ಕಾಶ್ಮೀರ ಎಂಬ ಮಾಯಾವಿಯ ಮಡಿಲಲ್ಲಿ
ನಮ್ಮ ಮನಸೂರೆಗೊಂಡ ಕಾಶ್ಮೀರಿಗಳ ಸತ್ಕಾರ ಮನೋಭಾವ
-ಎಪಿಎಂ ಶಮೀರ್ ಪೆರುವಾಜೆ
ಮಾರ್ಚ್ 11ನೇ ತಾರೀಖು ಶನಿವಾರ, ಕಾಶ್ಮೀರ ಸಂದರ್ಶನ ಮುಗಿಸಿ ಬೇಗನೇ ಚಂಢೀಗಡಕ್ಕೆ ಹೋಗುವ ಹವಣಿಕೆಯಲ್ಲಿದ್ದೆವು. ಅದಕ್ಕಾಗಿ ನಾವು ತಮಗಿದ್ದ ಲಾವೈಪೂರ್‍ನ ಅದಾನ್ ರೆಸ್ಟೋರೆಂಟ್ ವೆಕೇಟ್ ಮಾಡಿ ಎಲ್ಲಾ ಗಂಟು ಮೂಟೆ ಕಟ್ಟಿಕೊಂಡು ಬಂದಿದ್ದೆವು. ಶ್ರೀನಗರದಿಂದ ಜಮ್ಮುವಿಗಿರುವ ಏಕೈಕ ದುರ್ಗಮ ಹಾದಿಯು ಭಾರೀ ಹಿಮಪಾತದಿಂದ ಮುಚ್ಚಲ್ಪಟ್ಟ ವಾರ್ತೆಯು ನಮ್ಮನ್ನು ಆತಂಕಕ್ಕೀಡು ಮಾಡಿತ್ತು. ಶುಕ್ರವಾರ ಶ್ರೀನಗರದಿಂದ ಹೊರಟರಷ್ಟೇ ಭಾನುವಾರ ಚಂಢೀಗಡ ತಲುಪಬಹುದು. ಅಲ್ಲಿ ಎರಡು ದಿನ ಸುತ್ತಿ (ಒಂದು ಕಾಲದ ಇಸ್ಲಾಮಿನ ಗತವೈಭವದ ಬೀಡಾಗಿದ್ದ ಹಳೆಯ ಅಖಂಡ ಪಂಜಾಬ್ ಪ್ರಾಂತ್ಯದ ಸರ್‍ಹಿಂದ್ ಮುಂತಾದ ಸ್ಥಳಗಳ ಸಂದರ್ಶನ ಹಾಗೂ ಪ್ರಬೋಧನೆಯ ಸಾಧ್ಯತೆಯನ್ನು ತಿಳಿಯುವುದು ನಮ್ಮ ಲಕ್ಷ್ಯವಾಗಿತ್ತು), ಮೊದಲೇ ಕಾಯ್ದಿರಿಸಿದ ಟಿಕೆಟ್ ಮೂಲಕ ಮಂಗಳವಾರ ಚಂಡೀಗಢದಿಂದ ಬೆಂಗಳೂರಿಗೆ ಮರಳುವುದು ನಮ್ಮ ಯೋಜನೆಯಾಗಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಏನೇ ಆಗಲಿ ಹೊರಡೋಣವೆಂದು ತೀರ್ಮಾನಿಸಿ ಇಳಿದೆವು.
ಜಮ್ಮು ದಾರಿಯಲ್ಲಿ ಭಾರೀ ಗಾತ್ರದ ವಾಹನಗಳಿಗೆ ನಿರ್ಬಂಧವಿತ್ತು. ಅಂದು ನಮ್ಮನ್ನು ತಡೆದ ಪೊಲೀಸರು (ಅಲ್ಲಿನ ಪೊಲೀಸರು ಸೌಜನ್ಯಯುತ ನಡತೆಯಲ್ಲಿ ಪ್ರಸಿದ್ಧರು) ಪುನಃ ಅದಾನ್ ರೆಸ್ಟೋರೆಂಟ್‍ಗೆ ಕಳುಹಿಸಿದರು. ಆ ದಿನ ಅಲ್ಲಿ ನಮಗೆ ಮೀಸಲಿರಿಸಿದ್ದ ರೂಮ್‍ಗಳಲ್ಲಿ ಹೊದಿಕೆ ಹೊದ್ದು ಬೆಚ್ಚನೆಯ ಅನುಭವ ಪಡೆದೆವು. ಸಾಲದ್ದಕ್ಕೆ ಉತ್ತರಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ವಾರ್ತೆಗಳಲ್ಲಿ ವೀಕ್ಷಿಸಿದೆವು. ನಮಗೆ ಇದಿರಾಗಿದ್ದ ಕಗ್ಗಂಟು ನಿವಾರಣೆಯಾಗಲು ಉಸ್ತಾದರ ನೇತೃತ್ವದಲ್ಲಿ ಖುತುಬಿಯ್ಯತ್ ಆಯೋಜಿಸಿ, ಔಲಿಯಾಗಳ ಪುಣ್ಯ ಸ್ಮರಣೆ ನಡೆಸಿದೆವು. ಅಮದು ಲಾವೇಪೋರ್‍ನಲ್ಲಿ ಸಮಯ ಕಳೆದೆವು. ರಾತ್ರಿ ಸಮೀಪದ ಮಸೀದಿ-ಮದ್ರಸಗಳಿಗೆ ಭೇಟಿನೀಡಿ, ಅಲ್ಲಿನವರಿಂದ ಕಾಶ್ಮೀರದ ಸಮಸ್ಯೆ, ಸೇನೆಯ ದೌರ್ಜನ್ಯ, ಕಾಶ್ಮೀರದ ಸ್ವಾಯತ್ತತೆಯ ಬಗ್ಗೆ ಮಾತನಾಡಿದೆವು.
ಮಾರನೆಯ ದಿನ ಬೆಳಿಗ್ಗೆ 10 ಘಂಟೆಗೆ ಏನೇ ಆಗಲಿ, ಇವತ್ತು ಚಂಡೀಗಢಕ್ಕೆ ಹೊರಟೇ ತೀರೋಣ ಎಂಬ ಧೃಢ ತೀರ್ಮಾನದೋಂದಿಗೆ ಹೊರಟೆವು. ಪಾಂಥಾಚೌಕ್ ಎಂಬ ಝೀಲಂ ನದಿ ತೀರ ಪ್ರದೇಶದ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ನಮ್ಮನ್ನು ತಡೆ ಹಿಡಿದರು. ಪಹಲ್ಗಾಂಗೆ ಹೊರಡುತ್ತಿದ್ದೇವೆಂದರೂ ಬಿಡಲಿಲ್ಲ. ಅಲ್ಲಾದರೆ ನೂರಾರು ವಾಹನಗಳನ್ನು ಸಾಲು ಸಾಲಾಗಿ ನಿಲ್ಲಿಸಲಾಗಿತ್ತು. ಅವುಗಳಲ್ಲಿ ಒಂದು ತಿಂಗಳು/ವಾರದಿಂದ ತಂಗಿದ್ದ ವಾಹನಗಳಿದ್ದವು. ಲಾರಿ-ಟ್ರಕ್ ಚಾಲಕರೊಂದಿಗೆ ನೀವು ಎಷ್ಟು ದಿನದಿಂದ ಇಲ್ಲಿದ್ದೀರಿ? ಎಂದು ಕೇಳಿದಾಗ ಈ ರೀತಿಯ ಉತ್ತರ ಲಭಿಸಿತ್ತು. ಇನ್ನೆಷ್ಟು ದಿನ ಹೀಗಿರುತ್ತೀರಿ? ಎಂದು ಕೇಳಿದಾಗ ಆಕಾಶದೆಡೆಗೆ ಕೈ ತೋರಿಸಿ ನಮ್ಮನ್ನು ಆತಂಕಕ್ಕೆ ದೂಡಿದ್ದರು.
