ಕೈಜೋಡಿಸಿಕೊಂಡಿರುವ ಉಗ್ರವಾದ ಹಾಗೂ ನವೀನವಾದಗಳು ಎಪಿಎಂ ಶಮೀರ್ ಪೆರುವಾಜೆ

ಕೈಜೋಡಿಸಿಕೊಂಡಿರುವ ಉಗ್ರವಾದ ಹಾಗೂ ನವೀನವಾದಗಳು
                        ಎಪಿಎಂ ಶಮೀರ್ ಪೆರುವಾಜೆ
                            ಮರ್ಕಿನ್ಸ್, ಬೆಂಗಳೂರು

ಪ್ರವಾದಿ ಮುಹಮ್ಮದ್ (ಸ)ರವರ ಕಾಲದಲ್ಲೇ ಪವಿತ್ರ ಇಸ್ಲಾಂ ಭಾರತದಲ್ಲಿ ಬೇರೂರಿತ್ತು. ಇಸ್ಲಾಮಿನ ಪರಂಪರಾಗತ ವಿಶ್ವಾಸವನ್ನು ಹೊಂದಿದ್ದ ಅಂದಿನ ಮುಸ್ಲಿಮರು ಇತರ ಧರ್ಮೀಯರೊಂದಿಗೆ ಪರಸ್ಪರ ಸಹಿಷ್ಣುತೆ ಹಾಗೂ ಸೌಹಾರ್ದತೆಯಿಂದ ಕೂಡಿದ ಜೀವನ ಸವೆಸಿದ್ದರು. ಉಗ್ರವಾದವನ್ನು ಬಿಡಿ, ಇತರ ಧರ್ಮೀಯನನ್ನು ಮಾನಸಿಕವಾಗಿ ನೋಯಿಸುವುದನ್ನು ಕೂಡಾ ಪರಂಪರಾಗತ ಮುಸ್ಲಿಮನಿಗೆ ಚಿಂತಿಸಲೂ ಕೂಡಾ ಸಾಧ್ಯವಿರಲಿಲ್ಲ. ಅಂತಹ ಉತ್ಕøಷ್ಟ ಜೀವನವು ಅವರ ಧಾರ್ಮಿಕ ಜೀವನದ ಭಾಗವಾಗಿತ್ತು. ವಿವಿಧತೆಯಲ್ಲಿ ಜೀವಿಸುವ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಆ ಸಂಸ್ಕøತಿ- ಪರಂಪರೆಗೆ ಒಗ್ಗಿಕೊಂಡಿದ್ದಲ್ಲ.  ಅಂತರಾಳದಲ್ಲಿ ರೂಢವಾಗಿದ್ದ ಅಚಲ ವಿಶ್ವಾಸದೊಂದಿಗೆ ಸಹಜೀವಿಗಳೊಂದಿಗೆ ಸ್ನೇಹಾದರಗಳನ್ನು ತೋರುತ್ತಿದ್ದರು. ಅದು ಇಂದು ಕಾಣುವಂತಹ ತೋರಿಕೆಯ  ಸೌಹಾರ್ದವಾಗಿರಲಿಲ್ಲ. ಎಂದಿನಿಂದ ಈ ಸಾಂಸ್ಕøತಿಕ ಪರಂಪರೆ ಬದಲಾಯಿತು?. ಇದು ಉಗ್ರವಾದದ ಚರ್ಚೆಗಳಲ್ಲಿ ಮೂಡಿಬರುವ ಮೊದಲನೇ ಪ್ರಶ್ನೆಯಾಗಿದೆ. ಮುಸ್ಲಿಮರೆಡೆಯಲ್ಲಿ ಬಂದು ಇಂತಹ ಪರಂಪರೆಯನ್ನು ಮೂರಾಬಟ್ಟೆ ಮಾಡಿದವರು ಯಾರು?. ಎಂದಿನಿಂದ ಮುಸಲ್ಮಾನರಿಗೆ ಇತರರನ್ನು ಸಹಿಸಲಸಾಧ್ಯವಾಗತೊಡಗಿತು?. ಐಸಿಸ್‍ನ ಹಿನ್ನೆಲೆಯಲ್ಲಿ ಕೇಳುವುದಾದರೆ, ನಮ್ಮೆಡೆಯಿಂದ ಓಡಿಹೋಗಿ ಉಗ್ರನಾಗಲು ಇಲ್ಲಿನ ಯುವಕರನ್ನು ಪ್ರೇರೇಪಿಸಿದ ವಿಕೃತ ಮನಸ್ಸುಗಳು ಯಾವುದು?
