಗ್ರಂಥಿಯಲ್ಲಿ ಯಾಪ್‍ಮಿಸ್ಟ್ (ರಿ), ಎಲೋಹಿಸ್ಟ್ (e), ಪ್ರೀಸ್ಟ್‍ಲಿ (ಠಿ), ಡೆವು ಟ್ರೋನಮಿಸ್ಟ್ (ಜ) ಎಂದು 4 ಪರಂಪರೆಗಳಲ್ಲಿ ಗ್ರಂಥದ ಸಮನ್ವಯ ನಡೆದಿದ್ದಾಗಿ ಸೂಚಿಸಲ್ಪಟ್ಟಿದೆ. ವಿವಿಧ ಪರಂಪರೆಗಳಲ್ಲಿ ವಿವಿಧ ರೀತಿಗಳಲ್ಲಿ ಉಲ್ಲೇಖವಾಗಿರುವುದರಿಂದ ಕೆಲವೊಂದು ಘಟನೆಗಳ ಬಗ್ಗೆ ವಿವಿಧ ವಿವರಣೆಗಳು ಕಾಣಲ್ಪಡುತ್ತದೆ. ವಿವಿಧ ಕಾಲಗಳಲ್ಲಿ ರೂಪುಗೊಂಡ ಈ ಗ್ರಂಥದಲ್ಲಿ ಹಲವು ರಚನಾ ಸ್ವರೂಪಗಳನ್ನು ಕಾಣಬಹುದು. ವಿಶ್ವಾಸದ ಆಧಾರದಲ್ಲಿ ಚರಿತ್ರೆ ಉದ್ಧರಣೆ, ಐತಿಹ್ಯ ವಿವರಣೆ, ಕಥೆಗಳು, ಉಪಮಾಲಂಕಾರ, ಗೀತೆಗಳು, ಗಾದೆಮಾತುಗಳು, ಪ್ರಾರ್ಥನೆಗಳು ಮುಂತಾದ ಗ್ರಂಥಕರ್ತನ ಉದ್ದೇಶ ಹಾಗೂ ಗ್ರಂಥದ ಸಂದೇಶಗಳನ್ನರಿಯಲು ವಿಭಿನ್ನವಾಧ ಈ ರಚನಾ ಸ್ವರೂಪಗಳನ್ನು ಬೇರ್ಪಡಿಸಿ ತಿಳಿಯುವುದು ಅಗತ್ಯವಾಗಿದೆ.” (ಞಛಿbಛಿ ಬೈಬಲ್, 3ನೇ ಮುದ್ರಣ, ಮುನ್ನುಡಿ, ಪುಟ-13).
ಕಟ್ಟುಕಥೆಗಳು ಹಾಗೂ ಜಾನಪದವಾಗಿ ಬಂದ ಹೇಳಿಕೇಳಿಕೆಗಳ ಆಧಾರದಲ್ಲಿ ಮಾನವ ಹಸ್ತದ ಮೂಲಕ ಬೈಬಲ್ ರಚನೆಗೊಂಡಿತು ಎಂಬುದು ಇಲ್ಲಿ ವೇದ್ಯವಾಗುತ್ತದೆ. ಗ್ರಂಥಕರ್ತರ ನ್ಯೂನತೆಯು ಇಲ್ಲಿ ಎದ್ದು ಕಾಣುತ್ತದೆ. ಪ್ರಖಾಂಢ ವಿದ್ವಾಂಸ ಡಾ. ಮೈಕಲ್ ಕಾರಮಟ್ಟಂ ಹೀಗೆನ್ನುತ್ತಾರೆ:
“ಪ್ರತೀ ಪುಸ್ತಕಗಳು ಬರೆಯಲ್ಪಟ್ಟ ಕಾಲದಲ್ಲಿ ನೆಲೆನಿಂತಿದ್ದ ಪ್ರಪಂಚ ವೀಕ್ಷಣೆ, ಸಾಹಿತ್ಯ ಶೈಲಿ ಮನುಷ್ಯ ರೂಪಿ ಗ್ರಂxಕರ್ತರನ್ನು ಪ್ರಭಾವಿಸಿದೆ ಎಂಬ ವಿಷಯ ಮರೆಯಲಾಗದು.” (ವಿಶ್ವಾಸತ್ತಿಂಡೆ ವೇರುಗಳ್, ಪುಟ-30)
ಇನ್ನೋರ್ವ ವಿದ್ವಾಂಸ ರೇಮಂಡ್ ಇ. ಬ್ರೌನ್‍ರವರ ಅಭಿಪ್ರಾಯ ಹೀಗಿದೆ:
“ಬೈಬಲ್‍ನ ಪ್ರತೀ ವಾಕ್ಯಗಳು ಮನುಷ್ಯ ಹಸ್ತಗಳ ಮೂಲಕ ಬರೆಯಲ್ಪಟ್ಟಿತು. ಬೈಬಲ್ ಕಥಾನಕದ ಪರಂಪರೆಯು ಮನುಷ್ಯನ ಚಿಂತನೆಯ ಉತ್ಪನ್ನಗಳಾಗಿವೆ.” (ಖesಠಿoಟಿses ಣo 101 ಕಿuesಣioಟಿs oಟಿ ಣhe ಃibಟe ಪುಟ: 29)
ಮೂಸಾ ನಬಿ (ಅ), ಈಸಾ (ಅ), ದಾವೂದ್ (ಅ) ಎಂಬೀ ಪ್ರವಾದಿಗಳಿಗೆ ಅವತೀರ್ಣಗೊಳಿಸಲ್ಪಟ್ಟ ತೌರಾತ್, ಇಂಜೀಲ್, ಝಬೂರ್ ನಿಜವಾದ ಬೈಬಲ್ ಅಲ್ಲ ಎಂದೂ, ಕಾಲಕ್ರಮೇಣ ಕೆಲವರು ತಮ್ಮ ಸ್ವಹಸ್ತಗಳಿಂದ ಬರೆದಿದ್ದಾರೆಂಬುದು ಮೇಲ್ ಉದ್ಧರಿಸಲ್ಪಟ್ಟ ದಾಖಲೆಗಳಿಂದ ವ್ಯಕ್ತವಾಗುತ್ತದೆ.
ಮನುಕುಲವನ್ನು ಸನ್ಮಾರ್ಗದ ಹಾದಿಗೆ ಕೊಂಡೊಯ್ಯಲು ಪ್ರವಾದಿಗಳನ್ನು ನಿಯೋಜಿಸಲಾಯಿತು. ಪ್ರವಾದಿಗಳಿಗೆ ಲಭಿಸಿದ ಗ್ರಂಥಗಳಲ್ಲಿ ಸ್ವಾಭಾವಿಕವಾಗಿ ಸಾಮ್ಯತೆಗಳಿರುತ್ತದೆ. ಎಲ್ಲಾ ಪ್ರವಾದಿಗಳೂ ಏಕದೇವೋಪಾಸನೆಗೆ ಜನರನ್ನು ಆಹ್ವಾನಿಸುತ್ತಾರೆ. ಆದ್ದರಿಂದಲೇ ಅಲ್ಪಸ್ವಲ್ಪ ದೈವಿಕ ವಚನಗಳಿರುವ ಬೈಬಲ್‍ನಲ್ಲೂ ಏಕದೇವೋಪಾಸನೆ ಬಗೆಗಿನ ಪರಾಮರ್ಶೆಗಳನ್ನು ಕಾಣಬಹುದು.
“ಯೆಹೋವನೊಬ್ಬನೆ ದೇವರು, ಬೇರೆ ದೇವರೇ ಇಲ್ಲವೆಂದೂ ನೀವು ತಿಳಿದುಕೊಳ್ಳುವುದಕ್ಕಾಗಿಇದೆಲ್ಲ ನಿಮಗೆ ತೋರಿಸಲ್ಪಟ್ಟಿತು” (ಧರ್ಮೋಪದೇಶಕಾಂಡ 4-35)
“ಆಕಾಶದಲ್ಲಿಯೂ ಭೂಮಿಯಲ್ಲಿಯೂ ಯಹೋವನೊಬ್ಬನೆ ದೇವರು” (ಧರ್ಮೋಪದೇಶಕಾಂಡ 4-39)
“ಇಸ್ರಾಯೇಲ್ಯರೇ, ಕೇಳಿರಿ ನಿಮ್ಮ ದೇವರಾದ ಯಹೋವನು ಒಬ್ಬನೇ ದೇವರು” (ಧರ್ಮೋಪದೇಶಕಾಂಡ 6-4)
“ನಾನೇ, ನಾನೊಬ್ಬನೇ ದೇವರಾಗಿರಲಾಗಿ ನನ್ನ ವಿನಾ ಯಾವ ದೇವರೂ ಇಲ್ಲ” (ಧರ್ಮೋಪದೇಶಕಾಂಡ 32-39)