ಮೆಲ್ಲನೆ ಬಸ್ಸಿನಿಂದ ಇಳಿದ ವಿದ್ಯಾರ್ಥಿಗಳು ಗುಂಪುಗುಂಪಾಗಿ ಒಂದೊಂದೇ ಸ್ಥಳಗಳಿಗೆ ಸುತ್ತಾಡತೊಡಗಿದ್ದರು. ಕೆಲವರನ್ನು ಸೈನಿಕರು ತಮ್ಮ ಗಾಡಿಗಳಲ್ಲೇ ಹೋಟೆಲ್‍ಗೆ ಕರೆದೊಯ್ದು, ಚಾ ಕಾಫಿ ನೀಡಿದ ಘಟನೆಯೂ ನಡೆಯಿತು. ನಾನು ನನ್ನ ಕೆಲವು ಸಂಗಡಿಗರೊಂದಿಗೆ ಝಿಲಂ ನದಿಯನ್ನು ದೋಣಿ ಮೂಲಕ ದಾಟಿ, ನದಿ ದಂಡೆಯಲ್ಲಿದ್ದ ಊರು ಕೇರಿಗಳನ್ನು ಸುತ್ತಿದೆವು. ಳುಹರ್ ನಮಾಜ್ ನಿರ್ವಹಿಸಲು ಪುನಃ ಈ ಕಡೆ ಬಂದು ಮಸೀದಿಗೆ ಹೋದೆವು. ಅಲ್ಲಿ ನಮಾಝ್ ನಿರ್ವಹಿಸಿದ ಬಳಿಕ, ನದಿ ದಂಡೆಗೆ ಪುನಃ ಹೋದಾಗ ಮಸೀದಿಯ ಇಮಾಮ್ ಸಾಹೇಬರು ಗಾಳ ಹಾಕಿ ಮೀನು ಹಿಡಿಯುತ್ತಿರುವುದನ್ನು ಕಂಡೆವು. ಅವರೊಂದಿಗೆ ಮಾತನಾಡುವಾಗ ಅಂದು ಸೊಪೋರ್‍ನಲ್ಲಿ ಮಿಲಿಟರಿ ಮತ್ತು ಮಿಲಿಟೆಂಟ್‍ಗಳ ನಡುವಿನ ಕಾಳಗದಲ್ಲಿ ಅಸುನೀಗಿದ ಸೈನಿಕರ ಸೈನಿಕರ ಚಿತ್ರ ತೋರಿಸಿದರು. ಸೈನಿಕರ ಮೇಲೆ ಅವರು ರೋಷ ಕಾರುತ್ತಿದ್ದರು.
ಪಾಂಥಾಚೌಕ್‍ನ ನಾಲ್ಕು ದಿಷೆಗಳಲ್ಲಿ ನಡೆದಾಡಿದಾಗ ಹಲವು ವುಷಯಗಳನ್ನು ಅರಿತುಕೊಂಡೆವು. ಇಲ್ಲಿನ ಮಾಧ್ಯಮಗಳಲ್ಲಿ ಬಿತ್ತರಿಸಲ್ಪಡದ ಅಲ್ಲಿನ ನೈಜ ಚಿತ್ರಣಗಳನ್ನು ಅಲ್ಲಿನವರು ನಮ್ಮಲ್ಲಿ ಹಂಚಿದ್ದರು. ದೀರ್ಘಕಾಲದಿಂದ ಸೇನೆ ಮತ್ತು ಅದರ ವಿಶೇಷ ಅಧಿಕಾರ (ಚಿಜಿsಠಿಚಿ), ಸೇನೆಯ ಬಂದೂಕಿನ ನಳಿಕೆಯಿಂದ ಹೊರಡುವ ಗುಂಡುಗಳಿಗೆ ಕಲ್ಲಿನಿಂದಲೇ ಇದಿರೇಟು ಕೊಡುವ ಕಾಶ್ಮೀರಿಗಳ ಭಾವನೆಗಳನ್ನೂ ಅರ್ಥೈಸಲು ಸಾಧ್ಯವಾಗಿದ್ದು ಅಲ್ಲಿಂದಲೇ.. ಹನಫಿ ಮದ್‍ಹಬ್‍ನವರ ಮಸೀದಿಗಳಲ್ಲಿ ಶಾಫಿ ಮದ್‍ಹಬ್‍ನ ಆರಾಧನಾ ಶೈಲಿಗಳು ಅಲ್ಲೇಗೆ ಸೇರಿಕೊಂಡಿತು ಎಂಬುದನ್ನೂ ತಿಳಿಯಲು ಸಾಧ್ಯವಾಯಿತು. ಒಟ್ಟಿನಲ್ಲಿ ಹಿಮಪಾತದಿಂದ ದಾರಿ ಮುಚ್ಚಲ್ಪಟ್ಟಿದ್ದನ್ನು ಧನಾತ್ಮಕವಾಗಿ ಸ್ವೀಕರಿಸಲು ಸಾಧ್ಯವಾಯಿತು.
ಅಂದು ಸಾಯಂಕಾಲ ಪಾಂಥಾಚೌಕ್ ಪಟ್ಟಣಕ್ಕೆ ನೀರು ಪೂರೈಸುವ ಬೃಹತ್ ಟ್ಯಾಂಕ್ ಬಳಿ ನಾವು ಐದಾರು ಜನ ಹೋದೆವು. ದಾರಿ ಮಧ್ಯೆ ಅಂಗಡಿಯೊಂದರಿಂದ ಸ್ವಲ್ಪ ಚಾಕಲೇಟ್ ಖರೀದಿಸಿದ್ದೆವು. ಪುಟಾಣಿ ಮಕ್ಕಳನ್ನು ಕಂಡರೆ ಅದನ್ನು ಅವರಿಗೆ ನೀಡುತ್ತಿದ್ದೆವು. ಟ್ಯಾಂಕ್ ಬಳಿ ತಲುಪಲು ಇನ್ನೇನು 100 ಮೀಟರ್ ದೂರವಿರುವಾಗ, 15-20 ಜನ ಬಾಲಕರನ್ನು ಕಂಡು, ಅವರೊಂದಿಗೆ ಕ್ಷೇಮ ಕೌಶಲ್ಯ ವಿಚಾರಿಸಿ, ಸೆಲ್ಫಿಯೊಂದಿಗೆ ಸಂಭ್ರಮಿಸಿದೆವು. ಅವರೊಂದಿಗೆ ಮಾತನಾಡುವಾಗ ಕಾಶ್ಮೀರ ಸಮಸ್ಯೆ ಬಗ್ಗೆ ಕೇಳಲು ಮರೆಯಲಿಲ್ಲ. ಅವರಲ್ಲೊಬ್ಬ ಭಾರತೀಯ ಸೇನೆಯನ್ನು ಹಿಗ್ಗಾಮುಗ್ಗಾ ಬೈಯುತ್ತಾ, ‘ಕಾಶ್ಮೀರದ 2 ವರ್ಷದ ಮಗು ಕೂಡಾ ನಿಮ್ಮ ಸೇನೆಗೆ ಬೆದರುವುದಿಲ್ಲ’ ಎಂದು ಹೇಳಿದನು. ಸೇನೆಯ ಧಾಳಿಯಲ್ಲಿ ಹತನಾದ ಬುರ್ಹಾನ್ ವಾನಿಯು ತನ್ನ ರೋಲ್ ಮಾಡೆಲ್ ಎಂದು ಅಭಿಮಾನದಿಂದ ಹೇಳುತ್ತಿದ್ದನು. ಆತನ ಹತ್ಯೆಯ ಬಳಿಕ ಉಂಟಾದ ಪ್ರಕ್ಷುಬ್ಧ ಪರಿಶ್ಥಿತಯ ಸಂದರ್ಭದಲ್ಲಿ ಸೇನೆಯ ಬಂದೂಕಿಗೆ ಎದೆ ಕೊಟ್ಟು ಮಾತನಾಡುವ ಮಹಿಳೆಯ ಫೋಟೋ ತೋರಿಸಿ, ನಾನ್ಯಾರೂ ನಿಮ್ಮ ಗೊಡ್ಡು ಬೆದರಿಕೆಗೆ ಜಗ್ಗಲ್ಲ ಎಂದನು. ಆತ ಇನ್ನೂ ಎರಡು ಹೆಜ್ಜೆ ಮುಂದೆ ಹೋಗಿ ಈ ಮಣ್ಣು ಪಾಕಿಸ್ತಾನ, ಆ ಪರ್ವತದಾಚೆ ಅಫಘಾನಿಸ್ತಾನ ಎಂದು ಹೇಳಿದಾಗ ಗುಂಪಿನಲ್ಲಿ ಭಾರೀ ಕರತಾಡನ ಮೂಡಿತ್ತು. ಅಲ್ಲಿಂದ ಬೇಗನೇ ಟ್ಯಾಂಕ್ ಬಳಿ ಹೋಗಿ ನೀರು ಶುದ್ಧೀಕರಣದ ಹಂತಗಳನ್ನು ವೀಕ್ಷಿಸಿ ಹಿಂತಿರುಗುವಾಗ ಫುಟ್ಬಾಲ್ ಮತ್ತು ಕ್ರಿಕೆಟ್ ಆಡುತ್ತಿದ್ದ ಬಾಲಕರನ್ನು ಕಂಡೆವು ನನ್ನೊಂದಿಗಿದ್ದ ಕೇರಳೀಯ ವಿದ್ಯಾರ್ಥಿಗಳು ಫುಟ್ಬಾಲ್ ಆಡಲು ಸೇರಿಕೋಡರೆ, ನಾನು ಕ್ರಿಕೆಟ್ ಆಡಲು ಸೇರಿದೆನು. ಹಾರ್ಡ್ ಬಾಲ್‍ನಲ್ಲಿ 6-10 ನಡುವಿನ ಬಾಲಕರು ಆಡುತ್ತಿದ್ದರು. ಆಟದ ಮಧ್ಯೆ ನಾನು ಬಲವಾಗಿ ಹೊಡೆದ ಬಾಲ್ ಓರ್ವ ಚಿಕ್ಕ ಬಾಲಕನ ಮಂಡಿಗೆ ಬಡಿಯಿತು. ನಾನು ಕೊಂಚ ಹೊತ್ತು ಆತಂಕಕ್ಕೊಳಗಾಗಿದ್ದೆ. ಆದರೆ ಮರುಕ್ಷಣವೇ ಆ ಹುಡುಗ ಸಾವರಿಸಿಕೊಂಡು, ಪುನಃ ಪೂರ್ವ ಶಕ್ತಿಯೊಂದಿಗೆ ಆಡಲು ಇಳಿದಿದ್ದನ್ನು ಕಂಡಾಗ ಕಾಶ್ಮೀರಿಗಳು ಎಂಟೆದೆಯವರೆಂಬುದು ವೇದ್ಯವಾಯಿತು.