        ಉಗ್ರವಾದ ಹಾಗೂ ನವೀನವಾದಗಳು ಪರಸ್ಪರ ಕೈ ಜೋಡಿಸಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂತಹ ಪ್ರಶ್ನೆಗಳು ಉದ್ಭವಿಸುತ್ತದೆ ಹಾಗೂ ಅವುಗಳಿಗೆ ಉತ್ತರ ಕೂಡಾ ಲಭಿಸುತ್ತದೆ. ಧರ್ಮವನ್ನು ಉಗ್ರವಾಗಿ ಮಂಡಿಸಿದ, ಧರ್ಮದ ಆಂತರಿಕ ಹಾಗೂ ಬಹಿರ್ ಸೌಂದರ್ಯವನ್ನು ನಿರ್ದಾಕ್ಷಿಣ್ಯವಾಗಿ ಕೆಲವು ದುವ್ರ್ಯಾಖ್ಯಾನಗಳ ಮೂಲಕ ವಿರೂಪಗೊಳಿಸಿದ ಕೆಲವೊಂದು ಶಕ್ತಿಗಳೇ ಭಾರತೀಯ ಮುಸಲ್ಮಾನರ ಪರಂಪರೆಗೂ, ವಿವಿಧತೆಯ ವೀಕ್ಷಣೆಗೂ ಮಸಿ ಬಳಿದಿದ್ದಾರೆ. ವಹ್ಹಾಬಿ ಚಿಂತನೆಗಳನ್ನು ಮೂಲ ಆದರ್ಶಗಳಾಗಿ ಒಪ್ಪಿ-ಅಪ್ಪಿಕೊಂಡ, ಧರ್ಮ ಸುಧಾರಣೆಯನ್ನು ವಾದಿಸಿದ ಕೆಲವು ಸಂಘಟನೆಗಳನ್ನು ಈ ಸಂದರ್ಭದಲ್ಲಿ ತೀವ್ರ ವಿಚಾರಣೆಗೊಳಪಡಿಸಬೇಕಿದೆ. ಹಾಗೂ ಅವಿಗಳ ಶವ ಪರೀಕ್ಷೆ ನಡೆಸಬೇಕಾಗಿದೆ. ಧರ್ಮದ ಆಂತರ್ಯಕ್ಕೆ ಕ್ರಿಯಾತ್ಮಕವಾದ ಒಂದೇ ಒಂದು ಕೊಡುಗೆಗಯÀನ್ನೂ ನೀಡದ ಈ ಸಂಘಟನೆಗಳು ಧರ್ಮದ ಮೇಲೆ ಭೀಕರ ಸವಾರಿಯನ್ನು ಮಾಡಿತು. ಧರ್ಮದ ಮೇಲೆ ಮುಸಲ್ಮಾನರಿಟ್ಟಿದ್ದ ಅಗಾಧವಾದ ವಿಶ್ವಾಸ ಹಾಗೂ ಅದನುಸಾರವಾಗಿ ಮೂಡಿಬರುವ ಕರ್ಮಗಳು ಮುಸ್ಲಿಮರಲ್ಲಿ ಬಲಹೀನವಾದಾಗ ಅವರಲ್ಲಿದ್ದ ಧಾರ್ಮಿಕ ಸೌಹಾರ್ದ ಮತ್ತು ಸ್ನೇಹವು ಮಂಗಮಾಯವಾಯಿತು. ಇದನ್ನು ಮನಗಂಡ ಅಂದಿನ ನಿಷ್ಕಳಂಕ ಮುಸ್ಲಿಂ ವಿದ್ವಾಂಸರು ಇಂತಹ ನವೀನವಾದಿಗಳನ್ನು ಪ್ರತಿರೋಧಿಸಲು ಆರಂಭಿಸಿದರು. ಮುಸ್ಲಿಂ ವಿದ್ವಾಂಸರ ಈ ನಿಲುವನ್ನು ಶಿರಸಾ ಪಾಲಿಸಿz ಅಂದಿನ ಮುಸ್ಲಿಂ ಬಾಂಧವರು ಸರಿಯಾದ ರೀತಿಯಲ್ಲೇ ಧರ್ಮವನ್ನು ಮನನ ಮಾಡಿಕೊಂಡರು ಹಾಗೂ ಉಗ್ರವಾದವನ್ನು ಖಂಡಿಸಿದ್ದರು. ಅವರದ್ದೇ ಹಾದಿಯಲ್ಲಿ ಇಂದಿನ ಕೆಲವು ಮುಸ್ಲಿಂ ನಾಮಧಾರಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಉಗ್ರವಾದದ (ಐಸಿಸ್ ಮತ್ತು ಇತರರ) ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅದು ಅವರಿಗೆ ಅಸಾಧ್ಯವಾಗಿ ಹೋದದ್ದು ಇನ್ನೊಂದು ಮಾತು. ಐಸಿಸ್‍ನ ಕುರಿತು ಚರ್ಚಿಸುವಾಗ ಈ ಸಂಘಟನೆಗಳು ಯಾಕಾಗಿ ನುಣುಚಿಕೊಳ್ಳುತ್ತಿದೆ?.