“ದೇವರೇ, ಯೆಹೋವನೇ, ನೀನೇ ದೊಡ್ಡವನು; ನಿನ್ನ ಸಮಾನರು ಯಾರೂ ಇಲ್ಲ. ನಾವು ಕೇಳೀದವುಗಳನ್ನೆಲ್ಲಾ ಆಲೋಚಿಸಿದರೆ ನಿನ್ನ ಹೊರತು ದೇವರೇ ಇಲ್ಲವೆಂಬುದು ನಿಶ್ಚಯ” (1 ಸಮುವೇಲನು 7-22)
“ಭೂ ಲೋಕದ ಜನರೆಲ್ಲರೂ ಯೆಹೋವನ ಹೊರತು ಬೇರೆ ದೇವರಿಲ್ಲವೆಂಬುದನ್ನು ತಿಳಿದುಕೊಳ್ಳುವಂತೆ ಆತನು ಅವಶ್ಯವಿರುವವರಿಗೆಲ್ಲಾ ತನ್ನ ಸೇವಕನ ಮತ್ತು ಪ್ರಜೆಗಳಾದ ಇಸ್ರಾಯೇಲ್ಯರಿಗೆ ನ್ಯಾಯ ಸ್ಥಾಪಿಸುತ್ತಾ ಬರಲಿ” (1 ಅರಸುಗಳು 8-60)
“ಯೇಸು ಅವನಿಗೆ- ಸೈತಾನನೇ, ನೀನು ತೊಲಗಿ ಹೋಗು. ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನನ್ನೊಬ್ಬನೇ ಆರಾಧಿಸಬೇಕು” (ಮತ್ತಾಯ 4-10)
“ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು ಒಬ್ಬನೇ ದೇವರು” (ಮಾರ್ಕ 12-29)
ಆದರೆ ಕ್ರೈಸ್ತರು ಇಂತಹ ವಚನಗಳ ಮುಂದೆ ಕಣ್ಣು ಮುಚ್ಚುತ್ತಾರೆ. ಅವರು ತಂದೆ (ಯಹೋವ), ಪುತ್ರ, ದಿವ್ಯಾತ್ಮರು ಸೇರಿದ ತ್ರಿತ್ವ ದೈವ ಕಲ್ಪನೆಯಲ್ಲಿ (ಣಡಿiಟಿiಣಥಿ)ವಿಶ್ವಾಸ ತಾಳುತ್ತಾರೆ. ಬಹುಷಃ ಬೈಬಲ್‍ನ ಕೆಳಕಂಡ ವಚನಗಳು ಕ್ರೈಸ್ತರ ಈ ಅಸಂಬದ್ಧ ಪ್ರಲಾಪವನ್ನು ಸೂಚಿಸುತ್ತಿರಬೇಕು.
“ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವುದರಿಂದ ನನಗೆ ಭಕ್ತಿ ತೋರಿಸುವುದು ವ್ಯರ್ಥ ಎಂಬದೇ” (ಮತ್ತಾಯ 15-9)
ಆದರೆ ಪವಿತ್ರ ಖುರಾನ್ ಕ್ರೈಸ್ತರ ತ್ರಿಯೇಕತ್ವ ದೈವ ಕಲ್ಪನೆಯನ್ನು ಕಠಿಣವಾಗಿ ವಿಮರ್ಶಿಸುವುದನ್ನು ಕಾಣಬಹುದು.
“ಅಲ್ಲಾಹನು ಮೂರರಲ್ಲೊಬ್ಬನು ಎಂದು ಹೇಳಿದವರು ಖಂಡಿತವಾಗಿಯೂ ಕಾಫಿರರಾಗಿದ್ದಾರೆ. ಏಕದೇವನಲ್ಲದೆ ಬೇರೆ ದೇವನಿಲ್ಲ.” (ಮಾಇದ 73)
ಈ ಸೂಕ್ತದ ವಿವರಣೆಯನ್ನು ಇಮಾಂ ರಾಝಿ (ರ) ಹೀಗೆ ನೀಡುತ್ತಾರೆ.
