ಕ್ರಿಸ್‍ಮಸ್ ಯೇಸು ಜನ್ಮದಿನವೇ?

ಕ್ರಿಸ್‍ಮಸ್ ಯೇಸು ಜನ್ಮದಿನವೇ?

                            -ಜುನೈದ್ ಖಲೀಲ್ ನೂರಾನಿ.
             

ಕ್ರಿಸ್ಟೆಸ್‍ಮಾಸ್ಸೆ ಅಥವಾ ಕ್ರಿಸ್ತನ ಮಾಸ್ (ದಿವ್ಯಾಚರಣೆ) ಎಂಬ ಪದದಿಂದ ಕ್ರಿಸ್ಮಸ್ ಎಂಬ ಪದವು ಉಗಮವಾಗುತ್ತದೆ. ಕ್ರೈಸ್ತರ ವೀಕ್ಷಣೆಯಲ್ಲಿ ದೇವರು ಮಾನವ ಶರೀರದಲ್ಲಿ ಅವತರಿಸಿದ ದಿನದ ಆಚರಣೆಯಾಗಿದೆ ಕ್ರಿಸ್ಮಸ್.(Dr. James D Kenney , skeptics answered Multnomah: oregon1997, page 199) ವಾಸ್ತವದಲ್ಲಿ ಯೇಸು ಜನ್ಮದಿನವಾಗಿ ಕ್ರಿಸ್ಮಸ್‍ನ್ನೋ ಆ ದಿನಕ್ಕೆ ಸಂಬಂಧಿಸಿದ ಆಚರಣೆಗಳನ್ನೋ ಬೈಬಲ್ ಅಂಗೀಕರಿಸುವುದಿಲ್ಲ. United church of god ಪ್ರಕಟಿಸಿದ holidays or holy days does it matter which days  we keep ಎಂಬ ಪುಸ್ತಕದಲ್ಲಿ ಇದನ್ನು ಸ್ಪಷ್ಟವಾಗಿ ಸಮರ್ಥಿಸಲಾಗಿದೆ.
        ಕ್ರಿಸ್ಮಸ್ ಬಗ್ಗೆ Geoffrey Purrinder ಬರೆದ A concise encyclopedia of Christianity  ಯಲ್ಲಿ ಈ ರೀತಿ ಇದೆ: ಯೇಸು ಜನಿಸಿದ ದಿನಾಂಕ ಹಾಗೂ ಸಮಯವು ಅಜ್ಞಾತವಾಗಿದೆ. ಶರತ್ಕಾಲದಲ್ಲಿ ಆತನ ಜನನವಾಗಿದ್ದಕ್ಕೆ ಯಾವುದೇ ಒಂದು ಪುರಾವೆಯೂ ಇಲ್ಲ. ಮೇ ತಿಂಗಳಲ್ಲಾಗಿರಬಹುದು ಎಂಬ ಊಹೆಯನ್ನು ಅಲೆಕ್ಸಾಂಡ್ರಿಯಾದ ಎಲಿಮೆಂಟ್ ಹೊಂದಿದ್ದಾರೆ. ಆದರೆ ಕ್ರಿ.ಶ 336ರಲ್ಲಿ ಅಜ್ಞಾತನಾದ ಸೂರ್ಯನ ಜನ್ಮದಿನವನ್ನು ತಾಳೆಹಾಕಿ ಡಿಸೆಂಬರ್ 25 ಎಂದು ತೀರ್ಮಾನಿಸಲಾಯಿತು. (ಪುಟ 65,66)
        ಕ್ರಿಸ್ಮಸ್ ಎಂಬುದು ಕ್ರಿ.ಶ 336ರಲ್ಲಿ ಆಚರಿಸಲಾಯಿತು. ಅದು ಸೂರ್ಯ ದೇವನ ಜನ್ಮದಿನವಾಗಿದೆ ಎಂಬುದು ಇದರಿಂದ ಮನದಟ್ಟಾಗುತ್ತದೆ.

        ಯೇಸುವಿನ ಜನನದ ಸ್ಮರಣೆಗೋಸ್ಕರ ಡಿಸೆಂಬರ್ 25ನೇ ತಾರೀಖಿನಂದು ಆಚರಿಸಲ್ಪಡುವ ಕ್ರೈಸ್ತರ ಉತ್ಸವವು 336ರಲ್ಲಿ ರೋಮ್‍ನಲ್ಲಿ ಆಚರಿಸಲಾಗಿತ್ತು. ಡಿಸೆಂಬರ್ 25ನ್ನು ಆಯ್ಕೆ ಮಾಡಿದ್ದು ಬಹುಷಃ ರೋಮನ್ ಶಿಶಿರ ವಿಷುವತ್ ಸಂಕ್ರಾಂತಿಯ ಹಬ್ಬ ಹಾಗೂ ಮಿತ್ರನ ಜನ್ಮದಿನದೊಂದಿಗೆ ಏಕೀಭವಿಸಿದ್ದಾಗಿರಬಹುದು. ಪಾರಿತೋಷಕ ನೀಡುವಿಕೆ, ಹಾಗೂ ಹರ್ಷೋಲ್ಲಾಸ ಮುಂತಾದ ಆಚಾರಗಳು ಸತುರ್ನೇಲಿಯಾ (ಶನಿ ದೇವರ ಹಬ್ಬ) ಹಬ್ಬ (ಡಿಸೆಂಬರ್17)ದಿಂದ ಬಂದಿದೆ. ತಳಿರು ತೋರಣ, ದೀಪಾಲಂಕಾರ, ಪುಟಾಣಿಗಳಿಗೆ ಮತ್ತು ಸಾಧುಸಂತರಿಗೆ ಪಾರಿತೋಷಕ ನೀಡುವುದು ಮುಂತಾದ ಆಚಾರಗಳು ರೋಮನ್ನರ ನವವರ್ಷದ ಆಚಾರಗಳಾಗಿವೆ (ಜನವರಿ 1). ಅಗ್ನಿ ಕುಂಡ, ಕೇಕ್‍ಗಳು, ಫಿರ್ ಮರಗಳು ಜರ್ಮನ್ ಕಾರ್ಟಿಕ್ ಆಚಾರಗಳಿಂದ ಎರವಲಾಗಿ ಪಡೆಯಲಾಗಿದೆ (ಬ್ರಿಟನಿಕ ಮಲಯಾಳಂ ಎನ್‍ಸೈಕ್ಲೋಪೀಡಿಯ ಡೆಸ್ಕ್ ರೆಫರೆನ್ಸ್ ಪುಟ: 562).