    ಈ ಪ್ರಶ್ನೆಗೆ ಗತಕಾಲದ ಘಟನೆಗಳು ಉತ್ತರವನ್ನು ನೀಡುತ್ತವೆ. ಉಯೈನಾದಲ್ಲಿರುವ ಝೈದ್ ಬಿನ್ ಖತ್ತಾಬ್ (ರ)ರವರ ಸಮಾಧಿಯನ್ನು ಧ್ವಂಸ ಮಾಡಿ ವಹ್ಹಾಬಿಸಂಗೆ ನಾಂದಿ ಹಾಡಲಾಗಿತ್ತು. ಮುಸೈಲಿಮತ್ ಎಂಬ ದುರುಳನ ವಿರುದ್ಧ ಕಾದಾಡಿ ಹುತತ್ಮರಾದ ಝೈದ್‍ರವರು ಎರಡನೇ ಖಲೀಫ ಉಮರ್ ಬಿನ್ ಖತಾಬ್ (ರ) ರವರ ಸಹೋದರರಾಗಿದ್ದರು. ಮಕ್ಕ, ಮದೀನಾ, ಕರ್ಬಲಾದಂತಹ ಪಾರಂಪರಿಕ ತಾಣಗಳಲ್ಲಿ ಉಗ್ರ ತಾಂಡವವಾಡಿ ಇಸ್ಲಾಮಿನ ಪರಂಪರಾಗತ ಕೇಂದ್ರಗಳು ಹಾಗೂ ಅವಶೇಷಗಳನ್ನು ಧರಾಶಾಹಿಯಾಗಿ ಮಾಡಿದ್ದು ವಹ್ಹಾಬಿಗಳಾಗಿದ್ದರು. ಖಿhe ಡಿoಚಿಜ ಣo mಚಿಞಞಚಿh ಎಂಬ ಗ್ರಂಥದಲ್ಲಿ ಖ್ಯಾತ ಬರಹಗಾರ ಮುಹಮ್ಮದ್ ಅಸದ್‍ರವರು ಈ ಘಟನೆಯನ್ನು ಪ್ರತಿಪಾದಿಸುತ್ತಾರೆ. ಮಕ್ಕಾ_ ಮದೀನಾವನ್ನೊಳಗೊಂಡಿದ್ದ ಹಳೆಯ ಹಿಜಾಝ್ ಪ್ರಾಂತ್ಯದ ಆಡಳಿತಗಾರರಾಗಿದ್ದ ಶರೀಫ್ ಗಾಲಿಬ್ ಆಫಂದಿಯೊಂದಿಗೆ 50 ಬಾರಿ ವಹ್ಹಾಬಿಗಳು ರಣರಂಗದಲ್ಲಿ ಮುಖಾಮುಖಿಯಾಗಲು ಬಂದಿದ್ದರು. ಹಿಜಿರಾ 1212ರಲ್ಲಿ ಮಕ್ಕಾವನ್ನು ಆಕ್ರಮಿಸಿ, ಸುಮಾರು 2000ಕ್ಕೂ ಜನರನ್ನು ಕೊಂದ ವಹಾಬಿಗಳು, 1215ರಲ್ಲಿ ಪುನಃ ಅಕ್ರಮಣ ನಡೆಸಿದರು. ತ್ವಾಯಿಫ್‍ನ ಮಹಿಳೆಯರು ಪುಟಾಣಿಗಳೆನ್ನದೆ ಸಾವಿರಾರು ಜನರನ್ನು ಕೊಂದು ರಕ್ತದಾಹ ನೀಗಿಸಿದರು. ೂಟಿ ಮನೆಗಳನ್ನು ಲೂಟಿ ಮಾಡಿದರು. ಇದೆಲ್ಲಾ ಇಸ್ಲಾಮಿಗೋಸ್ಕರ ಎಂದು ಯವುದೇ ಲಜ್ಜೆ ಇಲ್ಲದೆ ಹೇಳತೊಡಗಿದರು. ಲೂಟು ಹಾಗೂ ಆಕ್ರಮಣದ ಬಳಿಕ ತಾಯಿಫ್‍ನಲ್ಲಿ ಕಾಣಸಿಕ್ಕಿದ್ದು ಖುರಾನ್‍ನ ಒಂದು