“ಕ್ರೈಸ್ತರು ಈ ರೀತಿ ಹೇಳುವುದಾಗಿ ವಿದ್ವಾಂಸರು ಉದ್ಧರಿಸುತ್ತಾರೆ.: ದೇವರು ಎಂದರೆ ತಂದೆ, ಪುತ್ರ, ದಿವ್ಯಾತ್ಮ ಎಂಬೀ ಮೂವರು ಸೇರಿದವರಾಗಿದ್ದಾರೆ. ಮೂವರೂ ಒಬ್ಬನೇ ದೇವರಾಗಿದ್ದಾರೆ. ಸೂರ್ಯ ಎಂದರೆ ಅದರ ಸತ್ತೆ (ದ್ರವ್ಯ), ಪ್ರಕಾಶ ಹಾಗೂ ತಾಪವನ್ನು ಒಳಗೊಂಡಿರುವ ನಾಮವಾಗಿದೆಯಲ್ಲವೇ?. ತಂದೆ ಎಂದರೆ ಸತ್ತೆಯನ್ನು, ಪುತ್ರ ಎಂದರೆ ವಚನವನ್ನು, ದಿವ್ಯಾತ್ಮ (ರೂಹ್)ಎಂದರೆ ಜೀವ ಎಂದು ಅವರು ಉದ್ದೇಶಿಸುತ್ತಾರೆ. ಮದ್ಯದಲ್ಲೂ ಹಾಲಿನಲ್ಲೂ ನೀರು ಬೆರೆಯುವಂತೆ ದೇವರ ವಚನ ಯೇಸುವಿನ ಶರೀರದಲ್ಲಿ ಬೆರೆತಿದೆ ಎಂದವರು ವಾದಿಸುತ್ತಾರೆ. ಇದರ ಬಾಲಿಶತೆ ಬುದ್ಧಿಯ ಮೇಲ್ಪದರಲ್ಲೇ ದಿಟವಾಗುತ್ತದೆ. ಆಳವಾಗಿ ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ಒಂದು ಮೂರಾಗುವುದು, ಮೂರು ಒಂದಾಗುವುದು ಅಸಂಭವ ಎಂಬುದು ಸುವಿದಿತವಾಗಿದೆ.” (ತಫ್ಸೀರು ರಾಝಿ 12-52)
ಬೈಬಲ್ ಹಳೆಯ ಒಡಂಬಡಿಕೆಯಲ್ಲೂ ಹೊಸ ಒಡಂಬಡಿಕೆಯಲ್ಲೂ ತ್ರಿಯೇಕತ್ವವನ್ನು ಸೂಚಿಸುವ ದಾರಾಳ ವಚನಗಳಿವೆ ಎಂಬುದು ಕ್ರೈಸ್ತರ ವಾದವಾಗಿದೆ. ಮುಹಮ್ಮದ್ (ಸ) ಬೈಬಲ್‍ನಿಂದ ಖುರ್‍ಆನ್ ನಕಲು ಮಾಡಿದ್ದಿದ್ದರೆ ತಿಯೇಕತ್ವದ ಸೋಂಕು ಖುರಾನ್‍ಗೂ ತಗುಲಬೇಕಿತ್ತು. ಆದರೆ ತ್ರಿಯೇಕತ್ವ ದೈವ ಕಲ್ಪನೆಯನ್ನು ಖೂರಾನ್ ಖಂಡತುಂಡವಾಗಿ ವಿರೋಧಿಸುತ್ತದೆ. ಇದರಿಂದ ಮುಹಮ್ಮದ್ (ಸ) ಖುರಾನ್ ಬೈಬಲ್‍ನಿಂದ ನಕಲು ಮಾಡಿಲ್ಲ ಎಂಬುದು ತಿಳಿಯುತ್ತದೆ.
ಬೈಬಲ್‍ನಲ್ಲಿ ತುಂಬಾ ತ್ರಿತ್ವ ಅಡಕವಾಗಿದೆ ಎಂಬ ಕ್ರೈಸ್ತರ ವಾದವನ್ನು ನ್ಯಾಯೀಕರಿಸುವ ವಚನಗಳು ಕ್ರಮೇಣ ಬೈಬಲ್‍ನಿಂದ ಮಂಗ ಮಾಯವಾಗತೊಡಗಿದೆ. ಒಂದು ನಿದರ್ಶನ:
ಮರ್ಕಝುಲ್ ಬಿಶಾರ, ಛಿಚಿಟಟ oಜಿ hoಠಿe ಮುಂತಾದ ಮಿಶನರಿ ಸಂಘಟನೆಗಳು ಹೊರತಂದ ಝಕರಿಯ ಬ್ರೂಟಸ್‍ರ ಉoಜ is oಟಿe iಟಿ ಣhe ಊoಟಥಿ ಖಿಡಿiಟಿiಣಥಿ ಪುಸ್ತಕದ ಮಲಯಾಳಂ ತರ್ಜುಮೆಯಾದ “ವಿಶುದ್ಧ ತ್ರಿತ್ವತ್ತಿಲ್ ದೈವಂ ಏಕನಾಣ್ (ಪವಿತ್ರ ತ್ರಿತ್ವದಲ್ಲಿ ದೇವರು ಒಬ್ಬನೇ)” ಎಂಬ ಪುಸ್ತಕದಲ್ಲಿ ತ್ರಿಯೇಕತ್ವಕ್ಕೆ ಅವರು ಉದ್ಧರಿಸಿದ (ಪುಟ-6) 1. ಯೋಹಾನನು 5-6 ನೇ ವಚನವು ಹೀಗಿದೆ;
“ಆಲಿಸಿರಿ, ಸ್ವರ್ಗದಲ್ಲಿ ಸಾಕ್ಷಿ ಹೇಳುವ ಮೂವರಿದ್ದಾರೆ. ತಂದೆ, ಪುತ್ರ, ದಿವ್ಯಾತ್ಮ. ಈ ಮೂರ್ವರೂ ಓರ್ವರೇ”.