        ಕ್ರಿ.ಶ 5ನೇ ಶತಮಾನದವರೆಗೆ ರೋಮ್ ಸಾಮ್ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಧರ್ಮವಾಗಿತ್ತು ಮಿತ್ರ ಧರ್ಮ. ರೋಮ್‍ಗೆ ತಲುಪುವ 600 ವರ್ಷಗಳ ಹಿಂದೆ ‘ಮಿತ್ರ’ನನ್ನು ‘ಸೂರ್ಯ ದೇವ’ನನ್ನಾಗಿ ಪರ್ಷಿಯನ್ನರು ಆರಾಧಿಸಿದ್ದರು. ಇವರ ಮಧ್ಯೆ ಜೀವಿಸಿದವರಾಗಿದ್ದರು ಕ್ರೈಸ್ತರು. ಕಾನ್‍ಸ್ಟೆಂಟೈನ್ ಚಕ್ರವರ್ತಿಯ ಆಡಳಿತಾವಧಿಯಲ್ಲಿ ಆತನು ಮಿಲಾನ್ ಕೌನ್ಸಿಲ್ (ಕ್ರಿ.ಶ 313)ನಲ್ಲಿ ಕ್ರೈಸ್ತ ಧರ್ಮವನ್ನು ರೋಮನ್ ಸಾಮ್ರಾಜ್ಯದ ಅಧಿಕೃತ ಧರ್ಮವಾಗಿ ಘೋಷಿಸಿದರು. ಆಗ ಅಲ್ಲಿ ಕಲಹಗಳಾರಂಭಿಸಿದವು. ಈ ಕಲಹವನ್ನು ಕೊನೆಗಾಣಿಸಲು ಬಹುದೇವ ವಿಶ್ವಾಸಿಯಾಗಿದ್ದ ಕಾನ್‍ಸ್ಟೆಂಟೈನ್ ಚಕ್ರವರ್ತಿ ಕ್ರಿ.ಶ 325ರಲ್ಲಿ ನಿಖಿಯಾ ಎಂಬ ಸ್ಥಳದಲ್ಲಿ ಒಂದು ಸುನ್ನಹದೋಸ್ ಕೌನ್ಸಿಲ್ ಕರೆದನು. ಯೆಸುವಿನ ದಿವ್ಯತ್ವವನ್ನೂ ಅಂಗೀಕರಿಸಿದ್ದು ಹಾಗೂ ಶಿಲುಬೆಯನ್ನು ಕ್ರೈಸ್ತ ಧರ್ಮದ ಚಿಹ್ನೆಯಾಗಿಯೂ, ಸೂರ್ಯ ದೇವನ ಜನ್ಮದಿನವಾಗಿ ಆಚರಿಸಲ್ಪಟ್ಟಿದ್ದ ಡಿಸೆಂಬರ್ 25ನ್ನು ಕ್ರಿಸ್ಮಸ್ ಆಗಿ ಆಚರಿಸಲು ತೀರ್ಮಾನಿಸಿದ್ದು ಈ ಕೌನ್ಸಿಲ್‍ನಲ್ಲಾಗಿತ್ತು. ಇದನ್ನು ಇಂದಿನ ಎಲ್ಲಾ ಕ್ರೈಸ್ತ ಸಭೆಗಳು ಅಂಗೀಕರಿಸುತ್ತವೆ.
    ಬೈಬಲ್ ವಿದ್ವಾಂಸರ ಉದ್ಧರಣೆಗಳು ಇದನ್ನು ವ್ಯಕ್ತವಾಗಿ ತಿಳಿಸುತ್ತತವೆವ.
“ಪುರಾತನ ರೋಮ್‍ನ ಸೂರ್ಯ ಆರಾಧಕರ ಮಕರ ಸಂಕ್ರಾಂತಿಯ ಆಚರಣೆಯೇ ನಂತರ ಕ್ರಿಸ್ಮಸ್ ಆಗಿ ಮಾರ್ಪಟ್ಟಿತು.( R.L. Folery, nativity of Christ ,the new catholic encyclopedia vol:10 Mc grew hill New York 1967 ಪುಟ. 25)

ಮಲಾಕಿಯ 4:2ರಲ್ಲಿ ಹೇಳಲಾದ ಧರ್ಮವೆಂಬ ಸೂರ್ಯ ಎಂಬ ಪದ ಪ್ರಯೋಗವು ಕ್ರೈಸ್ತನ ಕುರಿತಾಗಿದೆ ಎಂದು ಹೇಳಿ, ವಿಗ್ರಹಾರಾಧಕ ಆಚರಣೆಯನ್ನು ಕ್ರೈಸ್ತ ಪಂಥಗಳು ಸ್ವೀಕರಿಸುತ್ತವೆ.
 (harper’s bible dictionary, theological publications in india, 1994, p 163).