ಪ್ರತಿ ಹಾಗೂ ಸಹೀಹ್ ಬುಖಾರಿಯ ಒಂದು ಪ್ರತಿ ಮಾತ್ರವಾಗಿತ್ತು. ಈ ಘಟನೆಯನ್ನು ಹುಸೈನ್ ಹಿಲ್‍ಮಿಹ ಬರೆದ ಂಜviಛಿes ಜಿoಡಿ ಣhe ಗಿಚಿhಚಿbis ಎಂಬ ಪುಸ್ತಕದಲ್ಲಿ ವಿಶಾಲವಾಗಿ ಕಾಣಬಹುದು. ಝೈನಿ ದಹ್ಲಾನ್ ರಚಿಸಿದ ಖುಲಾಸತುಲ್ ಕಲಾಂ ಎಂಬ ಗ್ರಂಥದಲ್ಲಿ ಫಿತ್ನತುಲ್ ವಹಾಬಿಯ್ಯ ಎಂಬ ದೀರ್ಘ ಅಧ್ಯಾಯವಿದೆ. ಮಸೀದಿಗಳಿಗೆ ಹತ್ತಿ ನಮಾಝ್‍ನಲ್ಲಿ ನಿರತರಾಗಿದ್ದ ಸಜ್ಜನರನ್ನು ವಧಿಸಿದ ವಹಾಬಿಗಳ ದುಷ್ಕøತ್ಯಗಳನ್ನು ಈ ಅಧ್ಯಾಯದಲ್ಲಿ ಕಾಣಬಹುದು. ಹಿಜಿರಾ  1217ರಲ್ಲಿ ಪುನಃ ಮಕ್ಕಾದ ಮೇಲೆ ಧಾಳಿ ಮಾಡಿದ ವಹಾಬಿಗಳು ಇಬ್ನು ಅಬ್ಬಾಸ್ (ರ)ರವರ ಮಖ್ಬರವನ್ನು ಧ್ವಂಸ ಮಾಡಿದರು. ಹರಂ ಪ್ರದೇಶದ ಇಸ್ಲಾಮೀ ಸಂಕೇತಗಳನ್ನು ನಾಶ ಮಾಡಿದರು. ಪ್ರವಾದಿ (ಸ) ಜನ್ಮ ತಾಳಿದ ಮನೆಗೂ ಕೂಡಾ ಹನಿ ಮಾಡಿದರು. ಇ. ಮೊಯ್ದು ಮೌಲವಿ ಎಂಬ ಕೇರಳದ ವಹಾಬಿ ಮುಖಂಡ ವಹಾಬಿ ಮುಖಂಡ ವಹಾಬಿ ಭೀಕರತೆಯನ್ನು ತನ್ನ ಪುಸ್ತಕದಲ್ಲಿ (ಇಂಡ್ಯನ್ ಮುಸ್ಲಿಮೀಙಳುಂ ಸ್ವಾತಂತ್ರ್ಯ ಪ್ರಸ್ಥಾನಂ) ತೆರೆದಿಟ್ಟಿದ್ದಾರೆ. ಉಗ್ರವಾದ ವಿರೋಧಿ ನಿಲುವು ಮಂಡಿಸಲು ಕರೆಯಲಾಗಿದ್ದ ಅಂತರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಭಾರತದ ಖ್ಯಾತ ಕಾನೂನು ತಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ರಾಂ ಜೇಠ್ಮಲಾನಿಯವರು ಮಾತನಾಡುತ್ತಾ, ವಹಾಬಿಸಂ ಉಗ್ರವಾದದ ಉಗಮಸ್ಥಾನವಾಗಿದೆ, ಹಾಗೂ ಈ ಆಶಯಗಳನ್ನು ಯುವಜನರ ತಲೆಗೆ ತುರುಕಲಾಗುತ್ತಿದೆ ಎಂದಿದ್ದರು.