ಇಂದು ಲಭ್ಯವಿರುವ ಮಲಯಾಳಂ ಹಾಗೂ ಕನ್ನಡದ ಯಾವುದೇ ಬೈಬಲ್‍ನಲ್ಲೂ ಇಂತಹ ವಚನವನ್ನು ಕಾಣಲು ಸಾಧ್ಯವಿಲ್ಲ. ಹೊರತು ಹೀಗೆ ಕಾಣಬಹುದು:
“ಆತ್ಮ, ನೀರು, ರಕ್ತ ಎಂಬ ಮೂರು ಸಾಕ್ಷಿಗಳುಂಟು. ಈ ಮೂರು ಒಂದೇ ಅಭಿಪ್ರಾಯವಾಗಿ ಸಾಕ್ಷಿ ಹೇಳುತ್ತವೆ” (ಪ್ರೊಟೆಸ್ಟೆಂಟರ ಸತ್ಯವೇದವು, ಯೋಹಾನನು 5-6). ಇನ್ನು ಕ್ಯಾಥಲಿಕರ ಬೈಬಲ್‍ನಿಂದ ಈ ವಚನವನ್ನು ಬದಲಿಸಲಾಗಿದೆ.
ಬೈಬಲ್‍ನಲ್ಲಿ ಮನುಷ್ಯ ಹಸ್ತಕ್ಷೇಪ ನಡೆದಿದೆ ಎಂಬುದನ್ನು ಬೈಬಲ್ ಪಂಡಿತರು ಕೂಡಾ ಒಪ್ಪಿಕೊಂಡಿದ್ದಾರೆ. ಬೈಬಲ್‍ನ ನ್ಯೂನತೆಗಳು ನಮಗೆ ಮನದಟ್ಟಾಗಿದೆ. ಪವಿತ್ರ ಖುರಾನ್ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥವಾಗಿರುವುದರಿಂದ ಅದರಲ್ಲಿ ಬೈಬಲ್‍ನ ಚಾಪಲ್ಯತೆಗಳಿಲ್ಲ. ಪ್ರವಾದಿಯವರು ಖುರಾನ್ ಬರೆದರು ಎಂಬುದು ಬಾಲಿಶವಾಗಿದೆ.ಅಸಂಬದ್ಧ ತ್ರಿತ್ವದ ಪ್ರಲಾಪವು ಖುರ್‍ಆನಿನಲ್ಲೇಕಿಲ್ಲ...?

ಬೈಬಲ್‍ನಲ್ಲಿ ಮನುಷ್ಯ ಹಸ್ತಕ್ಷೇಪ ನಡೆದಿದೆ ಎಂಬುದನ್ನು ಬೈಬಲ್ ಪಂಡಿತರು ಕೂಡಾ ಒಪ್ಪಿಕೊಂಡಿದ್ದಾರೆ. ಬೈಬಲ್‍ನ ನ್ಯೂನತೆಗಳು ನಮಗೆ ಮನದಟ್ಟಾಗಿದೆ. ಪವಿತ್ರ ಖುರಾನ್ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥವಾಗಿರುವುದರಿಂದ ಅದರಲ್ಲಿ ಬೈಬಲ್‍ನ ಚಾಪಲ್ಯತೆಗಳಿಲ್ಲ. ಪ್ರವಾದಿಯವರು ಖುರಾನ್ ಬರೆದರು ಎಂಬುದು ಬಾಲಿಶವಾಗಿದೆ.

Comments
Post a Comment