ಭೀಮಾ-ಕೋರೆಗಾಂವ್:
ಮನುವಾದ ವಿರೋಧಿ ಹೋರಾಟ
ಎಪಿಎಂ ಶಮೀರ್, ಪೆರುವಾಜೆ
ಭೀಮಾ- ಕೋರೆಗಾಂವ್ ಯುದ್ಧದ ದ್ವಿಶತಮಾನೋತ್ಸವ ದಿನದಂದು ದಲಿತರ ವಿರುದ್ದ ಬ್ರಾಹ್ಮಣಶಾಹಿಗಳು ಧಾಳಿ ನಡೆಸಿದ ಬಳಿಕ ಉಂಟಾದ ಗಲಭೆಯನ್ನು ಮರಾಠ- ದಲಿತ ಸಂಘರ್ಷವೆಂದು ವ್ಯಾಖ್ಯಾನಿಸಲಾಗುತ್ತಿದೆ. 1818 ಜನವರಿ 1ರಂದು ಅಸ್ಪøಶ್ಯರೆಂದೇ ಪರಿಗಣಿಸಲ್ಪಟ್ಟಿದ್ದ ದಲಿತರ ಉಪವಿಭಾಗವಾದ ಮಹರ್ ಸಮುದಾಯದವರು ಬ್ರಿಟಿಷರೊಡಗೂಡಿ ಪೇಶ್ವೆ ಎರಡನೇ ಬಾಜೀರಾಯನ ಮೇಲೆ ವಿಜಯ ಸಾಧಿಸಿದ್ದರು. ಪೇಶ್ವೆ ಮೇಲೆ ವಿಜಯ ಸಾಧಿಸಿದ ಆ ಸಂಗ್ರಾಮವನ್ನು ಭೀಮಾ ಕೋರೆಗಾಂವ್ ಸಂಗ್ರಾಮ ಎನ್ನುತ್ತಾರೆ. ಭೀಮಾತೀರದಲ್ಲಿ ನಡೆದ ಈ ಯುದ್ಧವನ್ನು ಬ್ರಿಟಿಷ್-ಮರಾಠಾ ಯುದ್ದ ಎನ್ನುವುದಕ್ಕಿಂತ, ಪೇಶ್ವೆಗಳ ಮೇಲಿನ ಶೋಷಿತರಾದ ಮಹರ್ ಸಮುದಾಯದವರ ವಿಜಯ ಎಂದು ಹೇಳಲು ದಲಿತರು ಹೆಮ್ಮೆಪಡುತ್ತಾರೆ. ಹಾಗೂ ಪ್ರತೀವರ್ಷ ವಿಜಯೋತ್ಸವವನ್ನೂ ಆಚರಿಸುತ್ತಾರೆ.
ಕಳೆದ 199 ವರ್ಷಗಳ ಕಾಲ ಈ ವಿಜಯಾಚರಣೆ ನಡೆದಿದ್ದರೂ ಇಂತಹ ಘಟನೆ ನಡೆದಿರಲಿಲ್ಲ. 200ನೇ ವರ್ಷಾಚರಣೆಯಲ್ಲಿ ಅದು ಓರ್ವ ದಲಿತ ಸಹೋದರನ ಕೊಲೆಯ ಮೂಲಕ ಹಿಂಸಾಚಾರಕ್ಕೆ ನಾಂದಿಯಾಗುತ್ತದೆ. ದಲಿತ- ಮೇಲ್ವರ್ಗದ ನಡುವಿನ ವೈಷಮ್ಯದ ಬೆಂಕಿಗೆ ಈ ಘಟನೆಯು ತುಪ್ಪ ಸುರಿದಂತಾಗಿದೆ. ಇದು ದಲಿತ- ಮರಾಠಾ ಸಂಘರ್ಷವೆಂದು ಬಿಜೆಪಿ ಹೇಳಿದರೆ, ಮರಾಠಾ ನಾಯಕರು ಮುನ್ನಡೆಸುವ ಪ್ರದೇಶ ಕಾಂಗ್ರೆಸ್ ಮತ್ತು ಶರದ್ ಪವಾರರ ಎನ್‍ಸಿಪಿಯು ದಲಿತ-ಹಿಂದುತ್ವ ಸಂಘರ್ಷವೆಂದು ವ್ಯಾಖ್ಯಾನಿಸುತ್ತದೆ. ವಿಪಕ್ಷದ ವೋಟ್ ಬ್ಯಾಂಕ್ ಛಿದ್ರೀಕರಣ ಬಿಜೆಪಿ ಲಕ್ಷ್ಯವಾಗಿದ್ದರೆ, ಧೃವೀಕರಣವನ್ನು ವಿಪಕ್ಷಗಳು ಎದುರು ನೋಡುತ್ತಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಂಬೋಣ.