       
    13 ಹಾಗೂ 14ನೇ ಶತಮಾನದಲ್ಲಿ ಜೀವಿಸಿದ್ದ ಇಬ್ನು ತೈಮಿಯ್ಯ ಹಗೂ ಇಬ್ನು ಖಯ್ಯಿಂ ಹಾಗೂ 18ನೇ ಶತಮಾನದಲ್ಲಿ ಜೀವಿಸಿದ್ದ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್‍ನ ಚಿಂತನೆಗಳಾಗಿವೆ ವಹಾಬಿಸಂ ಅಥವಾ ಸಲಫಿಸಂ. ಈ ಉಗ್ರ ಚಿಂತನೆಗಳನ್ನು ತಮ್ಮ ಆಚಾರವಾಗಿ ಸ್ವೀಕರಿಸಿ, ಪ್ರಾಯೋಗಿಕವಾಗಿ ಜಾರಿಗೆ ತಂದ ಅನೇಕ ಸಂಘಟನೆಗಳನ್ನು, ರಾಜಕೀಯ ಪಕ್ಷಗಳನ್ನು ನಮ್ಮೀ ಭಾರತದಲ್ಲಿ ಕಾಣಬಹುದು. ಕೇರಳದ ನದ್ವತುಲ್ ಮುಜಾಹಿದೀನ್, ದೈವಿಕ ರಾಷ್ಟ್ರದ ಸಂಕಲ್ಪ ತೊಟ್ಟಿದ್ದ ಅಬುಲ್ ಆಲಾ ಮೌದೂದಿಯ ಮೌದೂದಿಸಂ ಅಥವಾ ಜಮಾಅತೇ ಇಸ್ಲಾಮಿ, ವಹಬಿಸಂನ ಶಾಖೆಯಾದ ತಬ್ಲೀಗ್ ಜಮಾಅತ್ ಮುಂತಾದ ಸಂಘಟನೆಗಳು ಭಾರತದಲ್ಲಿ ಉಗ್ರವಾದವನ್ನು ಭಾರತದಲ್ಲಿ ಪ್ರಚುರಪಡಿಸಿದವು. ಇದೂ ಅಲ್ಲದೆ ಅತ್ಯುಗ್ರ ಧರ್ಮೀಯತೆಯನ್ನು ಪ್ರತಿಪಾದಿಸುವ ಅನೇಕ ರಾಜಕೀಯ ಪಕ್ಷಗಳೂ ಕೂಡಾ ವಹಾಬಿಸಂನ ಕೊಡುಗೆಯಾಗಿದೆ.( ಭಾರತ ಮತ್ತು ಪಾಕ್ ವಿಭಜನೆಯ ಪ್ರಮುಖ ಕಾರಣವಾದ ಮುಸ್ಲಿಂ ಲೀಗ್‍ನ ಹಳೆ ಹಾಗೂ ಹೊಸ ತಲೆಮಾರಿನ ಅನೇಕ ನಾಯಕರು ವಹಾಬಿಗಳಾಗಿದ್ದರು). ಇಂತಹ ಸಂಘಟನೆಗಳೇ ಯುವಕರನ್ನು ಹಾದಿ ತಪ್ಪುವಂತೆ ಮಾಡಿತು. ಆದ್ದರಿಂದಲೇ ಭಾರತದಿಂದ (ವಿಶೇಷವಾಗಿ ಕೇರಳದಿಂದ) ಕಳೆದ ಕೆಲವು ವರ್ಷಗಳಲ್ಲಿ ಅನೇಕ ಯುವಕರು ಐಸಿಸ್ನಂತಹ ಸಂಘಟನೆಗಳ ಸದಸ್ಯರಾಗುವಂತಾಯಿತು.