ಅಲ್ಲಿಂದ ಸಾಯಂಕಾಲ ವಾಪಸ್ ಆಗಿ ಮಗ್ರಿಬ್ ನಮಾಝ್ ನಿರ್ವಹಿಸಿ ಪುನಃ ಸುತ್ತಾಡಲು ಹೊರಟೆವು. ಪಾಂಥಾಚೌಕ್ ಜಂಕ್ಷನ್‍ನಲ್ಲಿ ಓರ್ವ ಬೇಗನೇ ಓಡೋಡಿ ಬಂದು ಸಲಾಂ ಹೇಳಿ ಕ್ಷೇಮ ವಿಚಾರಿಸಿದನು. ಆತನ ಹೆಸರು ಮೀರ್ ಇರ್ಫಾನ್. ನಾವು ಧರಿಸಿದ್ದ ಬರೇಲ್ವಿ ಟೋಪಿ ಕಂಡು ನಾವು ಸುನ್ನಿಗಳೆಂಬುದನ್ನು ಮನಗಂಡ ಆತನು, ತವಸ್ಸುಲ್ ಮತ್ತು ಇಸ್ತಿಗಾಸದ ಬಗ್ಗೆ ಚರ್ಚಿಸಲು ಶುರು ಮಾಡಿದನು. ಸುಮಾರು ಅರ್ಧ ಗಂಟೆ ಆತನೊಂದಿಗೆ ವಾದಿಸಿದ ಬಳಿಕ ದೂರವಾಣಿ ಸಂಖ್ಯೆ, ಫೇಸ್ಬುಕ್ ಐಡಿ ನೀಡಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ತಿಳಿಸಿದೆ. ಬಳಿಕ ಆತ ಮನೆಗೆ ಕರೆದೊಯ್ದು. ಬಿಸಿ ಬಿಸಿ ಚಾ ಮತ್ತು ಕಾಶ್ಮೀರಿ ಸ್ಪೆಷಲ್ ಕೇಕ್‍ಗಳನ್ನು ನೀಡಿ ಸತ್ಕರಿಸಿದನು. ಹೊರಡುವಾಗ ಒಂದು ಚೀಲ ತುಂಬಾ ಬಾದಾಂ, ಪಿಸ್ತ ನೀಡಿದ. ಆತನ ತಂದೆಯೊಂದಿಗೆ ಸ್ವಲ್ಪ ಕಾಲ ಮಾತನಾಡಿದಾಗ ಅವರು ಕಾಶ್ಮೀರ, ನೆಹರು, ಶೇಖ್ ಅಬ್ದುಲ್ಲಾ, ಬುರ್ಹಾನ್ ವಾನಿ ಬಗ್ಗೆ ವಿವರಿಸಿದರು. (ಬೆಂಗಳೂರು ತಲುಪಿದ ಮೇಲೆ ಮೀರ್ ಇರ್ಫಾನ್ ವಾಟ್ಸಾಪ್‍ನಲ್ಲಿ ಸಂಪರ್ಕಿಸಿದ್ದ. ತೀವ್ರವಾದ ಚರ್ಚೆಯೆಡೆಯಲ್ಲಿ ನಾನು ಇಬ್ನು ತೈಮಿಯ್ಯಾರನ್ನು ತೀವ್ರವಾಗಿ ಆಕ್ಷೇಪಿಸಿದ್ದರಿಂದ ಕೋಪಗೊಂಡ ಆತನು ನನ್ನನ್ನು ಬ್ಲಾಕ್ ಮಾಡುತ್ತಾನೆ). ಅಂದು ರಾತ್ರಿ ತಂಗಲು ಬೇಗನೇ ಮಸೀದಿಗೆ ನಡೆದೆವು. ಸಾಮಾನ್ಯವಾಗಿ ಕಾಶ್ಮೀರದ ಮಸೀದಿಗಳ ಜಗಲಿಯು ತಾಪದಿಂದ ಕೂಡಿರುತ್ತದೆ. ಅಲ್ಲಿನ ಮಸೀದಿಗಳ ಜಗಲಿಗಳಲ್ಲಿ ಹಾಸಲಾಗುವ ಗ್ರಾನೈಟ್ ಕಲ್ಲುಗಳ ಅಡಿಯಲ್ಲಿ ಕೆಂಡ ಹಾಯುತ್ತಾರೆ. ಒಮ್ಮೆ ನಮ್ಮ ವಿದ್ಯಾರ್ಥಿ ನಾಯಕರಾದ ಅಸ್ರಾರ್ ಆಲ್ ಖಾದಿರಿಯವರು ಬಿಸಿ ತಾಳಲಾಗದಿದ್ದಾಗ ರಾತ್ರಿ ಕೆಂಡಕ್ಕೆ ನೀರು ಹಾಯಿಸಿ ನಂದಿಸಿದ್ದರು.