ಕ್ಯಾಥಲಿಕನ್ನರ ದೈವಶಾಸ್ತ್ರ ನಿಘಂಟುವಿನಲ್ಲಿ ಏನಿದೆ ಎಂದು ತಿಳಿಯೋಣ:
ಸಾರ್ವಜನಿಕ ಸಭೆಯಲ್ಲಿ ಡಿಸೆಂಬರ್25ನ್ನು ಯೇಸುವಿನ ಜನ್ಮದಿನವನ್ನಾಗಿ ಆಚರಿಸಲಾಯಿತು. ಈ ದಿನ ರೋಮನ್ನರು ಸೂರ್ಯದೇವ-ಮಿತ್ರ ದೇವನ ಜನ್ಮದಿನವನ್ನಾಚರಿಸುತ್ತಿದ್ದರು. ಧರ್ಮಸೂರ್ಯನಾದ ಯೇಸುವಿನ ಜನ್ಮದಿನವನ್ನು ಡಿಸೆಂಬರ್ 25ರಂದು ಪೌರಾಣಿಕ ಕ್ರೈಸ್ತರು ಆಚರಿಸಲಾರಂಭಿಸಿದ್ದು, ಈ ಆಚರಣೆಯೊಂದಿಗಿನ ಸಂಬಂಧದಿಂದಾಗಿರಬಹುದು. ಮೊದಮೊದಲು ಲ್ಯಾಟೀನ್ ಸಭೆ ಮಾತ್ರ ಡಿ.25ನ್ನು ಯೇಸುವಿನ ಜನ್ಮದಿನವಾಗಿ ಆಚರಿಸುತ್ತಿದ್ದರು. ಬಳಿಕ ಅರ್ಮೇನಿಯನ್ ಸಭೆ ಹೊರತು ಎಲ್ಲಾ ಸಭೆಗಳು ಕೂಡಾ ಹೀಗೆ ಆಚರಿಸಲಾರಂಭಿಸಿದವು. ಡಿ.25ನೇ ತಾರೀಖಿನಂದು ಲೋಕದೆಲ್ಲೆಡೆ  ಕ್ರಿಸ್ಮಸ್ ಆಚರಿಸಲಾಗುತ್ತಿದೆ. ಯೇಸುವಿನ ಜನನ ದಿವಸ ಯಾವುದೆಂದು ವೇದ ಗ್ರಂಥಗಳಲ್ಲಿ ಸ್ಪಷ್ಟವಾದ ಸುಳಿವು ಇಲ್ಲದಿರುವುದರಿಂದ ಪೌರ್ವಾತ್ಯ ಸಭೆಗಳು ಮೊದಲ ಶತಮಾನದಲ್ಲಿ ಜನವರಿ 6ರಂದು ಆಚರಿಸಿದ್ದವಂತೆ!. ಐಗುಪ್ತರ ಕ್ಯಾಲೆಂಡರ್ ಪ್ರಕಾರ ಸೂರ್ಯದೇವನ ಜನನವು ಜನವರಿ 6ರಂದಾಗಿತ್ತೆಂಬುದು ವಾಸ್ತವ. ಅಲೆಕ್ಸಾಂಡ್ರಿಯಾದ ವಿ. ಕ್ಲೆಮೆಂಟ್(+215) ವಿ.ಅಪ್ರೇಂ(+337) ಮುಂತಾದವರು ಯೇಸುವಿನ ಪುಣ್ಯಜನನವು ಜನವರಿ ಆರರಂದಾಗಿತ್ತೆಂದು ಸಮರ್ಥಿಸಿದ್ದಾರೆ. (ದೈವ ಶಾಸ್ತ್ರ ನಿಘಂಟು, ಮಲಯಾಳಂ, ಮುಖ್ಯ ಸಂಪಾದಕರು – ಡಾ. ಜೋಸೆಫ್)
ಯೇಸು ದೇವರ ಜನ್ಮದಿನಾಚರಣೆ (ಕ್ರಿಸ್ಮಸ್)ಯ ಭಾಗವಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ವಿವಿಧ ವರ್ಣಗಳ ನಕ್ಷತ್ರಗಳು, ತೋರಣಗಳಿಂದ ಅಲಂಕರಿಸುವರು. ಮನೆಯಂಗಳದಲ್ಲಿ ಅತಿಮನೋಹರವಾದ ಹುಲ್ಲಿನ ಗೂಡು ನಿರ್ಮಿಸಿ ಅದರಲ್ಲಿ ಬಾಲಯೇಸು ಹಾಗು ಮೇರಿ, ಜೋಸೆಫರ, ದೇವದೂತರ ಕೆಲ ಪ್ರತಿಮೆಗಳು, ಗೊಲ್ಲರು, ಜಾನುವಾರುಗಳ ರೂಪಗಳನ್ನೂ ಪ್ರತಿಷ್ಠಾಪಿಸುವರು. ಮೊಟ್ಟಮೊದಲು ಕ್ರಿಸ್ಮಸ್ ಕ್ರಿಬ್ ನಿರ್ಮಿಸಿದ್ದು ಅಸ್ಸೀಸಿಯದ ಪವಿತ್ರ ಫ್ರಾನ್ಸಿಸಾಗಿದ್ದಾನೆ. 1224ರ ಕ್ರಿಸ್ಮಸ್ ರತ್ರಿ ಅವನು ತನ್ನ ಗ್ರಾಮದಲ್ಲಿ ಒಂದು ದನದ ಹಟ್ಟಿ ನಿರ್ಮಿಸಿದನು. ಮನುಷ್ಯರ ಮತ್ತು ಜಾನುವಾರುಗಳ ರೂಪಗಳನ್ನು ನಿರ್ಮಿಸಿ ಕ್ರಿಸ್ತನ ಮುಹೂರ್ತದ ಛಾಯೆ ಸೃಷ್ಟಿಸಿದನು.