    ಕೇವಲ ಐಸಿಸ್  ಮಾತ್ರ ವಹಾಬಿಸಂನ ಕೊಡುಗೆಯಾಗಿಲ್ಲ. ಬೋಕೋ ಹರಂ, ಅಲ್ ಖಾಯಿದಾ, ಮುಸ್ಲಿಂ ಬ್ರದರ್‍ಹುಡ್ ಮುಂತಾದ ಉಗ್ರಗಾಮಿ ಸಂಘಟನೆಗಳು ಐಸಿಸ್‍ನ ಕವಲೊಡೆದ ಕೊಂಬೆಗಳಾಗಿವೆ. ಕೇವಲ ಭಾರತೀಯರ ಧಾರ್ಮಿಕ ಸೌಹಾರ್ದದ ಅಂದವನ್ನು ಮಾತ್ರ ವಹಾಬಿಗಳು ಕೆಡಿಸಿಲ್ಲ. ಮಧ್ಯಪ್ರಾಚ್ಯ, ಯುರೊಪ್, ಆಫ್ರಿಕದ ಅನೇಕ ರಾಷ್ಟ್ರಗಳ ಧಾರ್ಮಿಕ ಸೌಹಾರ್ದದ ಅಂದವನ್ನು ಕೂಡಾ ಕೆಡಿಸಿದೆ. ತಮ್ಮ ಬೇಳೆ ಬೇಯುವುದಕ್ಕೆ ಮುಸ್ಲಿಮರ ಒಗ್ಗಟ್ಟು ತಮಗೆ ಕಗ್ಗಂಟಾಗಬಹುದೆಂದು ಭಾವಿಸಿದ್ದ ಪಾಶ್ಚಾತ್ಯ ಶಕ್ತಿಗಳು, ಓರಿಯಂಟಲಿಸಂ ಹಾಗೂ ಝಿಯೋನಿಸಂ ನ್ನು ಸೃಷ್ಠಿಸಿದರು. ದುವ್ರ್ಯಾಖ್ಯಾನಗಳ ಮೂಲಕ ಇಸ್ಲಾಮನ್ನು ವಿರುಪಗೊಳಿಸಲು ಓರಿಯಂಟಲಿಸಂ ಯತ್ನಿಸಿದರೆ, ಝಿಯೊನಿಸ್ಟರು ಆಕ್ರಮಣಕಾರಿಯಾಗಿ ಇಸ್ಲಾಮಿನ ಮೇಲೆರಗಿದರು. ಈ ಎರಡೂ ಐಡಿಯಾಲಜಿಗಳು ಗ್ರಾಂಥಿಕವಾಗಿಯೂ ಇನ್ನಿತರ ರೀತಿಯಲ್ಲೂ ಘಾಸಿಗೊಳಿಸಲು ಯತ್ನಿಸುತ್ತಿರುವಾಗ, ಅವರಿಗೆ ವಹಾಬಿಗಳು ಕಾಣÀಸಿಕ್ಕಿದರು. ಆಗಿನ್ನೂ ಪ್ರವರ್ಧಮಾನಕ್ಕೆ ಬರದ ವಹಬಿಸಂಗೆ ಆ ಎರಡು ಐಡಿಯಾಜಿಗಳು ಸಂಜೀವಿನಿಯಯಿತು. ಪರಿಣಾಮ ಹಂಫರ್ ಎಂಬ ಗೂಢಚಾರಿಯ ಕಟು ಪ್ರಯತ್ನಗಳ ಮೂಲಕ ಜಾಗತಿಕ ಮುಸಲ್ಮಾನರ ಪ್ರತಿನಿಧಿಯಾಗಿದ್ದ ಟರ್ಕಿಯ ಸುಲ್ತÁನನ ನೇತೃತ್ವದ ಒಟ್ಟೋಮನ್ ಸಾಮ್ರಾಜ್ಯದ ಪತನವಯಿತು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾÀಗಿz.É