ಮರಾಠರ ಅವಧಿಯಲ್ಲಿ ಛತ್ರಪತಿಗಳ ಪ್ರಧಾನಮಂತ್ರಿಗಳಂತೆ ಪೇಶ್ವೆಗಳು ಕಾರ್ಯಭಾರ ನಡೆಸುತ್ತಿದ್ದರು. ಬಾಹ್ಮಣರೇ ಪೇಶ್ವೆಗಳಾಗಿದ್ದರು. ಅದು ಜಾತೀಯತೆಯು ಉಚ್ಪ್ರಾಯ ಸ್ತಿತಿಯಲ್ಲಿದ್ದ ಕಾಲವಾಗಿತ್ತು. ಅಂದು ಸೈನ್ಯದಲ್ಲಿದ್ದ ದಲಿತರನ್ನು ಪೇಶ್ವೆಗಳು ಮೃಗೀಯವಾಗಿ ನಡೆಸಿಕೊಳ್ಳುತ್ತಿದ್ದರು. ಜಾತಿ ಆಧಾರದಲ್ಲಿ ಅವರನ್ನು ತಾರತಮ್ಯದಿಂದ ನೋಡಲಾಗುತ್ತಿತ್ತು. ಊಟ, ನಿದ್ದೆಗಳಲ್ಲೂ ಅವರನ್ನು ಪ್ರತ್ಯೇಕಿಸಲಾಗುತ್ತಿತ್ತು. ದಲಿತರು ನಡೆಯುವ ಹಾದಿಯನ್ನು ಶುಚೀಕರಿಸಲು ಅವರ ಬೆನ್ನ ಹಿಂದೆ ಪೊರಕೆ ಕಟ್ಟಲಾಗುತ್ತಿತ್ತಂತೆ..! ಮೇಲ್ಜಾತಿಯವರ ನಿರಂತರ ಅವಮಾನಗಳನ್ನು ಸಹಿಸಲಾಗದೇ ಮಹರ್ ಸಮುದಾಯದವರು ಬೆರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸೇನೆಗೆ ಸೇರುತ್ತಾರೆ. ಬ್ರಿಟಿಷರು ಅವರನ್ನು ರತ್ನಗಂಬಳಿ ಹಾಸಿ ಸ್ವೀಕರಿಸಿ, ಮಾನವೀಯ ನೆಲೆಯಲ್ಲಿ ಅವರಿಗೆ ಕೆಲಸ ಮತ್ತು ವಿದ್ಯಾಭ್ಯಾಸ ನೀಡುತ್ತಾರೆ. ಬ್ರಿಟಿಷರು ತಮಗೆ ನೀಡಿದ ಉಪಕಾರಕ್ಕೆ ಪ್ರತಿಯಾಗಿ ಪೇಶ್ವೇ 2ನೇ ಬಾಜೀರಾಯನ ವಿರುದ್ಧದ ಸಂಗ್ರಾಮದಲ್ಲಿ ಮಹರ್ ಸಮುದಾಯದವರು ಭಾಗಿಯಾಗುತ್ತಾರೆ. ಪುಣೆ ಬಳಿಯ ಖಡ್‍ಕಿ (1817) ಯುದ್ಧದ ಪರಾಭವದ ಬಳಿಕ ಬ್ರಿಟಿಷರಿಂದ ಪುಣೆಯನ್ನು ವಶಪಡಿಸಿಕೊಳ್ಳಲು 1818 ಜನವರಿ 1ರಂದು ಬಾಜೀರಾಯನು ನಡೆಸಿದ ಯುದ್ಧವೇ ಭೀಮಾ-ಕೋರೆಗಾಂವ್ ಯುದ್ಧ. 28000 ಜನರಿರುವ ಬೃಹತ್ ಸೈನ್ಯದೊಂದಿಗೆ ಬಂದ ಪೇಶ್ವೆಯ ಸೈನ್ಯವನ್ನು, ಮಹರ್ ಸಮುದಾಯದವರು ಸೇರಿದ ಕೇವಲ 600 ಜನರ ಮೂಲಕ ಬ್ರಿಟಿಷರು ಎದುರಿಸುತ್ತಾರೆ. 12 ಘಂಟೆಗಳ ಕಾದಾಟದಲ್ಲಿ ಪೇಶ್ವೆ ಸೈನ್ಯದ 600 ಜನ ಸತ್ತು, ಪೇಶ್ವೆ ಯುದ್ಧದಿಂ ಹಿಮ್ಮೆಟ್ಟುತ್ತಾನೆ. 22 ಮಹರ್‍ಗಳು, 16 ಮರಾಠರು ಸೇರಿದಂತೆ ಬ್ರಿಟಿಷ್ ಸೈನ್ಯದ 200 ಜನ ಅಸುನೀಗುತ್ತಾರೆ. ದಲಿತರನ್ನು ತುಳಿದ, ಶೋಷಿಸಿದವರ ಮೇಲಿನ ಯುದ್ಧದಲ್ಲಿ ದಲಿತರು ವಿಜಯಿಯಾಗುತ್ತಾರೆ. ಆದ್ದರಿಂದ ಪ್ರತೀ ವರ್ಷ ಇದರ ಸ್ಮರಣೆಗಾಗಿ ದಲಿತರು ಅಲ್ಲಿ ಒಂದುಗೂಡುತ್ತಾರೆ.
ಆದರೆ ಪ್ರಸ್ತುತ ವಿಜಯೋತ್ಸವವು ಹೊಸ ರಾಜಕೀಯ ಮಹತ್ವಾಕಾಂಕ್ಷೆ ಕಾರಣಕ್ಕಾಗಿ ಗಮನ ಸೆಳೆದಿದೆ. ಗುಜರಾತ್‍ನ ದಲಿತ ಶಾಸಕ ಜಿಗ್ನೇಶ್ ಮೇವಾನಿ, ಹೈದರಾಬಾದ್ ವಿವಿಯಲ್ಲಿ ಆತ್ಮಹತ್ಯೆಗೈದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ, ಜೆಎನ್‍ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮುಂತಾದವರ ಉಪಸ್ಥಿತಿಯಲ್ಲಿ ಭೀಮ-ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ ಆಯೋಜಿಸಿ, ಒಂದುಗೂಡಿದ್ದು, ಕಳೆದ ವರ್ಷದ ಉತ್ಸವಕ್ಕಿಂತ ಈ ವರ್ಷದ ಉತ್ಸವಕ್ಕೆ ಕಳೆ ನೀಡಿತ್ತು. ವೇಮುಲಾ ಆತ್ಮಹತ್ಯೆ, ಜೆಎನ್‍ಯು ವಿವಾದ, ಉನಾದ ದಲಿತರ ಮೇಲಿನ ಹಲ್ಲೆ, ಗುಜರಾತ್‍ನ ಪಾಟೀದಾರ್ ಆಂದೋಲನಗಳು ದೀರ್ಘಕಾಲದಿಂದ ಅಧಿಕಾರರೂಢವಾಗಿದ್ದ ಬಿಜೆಪಿಯನ್ನು ಗುಜರಾತ್‍ನಲ್ಲಿ ಎರಡಂಕಿಗೆ ಇಳಿಸಿದ ಬಳಿಕ ಈ ಸಂಗಮವು ನಡೆದಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಗುಜರಾತನ್ನು ಬಿಜೆಪಿ ವಶಪಡಿಸಿಕೊಂಡರೂ ನಿಂತ ನೆಲವೇ ಕುಸಿದಂತಾದ ಅನುಭವವು ಬಿಜೆಪಿಯನ್ನು ಹೈರಾಣಾಗಿಸಿತ್ತು. ಬಿಜೆಪಿಗೆ ಸಿಂಹಸ್ವಪ್ನವಾಗಿದ್ದ ಯುವ ನಾಯಕರನ್ನು ಆಹ್ವಾನಿಸಿ ಪೇಶ್ವೆಗಳ ಮೇಲಿನ ವಿಜಯೋತ್ಸವ ಆಚರಿಸಲು ಉದ್ದೇಶಿಸಲಾಗಿತ್ತು. ಆದುನಿಕ ಪೇಶ್ವೆಗಳಾದ ಸಂಘಪರಿವಾರದ ವಿರುದ್ಧ ಕಿರು ಹೊತ್ತಗೆಗಳನ್ನು ಹಂಚಿ ಅವರಿಗೆ ಬಿಸಿ ಮುಟ್ಟಿಸಲಾಗಿತ್ತು. ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆಯುವ, ಗೋರಕ್ಷಣೆ ಹೆಸರಿನಲ್ಲಿ ದಲಿತ-ಅಲ್ಪ ಸಂಖ್ಯಾತರನ್ನು ತುಳಿಯುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಡುವೆವು ಎಂದು ಕಾರ್ಯಕ್ರಮದ ಆಯೋಜಕರು ಉಚ್ಛವಾಗಿ ಘೋಷಿಸಿದ್ದರು.