ಮಾರನೆಯ ದಿನ ಬೆಳಗ್ಗೆ ಬೇಗನೇ ಎದ್ದು ಸುತ್ತುವಿಕೆಯ ಮೂಲಕ ನಮ್ಮ ದಿನಚರಿ ಪ್ರಾರಂಭಿಸಿದೆವು. ಅಂದು ನನ್ನೊಂದಿಗೆ ಸುತ್ತಾಡಲು ಇಶಾರದ ಲೇಖಕ ಹಾಗೂ ನನ್ನ ಮಾರ್ಗದರ್ಶಕ ಎನ್.ಎ ಮುಸ್ತಫ ಅಲ್ ಖಾದಿರಿಯವರು ಜೊತೆಗಿದ್ದರು. ಅವರು ಜ್ಞಾನದಾಹಿಯಾಗಿರುವುದರಿಂದ ಅವರೊಂದಿಗೆ ಸುತ್ತುವಾಗ ಅನೇಕ ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತಿತ್ತು. ಪಾಂಥಾಚೌಕ್‍ನಲ್ಲಿ ನೆಲೆ ನಿಂತಿರುವ ಮಿನ್ಹಾಜುಲ್ ಖುರ್‍ಆನ್ (ಜಾಗತಿಕ ವಿದ್ವಾಂಸ ಡಾ. ತಾಹಿರುಲ್ ಖಾಧಿರಿಯವರ ಸಂಘಟನೆ)ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಒಂದು ಹಿಫ್ಳುಲ್ ಖುರಾನ್ ಕಾಲೇಜಿಗೆ ಭೇಟಿಯಿತ್ತೆವು. ಅಲ್ಲಿನ ಹಿಫ್‍ಳ್‍ನ ಕ್ಲಾಸ್ ರೂಂಗೆ ತೆರಳಿ ಉಸ್ತಾದರೊಂದಿಗೆ ಮಾತನಾಡಿದೆವು. ಶೈಖ್ ಅಬೂಬಕರ್‍ರ ಅನುಯಾಯಿಗಳೆಂದು ತಿಳಿದಾಗ ಸಂತೋಷದಿಂದ ನಮ್ಮನ್ನು ಬರಮಾಡಿಕೊಂಡರು. ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನಅತೇ ಶರೀಫ್ ಹಾಡಲು ಭಿನ್ನವಿಸಿಕೊಂಡೆವು. ಓರ್ವ ವಿದ್ಯಾರ್ಥಿ ಇಂಪಾದ ದನಿಯೊಂದಿಗೆ ಹಾಡಿದನು. ಆ ಶಬ್ದಕ್ಕೆ ನಾವು ತಲೆದೂಗಬೇಕಾಯಿತು. ಅಲ್ಲಿನ ವಿದ್ಯಾರ್ಥಿಗಳಲ್ಲಿ ಬಹುತೇಕ ಅನಾಥರಾಗಿದ್ದರು. ಕಾಶ್ಮೀರದ ಕಲಹಗಳಲ್ಲಿ ಅವರ ಹೆತ್ತವರು ಬಲಿಯಾಗಿದ್ದರು. ಶಾಲೆಯ ಮೆಟ್ಟಿಲು ಕಾಣದವರೂ ಇದ್ದರು. ಕೇವಲ ಕಂಪ್ಯೂಟರ್ ಮತ್ತು ಖುರಾನ್ ಕಲಿಸಲಾಗುತ್ತಿತ್ತು. ಇದನ್ನು ಉಸ್ತಾದರು ಹೇಳಿದಾಗ ಭಾರೀ ಬೇಸರ ತಂದಿತು.
ಬಳಿಕ ಅಲ್ಲಿಂದ ಮೆಲ್ಲನೆ ಹೊರಟು ಕಾಶ್ಮೀರದ ಸ್ವಾತಂತ್ರ್ಯ ಕಾಲದ ಕವಿಯೊಬ್ಬರ ಸಮಾಧಿ ಸಂದರ್ಶಿಸಿ, ರಾಷ್ಟ್ರೀಯ ಹೆದ್ದಾರಿ ದಾಟಿ, ದೋಣಿ ಮೂಲಕ ಝೀಲಂ ನದಿಯನ್ನು ದಾಟಿ, ಅಲ್ಲಿನ ಕೇರಿಗಳಲ್ಲಿ ಸುತ್ತಾಟ ಮುಂದುವರೆಸಿದೆವು. ಅಲ್ಲಿನ ಗಲ್ಲಿ-ಗಲ್ಲಿಗಳಲ್ಲಿ ಸಾಗಿತ್ತು ನಮ್ಮ ಪಯಣ. ಕಾಶ್ಮೀರಿಗಳು ಸತ್ಕಾರಪ್ರಿಯರಾಗಿರುವುದರಿಂದ, ಎಲ್ಲೆಡೆಯಿಂದಲೂ ಭಾರೀ ಸತ್ಕಾರಗಳು ಲಭಿಸುತ್ತಿದ್ದೆವು. ಒಮ್ಮೆ ಅಲ್ಲಿನ ದೊಡ್ಡ ಉದ್ಯಮಿಯಾಗಿದ್ದ ಮೀರ್ ಭಾಯ್ ಎಂಬ ಅಜಾನುಬಾಹು ವ್ಯಕ್ತಿಯೊಬ್ಬರು ನಮ್ಮ ಬಳಿ ಬಂದು ನಿಮ್ಮ ಊರು ಯಾವುದು? ಯಾಕೆ ಇಲ್ಲಿದ್ದೀರಿ? ಏನಾದರೂ ತೊಂದರೆಗೆ ಸಿಲುಕಿದ್ದೀರಾ? ಏನಾದರೂ ಆರ್ಥಿಕ ಸಹಾಯ ಬೇಕೇ? ಎಂದು ಕೇಳಿದ್ದರು. ಎಲ್ಲ ಪ್ರಶ್ನೆಗಳಿಗೆ ಇಲ್ಲ, ಹಾಗೇನಿಲ್ಲ ಎಂದೆವು. ನಂತರ ಒಂದು ಹೋಟೇಲ್‍ಗೆ ಕರೆದೊಯ್ದು, ಏನು ಬೇಕಾದರೂ ಸೇವಿಸಿ, ಬಿಲ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೊರಟರು. ಇನ್ನೊಂದೆಡೆ ಅಲ್ಲಿನ ಪ್ರಸಿದ್ಧ ಬಾಖಿರ್ ಖಾನಿ ಎಂಬ ತಿನಿಸು ತಯಾರಿಸುತ್ತಿದ್ದ ಬೇಕರಿಗೆ ಹೋದಾಗ ಅಲ್ಲಿನವರು ಬಾಖೀರ್ ಖಾನಿಗಳನ್ನು ನೀಡಿದ್ದರು. ಅನೇಕ ಅಂಗಡಿ ಮುಗ್ಗಟ್ಟುಗಳಿಗೆ ಭೇಟಿಯಿತ್ತೆವು. ಅಲ್ಲಿನ ಅನೇಕ ಖಾದ್ಯಗಳು, ವಸ್ತ್ರಗಳ ಬಗ್ಗೆ ಮುಸ್ತಫ ಉಸ್ತಾದರು ಟಿಪ್ಪಣಿ ಬರೆದಿಡುತ್ತಿದ್ದರು.
ಅಲ್ಲಿಂದ ನೇರ ನಮ್ಮ ಬಸ್ ತಂಗಿದ್ದ ಚೆಕ್‍ಪೋಸ್ಟ್‍ಗೆ ಹಿಂತಿರುಗಿದೆವು. ಅಲ್ಲಿ ನಮ್ಮ ವಿದ್ಯಾರ್ಥಿಗಳು ಕ್ರಿಕೆಟ್ ಆಡುತ್ತಿದ್ದರು. ನಾನೂ ಕೂಡಾ ಆಡಲಿಳಿದೆನು. ಸ್ವಲ್ಪ ಹೊತ್ತಿನಲ್ಲಿ ಕಾಶ್ಮೀರಿ ಯುವಕರ ದಂಡು ಆಡಲು ಬಂದಿಳಿಯಿತು. ನಾವು ಅವರ ತಂಡದ ವಿರುದ್ಧ ಆಡಿದೆವು. ಪ್ರಾಯದಲ್ಲಿ ನಮಗಿಂತ ಕಿರಿಯರಾಗಿದ್ದ, ಆದರೆ ಆಜಾನುಬಾಹುಗಳಾಗಿದ್ದ ಅವರು ನಮ್ಮ ತಂಡದ ವೇಗದ ಬೌಲಿಂಗ್‍ಗಳನ್ನು ಲೀಲಾಜಾಲವಾಗಿ ಬೌಂಡರಿ ದಾಟಿಸುತ್ತಿದ್ದರು. ಅವರ ಬಿರುಗಾಳಿ ಬೌಲಿಂಗ್ ಮುಂದೆ ನಾವು ಮಂಡಿಯೂರಿದೆವು. ಆಟದ ಬಳಿಕ ಮುಸ್ತಫ ಉಸ್ತಾದರೊಂದಿಗೆ ಹೊಟೆಲ್‍ಗೆ ತೆರಳಿ ಅಲ್ಲಿನ ಸ್ಪೆಷಲ್‍ಗಳಾಗಿದ್ದ ರಿಸ್ಟ, ವಾಝ್‍ವಾನಿಗಳನ್ನು ಸೇವಿಸಿದೆವು.