ಹುಲ್ಲಿನ ಗೂಡಿನಲ್ಲಿ ಬಲೂನುಗಳು, ಗಿಫ್ಟ್ ಪ್ಯಾಕ್‍ಗಳು, ಸಣ್ಣಪುಟ್ಟ ನಕ್ಷತ್ರಗಳು, ಅಲಂಕಾರ ದೀಪಗಳು ಮುಂತಾದವುಗಳಿಂದ ಅಲಂಕರಿಸಲ್ಪಟ್ಟ ಪಿರಮಿಡ್ ಆಕಾರದ ಮನೋಹರವಾದ ಕ್ರಿಸ್ಮಸ್ ಮರವನ್ನು ಮೊದಲಬಾರಿ ನಿರ್ಮಿಸಿದರು ಜರ್ಮನ್ನರು. ಪೈನ್, ದೇವದಾರು, ಮಹಾಘನಿ, ಬೋನ್ಸೈ ಮುಂತಾದ ಮರಗಳನ್ನು ಇದಕ್ಕಾಗಿ ಉಪಯೋಗಿಸುತ್ತಾರೆ. 14ನೇಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡಿನ ಕ್ರಿಸ್ಮಸ್ ಮರವು ವ್ಯಾಪಕ ಪ್ರಚಾರ ಪಡೆಯಿತು. ಇಂಗ್ಲೆಂಡಿನ ವಿಕ್ಟೋರಿಯ ರಾಣಿಯ ಗಂಡ ಆಲ್ಬರ್ಟ್ ರಾಜಕುಮಾರನು ಕ್ರಿಸ್ಮಸ್ ಮರವನ್ನು ಇಂಗ್ಲೆಂಡ್‍ಗೆ ತರುತ್ತಾರೆ. 17ನೇ ಶತಮಾನದಲ್ಲಿ ಅಮೇರಿಕಾದಲ್ಲೂ, 19ನೇಶತಮಾನದಲ್ಲಿ ಮಧ್ಯ ಯುರೋಪ್‍ನಲ್ಲೂ ಅದು ಪ್ರಚಾರ ಪಡೆಯಿತು. 19-20ನೇ ಶತಮಾನದಲ್ಲಿ ಪಾಶ್ಚಾತ್ಯ ಮಿಶನರಿಗಳ ಮೂಲಕ ಏಷ್ಯಾದಲ್ಲೂ ವ್ಯಾಪಕವಾಯಿತು. ಕ್ರಿಸ್ಮಸ್ ಆಚರಣೆಯ ಭಾಗವಾಗಿ ಇಂಪಾದ ಹಾಡುಗಳು ಹಾಗೂ ನೃತ್ಯಗಳೊಂದಿಗೆ ಕ್ರಿಸ್ಮಸ್ ಕರೋಲ್‍ಗಳನ್ನು ಆಲಾಪಿಸಲಾಗುತ್ತದೆ. ಕಾಗದ, ಬಟ್ಟೆ, ರಟ್ಟು, ಲೋಹ ಮುಂತಾದವುಗಳಿಂದ ಆ ಕಾರ್ಡುಗಳನ್ನು ತಯಾರಿಸಲಾಗುತ್ತದೆ.
1843ಇಂದು ಕಾಣುವ ರೀತಿಯಲ್ಲಿ ಕ್ರಿಸ್ಮಸ್ ಶುಭಾಷಯ ಪತ್ರಗಳನ್ನು ಮೊಟ್ಟಮೊದಲು ಇಂಗ್ಲೆಂಡ್‍ನಲ್ಲಿ ತಯಾರಿಸಲಾಯಿತು. ವಿವಿಧ ಅಳತೆಯ, ಬೇರೆ ಬೇರೆ ಬೆಲೆ ಹೊಂದಿರುವ ಕಾರ್ಡುಗಳು ಇಂದು ಲಭ್ಯ. ಷೆರಾಡ್ಸ್, ಸ್ಟಾಪ್ ಡ್ರಾಗನ್, ಕುಷನ್ ಡಾನ್ಸ್, ಸಂಗೀತ ಕುರ್ಚಿ ಮುಂತಾದ ವಿವಿಧ ಆಟೋಟಗಳು ಕ್ರಿಸ್ಮಸ್ ಆಟೋಟಗಳು ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ಕ್ರಿಸ್ಮಸ್ ಪಟಾಕಿಗಳು, ಸ್ಟಾಂಪ್‍ಗಳು, ಕ್ರಿಸ್ಮಸ್ ಈವ್, ಯೂಲ್ ಮರ ಉರಿಸುವುದು, ಕ್ರಿಸ್ಟಿಂಗಿಲ್ (ಮೇಣದ ಬತ್ತಿಯಿಂದ ಅಲಂಕರಿಸಿದ ಆರೆಂಜ್) ಇವುಗಳು ಆಚರಣೆಯ ಆಕರ್ಷಣೆಗಳಾಗಿವೆ.