    ಭಾರತದಲ್ಲಿ ಅತ್ಯುಗ್ರ ಮತಿಯತೆಯನ್ನು ಪ್ರತಿಪಾದಿಸಿದ್ದು ವಹಬಿಸಮನ ಶಾಖೆಯಾದ ಜಮಾಅತೇ ಇಸ್ಲಾಮಿ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಉಗ್ರವಾದ ಮತ್ತು ಭಯೊತ್ಪಾದನೆಯಲ್ಲಿ ಪಕ್ಕದ ರಾಜ್ಯವಾದ ಕೇರಳದ ಹೆಸರು ಕೇಳಿ ಬರುವುದರಲ್ಲಿ ಜಮಾಅತೇ ಇಸ್ಲಾಮಿಯ ಪಾತ್ರ ಮುಖ್ಯವಾಗಿದೆ. ಅದರ ಸ್ಥಾಪಕ ನೇತಾರ ಮೌದೂದಿಯನ್ನು ಭೇಟಿಯಾಗಿ ಕೇರಳದಲ್ಲಿ ಜಮಾಅತೇ ಇಸ್ಲಾಮಿಗೆ ಮುನ್ನುಡಿ ಬರೆದ ಪಿ.ವಿ. ಮುಹಮ್ಮದ್ ಹಾಜಿ 1940ರಲ್ಲಿ ಜಮಾಅತುಲ್ ಮುಸ್ತರ್‍ಶಿದೀನ್ ಎಂಬ ಸಂಘಟನೆಯನ್ನು ಸ್ಥಾಪಿಸಿದ ಘಟನೆಯನ್ನು ಶೈಖ್ ಮುಹಮ್ಮದ್ ಕಾರಕ್ಕುನ್ನು ತನ್ನ ಪುಸ್ತಕದಲ್ಲಿ (ಇಸ್ಲಾಮಿಕ ಪ್ರಸ್ಥಾನಂ ಮುನ್ನಿಲ್ ನಡನ್ನ ನೇದಾಕ್ಕಳ್) ಬರೆಯುತ್ತಾರೆ. ಆ ಸಂಘಟನೆಯ ಒಂದನೇ ವಾರ್ಷಿಕೋತ್ಸವದಲ್ಲಿ ಅವರು ಹೇಳುವುದೇನೆಂದರೆ “ಈ ದೇಶವು ಕೆಟ್ಟು ಹೋಗಿದೆ, ಇಲ್ಲಿ ಒಳ್ಳೆಯ ಜೀವನ ತೀರಾ ಅಸಾಧ್ಯ. ಆದ್ದರಿಂದ ಇಸ್ಲಾಮನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವ ಎಲ್ಲರೂ ಹಿಜ್ರಾ ಹೋಗಿ ಒಂದೆಡೆ ಇಸ್ಲಾಮೀ ರಾಷ್ಟ್ರ ಸ್ಥಾಪಿಸೋಣ. ಆ ಮೂಲಕ ಅನಿಸ್ಲಾಮಿಕ ಅನಾಚಾರ ಹಾಗೂ ಪ್ರಭಾವಗಳಿಂದ ನಮಗೆ ರಕ್ಷೆ ಹೊಂದಬಹುದಲ್ಲವೇ?” ಎಂದಾಗಿತ್ತು. ಪಿ,ವಿ. ಹಾಜಿಯವರು ಪಠಾಣ್‍ಕೋಟ್‍ನಲ್ಲಿದ್ದ ಮೌದೂದಿ ಬಳಿ 9 ತಿಂಗಳ ಕಾಲ ಶಿಕ್ಷಣ ಪಡೆದಿದ್ದರು. ಅಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ತನ್ನ ಗೆಳೆಯನಿಗೆ ಪತ್ರದ ಮೂಲಕ ಹೀಗೆ ಬರೆದಿದ್ದರು. “ಇದೊಂದು ಚಿಕ್ಕ ಹಾಗು ಚೊಕ್ಕವಾದ ಇಸ್ಲಾಮಿ ರಾಷ್ಟ್ರವಾಗಿದೆ. ಇಲ್ಲಿ ಮಸೀದಿಗಳಿವೆ, ಆಸ್ಪತ್ರೆಗಳಿವೆ. ಎಲ್ಲವನ್ನೂ ಜಮಾಅತ್ ಕರ್ಯಕರ್ತರು ನಿರ್ವಹಣೆ ಮಾಡುತ್ತಾರೆ. ಇಲ್ಲಿನ (ದಾರುಲ್ ಇಸ್ಲಾಂ)” ಖಲೀಫಾ ಮೌಲಾನಾ ಮೌದೂದಿಯವರಾಗಿದ್ದಾರೆ.
    ಇಂತಹ ಉಗ್ರ ನಿಲುವನ್ನು ಹೊಂದಿರುವ ಜಮಾಅತೇ ಇಸ್ಲಾಮಿಯು ಇಂದು ಐಸಿಸ್‍ನ ವಿಷಯದಲಿ ದಿವ್ಯ ಮೌನ ತಾಳಿದೆ. ಯಾಕೆಂದರೆ ಉಗ್ರವಾದದ ವಿರುದ್ಧ ಸೊಲ್ಲೆತ್ತಲು ಅವರ ಬೆನ್ನುಹುರಿ ನೆಟ್ಟಗಿಲ್ಲ. ಐಸಿಸ್ ಪಾಳೆಯಕ್ಕೆ ಸೇರಿದವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಖಂಡತುಂಡವಾಗಿ ಹೇಳಲು ಅವರಿಗೆ ಸುತಾರಾಂ ಸಾಧ್ಯವಿಲ್ಲ. ಹಾಗೂ ಐಸಿಸ್‍ನ ಚರ್ಚೆಯನ್ನು ಸ್ಟೇಜು-ಪೇಜುಗಳಲ್ಲಿ ಚರ್ಚಿಸಲು ಅವರಿಗೆ ಧೈರ್ಯ ಸಾಲುತ್ತಿಲ್ಲ. ಈಜಿಪ್ಟ್‍ನ ಮುಹಮ್ಮದ್ ಮುರ್ಸಿಯ ಪದಚ್ಯುತಿ ವಿರುದ್ದ , ತುರ್ಕಿಯ ಉರ್ದುಗಾನ್ ಸರಕಾರದ ವಿರುದ್ಧ ಕೆಂಡಕಾರುವ ಇಲ್ಲಿನ ಜಮಾಅತ್ ಹಾಗೂ ಇತರರ ಮಾಧ್ಯಮಗಳು ಸಲಫಿಸ್ಟ್ ಉಗ್ರರ ಬಗ್ಗೆ ಚರ್ಚಿಸುತ್ತಿಲ್ಲ. ಒಟ್ಟಿನಲ್ಲಿ ಭಾರತದಲ್ಲಿ ಮತೀಯ ಭಯಾವತಾರವನ್ನು ಹುಟ್ಟುಹಾಕುವಲ್ಲಿ ವಹಾಬಿಸಮ ಹಾಗೂ ಅದರ ಶಾಖಾ ಸಂಘಟನೆಗಳು ಪ್ರಮುಖ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು. ಇಷ್ಟು ವರ್ಷಗಳ ಕಾಲ ಜಾಗತಿಕವಾಗಿ ಸುನ್ನಿ ಹಾಗೂ ಶಿಯಾ ಎಂದು ಮಾತ್ರ ಮುಸ್ಲಿಮರನ್ನು ವಿಭಾಗಿಸುವ ಪ್ರಕ್ರಿಯೆ ಇಲ್ಲಿತ್ತು. ವಹಾಬಿಗಳನ್ನೂ ಸುನ್ನಿಗಳೆಂದೇ ಕರೆಯಲಾಗುತ್ತಿತ್ತು. ಸುನ್ನೀ ಉಗ್ರರು ಎಂಬ ಟೈಟಲೆ ಬದಲಾಗಿ ಇದೀಗ ವಹಾಬಿ ಉಗ್ರ, ಸಲಫಿಸ್ಟ್ ಉಗ್ರ ಎಂದು ಮಾಧ್ಯಮಗಳಲ್ಲಿ ಮೂಡಿಬರತೊಡಗಿದ್ದು ನೈಜ ಇಸಲಾಮಿನ ಸೇವಕರಿಗೆ ಸಂತೋಷದಾಯಕ ವಿಚಾರವಾಗಿದೆ. ಏನೇ ಆಗಲಿ, ಮುಸ್ಲಿಮರು ಅಸಹಿಷ್ಣುಗಳು ಎಂದು ಹೇಳಿ ಇಲ್ಲಿನ ಫ್ಯಾಸಿಸ್ಟ್ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದೆ. ಅನ್ನ ಹಳಸಿದೆ, ನಾಯಿ ಹಸಿದಿದೆ ಎಂಬ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಮುಸ್ಲಿಂ ನಾಮಧಾರಿ ಮತೀಯವಾದಿಗಳ ಕುಕೃತ್ಯಗಳನ್ನು ಜನರ ಮುಂದೆ ಮಂಡಿಸಿ ಅನ್ಯ ಧರ್ಮಗಳ ಜಾತ್ಯತೀತರ ಅನುಕಂಪವನ್ನು  ಗಿಟ್ಟಿಸುವ ಫ್ಯಾಸಿಸ್ಟ್ ಶಕ್ತಿಗಲ ಪ್ರಯತ್ನವು ಅಪಾಯಕಾರಿಯಾಗಿದೆ. ಆದ್ದರಿಂದ ಉಗ್ರವಾಗಿ ಇಸ್ಲಾಮನ್ನು ಮಂಡಿಸುವವರನ್ನು ಖಂಡಿಸಿ, ಇಸ್ಲಾಮಿನ ನೈಜ ಮಂತ್ರಗಳನ್ನು ಜನರಿಗೆ ತಿಳಿಹೇಳಬೇಕಾಗಿದೆ.

Comments

Post a Comment