ಊಟದ ಬಳಿಕ ಚೆಕ್ ಪೋಸ್ಟ್ ಬಳಿ ಕೆಲವು ಮುಜಾಹಿದ್ಗಳು (ಪ್ರತ್ಯೇಕತಾವಾದಿಗಳು) ಬಂದೂಕುಗಳನ್ನೆತ್ತಿ ವೇಗವಾಗಿ ಒಂದು ವಾಹನದಲ್ಲಿ ಬಂದಿಳಿದರು. ಬಂದೂಕುಧಾರಿಗಳಾಗಿದ್ದ, ಗಡ್ಡ ಇಳಿಬಿಟ್ಟು ಸಾಕ್ಷಾತ್ ಬಿನ್ ಲಾಡೆನ್‍ನಂತಿದ್ದ ಆ ಆ ದೈತ್ಯರನ್ನು ಕಂಡಾಗ ಅದೇನೋ ಭಯವಿದ್ದರೂ, ಸಾವರಿಸಿಕೊಂಡು ಅವರೊಂದಿಗೆ ಮಾತಿಗಿಳಿದೆವು. ಮಾತಿನ ಮಧ್ಯೆ ಬುರ್ಹಾನ್ ವಾನಿಯ ಮನೆಗೆ ಕರೆದೊಯ್ಯುವುದಾಗಿಯೂ ಹೇಳಿದ್ದರು. ಆ ದಿನ ಬಸ್ಸಿನಲ್ಲಿ ಉಸ್ತಾದರೊಂದಿಗೆ ಕೆಲಹೊತ್ತು ಈ ಬಗ್ಗೆ ಚರ್ಚಿಸಿದಾಗ, ಕಾಶ್ಮೀರದ ಪ್ರಕ್ಷುಬ್ದ ಪರಿಸ್ಥಿತಿಗೆ ಮೂಲಕಾರಣ ವಹ್ಹಾಬಿಸಂ ಎಂಬುದು ತಿಳಿಯಿತು. ಅಲ್ಲಿನ ಪ್ರತ್ಯೇಕತಾವಾದಿ ನಾಯಕರಾಗಿದ್ದ ನೀರ್ ವಾಯಿಝ್ ಉಮರ್ ಫಾರೂಕ್, ಅಲೀ ಶಾ ಗೀಲಾನಿ, ಯಾಸೀನ್ ಮಲಿಕ್ ಮುಂತಾದವರು ವಹ್ಹಾಬಿ ವಿಚಾರಧಾರೆಯ ಮೋಡಿಗೆ ಬಲಿಯಾದವರಾಗಿದ್ದರು. ಅವರು ಮತ್ತು ಅವರ ಹಿಂಬಾಲಕರಾದ ಕೆಲವು ಜನ ಮಾತ್ರ ಕಾಶ್ಮೀರದ ಸ್ವಾಯತ್ತತೆಗೂ, ಪಾಕ್‍ನೊಂದಿಗಿನ ವಿಲೀನಕ್ಕೂ ಒತ್ತಾಯಿಸುತ್ತಿರುವುದು. ಅದು ಕೂಡಾ ಶ್ರೀನಗರ ಮತ್ತು ಸುತ್ತಲಿನ ಎರಡು ಮೂರು ಜಿಲ್ಲೆಗಳ ಜನತೆ ಮಾತ್ರ. ಆದರೆ ಕಾಶ್ಮೀರದ ಸಿಂಹಭಾಗ ಜನರೂ ಭಾರತದ ಒಕ್ಕೂಟದಲ್ಲಿರುವುದು ಕಾಶ್ಮೀರದ ಸ್ವಾಯತ್ತತೆ ಮತ್ತು ಪಾಕಿಸ್ತಾನದೊಂದಿಗಿನ ವಿಲೀನಕ್ಕಿಂತಲೂ ವಾಸಿ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಕಾರಣ ಪಾಕ್ ತನ್ನ ಹೊಟ್ಟೆಗೆ ಹಿಟ್ಟು ಹಾಕಲು ಪರದಾಡುತ್ತಿದೆ. ಇನ್ನು ಸ್ವಾಯತ್ತವಾದರೆ ಪಾಕ್ ಮತ್ತು ಚೀನಾಗಳ ಆಕ್ರಮಣ ಭೀತಿ. ಆಗ ಅತ್ತ ದರಿ, ಇತ್ತ ಪುಲಿ ಎಂಬ ಗಾದೆಯಂತೆ ಉಭಯ ಸಂಕಟವು ಕಾಶ್ಮೀರಿಗಳನ್ನು ಕಾಡಬಹುದು. ಒಟ್ಟಿನಲ್ಲಿ ಪ್ರತ್ಯೇಕತಾವಾದಿಗಳ ಮನಸ್ಥಿತಿ ಬದಲಾದರಷ್ಟೇ ಕಾಶ್ಮೀರವು ಬದಲಾಗಬಹುದು. ಇನ್ನು ಕೇವಲ ಕಾಶ್ಮೀರಿಗಳನ್ನು ದೂರಿದರೆ ಸಾಲದು. ಸೇನೆಯ ಅತಿರೇಕವೂ ಅಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣ ಎಂಬುದನ್ನೂ ಅಲ್ಲಗಳೆಯಲಾಗದು.
ಕಾಶ್ಮೀರಿಗಳನ್ನು ಕಂಡರೆ ಅವರಿಗೆ ಸಲಾಂ ಹೇಳಿ ಮಾತನಾಡಿಸುತ್ತಾ ಸಾಗಿತ್ತು ಪಾಂಥಾಚೌಕ್‍ನ ನಮ್ಮ ದಿನಚರಿ. ಪ್ರತಿಯೋರ್ವರಲ್ಲೂ ನಾವು ಮಾತನಾಡುತ್ತಿದ್ದೆವು. ರಾತ್ರಿ ಸುಮಾರು 15 ಜನ ಯುವಕರು ರಸ್ತೆ ಬದಿಯಲ್ಲಿ ಹರಟೆ ಹೊಡೆಯುತ್ತಿದ್ದರು. ಅವರ ಬಳಿ ಹೋಗಿ ನಾನು ಮತ್ತು ಮುಸ್ತಫ ಉಸ್ತಾದರು ಸಲಾಂ ಹೇಳಿ, ನಿಮಗೆ ಸೇನೆಯ ಭಯವಿಲ್ಲವೇ? ಎಂದು ಕೇಳಿದಾಗ ‘ಹಮೇ ಉನ್‍ಸೇ ನಹೀಂ ಢರ್‍ತೇ, ಉನೋ ಹಮ್‍ನಾ ಢರ್‍ತೇ ಹೇ’ (ನಮಗೆ ಅವರ ಭಯ ಇಲ್ಲ, ಅವರು ನಮ್ಮನ್ನು ಕಂಡರೆ ಭಯಬೀಳುತ್ತಾರೆ) ಎಂದು ಹೇಳಿದ್ದರು. ಕಾಶ್ಮೀರದ ವಿಮೋಚನೆಗಾಗಿ ನೀವು ಪ್ರಾರ್ಥಿಸಿರಿ ಅಂತಲೂ ಹೇಳಿದ್ದರು. ರಾತ್ರಿ ತಂಗಲು ಮಿನ್ಹಾಜುಲ್ ಖುರಾನ್ ಸಂಘಟನೆಯವರ ಮಸೀದಿಗೆ ಹೋದೆವು. ಇಶಾ ನಮಾಝ್ ಬಳಿಕ ಹಿಫ್ಳುಲ್ ಖುರಾನ್ ಕಾಲೇಜಿನ ಪ್ರಧಾನ ಆಧ್ಯಾಪಕರಾದ ಹಝ್ರತ್ ಸರ್ತಾಜ್ ಅಝೀಝ್ ಎಂಬ ಮೌಲ್ವಿಯವರನ್ನು ಕಂಡು, ನಾವು ಶೈಖ್ ಅಬೂಬಕರ್‍ರವರ ಅನುಯಾಯಿಗಳೆಂದು ಪರಿಚಯಿಸಿದೆವು. ಭಾರೀ ಸಂತೋಷದಿಂದ ಅವರ ಮನೆಗೆ ಕರೆದೊಯ್ದು ರಿಷ್ಟ, ವಾಝ್‍ವಾನಿ ಉಣಬಡಿಸಿದರು. ಊಟ ಮಾಡುತ್ತಿರುವಾಗ ಅನೇಕ ವಿಷಯಗಳನ್ನು ಕೆದಕಿದೆವು. ಆ ಮಾತುಕತೆಯ ಮೂಲಕ ಕಾಶ್ಮೀರದ ಇಸ್ಲಾಮಿನ ಇತಿಹಾಸ, ಸಂಸ್ಕøತಿ, ಕಾಶ್ಮೀರ ಸಮಸ್ಯೆ, ಅದರ ಮೂಲಕಾರಣಗಳ ಬಗ್ಗೆ ತಿಳಿಯಲು ಸಾಧ್ಯವಾಯಿತು.