       ಬಿಳಿಗಡ್ಡಧಾರಿಯೂ ಕೆಂಪು ಉಣ್ಣೆವಸ್ತ್ರ ಧರಿಸಿದ ಸಾಂತಾಕ್ಲಾಸ್ ಬಂದು ಪುಟಾಣಿಗಳಿಗೆ ಕ್ರಿಸ್ಮಸ್ ಕೊಡುಗೆ ಕೊಡುವುದು ವಾಡಿಕೆಯಾಗಿದೆ. ಸಾಂತಾಕ್ಲಾಸ್ ಪವಿತ್ರ ನಿಕೋಲಾಸ್‍ನ ಸ್ಮಾರಕವಾಗಿದೆ. ಡಚ್ ಭಾಷೆಯಲ್ಲಿ ಪವಿತ್ರ ನಿಕೋಲಾಸ್‍ಗೆ ಡಿಂಟರ್‍ಕ್ಲಾಸ್ ಅಥವಾ ಸಾನ್‍ಕ್ಲಾಸ್ ಎಂದು ಕರೆಯಲಾಗುತ್ತದೆ. ನ್ಯೂಯಾರ್ಕ್‍ಗೆ ವಲಸೆ ಹೋದ ಡಚ್ ತೀರ್ಥಯಾತ್ರಿಗಳು ಸಾನ್‍ಕ್ಲಾಸ್ ಎಂಬ ಹೆಸರನ್ನು ಅಮೇರಿಕಾದಲ್ಲಿ ಜನಪ್ರಿಯಗೊಳಿಸುತ್ತಾರೆ. ಆಂಗ್ಲ ಭಾಷಿಕರು ಇದನ್ನು ಸ್ವಲ್ಪ ಬದಲಿಸಿ ಸಾಂತಾಕ್ಲಾಸ್ ಎಂದು ಕರೆಯಲಾರಂಭಿಸಿದರು.
   
    ಹಲವಾರು ಆಕೃತಿಗಳಲ್ಲಿ ವರ್ಣರಂಜಿತ ಸಣ್ಣ ಹಾಗೂ ದೊಡ್ಡ, ಸಿಹಿಯಾದ ಕ್ರಿಸ್ಮಸ್ ಕೇಕ್‍ಗಳನ್ನು ಅಂದು ತಯಾರಿಸಲಾಗುತ್ತದೆ. ಇಂತಹ ಹಲವಾರು ರೀತಿಯ ಆಚರಣೆಗಳನ್ನು ಕ್ರಿಸ್ಮಸ್ ಹಬ್ಬದ ದಿನ ಕ್ರೈಸ್ತ ಬಾಂಧವರು ಇಂದು ಆಚರಿಸುತ್ತಿದ್ದಾರೆ.
ಬೈಬಲ್ ಏನೆನ್ನುತ್ತದೆ?
      ಕ್ಯಾಥಲಿಕ್ ಸಹಿತ ಪ್ರಸ್ತುತ ಎಲ್ಲಾ ಸಭೆಗಳೂ ಕ್ರಿಸ್ಮಸ್ ಜನಾಂಗೀಯರ ಆಚಾರ ಎಂಬುವುದನ್ನು ಒಪ್ಪಿಕೊಳ್ಳುತ್ತಾರೆ. ಅದು ಅನಾಚಾರ ಎಂಬ ಅರಿವಿದ್ದರೂ ಅದನ್ನು ಆಚರಿಸುತ್ತಾರೆ. ಆದರೆ ಜನಾಂಗಗಳ ಆಚಾರಗಳನ್ನು ಅನುಕರಿಸಬಾರದೆಂದು ಬೈಬಲ್ ತಿಳಿಸಿಕೊಡುತ್ತದೆ. “ಇಸ್ರಾಯೇಲ್ ವಂಶದವರೇ, ಯಹೋವನು ನಿಮಗೆ ನುಡಿಯುವ ಮಾತನ್ನು ಕೇಳಿರಿ; ಯಹೋವನು ಹೀಗೆ ಹೇಳುತ್ತಾನೆ- ಜನಾಂಗಗಳ ಆಚರಣೆಯನ್ನು ಅಭ್ಯಾಸಿಸದಿರಿ (ಯೆರಮೀಯನು 10/1-3, ಧರ್ಮೋಪದೇಶಕಾಂಡ 12/31).
  ಪ್ರವಾದಿ ಯೆಹೆಜ್ಕೇಲನ ಕಾಲದಲ್ಲಿ ತಮ್ಮೂಜ್ (ಬಾಬಿಲೋನಿಯನ್ ಕಲ್ಪನೆ ಪ್ರಕಾರ ಬೇಸಿಗೆಯಲ್ಲಿ ಸತ್ತು, ಮಳೆಗಾಲದಲ್ಲಿ ಪುನರ್ಜನ್ಮ ಹೊಂದುವ ದೇವರು) ಗೋಸ್ಕರ ಅಳುವುದು ವಾಡಿಕೆ. ಇಂತಹ ಆಚಾರ- ಅನುಷ್ಠಾನಗಳನ್ನು ನಿರ್ವಹಿಸುತ್ತಿದ್ದ ಜನತೆಯೊಂದಿಗೆ ದೇವರು ಕ್ರುದ್ಧನಾಗಿ ಪ್ರತಿಕ್ರಿಯಿಸಿದ ಘಟನೆ ಬೈಬಲ್‍ನಲ್ಲಿದೆ. “ಆಮೇಲೆ ಆತನು ನನಗೆ ಇವುಗಳಿಗಿಂತ ಇನ್ನೂ ಹೆಚ್ಚಾದ ದುರಾಚಾರಗಳನ್ನು ನೋಡುವಿ ಎಂದು ಹೇಳಿ ನನ್ನನ್ನು ಯಹೋವನ ಆಲಯದ ಬಡಗಣ ಬಾಗಿಲ ಮುಂದೆ ಕರೆ ತಂದನು. ಇಗೋ, ಅಲ್ಲಿ ಸ್ತ್ರೀಯರು ತಮ್ಮೂಜ್ ದೇವತೆಗೋಸ್ಕರ ಅಳುತ್ತಾ ಕೂತಿದ್ದರು. ಆಮೇಲೆ ಆತನು ನನಗೆ-ನರ ಪುತ್ರನೇ, ಇದನ್ನು ನೋಡಿದೆಯಾ?... ಇವುಗಳಿಗಿಂತ ಮತ್ತೂ ಹೆಚ್ಚಾದ ದುರಾಚಾರಗಳನ್ನು ನೋಡುವಿ ಎಂದು ಹೇಳಿ ಯಹೋವನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆ ತಂದನು; ಆಹಾ ಯಹೋವನ ಗುಡಿಯ ಬಾಗಿಲ ಮುಂದೆ ಮಂಟಪಕ್ಕೂ ಯಜ್ಞವೇದಿಗೂ ನಡುವೆ ಸುಮಾರು ಇಪ್ಪತ್ತೈದು ಜನರು ಯಹೋನ ಗುಡಿಗೆ ಬೆನ್ನು ಮಾಡಿ ಮೂಡಲ ಮುಖವಾಗಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು. ಆಗ ಆತನು ನನಗೆ ನರ ಪುತ್ರನೇ.. ನೋಡಿದೀಯಾ? ಯಹೂದ ವಂಶದವರು ತಾವು ಇಲ್ಲಿ ನಡೆಸುವ ಅಸಹ್ಯ ಕಾರ್ಯಗಳು ಅಲ್ಪವೆಂದು ಭಾವಿಸಿಕೊಂಡರೇನೋ? ದೇಶವನ್ನು ಹಿಂಸೆಯಿಂದ ತುಂಬಿಸಿ ಬಿಟ್ಟದ್ದಲ್ಲದೆ ನನ್ನನ್ನು ಕೆಣಕ ಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ. ನೋಡು, ಪತ್ರೆಯನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ. ಆದ ಕಾರಣ, ನಾನು ಕೋಪೋದ್ರೇಕದಿಂದ ವರ್ತಿಸುವೆನು, ಕಟಾಕಿಷಿಸೆನು, ಉಳಿಸೆನು” (ಯಹಜ್ಕೇಲನು 8/14-18).
   ಇತರರ ಆರಾಧನೆಗಳು ಹಾಗೂ ಆಚಾರಗಳು  ದೇವನ ಕೋಪಕ್ಕೆ ಕಾರಣವಾಗುವುದೆಂದು ಬೈಬಲ್ ಹೇಳುತ್ತದೆ. 7ನೇ ಶತಮಾನದಲ್ಲಿ ಯಶೀಯ ರಾಜನು ಸೂರ್ಯ, ಚಂದ್ರ, ನಕ್ಷತ್ರಗಳಿಗೆ ಧೂಪ ಸುಟ್ಟ ಪೂಜಾರಿಗಳನ್ನು ವಜಾ ಮಾಡಿದ್ದನ್ನು (2 ಅರಸುಗಳು 23/5) ರಲ್ಲಿ ಕಾಣಬಹುದು. ಇತರರ ಸಂಸ್ಕೃತಿಗಳನ್ನು ಹಿಂಬಾಲಿಸುವವರು ಮರಣ ದಂಡನೆಗೆ ಅರ್ಹರೆಂದು ಬೈಬಲ್‍ನ ಧರ್ಮೋಪದೇಶಕಾಂಡ 17/3-5  ರಲ್ಲಿ ಕಾಣಬಹುದು.
    ಕ್ರಿಸ್ಮಸ್‍ನ ಹೆಸರು ಹೇಳಿ, ಹುಲ್ಲಿನ ಗೂಡು ನಿರ್ಮಿಸಿ ಅದರಲ್ಲಿ ಬಾಲಯೇಸು, ಮೇರಿ, ಜೋಸೇಫರ ಪ್ರತಿಮೆಗಳನ್ನು ನಿರ್ಮಿಸುವ ಕ್ರೈಸ್ತ ಬಾಂಧವರಿಗೆ ಬೈಬಲ್ ನೀಡಿದ ತಾಕೀತು ಹೀಗಿದೆ “ನೀವು ಸ್ತ್ರೀ-ಪುತುಷರ ರೂಪವನ್ನಾಗಲಿ, ಭೂಮಿಯ ಮೇಲೆ ಸಂಚರಿಸುವ ಮೃಗದ ರೂಪವನ್ನಾಗಲಿ, ಆಕಾಶದಲ್ಲಿ ಹಾರಾಡುವ ಪಕ್ಷಿಯ ರೂಪವನ್ನಾಗಲಿ ದೇವರ ಸ್ವರೂಪವೆಂದು ಮಾಡಿಕೊಂಡು ಭ್ರಷ್ಟರಾಗಬಾರದು. ನಿಮ್ಮ ದೇವರಾದ ಯೆಹೋವನು ಭೂಲೋಕದಲ್ಲಿರುವ ಬೇರೆ ಎಲ್ಲಾ ಜನಾಂಗಗಳಿಗೋಸ್ಕರ ದಯೆ ಪಾಲಿಸಿದ ಸೂರ್ಯ, ಚಂದ್ರ, ನಕ್ಷತ್ರಗಳೆನಿಸಿಕೊಳ್ಳುವ ಆಕಾಶ ಸೈನ್ಯವನ್ನು ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ, ಮರುಳುಗೊಂಡು ಅವುಗಳನ್ನು ಪೂಜಿಸಲು ನಮಸ್ಕರಿಸಲೂ ಬಾರದು” (ಧರ್ಮೋಪದೇಶಕಾಂಡ 4/16-19)
ಇಂತಹ ವಿಗ್ರಹಗಳನ್ನು ಧ್ವಂಸ ಮಾಡಬೇಕೆಂದು ಬೈಬಲ್ ಹೇಳುವುದನ್ನು ಧರ್ಮೋಪದೇಶಕಾಂಡ  7/5ರಲ್ಲಿ ಹಾಗೂ ಅರಣ್ಯ ಕಾಂಡ 33/52 ರಲ್ಲೂ ಕಾಣಬಹುದು.