ಸಂಭಾಜಿ ಬ್ರಿಗೇಡ್ ಎಂಬ ಒಂದು ಸಂಘಟನೆಯು ಭಾನುವಾರ ಈ ಸಂಗಮವನ್ನು ಆಯೋಜಿಸಿತ್ತು. ಪೇಶ್ವೆಗಳ ವಾರಸುದಾರರೂ, ಮಿಲಿಂದ್ ಏಕ್‍ಬೋತೆ ನೇತೃತ್ವದ ಹಿಂದೂ ಏಕ್ತಾ ಅಘಾದಿ, ಸಂಭಾಜಿ ಭಿಡೆ ಅವರ ಶಿವರಾಜ್ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಈ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಯಾರ ವಿಜಯವನ್ನು ಆಚರಿಸುತ್ತೀರಿ? ಎಂಬುದಾಗಿತ್ತು ಅವರ ಪ್ರಶ್ನೆ. ಇದು ದೇಶ ವಿರೋಧಿಯೂ, ಜಾತಿ ವಿಷಬೀಜ ಬಿತ್ತುವಂತದ್ದೂ ಎಂದೂ ಅವರು ಆರೋಪಿಸಿದ್ದರು. ಪ್ರಜಾತಾಂತ್ರಿಕವಾಗಿ ಚುನಾಯಿತವಾಗಿದ್ದ ಪಕ್ಷವನ್ನು ಆಧುನಿಕ ಪೇಶ್ವೆಗಳೆಂದು ಜರೆದಿದ್ದನ್ನು ಅವರು ದೇಶದ್ರೋಹವಾಗಿ ಬಿಂಬಿಸಿದರು. ಆ ದಿನ ಭೀತಿಯ ವಾತಾವರಣವಿದ್ದರೂ ಏನೂ ಸಂಭವಿಸಲಿಲ್ಲ. ಕೇಂದ್ರಮಂತ್ರಿ ದಲಿತ ನಾಯಕ ರಾಂದಾಸ್ ಅಠಾವಳೆ ಮತ್ತು ಮಹಾರಾಷ್ಟ್ರದ ಸಚಿವ ಗಿರೀಶ್ ಬಾಪಡ್ ಜತೆಯಾಗಿ ಬಂದು ಭಿಮಾ ಕೋರೆಗಾಂವ್‍ನ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿದ್ದರು.
ಸೋಮವಾರ ಗೌರವ ವಂದನೆ ಸಲ್ಲಿಸಲು ಜನರು ಬಂದಾಗ ಭಾರೀ ಕಲ್ಲು ತೂರಾಟ ನಡೆಯಿತು. ದಲಿತ ಸಂಘಟನೆಗಳ ಚಿಹ್ನೆ ಹೊಂದಿದ್ದ ವಾಹನಗಳನ್ನು ಜಖಂಗೊಳಿಸಲಾಯಿತು. ಕೇಸರಿ ವಸ್ತ್ರಧರಿಗಳಾಗಿ, ಭಗವಾ ಧ್ವಜ ಹಿಡಿದಿದ್ದ ಸವರ್ಣೀಯರು ಕಲ್ಲು ತೂರಾಟ ನಡೆಸುತ್ತಾರೆ. ಈ ಘಟನೆಯು ಭಾರೀ ವಿವಾದವಾಗಿ ಪ್ರತಿಭಟನೆಯು ಮುಂಬೈ, ಔರಂಗಾಬಾದ್, ನಾಸಿಕ್ ಮುಂತಾದ ನಗರಗಳಿಗೂ ವ್ಯಾಪಿಸುತ್ತದೆ. ಈ ಘಟನೆ ರೌದ್ರಾವತಾರಕ್ಕೆ ತಲುಪಲು ಪೋಲಿಸರ ನಿರ್ಲಕ್ಷ್ಯವೂ ಕಾರಣವಾಗುತ್ತದೆ. ಭೀತಿಯ ವಾತಾವರಣವಿದ್ದರೂ ಪೊಲೀಸರು ಅನಾಸ್ಥೆ ತೊರುತ್ತಾರೆ. ಸಂಘರ್ಷವು ಹದ್ದು ಮೀರಿದಾಗ ಸರ್ಕಾರವು ಅರೆಸೇನಾ ಪಡೆಗಳನ್ನು ನಿಯೋಜಿಸಿ ತಹಬಂದಿಗೆ ತರಲು ಯತ್ನಿಸುತ್ತದೆ. ದಲಿತ-ಎಡಪಂಥೀಯ ಸಂಘಟನೆಗಳು ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಇಳಿದದ್ದು ಸರ್ಕಾರದ ಭೀತಿಗೇ ಕಾರಣವಾಗುತ್ತದೆ. ಬಾಬಾಸಾಹೇಬ ಅಂಬೇಡ್ಕರರ ಮೊಮ್ಮಗ ಪ್ರಕಾಶ್ ಅಂಬೇಡ್ಕರರ ಬಹುರಿಪ ಬಹುಜನ್ ಮಹಾಸಂಘವು ಪ್ರತಿಭಟನೆಯಲ್ಲಿ ಸಕ್ರಿಯವಾಗಿದೆ. ಈ ವಿಷವನ್ನು ಲೋಕಸಭೆಯಲ್ಲಿ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಪ್ರಸ್ತಾಪಿಸುತ್ತಾರೆ. ಎನ್‍ಡಿಎ ಅಂಗಪಕ್ಷ ಆರ್‍ಪಿಎ ಪಕ್ಷದ ನಾಯಕ ಅಠಾವಳೆ ಮತ್ತು ದಲಿತರ ನಾಯಕನೆಂದೇ ಕರೆಯಲಾಗುವ ಇನ್ನೋರ್ವ ಕೇಂದ್ರಸಚಿವ ರಾ ವಿಲಾಸ್ ಪಾಸ್ವಾನ್ ತುಟಿಪಿಟಿಕ್ ಎನ್ನುತ್ತಿಲ್ಲ.
ಮಹಾರಾಷ್ಟ್ರದ ದಲಿತ ಸಾಹಿತಿ ಶರಣ್ ಕುಮಾರ್ ಲಿಂಬಾಳೆ ಪ್ರಕಾರ ಇದು ದಲಿತ-ಮರಾಠ ಸಂಘರ್ಷವಲ್ಲ. ಮರಾಠಿಗರ ಮೀಸಲಾತಿಗಾಗಿ ಹೋರಾಡುವ ಮರಾಠಾ ಕ್ರಾಂತಿ ಮೋರ್ಚಾ ಮತ್ತಿತರ ಮರಾಠಿ ಸಂಘಟನೆಗಳು ದಲಿತರೊಂದಿಗೆ ಕೈಜೋಡಿಸಿದೆ. ಮಹಾರಾಷ್ಟ್ರದ ಮತದಾರರ ಪೈಕಿ ಶೇ. 30 ರಷ್ಟಿರುವ ಮರಾಠ ಮತಗಳು ಮತ್ತು ಶೇ. 10.6ರಷ್ಟಿರುವ ದಲಿತ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮತ್ತು ಎನ್‍ಸಿಪಿ ಭಾರಿ ಕಸರತ್ತು ನಡೆಸುತ್ತಿರುವಾಗ ಪೇಶ್ವೆಗಳ ಅಥವಾ ಬ್ರಾಹ್ಮಣ್ಯ ವಿರೋದಿ ರಣಕಹಳೆಯು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಛತ್ರಪತಿ ಶಿವಾಜಿಯ ಪಟ್ಟಾಭಿಷೇಕವನ್ನು ಶತಾಯಗತಾಯ ವಿರೋಧಿಸಿದ್ದ ಬ್ರಾಹ್ಮಣರ ಮೇಲೆ ಮರಾಠರಿಗೆ ಸಿಟ್ಟಿದೆ. ತಮ್ಮನ್ನು ತುಳಿದ ಬ್ರಾಹ್ಮಣರಾದ ಪೇಶ್ವೆಗಳ ಮೇಲೆ ದಲಿತರಿಗೂ ಕೋಪವಿದೆ. ಇದು ವಿಪಕ್ಷಗಳಿಗೆ ಅನುಕೂಲವಾದರೆ ಫಡ್ನವೀಸ್ ಸರ್ಕಾರಕ್ಕೆ ಕುತ್ತು ಬರುವುದು ಗ್ಯಾರಂಟಿ. ಭಾರತದಾದ್ಯಂತ ಶೋಷಿತರಾದ ದಲಿತರು, ಅಲ್ಪಸಂಖಹ್ಯಾತರು, ಹಿಂದುಳಿದವರು ಸೆಟೆದು ನಿಂತರೆ ಮನುವಾದಿಗಳ ಆರ್ಭಟವನ್ನು ಕೊನೆಗಾಣಿಸಬಹುದೆಂಬುದನ್ನು ಇದು ತಿಳಿಸುತ್ತದೆ.

Comments
Post a Comment