ಕಾಶ್ಮೀರದ ಸ್ವಾಯತ್ತತೆಯ ಬಗ್ಗೆ ಕೇಳಿದಾಗ ಅವರ ಅನಿಸಿಕೆ ಭಾರತವೇ ವಾಸಿ ಎಂದಾಗಿತ್ತು. ವಹ್ಹಾಬಿಸಂ ಅಲ್ಲಿನ ಶಾಂತಿಯನ್ನು ಕದಡುತ್ತಿದೆ ಎಂಬುದನ್ನು ಅವರೂ ಹೇಳಿದ್ದರು. ಕಾಶ್ಮೀರಿಗಳ ಹೃದಯ ವೈಶಾಲ್ಯತೆಯಿಂದ ಕೂಡಿದ ಆತಿಥ್ಯದ ಬಗ್ಗೆ ಕೇಳಿದಾಗ “ಕಾಶ್ಮೀರಿಗಳು ಹಿಂದೆ ಬಹಳ ಸತ್ಕಾರಪ್ರಿಯರಾಗಿದ್ದರು. ಈಗ ತುಸು ಕಮ್ಮಿಯಾಗಿದೆ. ಕಾರಣ, ರಾ ಮತ್ತು ಐಬಿಯ ಗೂಢಚಾರಿಗಳು ಮೌಲ್ವಿ ವೇಷ ಧರಿಸಿ ಗೂಢಚಾರಿಕೆ ನಡೆಸುತ್ತಾ ಸರಕಾರ ಮತ್ತು ಗುಪ್ತದಳಕ್ಕೆ ಮಾಹಿತಿ ನೀಡುತ್ತಿದ್ದರು. ಇದು ಬಟಾಬಯಲಾದಾಗ ಕಾಶ್ಮೀರಿಗಳು ಹೋರಗಿನವರನ್ನು ಸಂದೇಹದಿಂದ ನೋಡಲಾರಂಭಿಸಿದರು. ಈಗಲೂ ಕಾಶ್ಮೀರಿಗಳು ಸತ್ಕಾರದಲ್ಲಿ ಹಿಂದೆ ಬಿದ್ದಿಲ್ಲ” ಎಂದರು. ಕೆಲವೊಮ್ಮೆ ನಮ್ಮನ್ನೂ ಸಂದೇಹದ ದೃಷ್ಟಿಯಿಂದ ಕೆಲಜನರು ನೋಡಿದ್ದರ ಮರ್ಮ ಆಗ ತಿಳಿಯಿತು. ಅಂದು ಆ ಮಸೀದಿಯ ಜಗಲಿಯಲ್ಲಿ ಬಿಸಿ ಬಿಸಿ ಕಲ್ಲಿನ ಮೇಲೆ ಹಾಯಾಗಿ ನಿದ್ರಿಸಿದೆವು.
ನಾವು ಕಾಶ್ಮೀರದಲ್ಲಿ ಸಿಲುಕಿ ಹಾಕಿಕೊಂಡಿದ್ದರೂ ಮನೆಯಲ್ಲಿ ಯಾರಿಗೂ ತಿಳಿಸದೆ ಬಚ್ಚಿಟ್ಟಿದ್ದೆವು. ಅದಕ್ಕೆ ಮೊದಲ ಕಾರಣ ತಂದೆತಾಯಿಗಳು ದಿಗ್ಭ್ರಾಂತರಾಗದಿರಲಿ ಅಂತ, ಇನ್ನೊಂದು ನಮ್ಮ ಸಿಮ್ ಅಲ್ಲಿ ಉಪಯೋಗಿಸಲಾಗುತ್ತಿರಲಿಲ್ಲ. ನಾವು ಪ್ರಿಪೇಯ್ಡ್ ಬಳಸುತ್ತೇವೆ. ಅಲ್ಲಿ ಪೊಸ್ಟ್ ಪೇಯ್ಡ್ ಸಿಮ್ ಬಳಸಲಾಗುತ್ತದೆ. ಕೊನೆಗೆ ಒಂದು ವಾರದ ಕಾಶ್ಮೀರದ ಪ್ರವಾಸಕ್ಕೆ ತೆರೆ ಬಿತ್ತು. ಶ್ರೀನಗರದಿಂದ ಉಧಮ್‍ಪುರಕ್ಕೆ ಸರಕಾರವು ವಿಮಾನ ಸೌಕರ್ಯವೇರ್ಪಡಿಸಿದೆ ಎಂಬ ಸುದ್ದಿ ತಿಳಿಯಿತು. ಪಾಂಥಾಚೌಕ್‍ನ ಕೇವಲ ಎರಡು ದಿನದ ಅನುಭವವು ಜೀವನಪೂರ್ತಿ ಅಲ್ಲೇ ಇದ್ದಂತಿತ್ತು. ಆ ಊರನ್ನು ಬಿಟ್ಟು ಬರಲು ಬಿಲ್‍ಕುಲ್ ಮನಸ್ಸು ಒಪ್ಪುತ್ತಿರಲಿಲ್ಲ. ವಿಮಾನದ ಹಾರಾಟವನ್ನು ಕೇಳಿ ತಿಳಿದ ವ್ಯಕ್ತಿಯನ್ನು ನಮ್ಮ ಮನಸ್ಸು ಬಯ್ಯುತ್ತಿತ್ತು. ಸುಬಹ್ ನಮಾಝ್ ನಿರ್ವಹಿಸಿ ನಮ್ಮ ಇಶು ತ್ರಾವೆಲ್ಸ್‍ನ ಬಸ್ ಹತ್ತಿ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಹೊರಟೆವು. ಎರಡು ಗಂಟೆಗಳ ಕಾಲ ಭಾರೀ ಕ್ಯೂನಲ್ಲಿ ನಿಂತು ಹೋರಾಡಿ, ಟಿಕೆಟ್ ಪಡೆದೆವು. ಏರ್‍ಪೋರ್ಟ್‍ನಲ್ಲಿ ಭಾರೀ ತಪಾಸಣೆಯೂ ನಡೆಯಿತು. ಯಾತ್ರಿಕರನ್ನೂ, ಪ್ರಯಾಣಿಗರನ್ನೂ ಇಷ್ಟು ಹೀನವಾಗಿ ಭಾರತ, ಪಾಕಿಸ್ತಾನ ಮತ್ತು ಸೌದಿಯಲ್ಲದ ರಾಷ್ಟ್ರಗಳು ನಡೆಸಲಾರದು ಎಂದು ಕೆಲವರು ಹೇಳುತ್ತಿದ್ದರು. 9 ಗಂಟೆಗೆ ಏರ್‍ಪೋರ್ಟ್ ತಲುಪಿದ ನಮ್ಮನ್ನು ಸಾಯಂಕಾಲ 5 ಗಂಟೆಯವರೆಗೂ ಕಾಯಿಸಲಾಯಿತು. ಯಾತ್ರಿಕರ ಕೊಠಡಿಯೊಳಗೆ ಸುಮಾರು 650 ಜನರನ್ನು ಕುಳ್ಳಿರಿಸಿ ಒಳಗೂ ಹೊರಗೂ ಬಿಡದೆ ಅಧಿಕಾರಿಗಳು ಸತಾಯಿಸಿದರು. ಅಲ್ಲಿ ಸ್ವಲ್ಪ ಹೊತ್ತು ನಾವೆಲ್ಲರೂ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದೆವು. ಕೆಲವರು ನಮ್ಮೊಂದಿಗೆ ಸಹಕರಿಸಿದರು. ಉಳಿದವರು ನಮಗೇನು ಎಂಬ ಹಾವಭಾವದೊಂದಿಗೆ ಅಲ್ಲೇ ಕುಳಿತಿದ್ದರು. ನಾವು ಘೋಷಣೆ ಕೂಗಲು ಹೋದಾಗ ನಮ್ಮಿಂದ ಖಾಲಿಯಾದ ಆಸನಗಳಲ್ಲಿ ಕೆಲವ ಸ್ವಾರ್ಥಿಗಳು ಬೇಗನೇ ಬಂತು ಕೂರುವುದನ್ನು ಕಂಡಾಗ ಎಲ್ಲಿಲ್ಲದ ಕೋಪ ಬಂದಿತ್ತು. ಭಾರತದ ರಾಷ್ಟ್ರಪತಿಗೆ ನಮ್ಮಿಂದ ಏನಾದರೂ ಹೆಚ್ಚು ಕಡಿಮೆಯಾದರೆ ಸರಕಾರ ಮತ್ತು ಸೇನೆಯು ಜವಾಬ್ದಾರರಲ್ಲ ಎಂದು ಪತ್ರ ಬರೆಯಿಸಿದರು. ಅಷ್ಟೆಲ್ಲಾ ಆದ ಮೇಲೆ ಸೇನೆಯ ವಿಮಾನವು ರನ್‍ವೇನಲ್ಲಿ ಇಳಿಯಿತು. ಜೀವನದಲ್ಲಿ ಪ್ರಥಮ ಬಾರಿ ವಿಮಾನ ಹತ್ತುವುದನ್ನು ಕಾತರದಿಂದ ಕಾಯುತ್ತಿದ್ದ, ಆ ಮುಹೂರ್ತವನ್ನು ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಬೇಕೆಂದು ಬಯಸಿದ್ದವರಿಗೆ ನಿರಾಸೆ ಕಾದಿತ್ತು. ಕೇವಲ ಅರ್ಧ ಗಂಟೆ ಪುಕ್ಕಟೆಯಾದ ಪ್ರಯಾಣಕ್ಕಾಗಿ 1100 ರೂ. ಕೊಟ್ಟು ಹತ್ತಿದ ವಿಮಾನದಲ್ಲಿ ಆಸನ ವ್ಯವಸ್ಥಗಳಿರಲಿಲ್ಲ. ಅದು ಭ್ರಷ್ಟತೆಯನ್ನು ಸಾರುತ್ತಿತ್ತು. ಸರಕಾರದ ವತಿಯಿಂದ ಪ್ರಕೃತಿ ವೀಕೋಪದಲ್ಲಿ ಸಿಲುಕಿದವರನ್ನು ಉಚಿತವಾಗಿ ಕರೆದೊಯ್ಯುವುದು ಸಾಮಾನ್ಯ. ಆದರೆ ಲಕ್ಸುರಿ ವಿಮಾನಗಳಂತೆಯೇ ದುಬಾರಿ ಹಣ ಕೊಟ್ಟು, ಜೀವವನ್ನು ಕೈಯಲ್ಲಿ ಹಿಡಿದು ವಿಮಾನದಲ್ಲಿ ಸಾಗಿ ಉಧಮ್‍ಪುರ ತಲುಪಿದ ಮೇಲೆಯೇ ನಿಟ್ಟುಸಿರು ಬಿಟ್ಟೆವು. ಅಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ರೈಲ್ವೇ ಸ್ಟೇಶನ್‍ನಿಂದ ದೆಹಲಿಗೆ ಟ್ರೈನ್ ಹತ್ತಿದೆವು. ಭಾರೀ ದಟ್ಟಣೆಯಿದ್ದ ಆ ಟ್ರೈನಿನ ಬಾತ್‍ರೂಂ ಬಳಿ ನಾನು ನನ್ನ ಇತರ ಇಬ್ಬರು ಸಹಯಾತ್ರಿಕರೊಂದಿಗೆ ಮಲಗಿದ್ದು ಜೀವನದಲ್ಲಿ ಮರೆಯಲಾಗದು. ರೈಲು ಹತ್ತುವವರು ಮತ್ತು ಇಳಿಯುವವರ ಒದೆ ತಿಂದ ನಮಗೆಇನ್ನು ಎಲ್ಲಿ ಸಿಲುಕಿದರೂ ಅದನ್ನು ಎದುರಿಸುವ ಎದೆಗಾರಿಕೆ ಮೂಡಿಬಂತು. ದೆಹಲಿಯ ನಿಝಾಮುದ್ದೀನ್ ರೈಲ್ವೇ ನಿಲ್ದಾಣದಿಂದ ಬೆಂಗಳೂರಿಗೆ ರೈಲು ಹತ್ತಿದೆವು. ಪುಣ್ಯಕ್ಕೆ ಸೀಟುಗಳು ಖಾಲಿಯಾಗಿದ್ದರಿಂದ ಸಮಾಧಾನದಿಂದ ಬೆಂಗಳೂರು ತಲುಪಿದೆವು. 15 ದಿನಗಳ ಕಾಲ ಸಂಚರಿಸಿದ ಮಧುರ ನೆನಪುಗಳನ್ನು ಮೆಲುಕು ಹಾಕುವಾಗ ಮೈಯ್ಯಲ್ಲಿ ವಿದ್ಯುತ್ ಸಂಚಲನದ ಅನುಭವವಾಗುತ್ತದೆ. ಇನ್ನು ಇಂತಹ ಅನುಭವವಗಳು ಯಾವಾಗ ಲಬಿಸಬಹುದೋ..
ಕಾಶ್ಮೀರದ ಬಗ್ಗೆ ಒಂದಿಷ್ಟು...
ಕಾಶ್ಮೀರವು ಸುಂದರವಾದ ಭೂಪ್ರದೇಶ. ಜಮ್ಮು, ಕಾಶ್ಮೀರ, ಲಡಾಖ್‍ಗಳು ಭಾರತದ ತೆಕ್ಕೆಯಲ್ಲಿದ್ದರೆ, ಇತರ ಮೂರು ಪ್ರಾಂತ್ಯಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಕಾಶ್ಮೀರದಲ್ಲಿ ಬಹುತೇಕ ಜನರು ಮುಸ್ಲಿಮರಾದರೆ, ಜಮ್ಮುವುನಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಇನ್ನು ಮೈ ಕೊರೆಯುವ ಚಳಿಗೆ ಹೆಸರಾದ ಲಡಾಖ್‍ನಲ್ಲಿ ಬೌದ್ದ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ಪ್ರಮುಖ ಭಾಷೆ ಕಾಶ್ಮೀರಿ. ಜಮ್ಮುವಿನ ಹಿಂದೂಗಳು ಡೋಗ್ರ ಭಾಷೆ ಮಾತನಾಡುತ್ತಾರೆ. ಮುಸ್ಲಿಮರು ಉರ್ದುವಿನಲ್ಲೂ ವ್ಯವಹರಿಸಬಲ್ಲರು. ಜಮ್ಮು ಮತ್ತ ಕಾಶ್ಮೀರ ರಾಜ್ಯಕ್ಕೆ ಬೇಸಿಗೆಯಲ್ಲಿ ಶ್ರೀನಗರ ರಾಜಧಾನಿಯಾದರೆ, ಚಳಿಗಾಲದಲ್ಲಿ ಜಮ್ಮು ಆಡಳಿತ ಕೇಂದ್ರವಾಗಿರುತ್ತದೆ. ಕಾಶ್ಮೀರವು ಸದಾ ಸುದ್ದಿಯಲ್ಲಿರಲು ನೆರೆಯ ಪಾಕ್ ಮತ್ತು ಚೀನಾದ ಗಡಿ ತಂಟೆಯು ಕಾರಣ. ಸದಾ ಬಂದೂಕು, ಬಾಂಬ್ಗಳ ನೆರಳಿನಲ್ಲಿ ಅಲ್ಲಿನವರು ಬಾಳುತ್ತಿದ್ದಾರೆ.