   ಅದೇ ರೀತಿ ಆಚರಣೆಯ ಭಾಗವಾಗಿ ಅಲಂಕರಿಸಲಾಗುವ ಮರವನ್ನು ಬೈಬಲ್ ವಿರೋಧೀಸುವುದನ್ನು ಯೆರಮೀಯನು 10/3-6 ರಲ್ಲಿ ಕಾಣಬಹುದು.
ಯೇಸು ಯಾವಾಗ ಜನಿಸಿದನು?
         ಯೇಸು ಜನಿಸಿದ ದಿನ, ತಿಂಗಳು, ವರ್ಷವನ್ನು ಯಾವ ಸುವಾರ್ತೆಗಾರರು ಸ್ಪಷ್ಟಪಡಿಸಿಲ್ಲ. ಆದ್ದರಿಂದಲೇ ಬೈಬಲ್ ವಿದ್ವಾಂಸರ ನಡುವೆ ಈಗಲೂ ತರ್ಕ ತಕರಾರುಗಳಿವೆ. ಆಧುನಿಕ ವಿದ್ವಾಂಸರ ಪ್ರಕಾರ ಕ್ರಿಸ್ತನ ಜನನವು ಕ್ರಿ.ಪೂ 8ನೇ ಶತಮಾನದಲ್ಲಾಗಿತ್ತು (new catholic encyclopedia, vol. III, mcgraw hill, 1967, p 656).). ಕೇಂಬ್ರಿಡ್ಜ್ ವಿ,ವಿ ಯ ಪ್ರೊಫೆಸರ್ ಕಾಲಿನ್ ಹಾಂಫ್ರೆಸ್‍ನ ಪ್ರಕಾರ ಯೇಸುವಿನ ಜನನ ಕಿ.ಪೂ. 13ರಿಂದ 27 ವರ್ಷಗಳ ಅವಧಿಯ ಏಪ್ರಿಲ್ 5 ರಂದಾಗಿತ್ತು (Colin Hamphreys, the star of Bethlehem, science and Christian belief.  page-90)
     ಹೊಸ ಒಡಂಬಡಿಕೆಯನ್ನು ಚೆನ್ನಾಗಿ ಬಲ್ಲವರಲ್ಲಿ ಕೆಲವರು ಯೇಸು ಜನಿಸಿದ ತಿಂಗಳನ್ನು ಲೆಕ್ಕ ಹಾಕಿ ಹೇಳುತ್ತಾರೆ. “ಅಬೀಯಾಗಿರುವ ಯಾತ್ರಾ ದಿನ (ಲೂಕನು 1/5)ದಿಂದ ಸ್ನಾನಿಕ ಯೋಹಾನನ ಜನನಕ್ಕೆ 9 ತಿಂಗಳು, ಅದಕ್ಕೆ ಆರು ತಿಂಗಳು ಸೇರಿಸಿದರೆ ಯೇಸುವಿನ ಜನನದ ತಿಂಗಳಾಗುತ್ತದೆ. ಹೀಗಾದರೆ ಆತ ಸೆಪ್ಟೆಂಬರ್ ಅಂತ್ಯದಲ್ಲಿ ಜನಿಸಿದನೆಂಬುವುದು ತಿಳಿದು ಬರುತ್ತದೆ. (j. heading, Mathew  in what the bible teaches ,t. Wilson et ,al john Ritchie ltd. page-46 j. heading, Mathew  in what the bible teaches ,t. Wilson et ,al john Ritchie ltd. page-46 ).
    ಯಹೋವ ಸಾಕ್ಷಿಗಳೆಂಬ ಕೇರಳದ ಒಂದು ಸಭೆಯ ಅಂದಾಜು ಪ್ರಕಾರ ಯೇಸುವಿನ ಜನನವು ಅಕ್ಟೋಬರ್ ಒಂದರಂದಾಗಿದೆ. ಅದು ಕುರಿ ಹಿಂಡನ್ನು ಕುರುಬರು ರಾತ್ರಿ ಪಾಳಿಯಲ್ಲಿ ಮೇಯಿಸಲು ಕೊಂಡೊಯ್ಯುವ (ಲೂಕನು 2/8-12) ಸಮಯವಾಗಿದೆ. (what does god require of us a watch tower bible tract society, p 22).
    ಯೇಸುವಿನ ಜನನದ ಬಗ್ಗೆ good news bible ಹೇಳುವುದು ಹೀಗೆ. “ಕ್ರಿಸ್ತನ ಜನನದೊಂದಿಗೆ ಸಮೀಕರಿಸುವ ಮೂಲಕ ಕ್ರಿಸ್ತ ಶಕವನ್ನೂ ತಾಳೆ ಹಾಕಲಾಗುತ್ತದೆ. ಎ.ಡಿ.ಎಂಬುವುದರ ಅರ್ಥ ದೇವರ ವರ್ಷ ಎಂದಾಗಿದೆ. ಆದರೆ ಯೇಸುವಿನ ಜನ್ಮ ತಿಂಗಳು ಲೆಕ್ಕ ಹಾಕಿದ್ದಲ್ಲಿ ಏನೋ ತಪ್ಪು ಸಂಭವಿಸಿದೆ ಎಂಬುವುದು ಕೆಲ ಕಾಲದ ಬಳಿಕ ಗೊತ್ತಾಯಿತು. ಆದ್ದರಿಂದ ಯೇಸುವಿನ ಜನನ ಕ್ರಿ.ಶ 6ನೇ ವರ್ಷದಲ್ಲಾಯಿತು ಎಂದು ಊಹಿಸಲಾಯಿತು. (good news of bible , today English version, bible society of India. page- 358).   