ಉದ್ದವಾದ ಪೈರಾನ್ ಧರಿಸುವುದು(ಕಾಣಲು ಪೆಂಗ್ವಿನಂತಿರುತ್ತದೆ), ಚಳಿಯಿಂದ ರಕ್ಷಿಸಿಕೊಳ್ಳಲು ಕೆಂಡ ಹಾಯ್ದ ಕಾಂಗಿಡಿ (ನೈಸರ್ಗಿಕವಾದ ಬಳ್ಳಿಗಳಿಂದ ನೇಯ್ದ ಒಂದು ಮಡಕೆ) ಯನ್ನು ಪೈರಾನೊಳಗೆ ತುಂಬಿಕೊಳ್ಳುವುದು ಕಾಶ್ಮೀರಿಗಳ ಸಾಂಸ್ಕøತಿಕ ವಸ್ತ್ರಧಾರಣೆಯಾಗಿದೆ. ಭಾರೀ ಹಿಮ ಧಾರಣೆಯಿದ್ದರೆ ಕಾಲಿಗೆ ಶೂ ಧರಿಸುತ್ತಾರೆ. ನವೆಂಬರ್‍ನಿಂದ ಮಾರ್ಚ್ ತಿಂಗಳಾಂತ್ಯದವರೆಗೆ ಅಲ್ಲಿ ಭಾರೀ ಚಳಿ ಎರುತ್ತದೆ. ಭಾರೀ ಹಿಮಪಾತವೂ ಇರುತ್ತದೆ. ಜೂನ್ ಜುಲೈ ತಿಂಗಳಲ್ಲಿ ಭಾರಿ ಸೆಕೆ ಇರುವುದು. ಇನ್ನು ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಅಲ್ಲಿ ಭಾರೀ ಮಳೆ ಇರುತ್ತದೆ. ಆ ಸಮಯದಲ್ಲಿ ಸೇಬುಹಣ್ಣು ಧಾರಾಳವಾಗಿ ಬೆಳೆಯಲ್ಪಡುತ್ತದೆ. ಸೇಬು ಒಂದು ಕೇಜಿಗೆ 20 ರೂ.ಗಳಿಗೆ ಸಿಗುವುದಂತೆ.!. ನಾವು ಸೇಬುಹಣ್ಣು ಕಾಣಲು ಹೋದಾಗ ಎಲೆ ಇಲ್ಲದೆ ಖಾಲಿ ಖಾಲಿಯಾದ ಮರಗಳನ್ನು ನೋಡಲು ಸಾದ್ಯವಾಯಿತು. ಕಾಶ್ಮೀರಿಗಳು ಸಾಧಾರಣವಾಗಿ ಬೆಳಗ್ಗೆ ಲಘು ಉಪಹಾರ ಸೇವಿಸುತ್ತಾರೆ ಅಲ್ಲಿನ ಸ್ಪೆಷಲ್ ಕೇಕ್, ಬಾಖೀರ್ ಖಾನಿ ಬೆಳಗ್ಗಿನ ಉಪಹಾರ. ರಿಸ್ಟ ಎಂಬ ಭೀಫ್‍ನ ಉಂಡೆ ಮತ್ತು ವಝ್ವಾನಿ ಅಲ್ಲಿನ ಪ್ರಸಿದ್ದ ಭಕ್ಷ್ಯಗಳು. ಬಾದಾಮ್, ಪಿಸ್ತಗಳ ಬೆಲೆ ಕೆ.ಜಿಗೆ 400-500 ರೂಗಳಷ್ಟೇ, ಅಲ್ಲಿಂದ ನಮ್ಮ ಕರ್ನಾಟಕ ಕೇರಳಗಳಿಗೆ ರಫ್ತು ಮಾಡುವ ವ್ಯಾಪಾರಸ್ಥರೂ ಅಲ್ಲಿದ್ದಾರೆ.
ಇನ್ನೂ ಅಲ್ಲಿನ ಧಾರ್ಮಿಕ ವಿಚಾರಗಳಿಗೆ ಬರುವುದಾದರೆ ಅಲ್ಲಿ ಹನಫಿ ಮದ್‍ಹಬ್‍ನ ಹಿಂಬಾಲಕರು ಜಾಸ್ತಿ, ಆದರೆ ನಮಾಝ್ ಬಳಿಕ ಶಾಫಿಈ ಕರ್ಮಶಾಸ್ತ್ರದ ವಿಧಾನಗಳನ್ನು ಅವರು ಪಲಿಸುತ್ತಾರೆ. ಈ ಬಗ್ಗೆ ಅಲ್ಲಿನವರಲ್ಲಿ ವಿಚಾರಿಸಿದಾಗ ಕಾಶ್ಮೀರದಲ್ಲಿ ಇಸ್ಲಾಂ ಪ್ರಚಾರ ಮಾಡಿದ ಮೊದಲಿಗರು ಶಾಫಿಈಗಳಾಗಿದ್ದರು. ಅವರ ಮೇಲಿನ ಪ್ರೀತಿ ಮತ್ತು ನಿಷ್ಠೆಯಿಂದ ಕಾಶ್ಮೀರಿ ಹನಫಿಗಳು ಶಾಫಿಈ ಕರ್ಮಶಾಸ್ತ್ರವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲಿನ ಮೂಲಭೂತವಾದಿಗಳಾದ ವಹ್ಹಾಬಿಗಳೆಲ್ಲರೂ ತಮ್ಮನ್ನು ತಾವು ಶಾಫಿಈಗಳೆಂದು ಗುರುತಿಸಲು ಬಯಸುತ್ತಾರೆ. ಆದ್ದರಿಂದ ಶಾಫಿಈಗಳಾದ ನಮಗೆ ವಹ್ಹಾಬಿಗಳಿಂದ ಎತ್ತ ಹೋದರೂ ಭಾರೀ ಮನ್ನಣೆ ಸಿಗತ್ತಿತ್ತು.
ಇನ್ನು ವಿದ್ಯಾಭ್ಯಾಸದಲ್ಲಿ ಕಾಶ್ಮೀರಿಗಳು ತುಂಬಾ ಮುನ್ನಡೆ ಸಾಧಿಸಿದ್ದಾರೆ. ಆಡಳಿತಾತ್ಮಕ ಸೇವೆಯ ಪರೀಕ್ಷೆಗಳಲ್ಲಿ, ಇನ್ನಿತರ ಪ್ರಮುಖ ಪರೀಕ್ಷೆಗಳಲ್ಲಿ ಕಾಶ್ಮಿರಿಗಳಿಗೆ ಪ್ರಥಮ ರ್ಯಾಂಕ್. ತೀರಾ ಇತ್ತೀಚಿನ ಉದಾಹರಣೆಯೇ, ಅಫ್ಝಲ್ ಗುರುವಿನ ಪುತ್ರ ಅತ್ಯುತ್ತಮ ಶ್ರೇಣಿಯಲ್ಲಿ 12ನೆ ತರಗತಿಯಲ್ಲಿ ತೇರ್ಗಡೆಯಾಗಿದ್ದು. ವಿದ್ಯಾಭ್ಯಾಸ ಹೊಂದಿರುವ ಯುವಕರು ಸೇನೆಯೊಂದಿಗೆ ಕಾದಾಡಲು ಕಾರಣ ವಹ್ಹಾಬಿ ವಿಚಾರಧಾರೆಗಳಾಗಿದೆ. ಅಲ್ಲಿ ರಾಷ್ಟ್ರಪ್ರೇಮದ ಪಾಠ ಹೇಳಿಕೊಡುವ ವಿದ್ಯಾಸಂಸ್ಥೆಗಳಿಲ್ಲ. ಸಂತೋಷವೆಂದರೆÉೀ ನಮ್ಮವರೇ ಆದ ಶೌಖತಲಿ ನಈಮಿ ನೇತೃತ್ವದಲ್ಲಿ ನಡೆಯುತ್ತಿರುವ ಥಿesನ 33 ಶಾಲೆಗಳು ಅಲ್ಲಿ ರಾಷ್ಟ್ರಪ್ರೇಮದ ಬೋಧನೆ ಮಾಡುತ್ತಿದೆ, ಅದಕ್ಕೆ ಅಲ್ಲಿನ ಸರಕಾರ, ಸೇನೆ, ಪೊಲಿಸ್ ಇಲಾಖೆಗÀಳೂ ಸಹಕಾರ ನೀಡುತ್ತಿದೆ.

Comments
Post a Comment