              ಬೈಬಲ್ ಅಧ್ಯಾಯಗಳಲ್ಲಿ ಅಡಕವಾದಂತೆ ಯೇಸುವಿನ ಜನನವನ್ನೂ ಲೆಕ್ಕ ಹಾಕಿದವರು ಈ ರೀತಿ ವಿವಿಧ ಉತ್ತರಗಳನ್ನು ನೀಡಿದ್ದಾರೆ. ಯಾವುದೇ ಪುರಾವೆಗಳನ್ನು ನೋಡಿದರೂ ಡಿಸೆಂಬರ್ 25 ಯೇಸುವಿನ ಜನ್ಮ ದಿನ ಎಂಬುದನ್ನು ಕಂಡುಹಿಡಿಯಲು ಸಾಧ್ಯವಿಲ್ಲ.
     ಸುವಾರ್ತೆಗಾರನಾದ ಲೂಕನು ಯೇಸುವಿನ ಜನ್ಮದಿನವನ್ನು ವಿವರಿಸುವುದರಿಂದ (ಲೂಕನು 2/8) ಸ್ಪಷ್ಟವಾಗುವುದೇನೆಂದರೆ, ಕುರುಬರು ರಾತ್ರಿಯಲ್ಲಿ ಕುರಿಹಿಂಡನ್ನು ಮೇಯಿಸಲು ಹೊರಗೆ ಕೊಂಡೊಯ್ಯುವ ದಿನ ಬೆತ್ಲೆಹೇಂ ನಲ್ಲಿ ಜನಿಸಿದನು ಎಂದಾಗಿದೆ. ಡಿಸೆಂಬರ್ ತಿಂಗಳಲ್ಲಿ ಬೆತ್ಲೆಹೇಂ ನಲ್ಲಿ ಭಾರಿ ಗಾತ್ರದ ಹಿಮಪಾತವಿರುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಮತ್ತು ಅಕ್ಟೋಬರ್ ಅಂತ್ಯದಲ್ಲಿ ಆಡು ಮೇಯಿಸುವಿಕೆಯನ್ನು ನಿಲ್ಲಿಸುತ್ತಾರೆ. ಜೂಸಿಯ ಪ್ರದೇಶದಲ್ಲಿ ಭಾರಿ ಮಳೆಯು ಡಿಸೆಂಬರ್ ತಿಂಗಳಲ್ಲಾಗಿರುವುದರಿಂದ ಕುರುಬರನ್ನೂ, ಕುರಿಗಳನ್ನೂ ಹೊರಗೆ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಲೂಕನ ವಿವರಣೆ ಪ್ರಕಾರ ಯೇಸುವಿನ ಜನನವು ವಸಂತ ಋತುವಿನಲ್ಲೋ, ಶಿಶಿರ ಋತುವಿನಲ್ಲೋ ಆಗಬೇಕು. ಯೇಸುವಿನ ಜನನ ಸಮಯವನ್ನು ಸುವಾರ್ತೆಗಾರರಾದ ಮತ್ತಾಯ, ಲೂಕನು ಹೇಳುವುದು ಅದು ಯೂದಾಯದಲ್ಲಿ ಹೆರೋದನು ರಾಜನಾಗಿದ್ದ ಸಂದರ್ಭದಲ್ಲಾಗಿತ್ತು ಎಂದಾಗಿದೆ. (ಮತ್ತಾಯನು 2/1, ಲೂಕನು 1/5) ಇದರ ಉದ್ದೇಶ ಕ್ರಿ.ಪೂ 3ನೇ ವರ್ಷದಲ್ಲಾಗಿತ್ತು. ಆದರೆ ಲೂಕನು “ತಿಬೇರಿಯ ಚಕ್ರವರ್ತಿಯ ಆಡಳಿತಾವಧಿಯ 15ನೇ ವರ್ಷ ಸ್ನಾನಿಕ ಯೋಹಾನನು ಯೇಸುಬವಿಗೆ ಸ್ನಾನ  (baptism) ಮಾಡಿಸಿದನು (ಲೂಕನು 3/1-23).
      ಅಂದರೆ ಅದು ಕ್ರಿ.ಶ 28-29 ಮಧ್ಯೆಯಿರುವ ಯಾವುದೋ ಒಂದು ತಿಂಗಳಲ್ಲಾಗಿತ್ತು. ಯೇಸುವಿನ ಜನನ ಕ್ರಿ.ಪೂ 1 ಹಾಗೂ 2 ರನಡುವೆ ನಡೆದಿದ್ದಾಗಿ ಇದು ಸೂಚಿಸುತ್ತದೆ.
      ಇವುಗಳಿಂದೆಲ್ಲಾ ಸುಲಭವಾಗಿ ಅರ್ಥೈಸಲಾಗುವುದೇನೆಂದರೆ ಯೇಸು ಭೋಧಿಸಿದ ಧರ್ಮದಲ್ಲಿ ಆತನ ತರುವಾಯ ಉಂಟಾದ ಜನಾಂಗಗಳ ಪ್ರಭಾವವಾಗಿದೆ. ಕ್ರಿಸ್ಮಸ್ ಆಚರಣೆಗೆ ಕಾರಣ ಎಂಬುವುದು.  ಈ ವಿಷಯದಲ್ಲಿ ಅಧಿಕೃತವಾದ ಸಂಶೋಧನೆ ನಡೆಸಿ ಜನರಿಗೆ ವಾಸ್ತವವೇನೆಂದು ತಿಳಿಸಲು ಕ್ರೈಸ್ತ ವಿದ್ವಾಂಸರು ಪರಿಶ್ರಮಿಸಲಿ.

Comments